Wednesday, January 16, 2008

myHarate:"ಕನಸು"

ಒಂದು ದಿನವಿತ್ತು ಕಣೊ! ದಾರಿಯಲ್ಲಿ ಶಾಲೆಗೆ ನಡೆದು ಹೋಗುವಾಗ ಬರುತ್ತಿದ್ದ ವಾಹನಗಳ ಸಂಕ್ಯೆ ಲೆಕ್ಕಹಾಕುತ್ತಿದ್ದುದು. ನಾಲ್ಕು ಸಂಗಡಿಗರು ಒಟ್ಟಿಗೆ ಹೊಗುತ್ತಿರೆ, ಒಬ್ಬ ಕಾರ್ choose ಮಾಡುತ್ತಿದ್ದರೆ ಇನ್ನೊಬ್ಬ ರಿಕ್ಷಾ, ಒಳಿದವರು ಬಸ್, bike ಹೀಗೆ. ಇದು ದಿನಾ ಬದಲಾಗುತ್ತಿತ್ತು. ಶಾಲೆ ತಲಪುವಾಗ ಯಾರ count ಜಾಸ್ತಿ ಇರುತ್ತೊ ಅವ ಗೆದ್ದ ಎಂಬ ಖುಶಿ ಇರುತ್ತೆ.

ಕಾರನ್ನ ಬಿಡಬೇಕು, ಅದನ್ನ ಕೊಳ್ಳಬೇಕು ಬಿಡಿ, ಅದಲ್ಲಿ ಹೋಗಬೇಕು ಎಂಬಸ್ಟೂ ಕನಸಿಲ್ಲದ ತೀರ ಬಡ ಕುಟುಂಬದ ಬದುಕಾಗಿತ್ತದು. 10 ಪೈಸೆ ಕೊಟ್ಟು ಮಕ್ಕಳ special ಬಸಲ್ಲಿ ಹೊಗೊದೆ ವಾರಕ್ಕೊಮ್ಮೆ ಬರೋ ಬಲು ಸಡಗರದ ವಿಶಯ! ಕಾಲ ಬದಲಾಗಿದೆ, ಬದುಕು ಬದಲಾಗಿದೆ, ಕನಸುಗಳೂ ಮೂಡಿವೆ, ಶಿಕ್ಷಣ ಎಲ್ಲವನ್ನ ಬದಲಾಗಿಸಿದೆ. ಆಕಾಶದಲ್ಲಿ ಹಾರಿದ್ದೇನೆ. ಅವಕಾಶ ಸಿಕ್ಕರೆ pilot ಕೂಡ ಆಗಬಲ್ಲೆನು!

ಮೊನ್ನೆ ಮೊನ್ನೆ ಅಪ್ಪ ನನ್ನ Carಲ್ಲಿ ಕುಳಿತು ತಮ್ಮ ಆಸೆಯನ್ನ ಬಿಚ್ಚಿಕೊಂಡರು. ನಮ್ಮದೆ ವಾಹನ ಒಂದರಲ್ಲಿ ಒಟ್ಟಿಗೆ ಹೋಗೋ ಕಾಲ ಅವರ ಮಟ್ಟಿಗೆ ಒಂದು ಕನಸಾಗಿತ್ತಂತೆ. ಮೊನ್ನೆ ಅದು ನನಸಾದಾಗ ಆ ಸಂಭ್ರಮ ನಮ್ಮೆಲ್ಲ ಪಾಲಿಗೆ ಮರಯಲಾಗದ ಕ್ಷಣವಾಯಿತು!

ನಾನೂ ಹಲವಾರು ಕನಸನ್ನ ಕಂಡಿರುವೆ. ನನ್ನಿಂದಾ ಆಗದ್ದನ್ನು ನನ್ನ ಮಕ್ಕಳಲ್ಲಿ ನಿರೀಕ್ಷಿಸದೆ ಇರಲಾರೆ.

ಅಂದ ಹಾಗೆ ಕನಸು ಮತ್ತು ನಿರೀಕ್ಷೆಯಿಲ್ಲದ ಮತ್ತೆ ಬದುಕು ಎನಕ್ಕೆ?

ನಮ್ಮ ಬಗ್ಗೆ, ಮಕ್ಕಳಬಗ್ಗೆ ಮತ್ಯಾರ ಬಗ್ಗೆ ಕನಸು ಮತ್ತು ನಿರೀಕ್ಷೆ ಇರಿಸಿಕೊಂಡು ನಮ್ಮ ಕನಸುಗಳ ಸಾಕಾರಗೊಳಿಸೊ ಆ ಪ್ರತೀ ಕ್ಷಣ/ದಿನ ಗಳಿವೆಯಲ್ಲ ಅದು ಅತಿ ಮಧುರ!!!

No comments: