Wednesday, April 16, 2008

myHarate:"ಪ್ರೀತಿ ಒಂದು ನೈಸರ್ಗಿಕ ಕ್ರಿಯೆ! ಏನಂತೀರಿ?"

ಅಂದ ಹಾಗೆ ಇದು 201ನೇ ಪ್ರೀತಿಯ ಕಾಣಿಕೆ! ಒಂದು ವರುಷಕ್ಕೂ ಮುನ್ನ ಕನಸಿಗೂ ನಿಲುಕದ ದೂರಕ್ಕೆ ಬಂದಾಗಿದೆ!

ಸದ್ದೆ ಇರದ ಉತ್ಸವ...
ಪ್ರೀತಿ ಒಂದೆ ಅಲ್ಲವ!

ಎಷ್ಟು ಅರ್ಥಪೂರ್ಣ ಪದಗಳು! ಉತ್ಸವ ಎಂದತಕ್ಷಣ ಸದ್ದು ಗದ್ದಲ ನೆನಪಿಗೆ ಬರುತ್ತದೆ, ಆದರೆ ಎರಡು ಹ್ರುದಯಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪ್ರೀತಿ ಉತ್ಸವ ಮೌನದಲ್ಲೆ ಹೆಚ್ಚು ಕಳೆದುಬಿಡುತ್ತದೆ!

ನಿನ್ನ ನೋಡಲೆಂತೋ... ಮಾತನಾಡಲೆಂತೋ, ಮನಸ ಕೇಳಲೆಂತೋ, ಪ್ರೀತಿ ಹೆೇಳಲೆಂತೋ,
ಅಹಾ ಒಂತರಾತರ.. ಹೇಳಲೊಂತರಾತರ.. ಕೇಳಲೊಂತಾರತರಾ..

ಈ ಎನೋ ಒಂತರಾತರದಲ್ಲಿ ಪ್ರೀತಿ ಉತ್ಸವ ನಡೆದಿರುತ್ತದೆ!

ಪ್ರೀತಿಸಿದ ಹ್ರುದಯ ಪ್ರೀತಿಗೆ ತಿಳಿಹೇಳಬಯಸುವ ಮೊದಲ ಮಾತು,
ನೀನು ಮುಗಿಲು... ನಾನು ನೆಲ!

ಮುಗಿಲು ಒಂದೇಕಡೆ ನಿಲ್ಲದೆ, ದಿಕ್ಕುತೊಚದೆ ಒಡಾಡುತ್ತಿರೆ ಭುವಿಗೆ ತುಂಬಾ tension! ಮರಗಳ ಮುಖೇನ ಕೈಬೀಸಿ ಕರೆದರೂ ಕೆಲವೊಮ್ಮೆ ತಂಪಾದ ಗಾಳಿಯನ್ನಷ್ಟೆ ನೀಡಿ ಓಡಿಬಿಡುತ್ತದೆ.

ನಿನ್ನ ಒಲವೆ ನನ್ನ ಬಲಾ...
ನಮ್ಮಿಬ್ಬರ ಮಿಲನವೆಂತೂ..?

ಹೀಗೆ ಪ್ರಶ್ನಿಸುತ್ತಲೇ ಎತ್ತರದ ಗುಡ್ಡದಲ್ಲಿ ಯಾರಿಗೂ ಕಾಣದಲ್ಲಿ ಮುಗಿಲು ಮತ್ತು ನೆಲದ ಮಿಲನವಾಗೇಬಿಡುತ್ತದೆ!

ಸಿಡಿಲ ಗಟ್ಟಿಮೇಳ, ಮಿಂಚಿನ ಫೊಟೊ ಸೆಷನ್, ಅಷ್ಟರಲ್ಲೇ ಮುಗಿಲು ನಾಚಿನೀರಾಗುತ್ತಲೆ ಎಲ್ಲೆಡೆ ಪುಷ್ಪ ವೃಷ್ಟಿ, ಎಲ್ಲ ಕಡೆ ತಂಪು, ಕುಶಿ, ಸುಖ!

ಪ್ರೀತಿ ಒಂದು ನೈಸರ್ಗಿಕ ಕ್ರಿಯೆ! ಏನಂತೀರಿ?

2 comments:

Sushrutha Dodderi said...

ಏನೋ.. ಹಾಡ ಸೊಲ್ಲುಗಳನ್ನೇ ಇಟ್ಕೊಂಡು ಚನಾಗ್ ಬರ್ದಿದೀರಾ ಮಾತ್ರ.. ಇನ್ನೂ ಬೆಳೆಸಬಹುದಿತ್ತು..

Shanmukharaja M said...

ನಿಮ್ ಪ್ರೊತ್ಸಾಹಕ್ಕೆ ಕ್ರುತಜ್ನತೆಗಳು..
ಇನ್ನೂ ಬರೆಯೋಣಾಂತ ಇದ್ದೆ.. ಯಾಕೋ ಕುಯ್ಯೋದು ನಿಲ್ಸೋಣಾ ಅನ್-ಸ್ತು!