Friday, March 21, 2008

myKathe:"ಅವಳ ಕತೆ"

ಜೀವನ ಅಂದರೆ ಹೀಗೇನೇ.. ಉದ್ದುದ್ದ ರಸ್ತೆ.. ಎತ್ತೆತ್ತಲೋ ತಿರುವುಗಳು.. ಕೆಲವೊಮ್ಮೆ ಎಲ್ಲಿ ಹೋಗಬೇಕೊ ತಿಳಿದಿರದು.. ನನ್ನ ಕತೆ ಇದೆಲ್ಲ ಬಿಟ್ಟೇನಿಲ್ಲ..

ಕುಳಿತಕಡೆ ಗಮ್ಮನೆ perfume ಕಂಪು ಆವರಿಸಿತ್ತು. ಹೊರಗಿಂದ ತಣ್ಣನೆ ಗಾಳಿ ಬೀಸುತ್ತಿತ್ತು... FM radio "ಬಿನ್ ಬತಾಯೆ.. ಲೇ ಚಲ್ ಕಹೆ" ಎಂದು ಹಾಡುತ್ತಿತ್ತು.. ಕನ್ನಡಿಗಳೆಲ್ಲ ಯಾಕೊ ನನ್ನ ಮುಖವನ್ನೆ ಗದರಿಸಿ ನನ್ನನ್ನು ತಪ್ಪಿತಸ್ತರಂತೆ ನೋಡುತ್ತಿದ್ದವು. ಹೀಗೆ ಸಾಗಿತ್ತು ಅವನೊಂದಿಗೆ ಕಾರಲ್ಲಿ ಎತ್ತಲೋ ಪಯಣ. ಮುಂದೆ ಸಿಗುವ junction ನಿಂದ ಎಡಕ್ಕೊ ಬಲಕ್ಕೊ ಅಲ್ಲ ಮುಂದಕ್ಕೊ ಎಂಬಷ್ಟೂ ಜ್ನಾನವಿಲ್ಲದೆ ಕಾರು ಮುಂದಕ್ಕೆ ಸಾಗಿತ್ತು. ನಿಗೂಡ ಮೌನ. ಗಾಳಿಯ ರಭಸಕ್ಕೆ ನನ್ನ ಕೂದಲೆಲ್ಲ ಕಿಟಿಕಿಯಾಚೆ ಹಾರಲೆತ್ನಿಸಿದವು. ಮುಡಿದ ಮಲ್ಲೆ ದಂಡೆಯಿಂದ ಮಲ್ಲಿಗೆ ಒಂದೊಂದಾಗಿ ಕಳಚಿ ಬೀಳುತ್ತಿತ್ತು.

ಗೊತ್ತಿತ್ತು... ವಿನಾಕಾರಣ ನನ್ನ ಕರೆಯಲಾರನು.. "ಬಾರೆ..." ಎಂದು ಕರೆದಾಗ "ಇಲ್ಲ.." ಎಂದರೆ ಅವ ಇಡೀ ಲೊಕವನ್ನೆ ಸುಟ್ಟುಬಿಟ್ಟನೊ ಎನೊ. ಕಾರ್ ಅರಿಯದೂರಿನ ಕಡೆಗೆ ಸಾಗುತ್ತಲೆ ಇತ್ತು.

ಒಂದೇ ಒಂದು ಮಾತಿಲ್ಲದೆ ಪಯಣ ಸಾಗಿತ್ತು. ಅವನಂತೂ ತುಂಬ ಉತ್ತಮ personality ಇರೋ ಹುಡುಗ. ಕಳೆದ ನಾಲ್ಕು ವರ್ಷಗಳಲ್ಲಿ ಹಗಲಿರಲಿ-ಇರುಳಿರಲಿ, ಕರೆದಾಗ ಬರಲ್ಲ ಅಂದದ್ದೆ ಇಲ್ಲ. ನನ್ನ ಮಾತ್ರನೇ ಬಹಳ ವರ್ಷಗಳಿಂದ ಮನಸಿಗೆ ಹಚ್ಚಿಕೊಂಡಿದ್ದ. ಕಳೆದ ತಿಂಗಳಿಂದ ಅವನ ಪ್ರೀತಿಯ ಮರೆಯಲೆತ್ನಿಸಿದೆ. ತೀರಾ ಸಂಪ್ರದಾಯ ಬದ್ದ family, ಅಪ್ಪ ಅಮ್ಮ ಬೇಡ ಅಂದಿದ್ದರು. ನನ್ನ ಒಪ್ಪಿಗೆ ಮಾತ್ರ ಸಾಕಿದ್ದರೆ ನಮಗೀಗ ಮಕ್ಕಳಾಗಿರಬೇಕಿತ್ತು. ದಾರಿ ಮುಗಿದು ಕೊನೆಗೊಮ್ಮೆ ಪುರಾತನ ಮನೆಯ ಗೇಟಿನ ಪಕ್ಕ ಕಾರ್ ನಿಂತಿತು. ಆತ ನನ್ನ ಕೈಹಿಡಿದು ಎಳೆದುಕೊಂಡು ಮನೆಯೊಳಗೆ ಹೊಗುತ್ತಿರೆ ಎನೋ ಎದೆ ಬಡಿತ ಜಾಸ್ತಿ ಆದಂತಿತ್ತು. ವಯಸ್ಸಾದ ಮುದಿ ದೇಹಗಳೆರಡರ ಕೆಳಗೆ ಅರಿವಿಲ್ಲದಂತೆ ನಮಸ್ಕರಿಸಿದೆವು. ತಲೆಯೆತ್ತಿ ನೊಡುತ್ತಿರೆ ಏನು ಆಶ್ಚರ್ಯ.. ನನ್ನ ತಂದೆ ತಾಯಿ ಇಬ್ಬರು ಪಕ್ಕದಲ್ಲಿ ನಿಂತಿದ್ದರು. I Love you darling ಅಂತ ಎಲ್ಲರೆದು ಜೀವನದಲ್ಲಿ ಪ್ರತಮ ಬಾರಿಗೆ ಅಂದು ಬಿಟ್ಟಿದ್ದ. ಕೊನೆಗೆ ಆತ ಎಲ್ಲ pre-planned ತರಾನೆ ಉಂಗುರ ತೊಡಿಸುತ್ತಿರೆ ಬೆಂದ ಮನಕೆ ಮಳೆಯ ಸಿಂಚನವಾದಂತಾಯ್ತು.

ಕಳೆದವಾರ ನನ್ನ ಮನೆಗೆ ಆತ ಹೋಗಿ ಎಲ್ಲಕ್ಕೂ ಸುಖಂತ್ಯ ದೊರಕಿಸಿದ್ದನ್ನ ಹೇಳುತ್ತಿರೆ ಮೈನವಿರೇಳಿತು. ನನ್ನವನೆ ನಿಜವಾದ ಗಂಡೆಂದು ಅರಿವಾಯಿತು. ಕಂಡ ಕನಸು ನನಸಾಗತೊಡಗಿತ್ತು. ಅರಿವಿಲ್ಲದೆಯೆ ಗಾಡವಗಿ ತಬ್ಬಿಕೊಂಡು I Love you too Honey ಎಂದೆ. ಹೀಗೆ ಅರಿಯದೆ engagement ಮುಗಿದಾಗಿತ್ತು!

ಟಪ್..
ಚೆ! ಈ ಕೆಟ್ಟ ಸೊಳ್ಳೆ! ನಿದ್ದೆಯಿಂದೆಬ್ಬಿಸಿತು..

No comments: