Saturday, November 3, 2007

myHarate:"ಹೀಗೊಂದು ಹರಟೆ"

ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ ಅವರ ಮಾತ ಕೇಳೊ ಭಾಗ್ಯ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ ಒದಗಿಸಿ ಕೊಟ್ಟಿತ್ತು.. ಹೀಗೆ SPB ಅವರು ಮಾತಾಡ್ತಾ ಇರ್ಬೆಕಾದ್ರೆ, ಮನೊಮೂರ್ತಿ ಅವರ ಸಂಗೀತ ಯಾಕೆ ಅಷ್ಟು ಜನಪ್ರಿಯ ಆಗುತ್ತಿದೆ ಅಂತ ಒಂದು ಪ್ರಶ್ನೆ ಮೂಡಿಬಂತು. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಅದ್ರಲ್ಲು ಹೆಚ್ಚಾಗಿ ಮಕ್ಕಳು ಮೆಚ್ಚುವ ಅವರ ಸಂಗೀತ ನಿರ್ದೆಶನದ ಗುಟ್ಟೇನು ಅಂತ ವಿಚಾರಿಸುತ್ತಿರ್ಬೆಕಾದರೆ ಒಂದು ಕಟು ಸತ್ಯವನ್ನ ಕಾಯ್ಕಿಣಿಯವರು ನುಡಿದೆ ಬಿಟ್ಟರು!

ನಮಗೆ ಕೊಳಲು ತುಂಬಾ ಇಷ್ಟ ಆಗುತ್ತೆ, ನಾವು violine ತುಂಬಾ ಇಷ್ಟ ಪಡುತ್ತೇವೆ, ಯಾಕೆಂದರೆ ಆ ಸಂಗೀತದಲ್ಲಿ ತುಂಬಾ ಖಾಲಿ ಜಾಗ ಇರುತ್ತೆ, ನಮ್ಮ ಭಾವನೆಗಳನ್ನ ತುಂಬಲು ಬೆಕಾದಷ್ಟು ಜಾಗ ಇರುತ್ತೆ. ಕೊಳಲು ನುಡಿಸುವಾಗ ಪದಗಳನ್ನು ಹೆಣೆದು ನಮಗೂ ಹಾಡಬೇಕೆನಿಸುತ್ತದೆ. ರಾಗ ಇಷ್ಟ ಆಗಿ, ನಾವು ಹಾಡನ್ನ ಕೆಳುವಾಗ ಭಾವ ತುಂಬಿ ಪರಿಪೂರ್ಣಗೊಳಿಸುತ್ತೇವೆ.. ಎಷ್ಟು ನಿಜ, ಜೊರಾದ Rock ಸಂಗೀತದಿಂದ ಮೆಲ್ಲಗೆ ಆಚೆಮನೆಯಲ್ಲಿ ಕೇಳುವ karaoke music ಎಷ್ಟು ಚೆನ್ನಾಗಿ ಕೆಲ್ಸುತ್ತೆ ಅಲ್ವೆ/ನೇ? ಯಾಕೆಂದ್ರೆ ನಾವೆ ಅಲ್ಲಿ ಪದಗಳನ್ನ ತುಂಬಿ ಪದ್ಯಾನ ಪರಿಪೂರ್ಣಗೊಳಿಸುತ್ತೇವೆ... ಎಂತ ವಿಮರ್ಶೆ ಕಣ್ರೀ, ನಮಗೆ ಪದ್ಯ ಬರೆಯಲೇ ಬರಲ್ಲ, ಬಂದ್ರೂ ಅದಕ್ಕೆ ಮನೊಮೂರ್ತಿ ಸಂಗೀತ ನಿರ್ದೆಶಿಸಿದ್ರೂ ಅವರ ಸಂಗೀತ ಯಾಕೆ ಎಲ್ರಿಗೆ ಇಷ್ಟ ಆಗುತ್ತೆ ಅಂತ ಪ್ರಶ್ನೆನೇ ಬರಲ್ಲ, ಒಂದು ವೇಳೆ ಬಂದ್ರೂ ಅದಕ್ಕೆ ತಲೆ ಕೆರೆದ್ರೂ ಇಂತಹ ಉತ್ತರ ಸಿಗೊದೆ ಇಲ್ಲ ಬಿಡಿ, ಸಿಕ್ರೆ, ನಾವು ಅದೆ ಉತ್ತರಕ್ಕೆ ಕಾಯುತ್ತಿದ್ದೆವೆ ಅಂತ ಅನಿಸುತ್ತೆ! ಹೀಗಾಗೊದು, ಅವರ ವಿಮರ್ಶೆ ನಾವು ಒಪ್ಪಿಕೊಂಡ್ರೆ ಮಾತ್ರ.. ಕಾಯ್ಕಿಣಿ ಅಸಾಮನ್ಯ ಚಿಂತನಾಕಾರ ಎಂಬುದು ಸರ್ವಸತ್ಯ!

No comments: