Wednesday, January 30, 2008

myHarate:"ಸ್ನೇಹಾನಾ ಪ್ರೀತಿನಾ?"

ಈ ಅಚಾನಕ್ ದುನಿಯಾದಲ್ಲಿ ಸ್ನೇಹ ಮತ್ತು ಪ್ರೀತಿ ಬಗ್ಗೆ ಬಹಳಷ್ಟು confusion ಕಣ್ರೀ.. ಸ್ನೇಹಾನ ಪ್ರೀತಿ ಅಂತನೋ ಪ್ರೀತಿನಾ ಸ್ನೇಹಾ ಅಂತಾನೋ ತಿಳಿದು ಹಲವಾರು ಎಡವಟ್ಟು ಅಗ್ತಾ ಇರ್ತೆ ಕಣ್ರೀ!

ಈ ಇಹದಲ್ಲಿ ಪ್ರೀತಿಗಿಂತ ಮಿಗಿಲಾದುದು ಏನಿದೆ ಅಂತ ಯಾರದ್ರು ಕೇಳಿದ್ರೆ ದೈರ್ಯವಾಗಿ ಸ್ನೇಹ ಅಂದು ಬಿಡಿ. ನೀವೆಲ್ಲು ತಪ್ಪಿಹೋಗಲಾರಿರಿ. "ಪ್ರೀತಿ ಮಧುರ ತ್ಯಾಗ ಅಮರ" ಅಂತ ಯೊಗರಾಜ ಭಟ್ಟ್ರು ತಪ್ಪಾಗಿ ಹೆಳಿದಾ ಕಣ್ರೀ... ಪ್ರೀತಿ ಮಧುರ ಸ್ನೇಹ ಅಮರ ಅಂದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವೆನ್ರಿ!!!

"ಪ್ರೀತಿ ನಿಶ್ಕಾರಣವಾಗಿರಬೇಕು, ದ್ವೇಶ ಸಕಾರಣವಾಗಿರಬೇಕು" ಅಂತ ಜಯಂತ ಕಯ್ಕಿಣಿ ಹೆಳಿದ ನೆನಪು.. ಸರಿ ಅಂದ ಮಾತ್ರಕ್ಕೆ ಸ್ನೇಹ ಹೇಗಿರ್ಬೆಕು?

ಸ್ನೇಹ ನಿಶ್ಕಲ್ಮಷ, ನಿಶ್ಕಳಂಕ, ಫಲಾನುಪೆಕ್ಷಾರಹಿತ ಮತ್ತು ಶುಭ್ರವಾಗಿರಬೇಕು!!!
ನಾ ನಿನ್ನ ಸ್ನೇಹಿ ಎಂದ ಮಾತ್ರಕ್ಕೆ ನೀ ನನ್ನ ಸ್ನೇಹಿ ಎಂದೇನಲ್ಲ!
ಪ್ರೀತಿ ಹ್ರುದಯದಲ್ಲಿ ಹುಟ್ಟಿದರೆ ಸ್ನೇಹ ಮನಸಲ್ಲಿ ಹುಟ್ಟುತ್ತೆ!
ಪ್ರೀತಿ ಮುಗಿಸಿ ದ್ವೇಶ ಹುಟ್ಟಿದರೆ ಸ್ನೇಹ ಮುಗಿಸಿ ನೆನಪು ಹುಟ್ಟುತ್ತೆ!
ಪ್ರೀತಿಸಿದವರ ಮರೆತು ಬಿಟ್ಟರೆ ಸ್ನೇಹಿಸಿದವರ ನೆನಪು ಉಮ್ಮಳಿಸಿ ಬರುತ್ತೆ!
ಇಂತಹ ಶ್ರೇಷ್ಟ ಸ್ನೇಹ ಯಾರು ತಾನೆ ಬಯಸರು?!!!

ಅಂದಹಾಗೆ ಈ ದೋರಣೆಯಲ್ಲಿ ನಾನೆಷ್ಟು ಸರಿ ಎಂಬುದು ನಿಜವಾಗಿಯೂ ನನಗೆ ಗೊತ್ತಿಲ್ಲ!

Monday, January 28, 2008

myKavana:"ಹನಿ ಹನಿ ಪ್ರೇಮ್ ಕಹಾನಿ"

ಮುಂಜಾನೆ ಮಂಜಿನ ಹನಿ ಕಾಣಾ
ಈ ವಿಸ್ಮಯ ಪ್ರೀತಿಯ ಮಣಿ ಕಾಣಾ
ಚಿವುಟಿರೆ ಕರಗಿರೆ ಕೊನೆ ಕಾಣಾ
ಅದು ಬರಬೇಕು ಅದರಂತೆ ದಿನಾ ಕಾಣಾ

ಹೂವಲಿ ಮುಳ್ಳಲಿ ಹನಿ ಕಾಣಾ
ಹೂವಿನಾ ಸಿಹಿಯಲೂ ನೀಯೆಂದು ಅದ ಕಾಣಾ
ದುಂಬಿಯ ತುಟಿಯಲೀ ಮಧು ಕಾಣಾ
ಹೂವ ಕಿತ್ತರೆ ಅದಕದು ವಧೆ ಕಾಣಾ

ಬೆಟ್ಟದಾ ತುದಿಯಲಿ ಹನಿ ಕಾಣಾ
ನೀ ಮೆಟ್ಟಿಲಾ ಹತ್ತುವೆ ದಿನಾ ಕಾಣಾ
ಹನಿಯನು ಹಿಡಿವದು ಗುರಿಯೆ ಕಾಣಾ
ಹನಿಯಲೆ ನೆನೆವದು ಕೊನೆಗೆ ಕಾಣಾ

Sunday, January 27, 2008

myKavana:"ಮನಸೇ"

The lines are influenced by kannada movie GaaLipata;-)

ಮಣ್ಣಾಗಿ ನೀನು ಇರಲು
ನೀ ಮುತ್ತಿಕ್ಕುವೆ ನನ್-ಕಾಲ!!
ಕಣ್ಣಾಗಿ ನೀ ಜೊತೆಗಿರಲು
ಸೊಗಸಾಗಿದೆ ಪ್ರತಿ-ಕಾಲ
ಮನಸಿನ ಮೌನರಾಗ
ಹರಡಿದೆ ಅಂತರ್ಜಾಲ
ಇನ್ನೆಲ್ಲಿ ಪ್ರೀತಿಗೆ ಕೊನೆಗಾಲ?

*****

ಮನಸೇ, ಮನಸೇ,
ಈ ಪ್ರೀತಿ ನಿನ್ನಿಂದಾ ಬಂತೆ?
ಮನಸೇ, ಮನಸೇ,
ಯಾಕಿಲ್ಲಿ ಕವನಗಳಾ ಸಂತೆ!
ಬಣ್ಣಿಸಲು.... ನನಗಿಲ್ಲಿ ಪದಗಳದೇ ಕೊರತೆ!

*****

ಹಸಿವೇ ಹಸಿವೇ ನೀ ಏಕೆ ಹೊಟ್ಟೆಯಲೇ ಕುಳಿತೆ!

ಚುರ್ರ್ ಎನ್ನುತಿದೆ... ಜಟರಾಗ್ನಿ ಮೂಡಿಸಿದಾ ಮಾತೆ?
ಕಮ್ಮೆನ್ನುತಿದೆ ಬಗೆ ಬಗೆ ತಿಂಡಿ ಪರಿಮಳಕೇ ಸೋತೆ!

****

Saturday, January 26, 2008

myPOD:"ಉಬ್ಬು-ರೊಟ್ಟಿ!"

Rotti - Before the fire :-P



Rotti - After the fire :-P

myPOD:"malpe beach"

World is so wide...



Sky is so high...

Thursday, January 24, 2008

myReview:"ಗಾಳಿಪಟ"

ನಮ್ಮ ಕನ್ನಡಾ ಫಿಲಮ್. ಎತ್ತರಕ್ಕೆ ಹೊಗುತ್ತಿರೋ ಗಾಳಿಪಟ ನೊಡ್ಕೊಂಡು ತೂ ಅಂತ ಉಗಿದ್ರೆ ನಮ್ಮ ಮುಖಕ್ಕೆ ಬೀಳುತ್ತೆ ಕಣ್ರೀ. ಯೋಗರಾಜ ಭಟ್, ಇಲ್ಲಿಂದ ಮತ್ತೆ ಭಟ್ಟ್ರು ಅಂತೀನಿ, ಸ್ವಲ್ಪ ಫೊಟೊಗ್ರಫಿ ಟೇಸ್ಟ್ ಇದೆ ಕಣ್ರೀ. ಸಿನೆಮಾ ಫುಲ್ ಕ್ಯಮೆರಾ ವೊರ್ಕ್ ಚೆನ್ನಗಿರ್ಬೆಕು ಅಂತ ಒಳ್ಳೆ ಒಳ್ಳೆ ಲೊಕೇಶನ್ ತಗೊಂಡಿದಾನೆ ಕಣ್ರೀ. ನಂಗೆ ಭಟ್ರು 100 ಸಲ ಈ 'ಕಣ್ರೀ' ಪದ ಉಪಯೊಗಿಸಿದ್ರೂ ಬೆಜಾರಾಗಲ್ಲ. Its far better than lo, machcha, bachchaa all these words.

ಸೋಂಗ್ ಚೆನ್ನಾಗಿರ್ಲಿ ಅಂತ ಸೊನು ನಿಗಮ್, ಉದಿತ್ ಎಲ್ಲ ಕರ್ಸೀದಾನೆ. ಜಯಂತ್ ಮತ್ತು ಸ್ವತಹ ಭಟ್ಟ್ರೆ ಒಳ್ಳೆ ಲಿರಿಕ್ ಕೊಟ್ಟಿದ್ದಾರೆ.

ಮುಂಗಾರು ಮಳೆಯ ಪ್ರಭಾವ ಇರೋದು ಗ್ಯಾರೆಂಟಿ 100% ಸತ್ಯ. ಭಟ್ಟ್ರೆ ಹೆಳುವಹಾಗೆ ಇನ್ನೂ ಮುಂಗಾರು ಗುಂಗಿಂದ ಹೊರಬಾರದ ಜನ ತುಂಬಾ different ಫಿಲಂ ಕೊಟ್ರೆ ಸ್ವೀಕರಿಸೊದು ತುಂಬಾ ಕಸ್ಟ. ಮುಂಗಾರು ಫಾನ್ಸ್ ಗೆ ಗಣೆಶ್ ಲವರ್ಸ್ ಗೆ ಫಿಲಂ ಹಿಡಿಸೋದಂತು ಗ್ಯಾರೆಂಟಿ. ದೂದ್-ಪೇಡ ದಿಗಂತನ್ ಬಾಡಿ ಚೆನ್ನಾಗಿದೆ.

ಕೆಲವೊಮ್ಮೆ film seriousness ಕಳ್ಕೊಂಡ ಹಾಗೆ ಅನ್ಸುತ್ತೆ. uncle, ನೀವು full ವ್ಹೀಲ್ chairnalle settle aagi ಬಿಟ್ಟಿದ್ದೀರ ಅಂತಲೊ.. ಎನೋ serious discussion ಅಗ್ತಿರ್ಬೆಕಾದ್ರೆ ತಾತ ಎನು ಬೆಳ್ಗೆ walk ಮಾಡೊ ತರ ಆಚೆ ಈಚೆ ಹೊಗ್ತೀರಿ ಅನ್ನೊದೊ... ಸ್ವಲ್ಪ ಅಸಂಬದ್ದ jokes introduce ಮಾಡಿರೊದೊ... ಎಲ್ಲರಿಗೆ ಇಷ್ಟವಾಗದು..

ಬರೀ location ಅಸ್ಟೆ importance ಕೊಟ್ರೆ ಸಾಲದು... a school in the top of kodachaadri/kuMdhaadri looked really far from reality!

ಭಟ್ಟ್ರು ಏನ್ ಬೆಕಾದ್ರು ಮಾಡ್ಲಿ ನಮ್ಮೆಲ್ಲ ಪ್ರೊತ್ಸಾಹ ಕೆಲ ವರ್ಶ ಇದ್ದೆ ಇರುತ್ತೆ!!

ಒಂದಂತೂ ನಿಜ.. ಸ್ವತಹ ಭಟ್ಟ್ರು ಒಪ್ಪಿಕೊಳ್ಳೊಬೆಕಾಗುತ್ತೆ. ಮುಂಗಾರು ಮಳೆ can be watched many times.. but ಗಾಳಿಪಟ can be watched only once!!

ಮುಂಗರು ಮಳೆಗೆ ನಾನು ಕಂಪೇರ್ ಮಡ್ತಾ ಇಲ್ಲ. ದಿಲ್ ಚಾಹ್ತಾ ಹೈ ತರ ಅನ್ಸಿಲ್ಲ!
ಫಿಲಂಗೆ ಕತೆ ಬೆಕೇ ಎಂದೇನಿಲ್ಲ!! ಇದ್ರೊಳಗೆ ಸೀರಿಯಸ್ ಸಂದೇಶ ಅಂತಾ ಎನೂ ಇಲ್ಲ!

Wednesday, January 23, 2008

myHarate:"ಸುಬ್ರಮಣ್ಯ"

ನೀವೆಂದಾದ್ರು ಸುಬ್ರಮಣ್ಯಕ್ಕೆ ಹೊದ್ರೆ ಸ್ವಲ್ಪ ಕುಮಾರಧಾರ ಸೇತುವೆ ರೋಡಲ್ಲಿ ನಡೀರಿ. ಕಾಶಿಕಟ್ಟೆ ನಂತರ ಎರಡು ಕಣ್-ಮನ ಸೆಳೆಯುವ ದೇವಾಲಯ ಸಿಗುತ್ತೆ. ಒಂದು ಗಣಪಂದು, ನೇಪಾಳ ಶೈಲಿಯಲ್ಲಿ ಭಾರಿ ಎತ್ತರದ ಏಕ ಶಿಲಾ ವಿಗ್ರಹ ಇದೆ. ವಿಗ್ರಹದಷ್ಟೆ ಎತ್ತರದ ಬಾಗಿಲುಗಳಿವೆ. ನನ್ನೂರಿನ ಒರ್ವ ಬಡಗಿ ಕೆಲಸ ಮಾಡಿರೊದು. ನೊಡುತ್ತಿರಬೇಕಾದರೆ ಕುಶಿ ಆಗದೆ ಇರದು!



ವ್ಯಾಸಾಯ ಪ್ರತಿಭೋದಿತಾಂ ಭಗವತಾ!









ನಂತರ ವನದೇವಿ ದೇವಾಲಯ ಸಿಗುತ್ತೆ. ಮುರಕಲ್ಲಿನಿಂದ ಮಾಡಿದ್ಡು ದೇವಾಲಯವನ್ನ ತುಂಬ ತಂಪಾಗಿ ಇಟ್ಟಿದೆ. ಬಹಳ ಚಂದ ನಿರ್ಮಿಸಿದ್ದಾರೆ!
ಇಲ್ಲಿ ಸಿಗುತ್ತೆ ನಿಮಗೆ ದೇವಾಲಯದ ಫೊಟೊ!!!

http://swarachitha.blogspot.com/2008/01/blog-post.html

Tuesday, January 22, 2008

myKavana:"ನೀ ಇರೆ ಯಾ ಇರದಿರೆ"

ನಾ ನಗುವೆ ನಾ ಅಳುವೆ
ನೀ ಇರೆ ಯಾ ಇರದಿರೆ!
ನೆನಪಿದೆ ಕನಸಿಲ್ಲವೆ
ನೀ ಎನ್ನ ತೊರೆದರೆ?

ನಾ ಬರುವೆ ನಾ ಕರೆವೆ
ನೀ ಬಂದು ಹೋದರೆ!
ಬೆಳಕಿದೆ ದಾರಿಯಿವೆ
ನೀ ನನ್ನ ಮರೆತರೆ!

ನಾ ಕಲಿವೆ ನಾ ತಿಳಿವೆ
ನೀ ಬೆರೆತು ಹೋದರೆ!
ಅರಿವಿದೆ ಕಿವಿಗಳಿವೆ
ನೀ ನನ್ನ ಜರಿದರೆ!

myHarate:"ದೇವರೊಬ್ಬ ನಾಮ ಹಲವು"

"ದೇವರೊಬ್ಬ ನಾಮ ಹಲವು!!!" - ಈ ಮಾತು ಎಷ್ಟು ಸತ್ಯ!
ಮೇಲುಕೋಟೆಯ ಪ್ರಸಿದ್ದ ದೇವಾಲಯದಲ್ಲಿ ಚೆಲುವ ನರಾಯಣನಿಗೆ ಒಂದು ನಾಅಮ ಹಾಕ ಬೆಕು ಅಂತ ಒಂದು ಪಂಗಡ ವಾದಿಸಿದರೆ ಇನ್ನೊಂದು 3 ಉದ್ದ ನಾಮ ಹಾಕಬೇಕು ಎಂದು ಹಠಹಿಡಿದಿದೆ. ಕೊರ್ಟಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯವಾದಿಗಳು ಯಾರಿಗೆ ಪಂಗನಾಮ ಹಾಕುತ್ತಾರೋ ಕಾದುನೋಡಬೆಕಾಗಿದೆ!!

ಉದ್ದ, ಅಡ್ಡ, ಉರುಟು ಮತ್ತು ಸಪೂರ ಹೀಗೆ ಹಲವು ಶೊಕೀ ನಾಮ ಸಮಸ್ಯೆ ಸ್ರುಸ್ಟಿಸಿದ್ದು ಮಾತ್ರ ನಿಜ!!!

myKavana:"ಇಲ್ಲೊಕ್ಕೆಲ್"

ಒಣಸಾಂಡಿಯೆ ಇನಿ ಮಲ್ಲ ಇಲ್ಲೊಕ್ಕೆಲ್
ಬೊಲ್ಪುಗ್ ಚಾ ಬುಕ್ಕೊ ಸಜ್ಜಿಗೆ-ಬಜಿಲ್
ಪೇರ್-ಲಾ ಕೊರಿಯೆರ್ ಪಾಡಿಬುಕ್ಕೊ ದಿಕ್ಕೆಲ್
ಮಾಡ್ ಪೂರ ತೊಟ್ಟಿಲ್ ತೂಗಾಯಾರ ಕೊಕ್ಕೆಲ್!

Monday, January 21, 2008

myKathe:"ಯಾರು ಹಿತವರು ನನಗೆ ಈ ಮೂವರೊಳಗೆ?"

ಅಷ್ಟು ದೊಡ್ಡ ಮನೆಯಿಡೀ ಉಡುಗಿ ಉದ್ದಿ ಅಪ್ಪಗ ಎಂತ ಇಲ್ಲೆ ಹೇಳಿರೂ ಗಂಟೆ 11 ಆತು. ಅಮ್ಮ ಬೇರೆ ಅಡುಗೆ ಮನೆಂದ ಹೆರ ಬಯಿಂದಿಲ್ಲೆ. ಯಾವುದೊ ಕಾರು ಬಂದ ಅಜನೆ ಕೇಳಿತ್ತು. ಚೆಂದದ ಮಾಣಿದೆ, ಅವನ ಅಬ್ಬೆ-ಅಪ್ಪನ ಹಾಂಗೆ ಕಾಂಬ ಆರೊ ಇನ್ನೆರಡು ಜನ ಮನೆ ಹತ್ತರೆ ಬಂದವು. ಆನು ಉದ್ದುವ ಹರ್ಕಿನ ಅಲ್ಲೆ ಬಿಟ್ಟಿಕ್ಕಿ ಒಳ ಓಡಿದೆ. ಅಪ್ಪನೊ ಪೊಸ್ಟ್-ಆಪೀಸಿಲ್ಲಿ ಕೆಲಸ. ಹಗಲು ಹೊತ್ತು ಮನೆಲಿ ಸಿಕ್ಕವು. ಆದರು ತನ್ನ ಕಾರ್ಯಲ್ಲಿ ಅವು ಬಹಳ ಚುರುಕು. ಆನು B.Com ಅಕೇರಿಯಾಣ ವರ್ಶಲ್ಲಿ ಇಪ್ಪಗಳೆ ಎಲ್ಲ ದಿಕ್ಕು ಮಾಣಿ ಹುಡುಕ್ಕುತ್ತ ಇದ್ಯೊಂ ಹೇಳಿ ಪ್ರಚಾರ ಮಾಡಿ ಎನಗೆ ಜಾತಕ ಪ್ರತಿ ಬರದು ಬರದು ಬಾಯಿ ಪಾಟ ಬಯಿಂದು. ಪೊಟೊ ಅಂತು ಕಳುಸಿದ್ದು ವಾಪಾಸ್ ಬಾರದ್ದೆ ಮೊನ್ನೆ ಅಪ್ಪ 50 ಪ್ರತಿ ಮಾಡ್ಸಿದ್ದವು. ಈ ಮಾಣ್ಯಂಗಳ ಅವಸ್ತೆಯೆ ಇಷ್ಟು. ಪೈಸೆ ನೋಟಿನ ಹಾಂಗೆ ಎಂತಗೆ ಕೂಸುಗಳ ಫೊಟೊ colect ಮಡ್ತವೊ ದೇವರಿಂಗೆ ಗೊಂತು.

ಅಮ್ಮನ ಕಡವ ಕಲ್ಲಿನ ಬುಡಂದ ಎಳ್ಸಿ ಆರೊ ಬಂದವು ಹೇಳಿ ಆನು ಅಲ್ಲಿ ಕೂದೆ. ಕಡವ ಕಲ್ಲಿನ ಹಾಂಗೆ ಎನ್ನ ತಲೆಯೂ ಹಿಂದೆ ತಿರುಗು ತಿರುಗಿ ನೊಡ್ಯೊಂಡಿತ್ತು.

ಆಮ್ಮ ಬೆಲ್ಲ - ನೀರು ಕೊಟ್ಟು ರಜಾ ಮಾತಡ್ಯೊಂಡು ನಿಂದತ್ತು. ಆನು ಮತ್ತೆ ಬೇಗ ರಪಕ್ಕ ಮೈಗೆ ಮಾಂತ್ರ ಮಿಂದಿಕ್ಕಿ ತಲೆ ಬಾಚಿ ಸೀರೆ ಸುತ್ತಿ ಅಪ್ಪಗ ಅಮ್ಮನ ಸಜ್ಜಿಗೆ ಅವಲಕ್ಕಿ ready ಆಗಿತ್ತು. ಆನು ಹೆರ ಹೋಪಗ ಮಾಣಿ ಆನು ಸಂಗೀತಲ್ಲಿ senior ಪಾಸ್ ಆದ certificate frame ಮಾಡ್ಸಿದ್ದರ ಅವರಷ್ಟಕ್ಕೆ ನೊಡ್ಯೊಂಡು ಇತ್ತಿದ್ದ. ಸಜ್ಜಿಗೆ ಬಳ್ಸಿ, ಅವಲಕ್ಕಿ ಕೇಳಿ ಅರ್ದ-ಚಾಯ ಕೊಟ್ಟು ಸಕ್ಕರೆ ಬಳ್ಸಿ ಕೈ ತೊಳವಲೆ ನೀರುದೆ ಬೈರಾಸು ಕೊಟ್ಟು ಒಳಹೋದೆ. ಅಷ್ಟು ಹೊತ್ತಿಂಗೆ ಅಮ್ಮ ಮಾಣಿಗೆ ಮಾತಾಡೆಕ್ಕಡ ಹೇಳಿ ಎನ್ನ ಹೆರ ಹೋಪಲೆ ಹೇಳಿತ್ತು. ಹೊಟ್ಟೆಲಿ ಚಿಟ್ಟೆ ಬಿದ್ದ ಹಾಂಗೆ ಎನೊ ಸಂಕಟ. ಸುಮಾರು ಅರ್ದ ಗಂಟೆ ಮಾತಾಡಿದ್ಯೊಂ. ಅವ software engineer ಹೆಳಿಯೂ ಅಮೆರಿಕ ದ್ವೀಪೇ ನ್ಯೂಯೊರ್ಕ್ ದೇಶೇ ಅಮೆರಿಕ ಖಂಡೇ work ಮಾಡುದು ಹೆಳಿಯೂ ಗೊಂತಾತು.

ಎನಗೆ ಅಪ್ಪ ಅಮ್ಮನ ಮೋರೆಯ ವರ್ಶಕ್ಕೆ ಒಂದಾರಿಯುದೆ ಕಣ್ಣಾರೆ ನೊಡದ್ದಸ್ಟು ದೂರ ಹೊಯೆಕ್ಕು ಹೇಳಿ ಅನ್ಸುತ್ತೆ ಇಲ್ಲೆ. ತುಂಬ ಸಂಬಳಡ. ಆದರೆ ಎನಗೆಸ್ಟು time ಅವ ಕೊಡುಗು ಹೇಳಿ ರಜಾ ತಲೆಬೆಶಿ ಆತು.

ಮನ್ನೆ ಮನ್ನೆ ಸೀತರಾಮ ಶಾಸ್ತ್ರಿ ಮಗ ಅನಂತನುದೆ ಎನ್ನ ನೊಡ್ಲೆ ಬಂದಿತ್ತಿದ್ದ. ಅವ ಜಾತಕಲ್ಲಿ 100% ಕೂಡಿ ಬತ್ತು ಹೆಳಿ ಮತ್ತೆ ಅವರ ಮನಗೆ ದೆನಿಗೇಳಿತ್ತವು. ಶಸ್ತ್ರಿಗೊಕ್ಕೆ ಕೆಲವು ಎಕ್ರೆ ಜಾಗೆ. ತಿಂದು ಮುಗಿಯದ್ದ ಸಂಪತ್ತು. ಹಳ್ಳಿಲಿ ಇರೆಕ್ಕು ಹೇಳುವ ಒಂದೆ ಸಮಸ್ಯೆ. ಎನಗೆ ಹಳ್ಳಿ ಕೆಲಸ ಮಾಡ್ಲೆ ಉದಾಸನ ಇಲ್ಲೆ. ಅನಂತಂಗೆ PUC ಅಯಿದಸ್ಟೆ. ಅವಕ್ಕೆ ಪೂಜೆ ಎಲ್ಲ ಮಾಡ್ಸಲೆ ಬತ್ತಡ. ಆದರೂ ಈಗಾಣ ಕಾಲಲ್ಲಿ ಕೂಸುಗಳಿಂದ ಜಾಸ್ತಿ ಮಾಣ್ಯಂಗೊ ಕಲ್ತಿರುತ್ತವು.. ಹಂಗಾಗಿ ಎನಗೆ ರಜಾ ಗೊಂದಲ ಇಲ್ಲಿ.

