Wednesday, January 16, 2008

mySTD:"ನಾಯಿಪುರಾಣ"

ಊರನಾಯಿಗಳೆಲ್ಲ ಬೀದಿಪಾಲಾಗುತ್ತಿವೆ. ಅದೆಸ್ಟೊ ಬಾಲವಿಲ್ಲದ ಕೈಕಾಲು ಗಿಡ್ಡವಾಗಿರೋ ಅಂಗವಿಕಲ ನಾಯಿಗಳೆ ಪ್ರತೀ ಮನೆಯಲ್ಲು ನಗುತ್ತಿರುತ್ತವೆ.. ಒಹ್ Sorry, ಬೊಗಳುತ್ತಿರುತ್ತವೆ. ಕರಿಯ, ಟಾಮಿ, ಬೊಳ್ಳು, ದಾಸು ಎಂಬಿತ್ಯಾದಿ ನಾಮಗಳೆಲ್ಲ ಮಾಯವಾಗಿ tiger, ಬ್ಲಾಕಿ, ರೆಡ್ಡಿ ಇತ್ಯಾದಿ ಬಂದಿವೆ. ಸಾಯೊವರೆಗೆ ಒಂದೂ ಕಾಯಿಲೆ ಕಾಣದ ಊರನಾಯಿಗಳೆಲ್ಲ ಸುಖಮರಣವನ್ನು ಅರಸಿ road side ಬರುತ್ತಿರುವುದು ನಿಜಕ್ಕೂ ವಿಶಾದನೀಯ. ತನ್ನ ಯಜಮಾನನಿಗೆ 0% mainanace cost ಕೊಡುತ್ತಿದ್ದ ಊರನಾಯಿಗಳನ್ನು ಈಗೀಗ ಎಲ್ಲ ಮರೆತು vaaccination ಅಂತೆಲ್ಲಾ ಸಾವಿರಾರು ರೂ ವ್ಯಯಿಸಿ ಎಂಜಲು ಬದಲು ಮೊಸರು-ರೈಸ್, ಎಣ್ಣೆತಿಂಡಿಗಳನ್ನಸ್ಟೆ ತಿನ್ನೊ ನಾಯಿಗೆ ಮಾರು ಹೊಗುತ್ತಿದ್ಡಾರೆ. ಕೆಲವಂತೂ ಹೆದರಿ ಬೊಗಳೊ ಪರಿ ನೊಡಿದರೆ ಊರ ನಾಯಿಯೆ ಭೆಶ್ ಎನ್ನುತ್ತೆ. ಒಂದು-ಎರಡು ಎಲ್ಲದಕ್ಕು ಇತ್ತೀಚಿನ modern ನಾಯಿಗಳಿಗೆ workplace ಸೂಕ್ತ ಜಾಗವೆನಿಸುವಸ್ಟು ಮುದ್ದು-ಮುದ್ದಾಗಿ ಪೆದ್ದು-ಪೆದ್ದಾಗಿ ಇರುತ್ತವೆ ಅವು. ಹುಹ್.. ಊರನಾಯಿಗಳ ಶಂಖ ನಾದದ ಗೂಳಿಡುವಿಕೆ ಮಾಯವಾಗಿದೆ ಕಣೊ/ಕಣೆ, ಬೆಸರವಾಗುತ್ತಿದೆ. ಈಗಿನ ಯುವಕ ಯುವತಿಯರಂತೆ ಊರ ನಾಯಿಗಳು ಪೇಟೆ ಅರಸಿ ರಸ್ತೆಯನ್ನೆ ಸೂಕ್ತ ಎಂದು ಆರಿಸಿಕೊಳ್ಳಾಲಾರಂಬಿಸಿದೆ, ನನಗೆ ಇದರಬಗ್ಗೆ ಬೇಸರವಿದೆ. ಊರ ನಾಯಿ ಜನಿಸಿದರೆ road side ಅವಕ್ಕೆ ಗತಿ. ಮರಿಗಳನ್ನ ಕೆಲ ದಿನದಲ್ಲೆ ಮಂಗಮಾಯವಾಗಿಸಿ ಬಿಡುತ್ತಾರೆ ಈ ಜನ. ಮಾನವ ಲೇಸೊ ಶುನಕ ಬುದ್ದಿ ಲೇಸೊ, ಎಲ್ಲಕ್ಕಿಂತ ಮಾನವೀಯತೆಯೂ ಬೀದಿಪಾಲಾಗುತ್ತಿದೆ!

ಊರ ನಾಯಿಮರಿ ನಾಯಿಮರಿ ತಿಂಡಿ ಬೆಕೆ ಎಂದಂತಕಾಲ ಬದಾಗುತ್ತಿದೆ ಕಣೊ/ಕಣೆ:-(

No comments: