Monday, November 26, 2007

myPOD:"ದಿಕ್ಕೆಲ್ ದ ಉಳಾಯಿ"

Sunday, November 25, 2007

myHarate:"Radio Era"

Gone are the days when we used to wait for a song after tuning Al India Radio and get thrilled when our name gets announced after reading the posted letter to the Radio station. Recently all Radio sets are disappeared from the place it occupied earlier. All such sweet memories are erased by TV. It made us to sit and watch in-front of it by disturbing our daily routines All our work gets stalled when TV is ON unlike the Radio. Many utensils burnt in the Kitchen.. and we lost the timesence .. We could not even talk to friends or guests who come-in to our house.. instead TV talks, cant even call Mom when Indian Idol is going on in Sony..

Yesterday, My old deck set having a FM tuner occupied its old place. We can tune to Radio Mirchi in Udupi with Frequency 98.3!! Wordings such as "Sakhath Hot Maga" thrilled the both of the ears.. 24/7 programs excited all young hearts!! No surprise if we hear it in Rikshaw, Buses and all such vehicles. Radio era hits back!!!!

Thursday, November 22, 2007

myPOD:"ಬೆಳಕಿನ ಚಮತ್ಕಾರ"

myPOD:""ಉಡುಪಿ:ಲಕ್ಷದೀಪೋತ್ಸವ""

ಉತ್ತಾನ ದ್ವಾದಶಿ: ತುಲಸೀ ಪೂಜಾ ಕರಿಶ್ಯತಿ



ದೀಪದಿಂದ ದೀಪವ
ಹಚ್ಚಬೇಕು ಮಾನವ
ನಿಶೆಯೆಂಬ ಕೊಳಕು ಓಡಲು



ಪುನರಪಿ ಬೆಳಕು ಪುನರಪಿ ಕತ್ತಲು
ಪುನರಪಿ ಜಾತ್ರೆ ಪುನರಪಿ ಸುಂದರ
ಪುನರಪಿ ಕ್ಯಾಮರ ಜಟರೇ ಶಯನಂ
ಪುನರಪಿ ನಿಮ್ಮಯ ಕಡೆಗೇ ಪಯಣಂ

Thursday, November 15, 2007

myPOD:"ತಮಸೋಮಾ ಜ್ಯೊತಿರ್ಗಮಯ"


ಅಷ್ಟು ಹತ್ತಿರ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ತುಳಸಿ ಪೂಜಾ ಕಾರ್ಯದಿಂದ ವಿಚಲಿತನಾಗದ ಆಣ್ಣ, ಪೂಜೆಯೊಡನೆ ಪಟಾಕಿಯನ್ನ ಸಂಭ್ರಮಿಸುತ್ತಿರುವ ದೊಡ್ಡ ಆಣ್ಣ, ಅಮ್ಮ ಮತ್ತು ಪಟಾಕಿಗೊಸ್ಕರನೇ ನಿಂತಂತಿರುವ ಅಣ್ಣನ ಮಕ್ಕಳು, ಅಕಾಶದೆತ್ತರಕ್ಕೆ ಬೆಳೆದಿರುವ ಮಳೆಗಾಲದ ಬೆಂಡೆಕಾಯಿ ಗಿಡ, ಎಲ್ಲವನ್ನ ನೆನಪಿಸಲು ನಿಶೆಯನ್ನ ದೂರಗೊಳಿಸಿದ ದಿವ್ಯ ಜ್ಯೊತಿ.. ಎಷ್ಟೊಂದು ವಿಚಾರಗಳು ಇದರೊಳಗೆ!

Tuesday, November 13, 2007

myHarate:"ನಮ್ಮ ಧ್ವನಿ"



