Monday, March 31, 2008

myKavana:"ತುತ್ತಾ ಮುತ್ತಾ"

ಜಾರಿಬಿದ್ದ ಕಣ್ಣನೀರ ಕೈಯದೊಂದು ಒರೆಸಿದೆ
ತುಟಿಯ ಮುತ್ತು ತುತ್ತ ಕೊಟ್ಟ ಕೈಯ ಇಂದು ಮರೆಸಿದೆ
ಅಮ್ಮ ನಿನ್ನ ತ್ಯಾಗವೆಲ್ಲ ಏನ ತಾನೆ ಬಯಸಿದೆ?
ಇವಳ ಪ್ರೀತಿ ನನ್ನ ಪ್ರೀತಿಗಾಗಿ ಮಾತ್ರ ಲಭಿಸಿದೆ!

ನೋವನುಂಗಿ ನನ್ನ ಹಡೆದು ಕನಸೊಂದು ಕಟ್ಟಿದೆ
ನನ್ನ ಮನಸು ಅವಳ ಕನಸ ನನಸು ಮಾಡ ಹೊರಟಿದೆ
ನನ್ನ ಮನಸು ಮಗಳ ಮುಂದೆ ಬೆಳೆಸಬೇಕೆಂದಿದೆ
ಮಗಳ ಮನಸ ವಿಧಿಯು ಎಂದೊ ಬೇರೆ ಕಡೆಗೆ ಒಲಿಸಿದೆ

ಅಮ್ಮ ನಿನ್ನ ಬದುಕು ಇಲ್ಲಿ ಎಂದೊ ಸಾರ್ಥವಾಗಿದೆ
ನನ್ನ ಬದುಕು ಪರರಿಗಾಗಿ ನಿನ್ನ ಬದುಕಿನಂತಿದೆ
ಈ ಜೀವಚಕ್ರ ಬದುಕಿನಲ್ಲಿ ತುಂಬಾ ತಿಳಿ ಹೇಳಿದೆ
ಋಣಾನುಬಂಧ ಮುಕ್ತದೆಡೆಗೆ ಬದುಕನಡೆಸಬೇಕಿದೆ

Thursday, March 27, 2008

myHarate:"ಷೇರುಪೇಟೆ"

ಷೇರುಪೇಟೆ ಬಗ್ಗೆ ತಿಳಿಯದವರು ಈಗಿನ ಕಾಲದಲ್ಲಂತು ಯಾರು ಇಲ್ಲ ಎನ್ನಿ. D-Mat account ಇಲ್ಲದವ ಎನೋ ಹೊಂದಿಲ್ಲದವನಂತೆ. ಯಾರು Invest/trade ಮಾಡಲು ಅರಿತಿಲ್ಲವೊ ಅವ ಎನೋ ತಿಳಿದಿರದ ಮುಗ್ದನಂತೆ.

ಇಂತ ಷೆರುಪೇಟೆ ವ್ಯವಹಾರವನ್ನು ಮಿತ್ರರೊಬ್ಬರು ಸಾಗರಕ್ಕೆ ಹೋಲಿಸಿದ್ದಾರೆ.. ಇಲ್ಲಿದೆ ಆ ಸಾಗರದ ವಿಸ್ತಾರ ರೂಪ.

ಸಾಗರದಲ್ಲಿ ಅಲೆಗಳು ಬರುವದು ನಿಲ್ಲಲ್ಲ ತಾನೆ? ಅಂತೆಯೇ ಷೇರುಪೇಟೆ ಸೂಚ್ಯಾಂಕ ಒಂದೆ ತರ ನಿಲ್ಲಲಾರದು. ಅಲೆ ಮೇಲೆ ಬಂದಾಗ ಎಲ್ಲ ಅದರೊಂದಿಗೆ ಓಡಿಕೊಂಡು ಬರುತ್ತಾರೆ.. ಅಂತೆಯೆ ಇಳಿಯುವಗಲೂ ಒಟ್ಟಿಗೆ ಹೊಗುತ್ತಾರೆ.

ಕೆಲವರು ದಡದಿಂದ ನೊಡುತ್ತ ಅನಂದಿಸುತ್ತಾರೆ.. ಕೆಲವರು ಹೋಗಿ ಚಪ್ಪಲಿ ಕಳೆದು ಬಂದಿರುತ್ತಾರೆ. ಕೆಲವರು ಕಾಲು ಹೂತು ಬಾಕಿ ಆಗಿ ಬಿಡುತ್ತಾರೆ. ಕೆಲವರು ಇನ್ನೊಬ್ಬರ ಚಪ್ಪಲಿ ಹಾಕೊಂಡು ಹೊಗಿ ಕಳೆದು ಬಿಟ್ಟು ಪಶ್ಚಾತ್ತಾಪ ಪಡುತ್ತಾರೆ. ಹಮ್.. ಹೇಳಿದಾಗೆ, ಈ ಭರತ-ಇಳಿತ ಗಳ ನಡುವೆ ಬಲೆ ಬೀಸಿ ಮೀನು ಹಿಡಿದುಬಿಡುವವರು ತುಂಬಾ ಜಾಣರೆನ್ನಿ!

ಎನಂತೀರ?

Whatever, this line is ever true to all.. its not so easy to earn money.

Wednesday, March 26, 2008

ಅವರು ಹೀಗಂದರು

"ದಿನದ ಬ್ಲಾಗ್ - ಸ್ವರಚಿತ

ಕನ್ನಡದ ಬ್ಲಾಗ್ ಬಾನಿನ ಈ ದಿನದ ಚುಕ್ಕಿ, ತೋರಿಸುತ್ತಾರೆ ಬ್ಲಾಗಿನಿ.
ಇಂದಿನ ಬ್ಲಾಗ್ ಬೊಗಸೆಯಲ್ಲಿ ಉಡುಪಿಯ ಷಣ್ಮುಖರಾಜ ಅವರ ಸ್ವರಚಿತ ಎಂಬ ಹೂಗುಚ್ಛ. ತಂತ್ರಜ್ಞಾನ ಕ್ಷೇತ್ರದಲ್ಲಿದ್ದುಕೊಂಡು ಕನ್ನಡದ ದೋಣಿಯಲ್ಲಿ ಹೊರಟ ಇನ್ನೊಂದು ಭಾವಯಾನವಿಲ್ಲಿದೆ. ನಾನು ಬೇರೇವ್ರ ತರಾ ಅಲ್ಲ, ಬನ್ನಿ ಹರಟೆಹೊಡೆಯೋಣ, ಓದಿ, ಓದಿಸಿ ಲೈಫ್ ನಿಮ್ಮದಾಗಿಸಿಕೊಳ್ಳಿ ಅಂತ ಟಿಪಿಕಲ್ ಮ್ಯಾನೇಜ್‌ಮೆಂಟ್ ಗುರು ತರಹ ಪರಿಚಯ ಹೇಳಿಕೊಂಡಿರುವ ಈ ಲೇಖಕರ ಬರಹಗಳು ಸುಲಭ ಕನ್ನಡದ ಲಘು ಓದಿಗೆ ಒದಗುತ್ತವೆ.

ಇತ್ತೀಚಿನ ಕವನ ಉಪದೇಶದಲ್ಲಿ ಓರಗೆಯವರಿಗೆ [?] ಉಪದೇಶ ಹೇಳಿದ್ದಾರೆ. ಪಾಡ್ ಕ್ಯಾಸ್ಟ್ಗಳು, ಹನಿಗವನಗಳು, ಹನಿಗತೆಗಳು, ಹರಟೆ. ಈ ಎಲ್ಲವನ್ನೂ ಬಳಸಿ ತಮ್ಮ ಮನದ ಲವಲವಿಕೆಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ. ಹಕ್ಕಿಹಾಡು, ಹಳ್ಳಿಗೀತ, ಅವಳ ಕತೆ, ಹೋಳಿ ಶುಭಾಶಯ, ಆಲಮಟ್ಟಿ, ಉಪದೇಶ, ಹೀಗೆ ಸುಮ್ಮನೆ, ಗುಬ್ಬಚ್ಚಿ ಗೂಡಿನಲ್ಲಿ, ಮಾಯದ ಕಂಗಳ ಚೆಲುವೆ ಕೇಳು, ಬೆಟ್ಟದಾ ಮ್ಯಾಲೊಂದು ಟೆಂಟು ಹಾಕಿ, ಕೇಕು ಪುರಾಣ, ನನ್ ಮೇಸ್ಟ್ರು, ದೇವರೊಬ್ಬ ನಾಮ ಹಲವು, ತಾರೆ ಭುವಿಯ ಮ್ಯಾಲೆ, ಮೊದಲಾದ ಬರಹಗಳು ಓದಲು ಖುಶಿ ಕೊಡುತ್ತವೆ."

Ref: http://www.kendasampige.com/preview/?page_id=176

ಒಂದಂತು ನಿಜ.. ನಿಮ್ ಕುಶೀನೇ ನಮ್ ಕುಶಿ!

myKavana:"ಉಪದೇಶ"

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮಹಡಿ ಮನೆಯ ಹುಡುಗಿಗೆ!
ಗುಡಿಸಿ ಒರೆಸಿ ಬದುಕ ಸವೆಸೋ
ನಿಂಗಿ ನೀರ ಎರೆದಳು
ನಿಮ್ಮ ಅವಳು ತಾನೆ ಪೊರೆದಳು?
ಅವಳ ಉದ್ದ ತುರುಬಿನಲ್ಲಿ
ಕಾಣಿ ನಿಮ್ಮ ಸ್ವರ್ಗವ!

