Monday, April 28, 2008

myKavana:"ಮಾತಲೂ ಮೌನ"

ನಿನ್ನದೆ ನೆನಪು ನಿನ್ನದೆ ನೆರಳು
ನಿನ್ನಯ ಪ್ರೀತಿಯು ಸ್ಪಟಿಕದ ಹರಳು
ರೆಕ್ಕೆಗಳಿದ್ದರೆ ಹಾರದೆ ಮನಸು?
ಹಗಲಲೂ ಕಾಣುವೆ ನಿನ್ನದೆ ಕನಸು

ಅರಳಿದ ಹೂವಿಗೆ ದುಂಬಿಬರುತಿದೆ
ಪ್ರಥಮ ಚುಂಬನಕೆ ಮನಕಾಯುತಿದೆ
ನಿನ್ನಯ ಬಾಹು ಬಂಧನದಲ್ಲಿ
ನನಗರಿಯದ ಈ ಹೊಸತನದಲ್ಲಿ

ಗೆಳತಿ ಯಾಕೆ ಅಂಜಿಕೆ ನಮಗೆ
ನಾ ನೀ ನೀ ನಾ ಆಗಿದೆ ನನಗೆ
ಕಣ್ಣಿನ ಕಾಂತಿಲಿ ಜಗಬೆಳಗುತಿದೆ
ತುಟಿಯಂಚಿನ ಮಾತಲೂ ಮೌನವಿದೆ

myKavana:"ಪ್ರೀತಿಯ ಪಿಸುಮಾತು"

******

ಪ್ರೀತಿಯೇಕೆ ಭೂಮಿ ಮೇಲಿದೆ?
ನಾವು ಇಲ್ಲಿ ಭುವಿಯಲಿಲ್ಲವೆ!
ನನ್ನೇ ಏಕೆ ಪ್ರೀತಿ ಮಾಡಿದೆ?
ನಿನ್ನ ಪ್ರೀತಿ ನನಗೆ ಅಲ್ಲವೆ!
ಪ್ರೀತಿಸಲು ಕಾರಣವು ನಿನ್-ಹ್ರುದಯ!
ಪ್ರೀತಿ ಹೀಗೆ ಬೆಳಕಿನ ಹಾಗೆ ಮನಸನು ಬೆಳಗಲು, ಹಿಡಿಯಲು ಆಗದು!

******

ಪ್ರೀತಿಸಲೆಂದೇ ನಿನ್ನನು ತಂದೆ
ನಿನ್ನಯ ಪ್ರೀತಿಗೆ ನಾ ಸೋತೆ
ಪೊರೆಯೋ ಹ್ರುದಯವನು ಓ ನಲ್ಲೆ
ಪ್ರೀತಿಸಲೆಂದೇ ನಿನ್ನನು ತಂದೆ!!!

******

ನೀ ನನ್ನನು ಇರುಳು ಕಾಡಿದರು
ನೀ ಜಗಳದಿ ನನ್ನಲಿ ಮುನಿಸಿದರು
ನಾ ಬಾಯಲ್ಲಿ ತುಂಬಾ ಬೈದರೂ
ನಾ ನಿನ್ನೇ ಪ್ರೀತಿಸುವೆ!

******

Saturday, April 26, 2008

myKavana:"ಹೇಳದ್ದು ಕೇಳದ್ದು"

ಇಷ್ಟವ ತಿಳಿಸಿ ದುಃಖವ ಅಳಿಸಿ
ನಿನ್ನ ಪ್ರೀತಿಯ ನಾ ಅಡಗಿಸಲು
ಕಷ್ಟವು ಹ್ರುದಯಕೆ ನಿನ್ನಯ ನೆನಪಿಸಿ
ಪ್ರತಿಕ್ಷಣ ನಿನಗೆಂದೇ ಕಂಪಿಸಲು!!

ತಡೆಯಲಾಗದ ಆರದ ಚಿಲುಮೆಯನು!
ಕೂಗಲೆ ಜಗಕೆ ಈ ಪ್ರೀತಿಯನು,
ನದಿಯಾಚೆಯ ನಿನ್ನಯ ಊರೆಡೆಗೆ...
ಆಗ ಕೇಳದೇ ಪ್ರತಿದ್ವನಿ ಈಚೆಡೆಗೆ!!

'ಅರಮನೆ'ಯ ಈ ಪದಗಳು ಈಗ ನೆನಪಾಗಿದೆ....

ಪತ್ರಬರೆಯಲಾ ಅಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲೀ ನನ್ನ ಮನದ ಹಂಬಲಾ!
ಮಾತನಾಡಲಾ ಇಲ್ಲ ಹಾಡುಹಾಡಲಾ
ಹೇಗೆ ತಿಳಿಸಲೀ ನನ್ನ ಎದೆಯ ತಳಮಳಾ!!

Wednesday, April 23, 2008

myKavana:"ಪದಗಳೆ ಇಲ್ಲದ ಸ್ವಾದವಿದು"

ಪದಗಳೆ ಇಲ್ಲದ ಸ್ವಾದವಿದು
ಹಗಲಿರುಳಿಲ್ಲದ ಕಾವ್ಯವಿದು
ಸುಂದರ ಸಂಜೆಯ ಗಾಳಿಯಿದು
ಹಿತವಿಹ ಕನಸಿನ ನನಸೆ ಇದು

ಪ್ರೀತಿಯ ಬೆಚ್ಚನೆ ಅನುಭವವ
ಹ್ರುದಯದ ಮಿಡಿತದಿ ಬಚ್ಚಿಡಲು
ಮನದಲಿ ಸಂತಸದಾ ಹೊನಲು
ಉಳಿದವರಲಿ ಬರೀ ಮೌನಾಲು!

ಕಾಣದ ಕೇಳದ ಪ್ರೀತಿಯಲಿ
ಇಹವನು ಹ್ರುದಯವೆ ಹೇಳುತಿದೆ
ಪ್ರತಿ ಮಾತಲಿ ಪ್ರೀತಿಯು ತುಂಬಿರಲು
ಪರ ಹ್ರುದಯಕೆ ಸೇತುವೆ ಮೂಡುತಿದೆ!

Tuesday, April 22, 2008

myKavana:"ಮನವೆ ಮನವೆ ಹಾರು"

ಮನವೆ ಮನವೆ ಹಾರುತಿರು
ನನ್ನೆದೆಯ ತವಕವ ನೀ ಕೇಳು
ನೀನಲ್ಲಿ ಹೋಗಿ ಅವಳ ಇರುಳು-ಹಗಲು ಕಾಡು

ಕನಸೆ ಕನಸೆ ಹಾಗೇ ಇರು
ಮನದಲ್ಲಿ ಸಂತಸ ತರುತಲಿರು
ಬರುತಿರಿ ನೀವೆಂದೂ ನನಸಾಗುವವರೆಗೆ

ಹ್ರುದಯ ಹ್ರುದಯ ಮಿಡಿಯುತಿರು
ನನ್ನಯ ಒಲವನು ಪ್ರೀತಿಸಿರು
ನಿಲ್ಲದೆ ಅವಳೊಪ್ಪುವವರೆಗೆ

Sunday, April 20, 2008

myPOD:"ನಮ್ಮಲ್ಲಿಲ್ಲ ವರ್ಣಭೇದ, ನಿಮ್ಮಲ್ಲೇನು?"

ಪ್ರೀತಿಗುಂಟೆ ಕಲರು?
ಸವಿಗುಂಟೆ ಕಲರು?
ಇದನೆಲ್ಲ ಯಾರು ತಾನೆ ಬಲ್ಲರು?Wednesday, April 16, 2008

myHarate:"ಪ್ರೀತಿ ಒಂದು ನೈಸರ್ಗಿಕ ಕ್ರಿಯೆ! ಏನಂತೀರಿ?"

ಅಂದ ಹಾಗೆ ಇದು 201ನೇ ಪ್ರೀತಿಯ ಕಾಣಿಕೆ! ಒಂದು ವರುಷಕ್ಕೂ ಮುನ್ನ ಕನಸಿಗೂ ನಿಲುಕದ ದೂರಕ್ಕೆ ಬಂದಾಗಿದೆ!