ಅಂಬಾಗಿಲು - ಕಲ್ಸಂಕ ರಸ್ತೆಯ ಅಗಲೀಕರಣ ನೆಪದಲ್ಲಿ ಕಳೆದ 2-3 ವಾರಗಳಿಂದ ನಡೆಯುತ್ತಿರುವ ಮರಗಳ ಮಾರಣಹೋಮ ಮುಂದುವರಿದಿದೆ. ಪೊಲೀಸ್ ಬಿಗಿ ಬಂದೊಬಸ್ತ್-ನಲ್ಲಿ ನಡೆಯುತ್ತಿರುವ ಈ ಕಾರ್ಯ ಅಬಿವ್ರದ್ದಿ ನೆಪದಲ್ಲಿ ಅನಿವಾರ್ಯವಾದರೂ ಒಂದಿಶ್ಟು ವಿಮರ್ಶೆ ಇಲ್ಲಿ ಅಗತ್ಯವಾಗಿದೆ. ಅದೆಷ್ಟೊ ವಸಂತಗಳನ್ನ ಕಂಡು ಬದುಕುತ್ತ್ತಿದ್ದ ಮರಗಳನ್ನು ಧರೆಗುರುಳಿಸಿ ಅಗಲೀಕರಣ ಕಾರ್ಯ ಪ್ರರಂಭಮಾಡಿಯಾಗಿದೆ. ಎಷ್ಟೊ ಮನೆಗಳು, ಅಂಗಡಿಗಳನ್ನು ಸ್ತಳಾಂತರಿಸಲಾಗಿದೆ, ಆದರೆ ಕಡಿದ ಮರಗಳನ್ನು ಸ್ತಳಾಂತರಿಸುವವರಾರು? ರಸ್ತೆ ಪಕ್ಕದ ಸ್ತಳಗಲಿಗೆ ಪರಿಹಾರ ದೊರಕಿಸಿ ಆಗಿದೆ. ಅದರೆ ಮೂಕ ಮರಗಳ ಬದುಕು ಮೊಟಕುಗೊಳಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮರಗಳಿಗೆ ಪರಿಹಾರವಾಗಿ ಮರಣವನ್ನು ಕರುಣಿಸಲಾಗಿದೆ. ಎಲ್ಲ ಸರಿ.. ಅದರೆ, ಈ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲು ನಾವಿನ್ನು ಅದೆಸ್ಟು ವಸಂತಗಳನ್ನ ಕಾಣಬೆಕೋ ಆ ದೇವರೆ ಬಲ್ಲ! ಪರಿಸರಪ್ರೇಮಿಯಾಗಿ ನನ್ನ ಕಳಕಳಿಯ ವಿನಂತಿ ಎನೆಂದರೆ ಸಂಬಂದಪಟ್ಟ ಅದಿಕಾರಿಗಳು ಇದರತ್ತ ಗಮನ ಹರಿಸಬೆಕು ಎಂಬುದಶ್ಟೆ. ಪರಿಸರ ವಿರೊಧಿ ಚಟುವಟಿಕೆಗಳನ್ನ ಬೀದಿಗೆಳೆಯಬೆಕಾದುದು ನಮ್ಮಲ್ಲರ ಕರ್ತವ್ಯ. ಏನೆ ಇರಲಿ, ಮರಗಳ ಸಾವಿನ ವರ್ಷಂತ್ಯದಲ್ಲಿ ಕಾಮಗಾರಿ ಮುಗಿಯಲಿ ಎಂಬುದು ಮುಂದಿನ ಹಾರೈಕೆ!

Tuesday, November 6, 2007

myKavana:"ಮಿನಿ-ಕವನ"

ಆಕೆಗೆ ಕೇ(ಹೇ)ಳಿದ್ದು..

ನಿನ್ನ ಕಂಡ ಕ್ಷಣ
ಮನ ತುಂಬಿ ದಿನಾ
ನುಗುವಿನಾ ಸಿಂಚನ...
ನಿನ್ನ ಹೆಸರ ಕೂಗೆ
ಇಂದು ಯಾಕೆ ಕಣೆ
ಎದೆ ತುಂಬಾ ಕಂಪನ?

ನೀನಲ್ಲವೆ?

ಮಳೆಯ ಹನಿಯ ತಂಪು
ಮಣ್ಣ ಕಣದ ಕಂಪು
ನನ್ನ ಕವಿತೆ ಇಂಪು
ನೀನಲ್ಲವೆ?

ರಾತ್ರೆ ಚಂದ್ರ ತಂಪು
ಮಲ್ಲೆ ಮಂಚ ಕಂಪು
ಸರಸ ಗಾನ ಇಂಪು
ನೀನಲ್ಲವೆ?

myKavana: "ನನಗೇನೆ?"

ನಿನ್ನ ಮುಡಿ ಮಲ್ಲಿಗೆಯ
ಮೊಗ್ಗೊಂದು ಅರಳಿಹುದು
ಕಂಪಸೂಸಿದೆ ಇಂದು
ಅಲ್ವೇ ಆ ಕಂಪು ನನಗೇನೆ?

ನಿನ್ನ ಕಾಲ್-ಗೆಜ್ಜೆಯ
ಮಣಿಯೊಂದು ಕರೆದಿಹುದು
ನನ್ನ ಗಮನವ ಅತ್ತ
ಅಲ್ವೇ ಆ ಕರೆಯು ನನಗೇನೆ?

ನಿನ್ನ ಮೊಗ ಬಾಂದಳದ
ಕಡುಗಪ್ಪು ಕಾಡಿಗೆಯು
ಮುಗಿಲ ತೆರನದಿ ನವಿಲ ಬರಸೆಳೆದಿದೆ
ಅಲ್ವೇ ಆ ಸೆಳವು ನನಗೇನೆ?

ನಿನ್ನ ಕೈ ಎರಡೆರಡು
ಒಂದಮೇಲೊಂದಿಟ್ಟು
ನನ್ನ ಸಂಬಳ ಪಡೆಯೆ ಹಾತೊರೆದಿದೆ
ಅಲ್ವೇ ಆ ಮೊರೆಯು ನನಗೇನೆ?!!