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮುದ್ದು ಮುಖದ ಹುಡುಗಿಗೆ!
ಅವಳ ಮುದ್ದು ನಿಮ್ಮ ಇಹವ
ಮರೆಸದಿರದು ಎಂದಿಗೂ
ಆಗ ಮುಖವ ಮರೆಸಿ ನೀವು
ಅಲ್ಲಿ ಅಡಗಬೇಕು ಹಿಂದೆಯೆ

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮಧುವ ಬಯಸೋ ದುಂಬಿಗೆ!
ಹೀರಿ ನಿಮ್ಮ ಜೀವ ಸತ್ವ
ಅದು ಹಾರಿ ಬಿಡದೆ ಪರರಿಗೆ?
ಸುತ್ತಿ ಸುಳಿದು ಅಲ್ಲೇ ಇರೆ
ಮತ್ತೆ ಹಾರಿ ಬರದು ನಿಮ್ಮಲ್ಲಿಗೆ

Sunday, March 23, 2008

myKavana:"ಹಳ್ಳಿಗೀತ"

ಹಳ್ಳೀಯ ಮನೆ ಚಂದ
ಕಳ್ಳೀಯ ಹೂ ಚಂದ
ಮಳ್ಳೀಯ ಮೋರೆ ನಗು ಚಂದ |
ಹಳ್ಳೀಲಿ, ಬಸ್ಸೀನ ಕೂಗೂ ಬಲು ಚಂದ || 1 ||

ಗಂಗೇಯ ಕರು ಚಂದ
ತುಂಗೆಯಾ ಸ್ವರ ಚಂದ
ನಿಂಗೀಯ ಹಾಡ ಪದ ಚಂದ |
ಹಳ್ಳೀಲಿ, ಜಾಜೀಯ ಕಂಪು ಬಲು ಚಂದ || 2 ||

ರಾಗೀಯ ತೆನೆ ಚಂದ
ಸೋಗೆಯ ಗರಿ ಚಂದ
ಗೇರೀನ ಹಣ್ಣ ರಸ ಚಂದ |
ಹಳ್ಳೀಲಿ, ಕೂಗೀಲೆ ಕೂಗು ಬಲು ಚಂದ|| 3 ||

ಮಾತೀಗೆ ಮಿತಿಯಿಲ್ಲ
ಉಪಚಾರ ಮಿತಿಯಲ್ಲ
ಮನೆಯಾಲಿ ಜಾಗಕ್ಕೆ ಕೂಡ ಮಿತಿಯಿಲ್ಲ |
ಹಳ್ಳೀಲಿ, ಎಲ್ಲದಕ್ಕೆಂದೂ ಮಿತಿಯಿಲ್ಲ || 4 ||

ಈ ಏರು ಪದ ಬೆಳೆಯುತ್ತನೆ ಹೊಗುತ್ತದೆ!

Inspired by cityಗೀತ/ಪೇಟೆಯ ಪಾಡ್ದನ series from "http://deraje.blogspot.com/"

Friday, March 21, 2008

myKathe:"ಅವಳ ಕತೆ"

ಜೀವನ ಅಂದರೆ ಹೀಗೇನೇ.. ಉದ್ದುದ್ದ ರಸ್ತೆ.. ಎತ್ತೆತ್ತಲೋ ತಿರುವುಗಳು.. ಕೆಲವೊಮ್ಮೆ ಎಲ್ಲಿ ಹೋಗಬೇಕೊ ತಿಳಿದಿರದು.. ನನ್ನ ಕತೆ ಇದೆಲ್ಲ ಬಿಟ್ಟೇನಿಲ್ಲ..

ಕುಳಿತಕಡೆ ಗಮ್ಮನೆ perfume ಕಂಪು ಆವರಿಸಿತ್ತು. ಹೊರಗಿಂದ ತಣ್ಣನೆ ಗಾಳಿ ಬೀಸುತ್ತಿತ್ತು... FM radio "ಬಿನ್ ಬತಾಯೆ.. ಲೇ ಚಲ್ ಕಹೆ" ಎಂದು ಹಾಡುತ್ತಿತ್ತು.. ಕನ್ನಡಿಗಳೆಲ್ಲ ಯಾಕೊ ನನ್ನ ಮುಖವನ್ನೆ ಗದರಿಸಿ ನನ್ನನ್ನು ತಪ್ಪಿತಸ್ತರಂತೆ ನೋಡುತ್ತಿದ್ದವು. ಹೀಗೆ ಸಾಗಿತ್ತು ಅವನೊಂದಿಗೆ ಕಾರಲ್ಲಿ ಎತ್ತಲೋ ಪಯಣ. ಮುಂದೆ ಸಿಗುವ junction ನಿಂದ ಎಡಕ್ಕೊ ಬಲಕ್ಕೊ ಅಲ್ಲ ಮುಂದಕ್ಕೊ ಎಂಬಷ್ಟೂ ಜ್ನಾನವಿಲ್ಲದೆ ಕಾರು ಮುಂದಕ್ಕೆ ಸಾಗಿತ್ತು. ನಿಗೂಡ ಮೌನ. ಗಾಳಿಯ ರಭಸಕ್ಕೆ ನನ್ನ ಕೂದಲೆಲ್ಲ ಕಿಟಿಕಿಯಾಚೆ ಹಾರಲೆತ್ನಿಸಿದವು. ಮುಡಿದ ಮಲ್ಲೆ ದಂಡೆಯಿಂದ ಮಲ್ಲಿಗೆ ಒಂದೊಂದಾಗಿ ಕಳಚಿ ಬೀಳುತ್ತಿತ್ತು.

ಗೊತ್ತಿತ್ತು... ವಿನಾಕಾರಣ ನನ್ನ ಕರೆಯಲಾರನು.. "ಬಾರೆ..." ಎಂದು ಕರೆದಾಗ "ಇಲ್ಲ.." ಎಂದರೆ ಅವ ಇಡೀ ಲೊಕವನ್ನೆ ಸುಟ್ಟುಬಿಟ್ಟನೊ ಎನೊ. ಕಾರ್ ಅರಿಯದೂರಿನ ಕಡೆಗೆ ಸಾಗುತ್ತಲೆ ಇತ್ತು.

ಒಂದೇ ಒಂದು ಮಾತಿಲ್ಲದೆ ಪಯಣ ಸಾಗಿತ್ತು. ಅವನಂತೂ ತುಂಬ ಉತ್ತಮ personality ಇರೋ ಹುಡುಗ. ಕಳೆದ ನಾಲ್ಕು ವರ್ಷಗಳಲ್ಲಿ ಹಗಲಿರಲಿ-ಇರುಳಿರಲಿ, ಕರೆದಾಗ ಬರಲ್ಲ ಅಂದದ್ದೆ ಇಲ್ಲ. ನನ್ನ ಮಾತ್ರನೇ ಬಹಳ ವರ್ಷಗಳಿಂದ ಮನಸಿಗೆ ಹಚ್ಚಿಕೊಂಡಿದ್ದ. ಕಳೆದ ತಿಂಗಳಿಂದ ಅವನ ಪ್ರೀತಿಯ ಮರೆಯಲೆತ್ನಿಸಿದೆ. ತೀರಾ ಸಂಪ್ರದಾಯ ಬದ್ದ family, ಅಪ್ಪ ಅಮ್ಮ ಬೇಡ ಅಂದಿದ್ದರು. ನನ್ನ ಒಪ್ಪಿಗೆ ಮಾತ್ರ ಸಾಕಿದ್ದರೆ ನಮಗೀಗ ಮಕ್ಕಳಾಗಿರಬೇಕಿತ್ತು. ದಾರಿ ಮುಗಿದು ಕೊನೆಗೊಮ್ಮೆ ಪುರಾತನ ಮನೆಯ ಗೇಟಿನ ಪಕ್ಕ ಕಾರ್ ನಿಂತಿತು. ಆತ ನನ್ನ ಕೈಹಿಡಿದು ಎಳೆದುಕೊಂಡು ಮನೆಯೊಳಗೆ ಹೊಗುತ್ತಿರೆ ಎನೋ ಎದೆ ಬಡಿತ ಜಾಸ್ತಿ ಆದಂತಿತ್ತು. ವಯಸ್ಸಾದ ಮುದಿ ದೇಹಗಳೆರಡರ ಕೆಳಗೆ ಅರಿವಿಲ್ಲದಂತೆ ನಮಸ್ಕರಿಸಿದೆವು. ತಲೆಯೆತ್ತಿ ನೊಡುತ್ತಿರೆ ಏನು ಆಶ್ಚರ್ಯ.. ನನ್ನ ತಂದೆ ತಾಯಿ ಇಬ್ಬರು ಪಕ್ಕದಲ್ಲಿ ನಿಂತಿದ್ದರು. I Love you darling ಅಂತ ಎಲ್ಲರೆದು ಜೀವನದಲ್ಲಿ ಪ್ರತಮ ಬಾರಿಗೆ ಅಂದು ಬಿಟ್ಟಿದ್ದ. ಕೊನೆಗೆ ಆತ ಎಲ್ಲ pre-planned ತರಾನೆ ಉಂಗುರ ತೊಡಿಸುತ್ತಿರೆ ಬೆಂದ ಮನಕೆ ಮಳೆಯ ಸಿಂಚನವಾದಂತಾಯ್ತು.

ಕಳೆದವಾರ ನನ್ನ ಮನೆಗೆ ಆತ ಹೋಗಿ ಎಲ್ಲಕ್ಕೂ ಸುಖಂತ್ಯ ದೊರಕಿಸಿದ್ದನ್ನ ಹೇಳುತ್ತಿರೆ ಮೈನವಿರೇಳಿತು. ನನ್ನವನೆ ನಿಜವಾದ ಗಂಡೆಂದು ಅರಿವಾಯಿತು. ಕಂಡ ಕನಸು ನನಸಾಗತೊಡಗಿತ್ತು. ಅರಿವಿಲ್ಲದೆಯೆ ಗಾಡವಗಿ ತಬ್ಬಿಕೊಂಡು I Love you too Honey ಎಂದೆ. ಹೀಗೆ ಅರಿಯದೆ engagement ಮುಗಿದಾಗಿತ್ತು!