ಸದ್ದೆ ಇರದ ಉತ್ಸವ...
ಪ್ರೀತಿ ಒಂದೆ ಅಲ್ಲವ!

ಎಷ್ಟು ಅರ್ಥಪೂರ್ಣ ಪದಗಳು! ಉತ್ಸವ ಎಂದತಕ್ಷಣ ಸದ್ದು ಗದ್ದಲ ನೆನಪಿಗೆ ಬರುತ್ತದೆ, ಆದರೆ ಎರಡು ಹ್ರುದಯಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪ್ರೀತಿ ಉತ್ಸವ ಮೌನದಲ್ಲೆ ಹೆಚ್ಚು ಕಳೆದುಬಿಡುತ್ತದೆ!

ನಿನ್ನ ನೋಡಲೆಂತೋ... ಮಾತನಾಡಲೆಂತೋ, ಮನಸ ಕೇಳಲೆಂತೋ, ಪ್ರೀತಿ ಹೆೇಳಲೆಂತೋ,
ಅಹಾ ಒಂತರಾತರ.. ಹೇಳಲೊಂತರಾತರ.. ಕೇಳಲೊಂತಾರತರಾ..

ಈ ಎನೋ ಒಂತರಾತರದಲ್ಲಿ ಪ್ರೀತಿ ಉತ್ಸವ ನಡೆದಿರುತ್ತದೆ!

ಪ್ರೀತಿಸಿದ ಹ್ರುದಯ ಪ್ರೀತಿಗೆ ತಿಳಿಹೇಳಬಯಸುವ ಮೊದಲ ಮಾತು,
ನೀನು ಮುಗಿಲು... ನಾನು ನೆಲ!

ಮುಗಿಲು ಒಂದೇಕಡೆ ನಿಲ್ಲದೆ, ದಿಕ್ಕುತೊಚದೆ ಒಡಾಡುತ್ತಿರೆ ಭುವಿಗೆ ತುಂಬಾ tension! ಮರಗಳ ಮುಖೇನ ಕೈಬೀಸಿ ಕರೆದರೂ ಕೆಲವೊಮ್ಮೆ ತಂಪಾದ ಗಾಳಿಯನ್ನಷ್ಟೆ ನೀಡಿ ಓಡಿಬಿಡುತ್ತದೆ.

ನಿನ್ನ ಒಲವೆ ನನ್ನ ಬಲಾ...
ನಮ್ಮಿಬ್ಬರ ಮಿಲನವೆಂತೂ..?

ಹೀಗೆ ಪ್ರಶ್ನಿಸುತ್ತಲೇ ಎತ್ತರದ ಗುಡ್ಡದಲ್ಲಿ ಯಾರಿಗೂ ಕಾಣದಲ್ಲಿ ಮುಗಿಲು ಮತ್ತು ನೆಲದ ಮಿಲನವಾಗೇಬಿಡುತ್ತದೆ!

ಸಿಡಿಲ ಗಟ್ಟಿಮೇಳ, ಮಿಂಚಿನ ಫೊಟೊ ಸೆಷನ್, ಅಷ್ಟರಲ್ಲೇ ಮುಗಿಲು ನಾಚಿನೀರಾಗುತ್ತಲೆ ಎಲ್ಲೆಡೆ ಪುಷ್ಪ ವೃಷ್ಟಿ, ಎಲ್ಲ ಕಡೆ ತಂಪು, ಕುಶಿ, ಸುಖ!

ಪ್ರೀತಿ ಒಂದು ನೈಸರ್ಗಿಕ ಕ್ರಿಯೆ! ಏನಂತೀರಿ?

Tuesday, April 15, 2008

myNews:"Splendor is not with me from today"saagar se pahaad thak..
jahaan se aasmaan thak..

baadhal yaa baarish
sunny day yaa sunday
school yaa office
udupi yaa sullia
raath yaa din

who thee
mera saathee;-)

shan ka dhadkan:-) - Splendor!!!