ಎನ್ನ classmate ಪ್ರದೀಪ ತುಂಬಾ ಒಳ್ಳೆವ. PUCಂದಲೆ ಎನಗೆ ಗೊಂತಿದ್ದು. ಆದರೆ ಎನ್ನ ಅಪ್ಪಂಗೆ ಇದು ಗೊಂತಿಲ್ಲನ್ನೆ! ಎಂಗೊ ಸುಮಾರು ವಿಶಯ ಒಟ್ಟಿಂಗೆ ಕಲ್ತದು. ಈಗ ಅವ CA ಮಾಡೆಕ್ಕು ಹೇಳಿ ಎಂತದೊ ಕಲಿತ್ತ ಇದ್ದ. ಅವಂಗೂ ಮದ್ವೆ ಮಾಡ್ಸೆಕ್ಕು ಹೇಳಿ ಅವನಪ್ಪ ಶಂಕ್ರಣ್ಣಾ ಮನ್ನೆ ಮನೇಲಿ ಮತಾಡ್ಯೊಂಡು ಇತ್ತಿದ್ದವು. ಪ್ರದೀಪ ಎನ್ನ ಹೆಸರು ಕೇಳಿರೆ ಕಂಡಿತಾ ಒಪ್ಪದ್ದೆ ಇರ!!

first ಎರಡು ಅವು ಎನ್ನ ಇಷ್ಟ ಪಟ್ಟದಾದರೆ 3ನೆದು ಆನು ಇಷ್ಟ ಪಟ್ಟ ವಿಶಯ.

ಯಾರು ಹಿತವರು ನನಗೆ ಈ ಮೂವರೊಳಗೆ?

Sunday, January 20, 2008

myCook:"special ರೈತ"



ಮುಳ್ಳು ಸೊವ್ತೆ ಸಿಪ್ಪೆ ತೆಗೆದು ಸಣ್ಣಕೆ ಕೊಚ್ಚಿಕೊಳ್ಳಿ. ಟೊಮೋಟೊ ಕೂಡ ಸಣ್ಣಕೆ ಕೊಚ್ಚಿಕೊಳ್ಳಿ. Baby corn or seedless ದ್ರಾಕ್ಷಿ ನಾಲ್ಕು ಸಣ್ಣ ತುಂಡು ಹಾಕಿರೆ ರುಚಿ ಜಾಸ್ತಿ!

ಒಂದು ಲಿಂಬೆ ಹಿಂಡಿಕೊಳ್ಳಿ. 3 ಚಮಚ ಉಪ್ಪು (ರುಚಿಗೆ ತಕ್ಕಷ್ಟು!) ಹಾಕಿಬಿಡಿ.

ಸಾಸಿವೆ ಅರ್ದ ಹಿಡಿಯನ್ನ ಎರಡು ಹಿಡಿ ತೆಂಗಿನ ಕಾಯಿ ತುರಿಗೆ ಸೇರಿಸಿ, ಒಂದು ಸಣ್ಣ ತುಂಡು ಶುಂಟಿ ಮತ್ತು ಒಂದು ಹಸಿ ಮೆಣಸು ಜೊತೆ mixi ಯಲ್ಲಿ ರುಬ್ಬಿ. ಸಣ್ಣಗೆ ರುಬ್ಬಿದ ಬಳಿಕ ಅದನ್ನ vegitable mix ಜೊತೆ ಬೆರೆಸಿಕೊಳ್ಳಿ.

300 ml ಗಟ್ಟಿ ಮೊಸರು ಹಾಕಿಬಿಡಿ.

ಸಾಸಿವೆ + ಎರಡು ಚಮಚ ತೆಂಗಿನೆಣ್ಣೆ ಒಂದು ಕೆಂಪು ಮೆಣಸು (ಬೆಳ್ಳುಳ್ಳಿ ಬೇಕಿದ್ದರೆ ಹಾಕಲೂಬಹುದು).. ಸಣ್ಣ ಬೆಂಕಿಯಲ್ಲಿ ಹುರಿಯಿರಿ.. ಸಾಸಿವೆ ಟಪ ಟಪ ಎಂದಾಗ ಒಗ್ಗರಣೆ ರೈತಕ್ಕೆ ಹಾಕಿ!

ಕೊತ್ತಂಬರಿ ಸೊಪ್ಪು ಇದ್ದರೆ ಅದನ್ನು ಸಣ್ಣಗೆ cut ಮಾಡಿ ಬೆರೆಸಿ.

Your special ರೈತ is ready to taste. Good to have it with ಗಂಜಿ or white rice!

myHarate:"ಪ್ರೀತಿ ಎಂದರೆ ಹೀಗೇನೇ"

ಪ್ರೀತಿ ಎಂದರೆ ಹೀಗೇನೇ, ತಿಳಿದೂ ತಿಳಿಯದ ಹಾಗೇನೇ
ಮುರಿದ ಕೂಡಲೆ ಮೂಲೆಗೆ ಎಸೆಯೋ ಕಸದಾ ಹಾಗೆನೇ!!!

ಹೀಗೆಲ್ಲ ಪ್ರೀತಿಗೆ ಹತ್ತು ಹಲವು ವ್ಯಖ್ಯಾನಗಳಿರುವಾಗ ನನ್ನ ವ್ಯಾಖ್ಯಾನವೂ ಸರಿಹೊಂದದಿರದು!!!

ಪ್ರೀತಿ ಎಂಬುದು ಹೀಗೆನೇ, ಮರೆತೂ ಮರೆಯದ ಹಾಗೆನೇ,
ಗೆಜ್ಜೆಗಳಂದದಿ ಕುಣಿದು, ಮುಗಿದ ಕೂಡಲೇ ಮೂಲೆಗೆ ಎಸೆಯೋ ಗೆಜ್ಜೆಯ ಹಾಗೇನೇ!!!

ಕುಣಿಯಲು ಬಾರದವರೂ ಗೆಜ್ಜೆ ಕಟ್ಟಿದಾಗ ತರ ತರ ನಿನಾದ ತರದೆ ಇರರು!

ಕೆಲವು ಗೆಜ್ಜೆ ನಾದ ಮಧುರವಾದರೆ ಎನ್ನೂ ಕೆಲವು ರಾತ್ರೆ ಕೆಳೊ ಭಯಾನಕನಾದವಿದ್ದರೂ ಇರಬಹುದು!

ಕೆಲವು ಗೆಜ್ಜೆ ಬರೇ ಕಾಣಲಷ್ಟೆ, ನಾದವೆ ಇಲ್ಲ!
ಕೆಲವು ತುಂಬ ಮದುರ, ಕೆಳೊ ಕಿವಿಗಳಿಗೆ, ಬರಿಯ ದ್ರುಷ್ಟಿಗಲ್ಲ!

ಕೆಲವು ತುಂಬಾ ಸಮಯ ಬಾಳುತ್ತೆ, ಕೆಲವು ಒಂದು song ಅದಮತ್ತೆ ಮೂಲೆಗೆ!

ನೆನಪಿರಲಿ! ಗೆಜ್ಜೆಗೆ ಸಾವಿಲ್ಲ! ಮತ್ತೆ ಬೇರೆ ಕಾಲ್ಗಳ ಸೇರಿ ಮಧುರನಾದ ಹೊಮ್ಮುತ್ತೆ!

Friday, January 18, 2008

myKavana:"Baunty aur Babli"

dekh na meri sar se aasman ud gaya hain... Baunty aur Babli!!!

ಕಾಣದೇ ತಲೆಯ ಮ್ಯಾಲೆ ಆಗಸಾ ಹಾರುತಿಹುದು!
ಕಾಣದೇ ಆಗಸದಲಿ ಭೂಮಿಯು ಬೆರೆಯುತಿಹುದು!

ಕದ್-ಕದ್ದು ಕದ್-ಕದ್ದು ಕದ್-ಕದ್ದು ಕದ್ದು, ಆಕಾಶ ಭುವಿಯಾಗಿದೆ!

ಕಾಣದೆ ಎನು ಇಲ್ಲಿ ಭೂಮಿಯು ಹರಿಯುತಿಹುದು!
ಕಾಣದೆ ನೀರಿನೊಳಗೆ ಭೂಮಿಯು ಮುಳುಗುತಿಹುದು!
ಕಾಣದೇ ಆಗಸದಲಿ ಭೂಮಿಯು ಬೆರೆಯುತಿಹುದು!

ಕದ್-ಕದ್ದು ಕದ್-ಕದ್ದು ಕದ್-ಕದ್ದು ಕದ್ದು, ಆಕಾಶ ಭುವಿಯಾಗಿದೆ!

Thursday, January 17, 2008

myPOD:"ಸುಬ್ರಮಣ್ಯ"

ವನದುರ್ಗಾ ದೇವಸ್ತಾನ - ಸುಬ್ರಮಣ್ಯ



ಬ್ರಹ್ಮರಥ - ಸುಬ್ರಮಣ್ಯ



ಹಳ್ಳಿಗಾಡು ಸೀನರಿ - ಸುಬ್ರಮಣ್ಯ

Wednesday, January 16, 2008

myResearch:"Downloading from esnips"

Honestly, I hate the hassle of registration in web sites coz its taking too much of my time. eSnips.com is a great site to listen to MP3 songs online. You can find almost any song here from their members. By visiting eSnips.com, i was able to find a way around downloading MP3 songs directly without logging in the site.
Recently they have removed download feature for the registered users too.. Still my this technique works!!!

