Sunday, December 25, 2011

myKavana:"ಪ್ರೀತಿ"

ಪ್ರೀತಿಯೆಂದರೇನೇ ಗೆಳತಿ
ನಿನ್ನ ಮೊದಲ ಭೇಟಿಯಾ?
ನಿನ್ನ ನೋಡಿ ನನ್ನದೆಂದು
ಅನಿಸಿಕೊಂಡ ರೀತಿಯಾ!

ಪ್ರೀತಿಯೆಂದರೇನು ಗೆಳತಿ
ಮಿನುಗುತಾರೆ ಚಂದ್ರರಾ?
ಇಲ್ಲವಾಗಿ ಮರೆವಮುನ್ನ
ಬರುವಂತ ಕಾತುರಾ!

ಪ್ರೀತಿಯೆಂದರೇನು ಗೆಳತಿ
ದುಗುಡ ಮಿಂಚು ಮೋಡವಾ?
ಮಳೆಯ ಹನಿಯು ಇಳೆಯ ತಬ್ಬಿ
ತಂಪಾಗುವ ಹಾಗೆಯಾ?

ಪ್ರೀತಿಯೆಂದರೇನು ಗೆಳತಿ
ನನ್ನ ನಿನ್ನ ಮನಗಳೇ?
ಭೋರ್ಗರೆಯುತ ದಿನವೂ ಬಿಡದೆ
ಅಪ್ಪಿಬಿಡುವ ತೆರೆಗಳೇ!

Monday, December 5, 2011

myPOD:"ಕಲಾಗಾರ"

ಇವರ ಮೂವರ ಪೈಕಿ
ಕಲಾಗಾರ ಯಾರು?
ತಾನೆಂದ ಮೊದಲು
ಬಾಗಿಲನು ಕೆತ್ತಿದವ
ಬಡಗಿ ದುಡಿಸಿದ ಧಣಿಯು
ಇದು ನನ್ನದೆಂದ!
ನನ್ನ ಕಿರಣಗಳೆ ನಿನ್ನ
ಚಂದಕ್ಕೆ ಮೂಲ
ಅನ್ನಬೇಕೆ ಸೂರ್ಯ!
ಇವರ ಜಗಳವ ನೋಡಿ
ನಕ್ಕುಬಿಟ್ಟಿತು ಕ್ಯಾಮರ!

Friday, December 2, 2011

myKavana:"ಕಣ್ಣೀರ ಕಲರು"

ಕಣ್ಣೀರಿಗೆ ಕಲರಿಲ್ಲ!
ಧನ್ಯವಾದ ದೇವರೆ!
ಒಂದುವೇಳೆ ಇದ್ದರೆ
ಮುಖವೆಲ್ಲ ಬಣ್ಣದಿ
ನೆನೆಯುತ್ತಿತ್ತು ಮಕ್ಕಳ !

ಮೋಡಗಳು ಮಳೆಗೆರೆದು
ನೋವ ತಂಪುಗೈದರೂ!
ನೆರೆಯವರಿಗೆ ತಿಳಿಯುತ್ತಿತ್ತು
ಮಳೆಯಲ್ಲಿ ಅತ್ತರೂ!

ಮುಖದ ಬಣ್ಣ ಬದಲುತ್ತಿತ್ತು
ಅತ್ತು ಅತ್ತು ಹುಡುಗಿಗೆ!
ವಿರಸದಿ ಸಮಯವೆಲ್ಲಾ
ಮುಗಿಯುತ್ತಿತ್ತು ಮೇಕಪ್ಪಿಗೆ!

'ಹುಡುಗರು ಕೂಗರು' ಮಾತು
ಸುಳ್ಳಾಗುತ್ತಿತ್ತು ನಕ್ಕರೂ!
ಸಾಕಾಗುತ್ತಿತ್ತು 'ಹೋಳಿ'ಗೂ
ನಗುತ್ತಾ ನಗುತ್ತಾ ಅತ್ತರೂ!

ಆದರ್ಶ ದಂಪತಿಗಳ
ಗುಟ್ಟು ರಟ್ಟಾಗುತಿತ್ತು
ಅಜ್ಜಿಯ ಬತ್ತಿದ ಕಣ್ಣೂ
ಕಲರಾಗುತಿತ್ತೋ ಏನೋ!

myPOD:"ಅವಳಿ"

ಕಣ್ಣು ಎರಡು, ಕೈ ಎರಡು... ಬುದ್ದಿ ಬೇಕೆ ಎರಡು?
ಕಾಲು ಎರಡು, ಕಿವಿಯು ಎರಡು, ಮಾತು ಬೇಕೆ ಎರಡು?
ತಲೆಯು ಒಂದು, ಬಾಯಿ ಒಂದು, ಮನಸು ಏಕೆ ಎರಡು?
ಹ್ರುದಯ ಒಂದು, ಉಸಿರು ಒಂದು, ಪ್ರೀತಿ ಏಕೆ ಎರಡು?
ಒಂದಿರುವವು, ಎರಡಾದರೆ ಬದುಕೆಲ್ಲ ಬರಡು!