Its not mine now... :-(

Yes.. myCar 800 kicked my good old Splendor!

myKavana:"ಪಿಸುಮಾತು"

ಕಹಿಯಿರದ ಸಿಹಿಯೇನೆ?
ಬಾಳೆಗೊನೆ ತುದಿಯೇನೆ?
ಜೇನಮನೆ ಒಳಗೇನೆ?
ಅಲ್ಲ!
ನನ್ನಾಕೆ ಹ್ರುದಯ ಕಣೆ!

****

ಕೆರೆನೀರು ಆರಿಹುದು ಕಣ್ಣೀರ ತುಂಬಲು
ಪದವಿರದ ಮೌನವೆ ಮನೆಮಾತಾಗಿರಲು
ಎದೆಯಲ್ಲಿ ಪ್ರೀತಿಯ ಕೊಳೆಮಾತ್ರ ಉಳಿದಿರಲು
ನೋವಲ್ಲಿ ನಲಿವೆಲ್ಲ ಮುಳುಗಿ ಮರೆಯಾಗಿದೆ!

****

ತಂಗಾಳಿ ಬಿಸಿಯಾಗಿ ಮಿತವಾಗಿ ಬೀಸಿದೆ
ಹಸಿನೆಲದಿ ಬಿಸಿಲಿಂದ ನೀರೆಲ್ಲ ಆರಿದೆ
ಸೆಖೆಯಿಂದ ಎಲ್ಲೆಲ್ಲೂ ಸುಖವೆಲ್ಲಿ ಉಳಿದಿದೆ
ಮಳೆನಿಂತ ಮೇಲೆ ಬೆವರೊಂದೇ ಇಳಿದಿದೆ

Wednesday, April 9, 2008

myHarate:"ದಿನದ ಮತ್ತು ಮುಸ್ಸಂಜೆಮಾತು "

ದಿನದ ವಿಚಾರ:

***********

ಬಲು ಅಪರೂಪ - ಇಂದಿನ ದಿನದಿ - ನಿಮ್ಮಯ ಸಂತತಿ - ಹಿಂದಿನಂತಲ್ಲ - ಕಲಿಗಾಲವಿದು!
ನಶಿಸುತ್ತಿರುವ - ಸಂತತಿಗೆ - ನಿಮ್ಮಯ ಕೊಡುಗೆ - ನಮ್ಮ ಒಕ್ಕೊರಲ ಆಯ್ಕೆ - ಹವ್ಯಕ ವಧು!

***********

ಶ್ರೀದರ್ ಅಂತ ಯಾರೋ ಎನೋ ಮುಸ್ಸಂಜೆ ಮಾತಿಗೆ ಸಂಗೀತ ಕೊಟ್ಟಿದ್ದಾರೆ. ಎಲ್ಲೆಲ್ಲಿಂದ ಎನೇನನ್ನೊ ಕಾಪಿ ಮಾಡಿ ಪದ್ಯ ಚೆನ್ನಾಗಿ ಕೇಳುವ ಹಾಗೆ ಮಾಡಿದ್ದಾರೆ. ಪ್ರಯತ್ನ ಮೆಚ್ಚಬೇಕು, ತಾನೇ ಏನೊ 'ಗುರುಕಿರಣ್'ರಂತೆ ಮಾಡಿ ಕೇಳಲಾಗದಸ್ಟು ಕೊಳಕು ಮಾಡುವುದಕ್ಕಿಂತ ಈ ಯತ್ನ ಒಳ್ಳೆದೆ! ಶ್ರೀದರ್ ಕೂಡಾ ನಮ್ಮ ಮನೆಮಾತಾದರೆ ವಿಷೇಶವಿಲ್ಲ, ಯಾಕೆಂದ್ರೆ ಮುಸ್ಸಂಜೆ ಮಾತಿನ ಹಾಡುಗಳು ತುಂಬಾ ಚೆನ್ನಾಗಿದೆ.

***********

ಮುಸ್ಸಂಜೆಯ ಇನ್ನೊಂದು ಮಾತು ಇಲ್ಲಿದೆ...

ನಿನ್ನ ನೋಡಲೆಂತೋ.. ಮಾತನಾಡಲೆಂತೋ.. ಮನಸ ಕೇಳಲೆಂತೊ.. ಪ್ರೀತಿ ಹೇಳಲೆಂತೊ..
ಅಹಾ ಒಂತರಾತರ.. ಹೇಳಲೊಂತರಾತರ.. ಕೇಳಲೊಂತರಾತರ!

ಮತ್ತೆ ಕನ್ನಡ ಸಿನಿಮಾ ರಂಗದ ಮನೆಅಳಿಯ ಸೋನು ನಿಗಮ್ ಸಿರಿಕಂಠವಿದೆ. ಶ್ರೇಯ ಗೋಸಾಲ್ ಕೂಡ ಹಾಡಿದ್ದಾರೆ!

ಕನ್ನಡಿಗರಿಗೆ ಇಲ್ಲಿ ಮಣೆಹಾಕೋರು ಇಲ್ಲ.. ನಂಗೂ ಅಷ್ಟೆ, ಈ ವಿಷಯ ಅಹಾ ಒಂತರಾತರ.. ಹೇಳಲೊಂತರಾತರ.. ಕೇಳಲೊಂತರಾತರ!

***********

Tuesday, April 8, 2008

myVimarshe:"ಕಡ್ಡಾಯವಾಗಿ ವಿಚಾರವಂತರಿಗೆ ಮಾತ್ರ!"

"ದೇವರ ಭಯವೇ ಜ್ನಾನದ ಆರಂಭ" ಹೀಗೆ ಯಾರೋ ಎಂದೋ ಹೇಳಿದ್ದರು. ದೇವಸ್ತಾನಕ್ಕೆ ಹೊದಾಗ ಆಗುತ್ತಿದ್ದ ಭಯ-ಭಕ್ತಿ-ನಂಬಿಕೆ ಜನರಲ್ಲಿ ಇತ್ತೀಚೆಗೆ ತುಂಬಾ ಕಡಿಮೆ ಆದಂತಿದೆ. ಅದಕ್ಕೆ ಪೂರಕವೆಂಬಂತೆ ಉಡುಪಿಯ ಪುತ್ತೂರು ದುರ್ಗಾ ಪರಮೇಶ್ವರಿ ಜಾತ್ರೋತ್ಸವ ನಿನ್ನೆಯಷ್ಟೆ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೋತ್ಸವ ರಥ, ದರ್ಶನ ಬಲಿ ಮುಂತಾದ ಯತಾವಥ್ ವಿಧಿ-ವಿಧಾನಗಳೊಂದಿಗೆ ಜರಗಿತು. ಉತ್ಸವ ಮೂರ್ತಿ ಹೊತ್ತ ಭಟ್ಟರು ಚೆಂಡೆ ಸುತ್ತು, ಬಾಂಡ್ ಸುತ್ತು, ಭಜನೆ ಸುತ್ತು, ಸಾಕ್ಸೊಫೋನ್ ಸುತ್ತು, ಭೂತ ಸುತ್ತು, ನ್ರುತ್ಯ ಸುತ್ತು ಹೀಗೆ ನಾನಾ ವಿಧಾನಗಳಲ್ಲಿ ತಲೆಯಲ್ಲಿ ಮೂರ್ತಿ ಹೊತ್ತು, ಕೈಯಲ್ಲಿ ಮುಟ್ಟದೆ ಕಸರತ್ತನ್ನು ತೊರಿಸಿದರು. ನಾಲ್ಕಾರು ಗರ್ನಲ್ ಸದ್ದು ಮೂಡಿಸಿತ್ತು. ಐಸ್-ಕ್ರೀಮ್, ಎಣ್ಣೇ-ತಿಂಡಿ ಅಂಗಡಿ, ಬಲೂನ್ ಶಾಪ್, ಬಳೆ ಅಂಗಡಿ ಹೀಗೆ ನನಾ ಸಂತೆ ತುಂಬಿ ಹೋಗಿತ್ತು.