1. Find a song you like to download using eSnips’ search function. Open the page.

2. If you are using firefox, press CTRL+U to view the page source. [you will get view source function from view menu] Here you can find the exact location of the MP3 song in the server. If you are using IE, (too bad, you can’t do this trick! just kiddin..) just view the page source.

3. Pres CTRL+F to find for the keyword ‘doc/’.
Append http://www.esnips.com/ns to the search phrase url.. That will become something like... http://www.esnips.com/nsdoc/1c0e459b-ca3a-476a-a648-be2c27e45e4f/?id=1176089459456

4. NOw, choose to save the file in your computer.

As easy as that. Enjoy!

myHarate:"ನೀವ್ಯಾಕೆ ಪುಣ್ಯಸ್ತಳ ಹೊಗ್ತೀರಿ"

ಜನರು ಪುಣ್ಯಸ್ತಳಕ್ಕೆ ಹೋಗೋದಿಕ್ಕೆ ಕೆಲವು ಕಾರಣಗಳಿವೆ! ಪ್ರಾರ್ತಿಸಲು ಪ್ರತಿಯೊಬ್ಬರಿಗೂ ಒಂದೊಂದು ಬೇರೆ-ಬೇರೆ ಕಾರಣಗಳಿರುತ್ತವೆ. ಸೈಕಲ್ ಬ್ರಾಂಡ್ ಅಗರಬತ್ತಿ ನಿಮಗೆ ಕಾರಣವಾದರೆ ನನಗೆ ಇನ್ನೆನೊ ಕಾರಣವಿರಬಹುದು!

ದೇವಿ ದೆವಸ್ತಾನಕ್ಕಂತೂ ಹೊಗಿಬಿಟ್ಟರೆ ಬರುವ 'ಲಲನೆ'ಯರ ಸಂಕ್ಯೆ ತುಂಬಾನೆ ಜಾಸ್ತಿ. ಊಟವಂತೂ ದೇವಿದೇವಸ್ತಾನದಲ್ಲಿ ಕಡ್ಡಾಯ! ಹೊಟ್ಟೆ ತಂಪು, ಮನಸೂ ತಂಪು. krishna ದೇವಸ್ತಾನ ಬಂದು ತಮ್ಮ ಕನಸಿನ ಕನ್ಯೆ ಬಗ್ಗೆ ತೋಡಿಕೊಳ್ಳುವವರಿಗೆ ಏನು ಕಮ್ಮಿಯಿಲ್ಲ. 16000 ನಾರಿಯರಲ್ಲಿ ಯಾರಾದರೊಬ್ಬರನ್ನ ನಂಗೆ ಕೊಡಯ್ಯ ಅಂತ ಗೋಗರೆದಾಗ ಅದೆನೊ ಸಮಾಧಾನ.

ಗಣಪತಿ ದೇವಸ್ತಾನಕ್ಕೆ ಹೋಗಿ, hai ಗಣಪ, ನಾನು ಹೊಸ ಕೆಲ್ಸ ಶುರು ಹಚ್ಚ್ಕೊಂಡಿದೀನಪ್ಪ, ಒಳ್ಳೆದು ಮಾಡಪ್ಪ ಅನ್ನೊದಿದೆ, ಹೊಸ vehicle ಚೆನಾಗಿರ್ಲಿ ಅಂತ driver ಪಕ್ಕ ಮೂರ್ತಿ ಕೂರ್ಸೊದೂ ಇದೆ!!

ಮಗನ ವಿದ್ಯಾಬ್ಯಾಸ ಚೆನ್ನಗಿರ್ಲಿ ಅಂತ ಶಾರದೆ ಹತ್ರ ಕೆಳ್ಕ್ಂಡ್ರೆ, ಅಜ್ಜಿ ಅರೊಗ್ಯ ಚೆನ್ನಗಿರ್ಲಿ ಅಂತ ವಿಷ್ಣು ಹತ್ರ ಕೆಲ್ಕೊಲ್ತೀವಿ. ಸುಖವಾದ ಮರಣ ಬರಲಿ ಅಂತ ಶಿವನನ್ನು ಕೆಳಿದರೆ, ಚೆಂದದ ಮಗುವಾಗಲಿ ಅಂತ ಸುಬ್ರಮಣ್ಯನ ಕೆಳೊದಿದೆ!!


ಹಲಾವರು ರೊಗಕ್ಕೊ ಕೆಲ ದೆವಸ್ತಾನದಲ್ಲಿ vaaccination ಸಿಗುತ್ತೆ!



ನಾನ್ಯಾಕೆ ಹೊಗುತ್ತೀನಿ ಅಂತ ತಿಳ್ಕೊ ಆಸೆನೆ ನಿಂದು? ಹುಮ್.. ಹೆಳ್ತೀನೆ ಕೆಳು...

ಮದೂರು ಹೊದ್ರೆ ಅಪ್ಪ ಕಜ್ಜಯ ಮಾತ್ರ ನೆನಪಿಟ್ಟು ಮಾಡ್ಸಿ, ಆ ಬಿಸಿ ಬಿಸಿ ಅಪ್ಪ ಎಸ್ಟು ಚೆನ್ನಗಿರಿತ್ತೆ ಅಂದ್ರೆ ಆಹ್ ಬಾಯಲ್ಲಿ ನೀರೂರುತ್ತೆ!!

ತಿರುಪತಿ ಹೊದ್ರೆ ಲಡ್ಡು ತಪ್ಪದೆ ಮಾಡ್ಸಿ, ನಂಗೂ ಒಂದ ತಂದು ಕೊಡಿ..

ಆನೆಗುಡ್ಡೆ ಹೊದ್ರೆ, ಗಣಹೊಮ ತಪ್ಪದೆ ಮಾಡ್ಸಿ, ಅಷ್ಟದ್ರವ್ಯ,, ಆಹ್.. ಬಾಯಲ್ಲಿ ನೀರೂರುತ್ತೆ.

ಇಡಗುಂಜಿ ಹೊದ್ರೆ, ಮೋದಕ ಮಾಡ್ಸಿ, ಎಸ್ಟು ತಿಂದ್ರೂ ಸಮಾದನ ಇಲ್ಲ!

ಅಂದಹಾಗೆ ನೀವ್ಯಾಕೆ ಪುಣ್ಯಸ್ತಳ ಹೊಗ್ತೀರಿ?;-)

mySTD:"ನಾಯಿಪುರಾಣ"

ಊರನಾಯಿಗಳೆಲ್ಲ ಬೀದಿಪಾಲಾಗುತ್ತಿವೆ. ಅದೆಸ್ಟೊ ಬಾಲವಿಲ್ಲದ ಕೈಕಾಲು ಗಿಡ್ಡವಾಗಿರೋ ಅಂಗವಿಕಲ ನಾಯಿಗಳೆ ಪ್ರತೀ ಮನೆಯಲ್ಲು ನಗುತ್ತಿರುತ್ತವೆ.. ಒಹ್ Sorry, ಬೊಗಳುತ್ತಿರುತ್ತವೆ. ಕರಿಯ, ಟಾಮಿ, ಬೊಳ್ಳು, ದಾಸು ಎಂಬಿತ್ಯಾದಿ ನಾಮಗಳೆಲ್ಲ ಮಾಯವಾಗಿ tiger, ಬ್ಲಾಕಿ, ರೆಡ್ಡಿ ಇತ್ಯಾದಿ ಬಂದಿವೆ. ಸಾಯೊವರೆಗೆ ಒಂದೂ ಕಾಯಿಲೆ ಕಾಣದ ಊರನಾಯಿಗಳೆಲ್ಲ ಸುಖಮರಣವನ್ನು ಅರಸಿ road side ಬರುತ್ತಿರುವುದು ನಿಜಕ್ಕೂ ವಿಶಾದನೀಯ. ತನ್ನ ಯಜಮಾನನಿಗೆ 0% mainanace cost ಕೊಡುತ್ತಿದ್ದ ಊರನಾಯಿಗಳನ್ನು ಈಗೀಗ ಎಲ್ಲ ಮರೆತು vaaccination ಅಂತೆಲ್ಲಾ ಸಾವಿರಾರು ರೂ ವ್ಯಯಿಸಿ ಎಂಜಲು ಬದಲು ಮೊಸರು-ರೈಸ್, ಎಣ್ಣೆತಿಂಡಿಗಳನ್ನಸ್ಟೆ ತಿನ್ನೊ ನಾಯಿಗೆ ಮಾರು ಹೊಗುತ್ತಿದ್ಡಾರೆ. ಕೆಲವಂತೂ ಹೆದರಿ ಬೊಗಳೊ ಪರಿ ನೊಡಿದರೆ ಊರ ನಾಯಿಯೆ ಭೆಶ್ ಎನ್ನುತ್ತೆ. ಒಂದು-ಎರಡು ಎಲ್ಲದಕ್ಕು ಇತ್ತೀಚಿನ modern ನಾಯಿಗಳಿಗೆ workplace ಸೂಕ್ತ ಜಾಗವೆನಿಸುವಸ್ಟು ಮುದ್ದು-ಮುದ್ದಾಗಿ ಪೆದ್ದು-ಪೆದ್ದಾಗಿ ಇರುತ್ತವೆ ಅವು. ಹುಹ್.. ಊರನಾಯಿಗಳ ಶಂಖ ನಾದದ ಗೂಳಿಡುವಿಕೆ ಮಾಯವಾಗಿದೆ ಕಣೊ/ಕಣೆ, ಬೆಸರವಾಗುತ್ತಿದೆ. ಈಗಿನ ಯುವಕ ಯುವತಿಯರಂತೆ ಊರ ನಾಯಿಗಳು ಪೇಟೆ ಅರಸಿ ರಸ್ತೆಯನ್ನೆ ಸೂಕ್ತ ಎಂದು ಆರಿಸಿಕೊಳ್ಳಾಲಾರಂಬಿಸಿದೆ, ನನಗೆ ಇದರಬಗ್ಗೆ ಬೇಸರವಿದೆ. ಊರ ನಾಯಿ ಜನಿಸಿದರೆ road side ಅವಕ್ಕೆ ಗತಿ. ಮರಿಗಳನ್ನ ಕೆಲ ದಿನದಲ್ಲೆ ಮಂಗಮಾಯವಾಗಿಸಿ ಬಿಡುತ್ತಾರೆ ಈ ಜನ. ಮಾನವ ಲೇಸೊ ಶುನಕ ಬುದ್ದಿ ಲೇಸೊ, ಎಲ್ಲಕ್ಕಿಂತ ಮಾನವೀಯತೆಯೂ ಬೀದಿಪಾಲಾಗುತ್ತಿದೆ!