ಟಪ್..
ಚೆ! ಈ ಕೆಟ್ಟ ಸೊಳ್ಳೆ! ನಿದ್ದೆಯಿಂದೆಬ್ಬಿಸಿತು..

Tuesday, March 18, 2008

myKavana:"ಹಕ್ಕಿ ಹಾಡು"

ಹಾಡೋ ಹಕ್ಕಿ ಹಾಡಿದೆ
ಅದಕೂ ನೆನಪು ಕಾಡಿದೆ
ನನ್ನ ನೆನಪ ಬಿಚ್ಚಿದೆ
ಹಲ್ಲು ತುಟಿಯ ಕಚ್ಚಿದೆ

ಹಾಡಿಗೇಕೆ ರಾಗಬೇಕು?
ಕಿವಿಗಳೆಲ್ಲ ಮುಚ್ಚಿದೆ
ಕುಣಿವ ಕಾಲ್ಗಳೆಲ್ಲ ದಣಿದು
ಮನಕೆ ನೋವ ಚುಚ್ಚಿವೆ

ಅವಳ ಮಾತು ಮುತ್ತೆ ಎಂದು
ಎಲ್ಲರೊಡನೆ ಹಾಡಿದೆ
ನಾನೂ ಗೆಜ್ಜೆ ಕಟ್ಟಿಕೊಂಡು
ನೃತ್ಯವನ್ನೆ ಮಾಡಿದೆ

ಕಾಲು ಸವೆದು ಗೆಜ್ಜೆ ಮುರಿದು
ಮೂಲೆಯಲ್ಲಿ ಬಿದ್ದಿದೆ
ಅವಳ ಮಾತು ಅವಳ ಸನ್ನೆ
ಬೇರೆ ಕಡೆಗೆ ಒಲಿದಿದೆ

ರುತುಗಳುರುಳಿ ಚೈತ್ರ ಬರಲು
ಮತ್ತೆ ಗಾನ ಮೊಳಗದೆ?
ನನ್ನ ಎದೆಯ ಮಿಡಿತ ಅರಿತು
ನಾಟ್ಯ ನವಿಲು ಬಾರದೆ

ನಾನು ಇನ್ನು ಹಾಡು ಹಾಡೇ
ಅವಳು ಅದಕೆ ಕುಣಿವಳೆ?
ಹೆಜ್ಜೆ ಗೆಜ್ಜೆ ಎಲ್ಲ ಸೇರಿ
ಬದುಕು ನನಗೆ ಕೊಡುವಳೆ?

Sunday, March 16, 2008

myPOD:"Almatti"

Entrance..View from near by bridge.. You could see Railway bridge and Dam as well!

myPOD:"Mangya of Badaami"

Thursday, March 13, 2008

myKavana:"ಚಿಂತನೆ"

ಕಾರ್ಮುಗಿಲು ಮಳೆತರದೆ
ನನ್ನನ್ನೆ ಕಾಡುತಿರೆ
ನವಿಲಾಗ ಬಯಸಿದೆನು
ನಾ ನಿನ್ನ ಪಡೆಯೆ

ಮನವು ಬರಿದಾಗಿರಲು
ಕನಸೆಂಬ ಮಳೆಸುರಿಯೆ
ಎದೆ ತುಂಬಿ ಹಾಡುವೆನು
ನಿನ್ನ ಪ್ರೀತಿ ಕುರಿತು!

ಗಾಳಿ ತಾ ಗುರಿಯಿರದೆ
ನನ್ನ ತಲೆ ಸುಳಿಯುತಿರೆ
ನೆನಪುಗಳು ಗರಿಗೆದರಿ
ಹಾರಬೇಕೆ?

ಹಕ್ಕಿಯಂದದಿ ನಾನು
ಸೀಮೆಯಿಲ್ಲದ ಕಡಲ
ಹಾರುತಲಿ ದಾಟಿದರೆ
ಲಂಕೆ ಸಿಗುವುದೇನು!

ಸೀತೆಯೊ ಮಾತೆಯೊ
ರಾಮನಿಗೆ ಹನುಮನಿಗೆ
ನೆಪ ಮಾತ್ರ ಬೆಕಾಯ್ತು
ರಾವಣನ ಕೊಲೆಗೆ

ಆಗಬೇಕಿಹುದಿಲ್ಲಿ
ದ್ರೊಹದ ಕೊನೆಯೊಮ್ಮೆ
ಪ್ರೀತಿ ಪ್ರೇಮದ ಹೆಸರ
ಉಸಿರಿನಲ್ಲಿ!