Saturday, November 3, 2007

myHarate:"ಹೀಗೊಂದು ಹರಟೆ"

ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ ಅವರ ಮಾತ ಕೇಳೊ ಭಾಗ್ಯ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ ಒದಗಿಸಿ ಕೊಟ್ಟಿತ್ತು.. ಹೀಗೆ SPB ಅವರು ಮಾತಾಡ್ತಾ ಇರ್ಬೆಕಾದ್ರೆ, ಮನೊಮೂರ್ತಿ ಅವರ ಸಂಗೀತ ಯಾಕೆ ಅಷ್ಟು ಜನಪ್ರಿಯ ಆಗುತ್ತಿದೆ ಅಂತ ಒಂದು ಪ್ರಶ್ನೆ ಮೂಡಿಬಂತು. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಅದ್ರಲ್ಲು ಹೆಚ್ಚಾಗಿ ಮಕ್ಕಳು ಮೆಚ್ಚುವ ಅವರ ಸಂಗೀತ ನಿರ್ದೆಶನದ ಗುಟ್ಟೇನು ಅಂತ ವಿಚಾರಿಸುತ್ತಿರ್ಬೆಕಾದರೆ ಒಂದು ಕಟು ಸತ್ಯವನ್ನ ಕಾಯ್ಕಿಣಿಯವರು ನುಡಿದೆ ಬಿಟ್ಟರು!

ನಮಗೆ ಕೊಳಲು ತುಂಬಾ ಇಷ್ಟ ಆಗುತ್ತೆ, ನಾವು violine ತುಂಬಾ ಇಷ್ಟ ಪಡುತ್ತೇವೆ, ಯಾಕೆಂದರೆ ಆ ಸಂಗೀತದಲ್ಲಿ ತುಂಬಾ ಖಾಲಿ ಜಾಗ ಇರುತ್ತೆ, ನಮ್ಮ ಭಾವನೆಗಳನ್ನ ತುಂಬಲು ಬೆಕಾದಷ್ಟು ಜಾಗ ಇರುತ್ತೆ. ಕೊಳಲು ನುಡಿಸುವಾಗ ಪದಗಳನ್ನು ಹೆಣೆದು ನಮಗೂ ಹಾಡಬೇಕೆನಿಸುತ್ತದೆ. ರಾಗ ಇಷ್ಟ ಆಗಿ, ನಾವು ಹಾಡನ್ನ ಕೆಳುವಾಗ ಭಾವ ತುಂಬಿ ಪರಿಪೂರ್ಣಗೊಳಿಸುತ್ತೇವೆ.. ಎಷ್ಟು ನಿಜ, ಜೊರಾದ Rock ಸಂಗೀತದಿಂದ ಮೆಲ್ಲಗೆ ಆಚೆಮನೆಯಲ್ಲಿ ಕೇಳುವ karaoke music ಎಷ್ಟು ಚೆನ್ನಾಗಿ ಕೆಲ್ಸುತ್ತೆ ಅಲ್ವೆ/ನೇ? ಯಾಕೆಂದ್ರೆ ನಾವೆ ಅಲ್ಲಿ ಪದಗಳನ್ನ ತುಂಬಿ ಪದ್ಯಾನ ಪರಿಪೂರ್ಣಗೊಳಿಸುತ್ತೇವೆ... ಎಂತ ವಿಮರ್ಶೆ ಕಣ್ರೀ, ನಮಗೆ ಪದ್ಯ ಬರೆಯಲೇ ಬರಲ್ಲ, ಬಂದ್ರೂ ಅದಕ್ಕೆ ಮನೊಮೂರ್ತಿ ಸಂಗೀತ ನಿರ್ದೆಶಿಸಿದ್ರೂ ಅವರ ಸಂಗೀತ ಯಾಕೆ ಎಲ್ರಿಗೆ ಇಷ್ಟ ಆಗುತ್ತೆ ಅಂತ ಪ್ರಶ್ನೆನೇ ಬರಲ್ಲ, ಒಂದು ವೇಳೆ ಬಂದ್ರೂ ಅದಕ್ಕೆ ತಲೆ ಕೆರೆದ್ರೂ ಇಂತಹ ಉತ್ತರ ಸಿಗೊದೆ ಇಲ್ಲ ಬಿಡಿ, ಸಿಕ್ರೆ, ನಾವು ಅದೆ ಉತ್ತರಕ್ಕೆ ಕಾಯುತ್ತಿದ್ದೆವೆ ಅಂತ ಅನಿಸುತ್ತೆ! ಹೀಗಾಗೊದು, ಅವರ ವಿಮರ್ಶೆ ನಾವು ಒಪ್ಪಿಕೊಂಡ್ರೆ ಮಾತ್ರ.. ಕಾಯ್ಕಿಣಿ ಅಸಾಮನ್ಯ ಚಿಂತನಾಕಾರ ಎಂಬುದು ಸರ್ವಸತ್ಯ!

Thursday, November 1, 2007

mySTD:"Strange but true - Age is just a number!"

Hum..

When I was a kid, I was wished on my B'day as "Many many many happy returns of the day"
And now it is "Many many happy returns of the day!"
One day it might be that "Many returns of the day."
Day might come when people say "Will the day return?"
And so true that day will never return once!

Day keeps rolling and Night always comes.. But good that we are still surviving after the sleep.[Unlike few flowers!] So true that we are all part of it and none is excused!

Life is to do something before every night arrives and darkness blows! Age is just one more number and that keeps rolling till it finds incremental energy in life!

Have a good day ahead!

Regards,
Shanmukh.