ಊರ ನಾಯಿಮರಿ ನಾಯಿಮರಿ ತಿಂಡಿ ಬೆಕೆ ಎಂದಂತಕಾಲ ಬದಾಗುತ್ತಿದೆ ಕಣೊ/ಕಣೆ:-(

myHarate:"ಕನಸು"

ಒಂದು ದಿನವಿತ್ತು ಕಣೊ! ದಾರಿಯಲ್ಲಿ ಶಾಲೆಗೆ ನಡೆದು ಹೋಗುವಾಗ ಬರುತ್ತಿದ್ದ ವಾಹನಗಳ ಸಂಕ್ಯೆ ಲೆಕ್ಕಹಾಕುತ್ತಿದ್ದುದು. ನಾಲ್ಕು ಸಂಗಡಿಗರು ಒಟ್ಟಿಗೆ ಹೊಗುತ್ತಿರೆ, ಒಬ್ಬ ಕಾರ್ choose ಮಾಡುತ್ತಿದ್ದರೆ ಇನ್ನೊಬ್ಬ ರಿಕ್ಷಾ, ಒಳಿದವರು ಬಸ್, bike ಹೀಗೆ. ಇದು ದಿನಾ ಬದಲಾಗುತ್ತಿತ್ತು. ಶಾಲೆ ತಲಪುವಾಗ ಯಾರ count ಜಾಸ್ತಿ ಇರುತ್ತೊ ಅವ ಗೆದ್ದ ಎಂಬ ಖುಶಿ ಇರುತ್ತೆ.

ಕಾರನ್ನ ಬಿಡಬೇಕು, ಅದನ್ನ ಕೊಳ್ಳಬೇಕು ಬಿಡಿ, ಅದಲ್ಲಿ ಹೋಗಬೇಕು ಎಂಬಸ್ಟೂ ಕನಸಿಲ್ಲದ ತೀರ ಬಡ ಕುಟುಂಬದ ಬದುಕಾಗಿತ್ತದು. 10 ಪೈಸೆ ಕೊಟ್ಟು ಮಕ್ಕಳ special ಬಸಲ್ಲಿ ಹೊಗೊದೆ ವಾರಕ್ಕೊಮ್ಮೆ ಬರೋ ಬಲು ಸಡಗರದ ವಿಶಯ! ಕಾಲ ಬದಲಾಗಿದೆ, ಬದುಕು ಬದಲಾಗಿದೆ, ಕನಸುಗಳೂ ಮೂಡಿವೆ, ಶಿಕ್ಷಣ ಎಲ್ಲವನ್ನ ಬದಲಾಗಿಸಿದೆ. ಆಕಾಶದಲ್ಲಿ ಹಾರಿದ್ದೇನೆ. ಅವಕಾಶ ಸಿಕ್ಕರೆ pilot ಕೂಡ ಆಗಬಲ್ಲೆನು!

ಮೊನ್ನೆ ಮೊನ್ನೆ ಅಪ್ಪ ನನ್ನ Carಲ್ಲಿ ಕುಳಿತು ತಮ್ಮ ಆಸೆಯನ್ನ ಬಿಚ್ಚಿಕೊಂಡರು. ನಮ್ಮದೆ ವಾಹನ ಒಂದರಲ್ಲಿ ಒಟ್ಟಿಗೆ ಹೋಗೋ ಕಾಲ ಅವರ ಮಟ್ಟಿಗೆ ಒಂದು ಕನಸಾಗಿತ್ತಂತೆ. ಮೊನ್ನೆ ಅದು ನನಸಾದಾಗ ಆ ಸಂಭ್ರಮ ನಮ್ಮೆಲ್ಲ ಪಾಲಿಗೆ ಮರಯಲಾಗದ ಕ್ಷಣವಾಯಿತು!

ನಾನೂ ಹಲವಾರು ಕನಸನ್ನ ಕಂಡಿರುವೆ. ನನ್ನಿಂದಾ ಆಗದ್ದನ್ನು ನನ್ನ ಮಕ್ಕಳಲ್ಲಿ ನಿರೀಕ್ಷಿಸದೆ ಇರಲಾರೆ.

ಅಂದ ಹಾಗೆ ಕನಸು ಮತ್ತು ನಿರೀಕ್ಷೆಯಿಲ್ಲದ ಮತ್ತೆ ಬದುಕು ಎನಕ್ಕೆ?

ನಮ್ಮ ಬಗ್ಗೆ, ಮಕ್ಕಳಬಗ್ಗೆ ಮತ್ಯಾರ ಬಗ್ಗೆ ಕನಸು ಮತ್ತು ನಿರೀಕ್ಷೆ ಇರಿಸಿಕೊಂಡು ನಮ್ಮ ಕನಸುಗಳ ಸಾಕಾರಗೊಳಿಸೊ ಆ ಪ್ರತೀ ಕ್ಷಣ/ದಿನ ಗಳಿವೆಯಲ್ಲ ಅದು ಅತಿ ಮಧುರ!!!

Thursday, January 10, 2008

myKavana:"ಸಿಹಿಮುತ್ತ ಸುತ್ತಮುತ್ತ"

ಸಿಹಿಮುತ್ತ ತಂದಿಹೆನು ನಾ ಹೇಗೆ ಕೊಡಲೆ?
ತೆರೆಗಳಂದದಿ ದಡವ ಸೇರುತಿದೆ ಕಡಲೇ!!
ಬಿಸಿಯಿಹುದು ಸ್ವಾದದೀ ಕರುಕುರು ಕಡಲೆ!
ಕರಗುತಿದೆ ನೀರಂತೆ ಬಾಬೇಗ ಕೂಡಲೆ!!

making of myPOD:"ಸ್ವರಚಿತ"ದ ಶತಕ

ನೋಡು ನೋಡುತ್ತಿರುವಾಗಲೆ ಕೇವಲ "ಸ್ವರಚಿತ" ಅಂಕಣಗಳನ್ನೇ ತುಂಬಿರೋ ಈ ಬ್ಲಾಗು ನೂರಾರು ಮಕ್ಕಳನ್ನ ಹೆತ್ತು ಹೊತ್ತು ನಿಂತಿದೆ! ಎನೊಂದು ಸಂತೊಷದ ಸಂಗತಿ. ಇದು ಕೇವಲ 7 ತಿಂಗಳಲ್ಲೆ ಎಂಬುದನ್ನ ಮರೆಯಬಾರದು. myPOD - myKavana - mySTD - myHarate - myReview - myKathe ಇಂತದೆ ಎಷ್ಟೊ my ರಚನೆಗಳು ಬಂದಾಗಿದೆ. ಬಹಳಸ್ಟು ಜನರನ್ನ ತಲಪಿದೆ.

ಈ ಸವಿ ನೆನಪಿನ ಸಂಭ್ರಮಕ್ಕೆ ಇನ್ನೊಂದು ಕಾಣಿಕೆ!!

making of myPOD!!! ಈ ಫೊಟೊ ನನ್ನ ಗೆಳೆಯನ ಕಾಣಿಕೆ..

Title: "it has more than just to eat!!"

