Monday, August 25, 2008

myAnisike:"ಲೋಕದ ಕಣ್ಣಿಗೆ..."

ಡಾ|| ಹೆಚ್ ಯೆಸ್ ವೆಂಕಟೇಶ್ ಮೂರ್ತಿ ಅವರ "ಲೋಕದ ಕಣ್ಣಿಗೆ ರಾಧೆಯು ಕೂಡ" ನನಗನ್ನಿಸಿದಂತೆ:

ಲೋಕದ ಕಣ್ಣಿಗೆ ನನ್ನಾಕೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು!
ನನಗೆ ಮಾತ್ರ ಆಕೆಯು ಎಂದೂ ಪ್ರೀತಿಯ ನೀಡುವ ಕಣ್ಣು!

ನಾನು ನನ್ನದು ನನ್ನವರೆಂಬ ಹಲವು ತೊಡಕುಗಳ ಮೀರಿ,
ಆಕೆಯು ತರುವಳು ಪ್ರೀತಿ!
ತೊರೆದರು ಕಣ್ಣ ತೊರೆಯದು ಪ್ರಿಯನ,
ಇದು ಆಕೆಯ ಪ್ರೀತಿಯ ರೀತಿ!!!!

ಲೋಕದ ಕಣ್ಣಿಗೆ ನನ್ನಾಕೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು!
ನನಗೆ ಮಾತ್ರ ಆಕೆಯು ಎಂದೂ ಪ್ರೀತಿಯ ನೀಡುವ ಕಣ್ಣು!

Saturday, August 23, 2008

myPOD:"The plug say's it!!!"


myHarate:"ಗುಂಡ"

'ಗುಂಡ' ಎಂಬ ಪದಕ್ಕೆ ತುಂಬಾನೆ ಅರ್ತ ಇದೆ ಕಣ್ರೀ. ಹೋಟೆಲಲ್ಲಿ ಗುಂಡಾ ಅಂತ ಕಿರಿಚಿದರೆ ಮಾಣಿಯ ಕೂಗಿದ್ದು ಎಂದು ತಿಳಿದರೆ ನಿಮ್ಮಷ್ಟು ಪೆದ್ದ ಬೇರ್ಯಾರು ಇಲ್ಲ.

ಗುಂಡಾ ಎಂದರೆ ಹಸಿವೆಯು ಪರಿಹಾರ
ಗುಂಡಾ ಎನಬಾರದೆ, ನೀವು ಗುಂಡಾ ಎನಬಾರದೆ!!!

ಹೌದು, ಹಲಸಿನ ಎಲೆಯನ್ನು ಸುತ್ತಲು ಸೇರಿಸಿ ಮಾಡಿದ ಗ್ಲಾಸ್ ನಂತಿರೋ ಇಡ್ಲಿಗೆ ಗುಂಡಾ ಎಂದೂ ಕರೆಯುವರು. 'ಪೆಲಕ್ಕಯಿತ ಇರೆತ್ತ ಅಡ್ಯೆ' ಅಂತ ತುಳುವಲ್ಲಿ ಎನ್ನಬಹುದೋ ಎನೋ!

ಅಜ್ಜಿ ಹೇಳುತ್ತಿದ್ದ ಸುಟ್ಟವು ಮರದ ಕಲ್ಪನೆಯ ಕತೆಯನ್ನು ನೆನಪಿಸುತ್ತಾ ಈ ಗುಂಡನ ಬಗ್ಗೆ ತಿಳಿಯದ ನನ್ನ ಸ್ನೇಹಿತನಿಗೆ ನಾನು ಹೇಳಿದ್ದು ಇಷ್ಟು!