ಒಂದೇ ಒಂದು ಮಹದಾಶ್ಚರ್ಯ ಏನೆಂದರೆ ಅಲ್ಲಿ ನೆರೆದ ಜನರ ಸಂಕ್ಯೆ 50 - 75 ಮಾತ್ರ! ಬಹಳ ಬೇಸರ ವಾಯ್ತು. ದೇವರೊಂದಿಗೆ ಸುತ್ತು ಬರಲು ನಾವು ಸೇರಿ 10 ಜನ ಇದ್ದಿರಬಹುದು. ನಮ್ಮಿಂದ ಜಾಸ್ತಿ ಅರ್ಚಕರು, ತಂತ್ರಿಗಳು, ಚೆಂಡೆ ವಾದ್ಯ ವಾದಕರು ನೆರೆದಿದ್ದರು.

ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಇತ್ತಂತೆ, ತುಂಬಾ ಜನ ನೆರವೇರಿದ್ದರಂತೆ!

ಚಿಕ್ಕಮಕ್ಕಳು ಭಯವಿಲ್ಲದೆ ನವರಾತ್ರಿ ವೇಶದ ಸುತ್ತ ಸುತ್ತುವಂತೆ ಹತ್ತಿರ ಬರುತ್ತಿದ್ದರು.. ದೇವರೆಂದರೇನು ಅಂತ ಅವರು ಅಂದುಕೊಂಡಿದ್ದಾರೋ ಎನೋ? ನಾವು ಹಿರಿಯರು ದೇವರ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ರೀತಿ ಕಂಡು ಬೇಸರವಾಯಿತು.

"ದೇವರ ಭಯವೇ ಜ್ನಾನದ ಆರಂಭ" ಅಂದಿದ್ದೆ. ದೇವರ ಬಗ್ಗೆ ನಮ್ಮಲ್ಲೆ ಅದೆಷ್ಟೋ ಅಜ್ನಾನ ತುಂಬಿರೆ ಇನ್ನು ಭಯವೆಲ್ಲಿ?

ಮನೆಯ ಮನರಂಜನಾ ಸಾಧನಗಳು ಎಲ್ಲರನ್ನು ಬದಲಾಯಿಸಿದೆ. ಜಾತ್ರೆ-ಹಬ್ಬ ಎಲ್ಲ ಕೆಲವರ್ಗಕ್ಕೆ ಮಾತ್ರ ಸೀಮಿತವಾಗಿದೆ. 'ಬುದ್ಧಿಜೀವಿ'ಗಳ ಗಮನ ಇತ್ತ ಬರದೇ ಹೊಗಿದೆ!
ನಾವೆಲ್ಲ ಸಣ್ಣವರಿದ್ದಾಗ ಜಾತ್ರೆ ಎಂದರೆ ಏನ್ ಜನಾ ಗುರೂ, ಊರಿಂದೂರೆ ನೆರೆಯುತ್ತಿತ್ತು. ಅದು ಊರಿಗಿಡೀ ಸಿಗುವ ಏಕೈಕ ಹಬ್ಬ. ಕಾಲ ಎತ್ತಲೋ ಸಾಗಿದೆ. ಸಿಟಿ ಜೀವನ ನಮ್ಮ ಸಂಸ್ಕ್ರುತಿಯ ಎತ್ತಲೋ ಸಾಗಿಸಿದೆ. ಸಣ್ಣ ಸಣ್ಣ ಕುಟುಂಬಗಳು ತಾವು ನಡೆದದ್ದೆ ದಾರಿ ಅಂತ ತಿಳಿದುಕೊಂಡಿವೆ. ಅಜ್ಜನ ಮಾತು ಮತ್ತು ಸಂಸ್ಕಾರಕ್ಕೆ ನಮ್ಮ ಸಮ್ಮತಿಯಿಲ್ಲ. ಒಬ್ಬೊಬ್ಬ ಒಂದೊಂದು ಸಂಸ್ಕಾರ, ವಿಚಾರ ಆಚರಿಸಿದರೆ ಕೊನೆಗೊಮ್ಮೆ ಯಾರು ಯಾರನ್ನೂ ತಿಳಿಯದ ವಿಚಿತ್ರ ಪರಿಸ್ತಿತಿ ದೂರವಿಲ್ಲ.