Wednesday, March 12, 2008

myKavana:"ಹಾರ"

ನಾ 'ಹಾರ' ಎಂದರೆ
ಪ್ರಿಯೆ ನಿನಗೇಕೆ
ಅವಲಕ್ಕಿ ಕೊತ್ತಂಬರಿ ಸರ
ನಿನಪಿಗೆ ಬರುವವು?
ಕೆರೆ, ತೋಡು, ನದಿ, ಸಾಗರ
ತುಂಬಾ ಸುತ್ತಮುತ್ತ ಇರುವವು!!

myPOD:"KT- Kalladka Tea"

Tuesday, March 11, 2008

myKavana:"ನಾ ಅರಿಯದಾದೆ"

ಪೂರ್ಣ ಚಂದಿರ ಆಕಾರದಿಂ
ಉದಯರವಿ ಗಾತ್ರದಿಂ
ಶೋಭಿತೆ ಎನ್ನುತ
ಉರುಟಾದ ಹೊಳಿಗೆಯೊ, ತಟ್ಟಿ ಬೆಂದ ರೊಟ್ಟಿಯೊ
ಅಲ್ಲ ಅದು ನಿಮ್ಮ ಮುಖವೋ ಎಂದು ನಿನ್ನನ್ನೆ
ನೊಡಿ ಬಣ್ಣಿಸುತಿರ್ಪಲು
ನೀ ಏಕಂದೆ ಅದು ನಿನ್ನ ಹೊಟ್ಟೆ ತರ ಇದೆ ಕಣೊ
ಎಂದು:-(

Sunday, March 9, 2008

myKavana:"ಒಂದು ಹ್ರುದಯಾ ಇದೆ"

ನಿನ್ನ ಕಣ್ಣಿಂದಾ ದೂರ ಹೋಗೆ ನಾ!
ಇದು ನಿನಗೆ ನನ್ನಾ ಪ್ರೀತಿಯ ವಚನ
ನಾ ಒಡೆದರು ಹೀಗೆ ನಿನ್ನ ಪ್ರೀತಿಸುವೆ
ನಾ ಉಸಿರಂತೆ ಈ ಮಾತ ನಿಭಾಯಿಸುವೆ!

ನಿನ್ನ ಪ್ರೀತಿಯ ನೋಡುವ ಒಲವೆ
ನಿನ್ನ ನಾ ಎಂದು ತಿಳಿವ ಮನವೆ,
ಒಂದು ಹ್ರುದಯಾ ಇದೆ... ಒಂದು ಹ್ರುದಯಾ ಇದೆ...
ಆ ಹ್ರುದಯ ನನ್ನಲ್ಲೆ ಇದೆ!!

ನಿನಗಾಗಿ ಇಂದು ನಾ ಎಲ್ಲವನ್ನು ಬಿಟ್ಟು ಓಡಿ ಬಂದೆ
ಜನುಮದ ಬಂಧನ ತೊರೆದು ಇಲ್ಲಿ ನಿನ್ನ ಸೇರ ಬಂದೆ
ನಿನ್ನ ಪ್ರೀತಿಲಿ ಮುಳುಗುವ ಒಲವೆ
ನಿನ್ನನೆ ಪ್ರತಿ ಕ್ಷಣ ಹುಡುಕೋ ಮನವೆ
ಒಂದು ಹ್ರುದಯಾ ಇದೆ... ಒಂದು ಹ್ರುದಯಾ ಇದೆ...
ಆ ಹ್ರುದಯ ನನ್ನಲ್ಲೆ ಇದೆ!!

ಜಗವನು ನಾ ಮರೆತು ಬಿಟ್ಟೆ ನಿನ್ನ ಬಾಹು ಕಂಡು
ಅನಿಸಿದೆ ಎಲ್ಲ ನಾ ಪಡೆದೆ ಎಂದು ನಿನ್ನ ಪ್ರೀತಿ ತಂದು
ನಿನ್ನ ಕನಸನು ಹೆಣೆಯುವ ಒಲವೆ
ನಿನ್ನ ಇಹವನು ಮರೆಯಿಸೋ ಮನವೆ
ಒಂದು ಹ್ರುದಯಾ ಇದೆ... ಒಂದು ಹ್ರುದಯಾ ಇದೆ...
ಆ ಹ್ರುದಯ ನನ್ನಲ್ಲೆ ಇದೆ!!

myPOD:"ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು"

myPOD:"ಮತ್ಸ್ಯ ಭೇಟೆ - ಹೆಣಭಾರ"

myKavana:"ಹೀಗೆ ಸುಮ್ಮನೆ"

ಕಣ್ಣು ಮೂಗು ಮೀಸೆ ಎಷ್ಟು ಚಂದ!
ಮಾತೆಲ್ಲಾ ಸಿಹಿ ಮತ್ತು ಸಿರಿಗಂಧ
ಪಡೆಯಬೇಕು ಇವನಿಂದ ನಾನೊಂದು ಕಂದ!

ಅಂತ...
ಯಾರೋ...
ಹೇಳಿದಂತಾದಾಗ...

ಬಲವಾಗಿ ಹಿಡಿದ ಬ್ರೇಕ್-ಗೆ
ಎಚ್ಚರವಾಯಿತು!

Saturday, March 8, 2008

myKavana:"Something is not something..."

Game is not just about winning! [Also about loosing, participating]
Business is not just about making money! [Also about customer relationship, quality!]
Work is not just about spending time! [Also about productivity]
And
Education is not just about scoring marks;-) [Also about understanding and using it]

Driving is not just about reaching hundred! [Also putting break]
Eating is not just about finishing! [Also about eating good food!]
Loving is not just about your GF/BF! [Also about family]
And
Smiling is not just about showing teeth! [Also about opening your heart;-)]

Killing is not just about vanishing! [Also about not givng the proof]
Talking is not just about saying words! [Also 'What' is important]
Drinking is not just about water! [Also many thing falls here]
And
Dyeing is not just about leave Living! [Also about what you leave after the live is important!]

myPOD:"game is not just about winning;-)"

Hope you know the result from of the myPOD title:-)

Wednesday, March 5, 2008

myKavana:"My Car Says It...!"

"Aqua - Barbie Girl" song hits back with altered lines here:-)

I am your car...
You are my owner!
All are metallic...
Its fantastic!

You can put me break...
I will stop everywhere!
Imagination...
That is your creation!

You can clutch...
You can drive me!
If you like, I am always yours;-)

I am your car...
You are my owner!
All are metallic...
Its fantastic!

myHarate:"Life"

ಮೊನೆ ನನ್ನ ಗೆಳೆಯರೊಬ್ಬರು ಉದುರಿಸಿದ ಹರಟೆ ಇದು. Lemon tea ಬಿಸಿ ಗುಟುಕು ಗಂಟಲೊಳಗೆ ಇಳಿಯುತ್ತಲೆ ಕೆಲ ಮಾತು ಹೊರಬಂತು. ಜೀವನದಲ್ಲಿ ನಾಲ್ಕು ತರದ ಜೀವನ ಎಂದು ಸುರುಹಚ್ಚಿದರು ಹರಟೆ!

-- Personal Life
ಇದು ತೀರ ನಿಮಗೆ ಸಂಬಂಧಪಟ್ಟದ್ದು! so ನಾನು ಎನು ಅಂತ ಬಿಡಿಸಿ ಹೇಳಲ್ಲ;-)

-- Family Life:
How you live with your! wife, kids, mom-dad, ajja-ajji, akka-thaMgi, mava-aththe, bhaava-aththige etc;-)

-- Social Life:
Social ethics and social responsibilities, how you are with neighbors, known and unknown person etc

and last one is

-- Office Life!
How you are at office, your working nature, how you take up resposibilities and how you finish, your team etc!

Remember! All these 4 items determines your personality!

I have finished Lemon tea.. my throat is dry! so a bye to you now! have a wonderful day!

myKavana:"ಸ್ಮರಣೆ"

ಕಲಿವಾಗ ಕಲಿತು
ದುಡಿವಾಗ ದುಡಿದು
ಮುಗಿದಾಯ್ತು ಅರ್ಧ ಹಾದಿ

ನಗುವಾಗ ನಕ್ಕು
ಅಳುವಾಗ ಅತ್ತು
ಇರಬೇಕು ಲೈಫ್ ಪೂರ್ತಿ!

ಆಕೆ ಇಲ್ಲ ಮತ್ತೆ ಆತ ಇಲ್ಲ
ಎಂದೆಂಬೆ ಏಕೆ ನೀನು?
ನಿನ್ನ ಮನದ ತಿಳಿ ಕೊಳದಿ ಎಂದು
ತಾ ಕಾಣುತಿರಲಿ ಭಾನು!

Monday, March 3, 2008

myKavana:"ನೀ..."

ಮನಸ ಮನೆ ಮೂಲೆಯಲ್ಲಿ...
ನನ್ನ ನರ-ನಾಡಿಯಲ್ಲಿ...
ಮಿಡಿತ ತಂದ ಶಕುತಿ ಯಾರೆ?
ನೀ ಎಂದರೆ ಅಷ್ಟೆ ಸಾಕೆ?

ನಿನ್ನ ಮನದ ಪಿಸುಮಾತೊಳು
ಧ್ವನಿಯಲ್ಲವೆ ನನ್ನ ಹೆಸರು!
ನನ್ನ ರೊಟ್ಟಿ ತಟ್ಟೆ ಒಳಗೆ
ನೀನಲ್ಲವೆ ಗಟ್ಟಿ ಮೊಸರು!
ಅದಕೆ ಬೇರೆ ಹೆಸರು ಬೇಕೆ?
ನೀ ಎಂದರೆ ಅಷ್ಟೆ ಸಾಕೆ?


