ಮನಸ ಮನೆ ಮೂಲೆಯಲ್ಲಿ...
ನನ್ನ ನರ-ನಾಡಿಯಲ್ಲಿ...
ಮಿಡಿತ ತಂದ ಶಕುತಿ ಯಾರೆ?
ನೀ ಎಂದರೆ ಅಷ್ಟೆ ಸಾಕೆ?
ನಿನ್ನ ಮನದ ಪಿಸುಮಾತೊಳು
ಧ್ವನಿಯಲ್ಲವೆ ನನ್ನ ಹೆಸರು!
ನನ್ನ ರೊಟ್ಟಿ ತಟ್ಟೆ ಒಳಗೆ
ನೀನಲ್ಲವೆ ಗಟ್ಟಿ ಮೊಸರು!
ಅದಕೆ ಬೇರೆ ಹೆಸರು ಬೇಕೆ?
ನೀ ಎಂದರೆ ಅಷ್ಟೆ ಸಾಕೆ?
ನಿನ್ನ ಅಳಲ ಕಾಲುವೆಯಲಿ...
ಮೀನಂತೆ ನಾ ಬೆರೆತಿಲ್ಲವೆ?
ನನ್ನ ಉಸಿರ ಒಳಗೂ ಹೊರಗೂ
ನೀ ಬಂದಿರೆ ಸುಖವಾಗಿದೆ...
ಎದೆಯಾ ಬಡಿತ, ಕಣ್ಣ ರೆಪ್ಪೆ
ನೀ ಎಂದರೆ ಅಷ್ಟೆ ಸಾಕೆ?
ನೀ ಇಲ್ಲದೆ ಅವು ನಿಂತೆ ಬಿಡದೆ?
ನೀ ಹೋದರೆ... ಇನ್ನೇನಿದೆ!
Monday, March 3, 2008
Subscribe to:
Post Comments (Atom)
No comments:
Post a Comment