ನಿಜ ಹೇಳಲೇನು? ಮೊದಲಿಂದೆ ನನಗೆ ಸ್ವೀಕಾರರ್ಹವಾಗಿತ್ತು.

myKavana:"ಬಾ, ನಡೆ, ನನ್ನೊಂದಿಗೆ"

ಬಾ ಸಖಿಯೇ ಬಾ,
ನನ್ನ ಸ್ನೇಹದ ತೋಟ ಇದೆ
ಅಲ್ಲಿ ನಲ್ಮೆಯ ಗಾಳಿ ಇದೆ
ನೀ ಉಸಿರಾಡಿದರೇ ತಾನೆ
ಎದೆ ನಾಡಿಯ ಮಿಡಿತ ಇದೆ!

ಬಾ ಒಲವೇ ಬಾ,
ನನ್ನ ಪ್ರೀತಿಯ ಕೊಳವು ಇದೆ
ಅಲ್ಲಿ ನೀರಿನ ಸೆಲೆಯೆ ಇದೆ
ನೀ ಈಜಾಡಿದರೇ ತಾನೆ
ಜೀವದಿ ಒರತೆ ಇದೆ!

ಬಾ ಮನವೇ ಬಾ,
ನನ್ನ ಕನಸಿನ ಲೋಕ ಇದೆ
ಅಲ್ಲಿ ಆಡದ ಮಾತು ಇದೆ
ನೀ ಬಂದರೆ ತಾನೆ
ಅಲ್ಲಿ ನನಸಿನ ನಿಜವು ಇದೆ!

Sunday, April 6, 2008

myPOD:"ಯುಗಾದಿ - ಇದು ಆದಿಯಷ್ಟೇ ಅಲ್ಲ, ಹಳೆ ವರುಷದ ಅಂತ್ಯ!"

ನವಋತುವಿನ ರವಿಕಿರಣವು ಬರುತಲಿದೆ ಇಂದು!
ನವ ಚೇತನ ಮನತುಂಬಿರೆ ಕಷ್ಟವೆಲ್ಲಿ ಮುಂದು!

Friday, April 4, 2008

myWishes:"ಯುಗಾದಿಯ ಹಾರ್ದಿಕ ಶುಭಾಶಯಗಳು"ಯುಗಗಳು ಕಳೆದಿದೆ
ಗರಿಗಳು ಕೆದರಿದೆ
ನಿನ್ನಯ ಸ್ನೇಹಕೆ ವರುಷವೆ ಸೇರಿದೆ

ಮಾವು ಮಾಗಿದೆ
ಚಿಗುರೆಲೆ ಮೂಡಿದೆ
ಕೋಗಿಲೆ ಕೂಗಲಿ ದಿನ ಬೆಳಗಾಗಿದೆ

ಬೆಲ್ಲವ ಜಗಿದಿದೆ
ಬೇವುನೂ ಬೆರೆತಿದೆ
ಸಿಹಿ-ಕಹಿ ನೆನಪೆ ಬದುಕನು ತೂಗಿದೆ

ಓದುಗರಿಗೆಲ್ಲ ಯುಗಾದಿಯ ಹಾರ್ದಿಕ ಶುಭಾಶಯಗಳು

ಸರ್ವಧಾರಿ - ಸರ್ವರಿಗೂ ಕರುಣಿಸಲಿ ಸುಖದ ದಾರಿ!