Wednesday, January 9, 2008

myKavana:"ತಂಪು-ಇಂಪು"

ತಂಗಾಳಿಯು ತಂಪು
ಮುಂಜಾನೆ ತಂಪು
ಕೆಲಸವೆ ಇರದಿರೆ
ದಿನವಿಡೀ ತಂಪು

ಕುಂಕುಮ ಕೆಂಪು
ರುಧಿರವು ಕೆಂಪು
ತುಸು ನಶೆ ಏರಿರೆ
ನಯನವು ಕೆಂಪು

ಮಲ್ಲಿಗೆ ಕಂಪು
ಸಂಪಿಗೆ ಕಂಪು
Perfume ಹಾಕಿರೆ
ಅಂಗಿಯೂ ಕಂಪು

ಬೈಗುಳ ನೆಂಪು
ಹೊಗಳಿಕೆ ನೆಂಪು
ಅದು ಎನಿಲ್ಲದಿರೆ
ನಿನ್ನದೆ ನೆಂಪು

ಕೊಗಿಲೆ ಸ್ವರ ಇಂಪು
ಅಣ್ಣಾವ್ರ ಸ್ವರ ಇಂಪು
ತುಸು ಮೌನವಾಗಿರೆ
ನಿಮ್ಮ ಸ್ವರವೂ ಇಂಪು

myKavana:"ತಾರೆ ಭುವಿಯ ಮ್ಯಾಲೆ"

ಎಂದೂ ನಾ ಬದಲಾಗುವುದಿಲ್ಲಮ್ಮ
ಕತ್ತಲಿಂದ ತುಸು ಭಯವಸ್ಟೆ ಅಮ್ಮ!

ನೀನಂತೂ ಇಂದು ಕಾಣಿಸುವುದೆ ಇಲ್ಲ,
ನಿನ್ನ ಜಪವನ್ನೆ ಇಲ್ಲಿ ಮಾಡುತ್ತಿರುವೆನಲ್ಲ

ನಿನಗೆ ಎಲ್ಲ ಗೊತ್ತಲ್ಲ ಅಮ್ಮ!!!
ನಿನಗೆ ಎಲ್ಲ ಗೊತ್ತಲ್ಲ ನನ್ ಅಮ್ಮ!!!

ಕಳಿಸ ಬೇಡ ತುಂಬಾ ದೂರ,
ಡಾಟಬೇಡ ನೀ ನದಿಯ ಆಚೆ ತೀರ
ಏನ್ ನಾನಿಸ್ಟೂನೂ ಕೆಟ್ಟವನ?

ಎಂದಾದರು ಅಪ್ಪ ನಂಗೆ ಜೊರಾಗಿಯೆ ಹೊಡೆದಾಗ....
ನೀನಲ್ಲದೆ ಬೆರ್ಯಾರು ಎನ್ನ ಸಮಾದಾನಿಸಿದರು?

ನಿನಗೆ ಎಲ್ಲ ಗೊತ್ತಲ್ಲ ಅಮ್ಮ!!!
ನಿನಗೆ ಎಲ್ಲ ಗೊತ್ತಲ್ಲ ನನ್ ಅಮ್ಮ!!!

ಎಂದೂ ನಾ ಬದಲಾಗುವುದಿಲ್ಲ
ಕತ್ತಲಿಂದ ತುಸು ಭಯವಸ್ಟೆ ಅಮ್ಮ!

ನೀನಂತೂ ಇಂದು ಕಾಣಿಸುವುದೆ ಇಲ್ಲ,
ನಿನ್ನ ಜಪವನ್ನೆ ಮಾಡುತ್ತಿರುವೆನಲ್ಲ

ನಿನಗೆ ಎಲ್ಲ ಗೊತ್ತಲ್ಲ ಅಮ್ಮ!!!
ನಿನಗೆ ಎಲ್ಲ ಗೊತ್ತಲ್ಲ ನನ್ ಅಮ್ಮ!!!

Monday, January 7, 2008

myHarate:"ನನ್-ಮೇಸ್ಟ್ರು"

ಹೇ, ನಾನಿದನ್ನ ಬರೀಬಾರ್ದು ಅಂತ ಬರ್ದಮತ್ತೆ ತಿಳೀತು. ಬರೀಲಿಲ್ಲ ಅಂದ್ರೆ ಮತ್ತೆ ಸಂಕಟ.. ನನ್ನ ವಿಧಿ!!!
ಮೊನ್ನೆ ಊರಲ್ಲಿ ಅಡ್ಡಾಡ್ತಾ ಇರ್ಬೇಕಾದ್ರೆ, ನನ್ನ high-ಸ್ಕೂಲ್ ಮೇಸ್ಟ್ರು ಸುಳ್ಯದಲ್ಲಿ ಸಿಕ್ಕೆ ಬಿಟ್ರು. ದೂರಂದಲೇ ನನಗೆ ಪರಿಚಯವಾಯ್ತು. ನನ್ನೊಳಗಿನ 25% ಮನಸು ಹೇ ಸುಮ್ನೆ ನಡೀತಾ ಇರು ಅಂತು. ನಿನ್ನ ಬಾಯಿಗಿಸ್ಟು ಮಣ್ಣು ಹಾಕ ಅಂತ ಹೇಳಿ 75% ಮನಸು ಮಾತಾಡ್ಸು ಅಂತು. ಸರೀ ಅಂತ ಬಸ್ಸಿಗೆ ಕಾಯೋ ಮೇಸ್ಟ್ರನ್ನು ನಮಸ್ಕಾರ ಸಾರ್ ಅಂದೆ. ಹೇ, ನೀನು ಷಣ್ಮುಖ ಅಲ್ವಾ, ಹೇಗಿದ್ದೀಯ, ಉಡುಪಿಯಲ್ಲಿ ಕೆಲ್ಸ ಮಡ್ತಾ ಇದ್ದೀ ಅಂತ ತಿಳೀತು. ಅರಾಮನ?
ನಾನು full bold ಆದೆ ಕಣೊ/ಕಣೆ. high-ಸ್ಕೂಲ್ ಬಿಟ್ಟ ಮತ್ತೆ ಅವರು ಹೆಂಗಿದ್ದಾರೆ ಅಂತ ಕೇಳಕ್ಕು ಕೂಡ ಹೋಗದ ಕೊಳಕಾ ನಾನ್. ನನ್ನ full ಬಯೊ-ಡಾಟ ಅವರತ್ರ ಕೇಳಿ ತಬ್ಬಿಬ್ಬಾದೆ.
ಗಂಧಕ - ರಂಜಕ - ಹೀಗೆ ಅಂದಿದ್ದ ಅವರ ಸ್ಪಷ್ಟ ನುಡಿಗಳು ಇಂದೂ ನೆನಪಿನಾಳಕ್ಕೆ ಅಂಟಿ ಬಿಟ್ಟಿದೆ. ಕೆಲವೊಮ್ಮೆ ತಿಂದ ಬೆತ್ತದ ಪೆಟ್ಟು ನೆನಪಿನಲ್ಲಿ ಉಳಿದಿದೆ.. ಅದ್ಬುತ ಎನ್ನ ಬಹುದಾದ ಮಾತುಗಾರಿಕೆ ಗೌರೀಶಂಕರರದ್ದು.
ನಮ್ಮ ಕಾಲದಲ್ಲೆ ಅವರು ಮುಖ್ಯೊಪಾದ್ಯಾಯರು. ಕೈ ಹಿಡಿದು ಹೊಟೆಲೊಂದಕ್ಕೆ ಕರೆದುಕೊಂಡು ಹೋದೆ. ಹೀಗೆ ಗತ ಕಾಲದ ನೆನಪುಗಳು ಬಿಚ್ಚಿಕೊಂಡವು.
ಇನ್ನು retire ಆಗ್ಲಿಕ್ಕೆ 4 ವರ್ಷ ಬಾಕಿದೆ ನಂಗೆ.. ಮೊನ್ನೆ ಮೊನ್ನೆ ನನ್ನ ಹುದ್ದೆ ಪರ್ಮನೆಂಟ್ ಆಯಿತು ಅಂತ ಬಹಳ ಕುಶಿಯಿಂದಲೆ ಹೇಳಿದರು. 200rs ಂದ ನನ್ನ ಕೆಲ್ಸ ಶುರುಮಾಡಿದೆ, ಪರ್ಮನೆಂಟ್ ಆಗಿ ಈಗ 6K ಗೆ ಬಂದು ನಿಂತಿದೆ ಮಾರಾಯ ಎಂದರು. ಇದೆಲ್ಲ ಅವರೇ ನಾಕೇಳದೆ ನುಡಿದುಬಿಟ್ಟರು.
ನಿಂದೆಲ್ಲ pay ಹೇಗಿದೆ ಎಂದರು.
ನಾನು ಚೆನ್ನಾಗಿದೆ ಅಂದ್ಬಿಟ್ಟು ಸಾರ್, ಈ ವರ್ಶದ SSLC ಮಕ್ಳು ಹೇಗಿದ್ದಾರೆ ಅಂತ ಮಾತ ಮರೆಯಿಸಿದೆ.
ಒಂದೆರಡು ಗಂಟೆ ಹೀಗೆ ಉರುಳಿದ್ವು, ಬಾಯ್ ಹೇಳುವ ಮೊದಲು ಸುಳ್ಯದ ಪೊಪ್ಯುಲರ್ ಬೇಕರಿಯಿಂದ ಸಿಹಿತಿಂಡಿ ತೆಗೆದು ಮೆಸ್ಟ್ರ ಕೈಲಿಟ್ಟು ತಿರುಗಬೇಕಾದರೆ ಕಣ್ಣಂಚಿನಲ್ಲಿ ನೀರು ಒಂದಿಂಚು ಕೆಳ ಜಾರಿತ್ತು.
ಸ್ವಲ್ಪ ದೂರಂದ ಮತ್ತೆ ತಿರುಗಿ ಬಂದ ಮಾಸ್ಟ್ರು ನಿನ್ನಂತ students ಕಂಡಾಗ ಮನತುಂಬಿ ಬರುತ್ತೆ, ನಿನ್ನ 85% ನಮ್ಮ office ಬೋರ್ಡಲ್ಲಿ ಇನ್ನೂ ಬರೆದಿದೆ ಕಣೊ ಅಂದ್ಬಿಟ್ರು.
ನಾನು LIC agent. ನಿಂದೆನಾದ್ರು ಪ್ಲನ್ ಇದ್ರೆ ಹೇಳು ಎಂದಾಗ ಸದ್ಯದಲ್ಲೆ ಅವ್ರನ್ನ ಇನ್ನೊಮ್ಮೆ ಮೀಟ್ ಮಡ್ತೇನೆ ಅನ್ನಿಸಿತು.
ಬಸ್ಸಲಿ ಕುಳಿತವರು ನಿದಾನವಾಗಿ ದ್ರುಷ್ಟಿಯಿಂದ ದೂರವಾದರು..