ನಿನ್ನ ಅಳಲ ಕಾಲುವೆಯಲಿ...
ಮೀನಂತೆ ನಾ ಬೆರೆತಿಲ್ಲವೆ?
ನನ್ನ ಉಸಿರ ಒಳಗೂ ಹೊರಗೂ
ನೀ ಬಂದಿರೆ ಸುಖವಾಗಿದೆ...
ಎದೆಯಾ ಬಡಿತ, ಕಣ್ಣ ರೆಪ್ಪೆ
ನೀ ಎಂದರೆ ಅಷ್ಟೆ ಸಾಕೆ?
ನೀ ಇಲ್ಲದೆ ಅವು ನಿಂತೆ ಬಿಡದೆ?
ನೀ ಹೋದರೆ... ಇನ್ನೇನಿದೆ!

Sunday, March 2, 2008

myHarate:"ಮುಂಗಾರು ಮಳೆ ಮತ್ತು ನನ್ನಾಕೆ!!!"

ನಾ ಕಾರ್ ಓಡಿಸುತ್ತಿರೆ ಹೀಗೆಲ್ಲ ಡೆಕ್ನಲ್ಲಿ ಕೇಳುತ್ತಿತ್ತು!!

==============================
ಅನಿಸುತಿದೆ ಯಾಕೊ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಅಹಾ ಎಂತ ಮಧುರಾ ಪ್ರಯಾಣ!!!
==============================
ಕುಣಿದು ಕುಣಿದು ಬಾರೆ, ಬಳುಕಿ ಓಡಿ ಬಾರೆ
ಕುಣಿವಾ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ, ಜೀವಕ್ಕಿಂತ ಸನಿಹ ನೀನು
ಈ ರೋಡೆ ವಿಸ್ಮಯ! ರೋಡೆ ವಿಸ್ಮಯಾ!!
ನಿನ್ನ ಸರ್ವ ರೂಪ ಕಂಡು ನಾನು ತನ್ಮಯ!!

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು?
ಜೀವಕೆ ರೆಕ್ಕೆ ತಂದವನೆ, ಬಾನಿಗೆನೆ ಹಾರುವ ಬಾರೆ
ಈ ರೋಡೆ ವಿಸ್ಮಯ! ರೋಡೆ ವಿಸ್ಮಯಾ!!


ಇರುಳಲಿ ನೀ ಎಲ್ಲೊ ಮೈಮರೆತರೆ ನನಗಿಲ್ಲಿ ನವಿರಾದ ಹೂ ಕಂಪನ!
ಕಣ್ಣಲ್ಲಿ ನೀ ಕಣ್ಣಿಟ್ಟು ಬಿಡದಿದ್ದರೆ ಮಾತಿಲ್ಲ ಕಥೆಯಿಲ್ಲ ಬರೀ ರೋಮಾಂಚನ
ನಿನ್ನ ಲೈಟ್ ತುಂಬಾ ಇರಲಿ ನನ್ನ ಬಿಂಬ
ಧೂಳಿಗೆ ಬಣ್ಣ ತಂದವನೆ! ಬಾನಿಗೆನೇ ಹಾರುವ ಬಾರೋ
ಈ ರೋಡೆ ವಿಸ್ಮಯ! ರೋಡೆ ವಿಸ್ಮಯಾ!!
==============================
ಒಂದೆ ಒಂದು ಸಾರಿ ನನ್ನೊಂದಿಗೆ ಬಾರೆ
ಕಣ್ಣಾ ತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನನ್ನು ನಾ ಎಲ್ಲೊ ನಾ ಕಂಡು ಕೊಂಡೆನು
ನೀ ಯಾರೊ ಕಾಣೆನು ನಿನ್ನೊಳ ನಾನು
ಒಂದೆ ಒಂದು ಸಾರಿ ನನ್ನೊಂದಿಗೆ ಬಾರೆ
==============================
ಇವನು ಇನಿಯನಲ್ಲಾ! ತುಂಬ ಸಲ ಬಂದಿಹನಲ್ಲ
ತಿಳಿದು ತಿಳಿದು ಇವನೂ ನನ್ನ ತಾನೆ ಬಿಡುತಿಹನಲ್ಲ
ಧೂಳ ಹಾದಿಯಲ್ಲಿ ಇವನು ನನಗೆ ಹೂವೊ ಮುಳ್ಳೊ!
ಇವನು ಇನಿಯನಲ್ಲಾ! ತುಂಬ ಸಲ ಬಂದಿಹನಲ್ಲ
==============================

myPOD:"ನಿನ್ನೆ, ಇಂದು, ನಾಳೆ!"

ನಿನ್ನೆಯ ಕನಸುಗಳೆಲ್ಲ
ಇಂದು ನಿಜವಾಗಿರಲು
ಅವು ನಾಳೆಗೆ ನೆನಪುಗಳಲ್ಲವೆ?

ಕನಸೆಂಬ ಹೊಂಗಿರಣದಲಿ
ಇಂದೆಲ್ಲ ಪ್ರಜ್ವಲಿಸುತಿರೆ
ನೆಳಲೊಂದು ಮೂಡಿಹುದಲ್ಲವೆ?

myPOD:"ಹೂವೆ ಹೂವೇ..."

myPOD:"ನನ್ನೂರ ಮಂದಾರ ಹೂವು"