Thursday, April 3, 2008

myReview:"ಜೊಧಾ-ಅಕ್ಬರ್ "ಜೊಧಾ ಭಾಯಿ ಮತ್ತು ಶೇನ್ ಶಾ ಅವರ ಕಥೆಯುಳ್ಳ ಜೊಧಾ-ಅಕ್ಬರ್ ಸಿನೇಮ ನಿನ್ನೆಯಸ್ಟೆ ನೋಡಿದೆ. ಭರ್ಜರಿ 3.15 ಗಂಟೆ ನಿಮ್ಮ ಜೀವನದಿಂದ ನುಂಗಿಬಿಡುವ ಈ ಸಿನೇಮ ಅದ್ಬುತವಾಗಿ ರಚಿಸಲ್ಪಟ್ಟಿದೆ. ಎಲ್ಲು ಆಧುನಿಕ ಲೋಕ ತೋರ್ಪಡುವುದಿಲ್ಲ. ಹ್ರಿತಿಕ್ ಸಾಹಸ ಮತ್ತು ಮುಖಚರ್ಯೆ ಅಕ್ಬರನ ಪಾತ್ರಕ್ಕೆ ಅದ್ಬುತ. ಅಮಿತಾಬ್ ವಾಕ್ಚರ್ಯೆ ಹ್ರುತಿಕ್-ಗೆ ಇರಬೇಕಿತ್ತು. ಯುದ್ದಭೂಮಿ ಸನ್ನಿವೇಶ ನಿಜಕ್ಕು ರೋಮಾಂಚಕಾರಿ! ಐಶ್ವರ್ಯ ಅಲ್ಲದೆ ಬೇರೆ ಯಾರು ತಾನೆ ಜೊಧಾ ಆಗಬಲ್ಲರು? ಎ. ಆರ್. ರೆಹ್ಮಾನ್ ಯಾಕೆ ಉಳಿದವರಿಗಿಂತ ಬಿನ್ನ ಎಂದು ಸಿನೇಮ ನೊಡಿದವರಿಗೆ ತಿಳಿಯುತ್ತೆ. ಒಂದೆ ಒಂದು ಕಿಸ್/ಬೆಡ್-ರೂಮ್ ಸೀನ್ ಇಲ್ಲದೆ ಮೂವಿ ಮುಗಿಯುತ್ತದೆ ಮತ್ತು ಆ ಸಿನೇಮ ದಾಖಲೆ ಬರೆಯುತ್ತದೆ. ಯಾಕೆಂದರೆ ಅದು ಲಗಾನ್ ನಿರ್ದೇಶಕ ಆಶುತೊಶ್ ಅವರ ಗರಡಿಯಲ್ಲಿ ಮೂಡಿಬಂದದ್ದು!

ಮನ್-ಮೊಹನಾ... ಮನ್-ಮೋಹನ....
ಖ್ವಾಜ ಮೇರೆ ಖ್ವಾಜಾ.. ದಿಲ್ ಐಸೆ ..
ಆಜೀಮ್ ಓ ಷಾನ್ ಷೇನ್-ಶಾ...
ಇನ್ ಲಮ್-ಹೊ ಕೆ ಧಾಮನ್ ಮೇ...
ಅದ್ಬುತವಾಗಿ ಮೂಡಿಬಂದಿವೆ..

ಹಿಂದು ಮತ್ತು ಮೊಗಲರ ಸಂಸ್ಕ್ರುತಿಯ ಸಮಾಗಮ, ದರ್ಮನಿರಪೇಕ್ಷತೆ ಕತೆಯನ್ನ ಸತ್ಯಕ್ಕೆ ದೂರವಾಗಿಸಿದರು ಮನಕ್ಕೆ ಹಿತವಾಗಿದೆ.
ಶೇನ್ ಶಾ ಗೆ ಅಕ್ಬರ್ ಎಂಬ ನಾಮಕರಣ, ಅಸ್ಥಾನದ ಪಂಡಿತರ ವೇಷಭೂಶಣ, ಯಾಕೊ ಎಲ್ಲೊ ಅಕ್ಬರನ ಕಾಲಕ್ಕೆ ನಾವು ಹೋಗಿ ಬಿಟ್ಟಂತೆ ಅನ್ನಿಸಿಬಿಡುತ್ತದೆ.

ಬೀರಬಲ್ಲನ ತರಿಸಿ ನಾಲ್ಕು ಹಾಸ್ಯ ಕೂಡಿಸಿದ್ದರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು!

ಕ್ಯಾಮರ ವರ್ಕ್ ಮತ್ತು ಯುದ್ದ ಸನ್ನಿವೇಶ ಅದ್ಬುತವಾಗಿ ಮೂಡಿಬಂದಿದೆ.

Long live to ಜೊಧಾ ಅಕ್ಬರ್ ಸಿನೇಮ!