Sunday, January 6, 2008

myHarate:"ಕ್ರಿಕೆಟ್ - ಹೀಗೊಂದು ಸಮೀಕ್ಷೆ!!"

ಆ ಗೋಡೆಂದ ಹೆರ ಹೋದರೆ ಟೂಡಿ (2 ರನ್ಸ್) ಓಡಕ್ಕೆ ಉದಾಸಿನ ಸೊಮಾರಿಗೆ.. ಅದಕ್ಕೆ ಮೊದ್ಲೆ declare ಮಾಡಿರ್ತಾನೆ!!!
ಮೇಲಾಣ ಗೊಡೆಗೆ Direct ಹೋದರೆ Sixer..
ನೆಲದಲ್ಲಿ ಹೋದರೆ Four..

ಈ ಕಲ್ಲು ವಿಕೆಟ್..

One pitch is out!!!

ಅಷ್ಟರಲ್ಲಿ ಜೋರಾಗಿ ಬಾಲ್ ಎಸೆದ ಗೆಳೆಯನ ಹತ್ರ - ಹೇ loffer, ಅಷ್ಟು ಜೋರು ಎಸೆಯಲಿಕ್ಕಿಲ್ಲ!!! ಅದು dead / no ಬಾಲ್!!! ಇಲ್ಲಾಂದ್ರೆ ನಾನು next ಬಾಲ್ ಮಾಡುದಿಲ್ಲ!! ಅಂತ ಹಟ ಹಿಡಿಯೋದು!!

ಸಣ್ಣ ಸಣ್ಣ ಜಗಳ, "till out" ಇನ್ನಿಂಗ್ಸ್-ನಲ್ಲಿ 5-6 ಸಾರಿ out ಆದಾಗ ನಿಜವಾಗ್ಯು out ಅಂತ ಒಪ್ಪಿಕೊಳ್ಳೋದು!!!

One pitch is out!!! ಅಂದ್ರೂ, One pitch catch ತಗೊಂಡಾಗ ಇಲ್ಲ ಅನ್ನೋದು..

ಇಲ್ಲೆ... ನಾನು out ಅಲ್ಲ:-( ಅಂದು ಗೋಗಳೆಯುವುದು..
ಎಡಿಗಾರೆ ಇನ್ನೊಂದಾರಿ out ಮಾಡ್ಸು ನೊಡೋಂ.. ಅಂತ ಬೆಟ್ಟಿಂಗ್ ಕಟ್ಟೋದು..

ನಂಗೆ ಆಡಕಾಗದ್ರೆ rule change ಮಾಡಿದ್ರಾಯಿತು!!!
ನಿನ್ನೆಯ ದಿನದ India - Ausis match ನೋಡ್ತ ಇರ್ಬೆಕಾದ್ರೆ ಇದೆಲ್ಲ ನೆನಪಾಯಿತು..

ಈ Ausis ನವರು ಇದನ್ನೆ ಮಾಡ್ತ ಇದ್ರೊ ಎನೋ.. Sidney ಟೆಸ್ಟ್ ನ umpire and Ausis cricketers Indian cricketers na ಕಾಲು ಎಳೆದದ್ದು ಹೀಗೆ.. ಪಾಪ ಅವ್ರಿಗೆನು ಗೊತ್ತು ಇದೆಲ್ಲ ICC ನಿಯಮಾವಳಿಗಳಲ್ಲಿ ಇಲ್ಲ ಅಂತ!!;-)

Kumble, you are great man!! I love you.. you are a great player.. and great ambassador for the indian cricket.. Please long live as Indian captain and you are performing really superb man!!!

Friday, January 4, 2008

myHarate:"ಕೇಕು ಪುರಾಣ"

ಶುಕ್ರವಾರ ಅಂದ್ರೆ ಎನೊ ಒಂತರಾ.. ವಾರಂತ್ಯ ಸಮೀಪಿಸುತ್ತೆ ಎಂಬುದು ಒಂದು ಕಡೆ, ಇನ್ನೊಂದೆಡೆ ವಾರಕ್ಕೊಮ್ಮೆ Cafeteria ಆಗಮಿಸುವ ಕೇಕ್ ವಿಶಯ! ಅತ್ತ ಕೇಕು ಅಲ್ಲದ ಇತ್ತ ಬ್ರೆಡ್ಡು ಅಲ್ಲದ so named ಕೇಕ್ ಇದ್ಯಲ್ಲ, ಇದು ನಮ್ಮಲ್ಲಿ ಮೊದಲಿಂದಲೂ ನಡೆದು ಬಂದ ಸಂಪ್ರದಾಯ. ಶುಕ್ರವಾರ ಅಪರಾಹ್ನ 2:30 ರ ಹೊತ್ತಿಗೆ Cafeteria ಹೋಗುವವರ ಸಂಖ್ಯೆ ಉಳಿದ ದಿನಕ್ಕಿಂತ ಸ್ವಲ್ಪ ಜಾಸ್ತೀನೆ. ಒಂದಲ್ಲ ಎರಡಲ್ಲ, ಮುಗಿವರೆಗೆ ಮೂಗಿನವರೆಗೆ ಅಜ್ಜನಮನೆ ತರ ಬಿಟ್ಟಿಗೆ ತಿನ್ನಬಹುದಾದ ಅಪರೂಪದ ಯೋಗ್ಯತೆಯನ್ನ ಯಾರು ತಾನೆ ಕೈ ಚೆಲ್ಲಬಲ್ಲರು?!! ಇಂತಹ ಕೇಕು-ಬ್ರೆಡ್ಡು ಸಂಮಿಶ್ರಕ್ಕೆ ಕೆ-ಡ್ಡು ಅಂತಲೊ ಬ್ರೆ-ಕು ಅಂತಲೊ ಯೊಗ್ಯ ಹೆಸರು ಎಂದು ಕೆಲವರ ಅಂಬೋಣ. ತಲೆಗೊಂದರ ಲೆಕ್ಕದಲ್ಲಿ ಇವನ್ನ ತರುತ್ತಿದ್ದಾಗ ಕೊನೆಗೆ ಎಳೆದಾಡುವ ಪರಿಸ್ತಿತಿ ಇತ್ತು. ಈಗೀಗ ತುಂಬಾನೆ ತರೋದ್ರಿಂದ ಮಹತ್ವ ಕಳೆದುಕೊಳ್ಳುತ್ತಿದೆ.

ಕೇಕಾಯ ತಸ್ಮೈ ನಮಹ..!!

ಶುಕ್ರವಾರ ಕಳೆಯಿತು, ಕೇಕು ಕಾಲಿಯಾಯಿತು.. ವಾರಾಂತ್ಯ ಸಮೀಪಿಸಿತು..

Have a wonderful weekend..

myKavana:"ನಾ ಬರೆವೆ"

ನಾ ಬರೆವೆ ನೆನಪುಗಳ ಮಣಿಗಳನು ಪೋಣಿಸಲು
ನಾ ಬರೆವೆ ಮನಸಿನಾ ಮಾತನ್ನು ಹೇಳಲು!
ನಾ ಬೆರೆವೆ ನಿಮ್ಮೆಲ್ಲ ಅನಿಸಿಕೆಯ ಕೇಳಲು
ನಾ ಬರೆವೆ ನಾ ಬರೆವೆ ನಾ ಎಂದೂ ಬರೆಯಲು!!!