ಉಡುಪಿಯ ಕೃಷ್ಣಮಟದ ಸುತ್ತ ಇರುವ ರಥಬೀದಿಯಲ್ಲಿ ಸಾಕಷ್ಟು 'ಗುಂಡ' ಮರಗಳು ಇರುವುದಾಗಿಯೂ, ಹೋದ ಭಕ್ತರು ಮರದಸುತ್ತ ಸುತ್ತುಬಂದು ಮರವ ಕುಲುಕಿಸಲು ಗುಂಡ ಬೀಳುವುದಾಗಿಯೂ, ಭಕ್ತಾದಿಗಳು ಗುಂಡ ಸಂಗ್ರಹಣೆಗೆ ಮುಗಿಬೀಳುವುದಾಯೂ, ಪಕ್ಕದಲ್ಲೆ ಗೋಚರಿಸುವ ಚಕ್ಕುಲಿಮರದಲ್ಲಿ ಚಕ್ಕುಲಿ ಜಗಮಗಿಸುವುದಾಗಿಯೂ, ಚಕ್ಕುಲಿ ಮರದಲ್ಲಿ ಬಿಲ್ವಪತ್ರೆ ಮರದಂತೆ ದೊಡ್ಡ ದೊಡ್ಡ ಮುಳ್ಳುಗಳಿರುವುದಾಗಿಯೂ, ಚಕ್ಕುಲಿ ಕಾಯಿಯಾಗಿರಲು ತುಂಬಾ krispy ಇರುವುದಾಗಿಯೂ, ಹಣ್ಣಗುತ್ತಲೇ ಮೆತ್ತಗಾಗುವುದಾಗಿಯಿಯೂ 'ರೈಲು' ಬಿಡುತ್ತಿರೆ ಆತನಿಗೆ ನಿಜದ ಅರಿವಾಗಿ good narration dude ಎಂದಷ್ಟೆ ಹೇಳಿದಾಗ ನಾವಿಬ್ಬರು ಗಟ್ಟಿ ನಕ್ಕೆವು!!! ಅಜ್ಜಿಯ ಸುಟ್ಟವಿನ ಕತೆಗೆ ನಿದ್ದೆಬರುತ್ತಿದ್ದರೆ, ನನ್ನ ಗುಂಡಾ ಕತೆಗೆ ನಗುವಾದರು ಬಂತಲ್ಲಾ ಅಂದು ನನ್ನ ಕಲ್ಪನೆಗೆ ದನ್ಯವಾದ ತಿಳಿಸಿದೆ!

myHarate:"ಪಟ್ಟದ ಆನೆ ಸುಭದ್ರೆ ಅಂದಿದ್ದು"

ಕೃಷ್ಣ ಮಠದ ಪಟ್ಟದ ಆನೆ ಸುಭದ್ರೆ ಅಂದಿದ್ದು:
ರಾಜಾಂಗಣದ ಪಕ್ಕದಲ್ಲಿ ನನ್ನ ಮನೆ. ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಚಾಚೂ ತಪ್ಪದೆ ಆಲಿಸುವ ಭಾಗ್ಯ ನನ್ನ ಪಾಲಿಂದು. ಎಷ್ಟೊ ಜನ ವಿದ್ವಾಂಸರು, ವಿದ್ವಾನುಗಳು, ಕಲಾಮಣಿಗಳು ರಾಜಾಂಗಣದಲ್ಲಿ ಕಾರ್ಯಕ್ರಮಕೊಡುತ್ತಲೇ ಇರುತ್ತಾರೆ. ಇವೆಲ್ಲವನ್ನು ಕಣ್ಣಾರೆ ಕಾಣಲು ನಾನು ತುಂಬಾ ಅದೃಷ್ಟಮಾಡಿರಬೇಕು. ಇಲ್ಲಿ ಸರ್ವ ಕಲಾವಲ್ಲಭರು ಬರುತ್ತಾರೆ, ಹಾಡುತ್ತಾರೆ, ನಾಚುತ್ತಾರೆ, ನುಡಿಸುತ್ತಾರೆ. ಇಲ್ಲಿಗೆ ಬರುವ ಪ್ರೇಕ್ಷಕರು ಬರಿಗೈಯಲ್ಲಿ ಬಂದು ಮನತುಂಬ ಕುಷಿಪಟ್ಟು ಹಾಗೆ ಹೋಗಬಹುದು. ದೊಡ್ಡ ಪ್ರಾಂಗಣ.. ಸಾವಿರಗಟ್ಟಲೆ ಜನ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಸುವ್ಯವಸ್ತೆ.

ಮೊನ್ನೆ ಬಂದ ಗೋಡ್ಕಿಂಡಿಯವರು ಮಿಶ್ರ ಪಹಾಡಿ ರಾಗದಲ್ಲಿ ಬೆಟ್ಟ ಗುಡ್ಡದ ಮೇಲಿನ ವಾತಾವರಣವನ್ನು ಸೃಷ್ಟಿಸಿರೆ ಎಲ್ಲೊ ಗತಕಾಲದ ವೈಭವ ನಂಗೆ ಮತ್ತೆ ಬಂದಂತಾಯಿತು. ನನ್ನ ಹುಟ್ಟೂರಲ್ಲಿ ಇದ್ದ ಸೀತಾನದಿ, ಅದನ್ನು ಸೇರುವ ಕಿರುತೊರೆಗಳಲ್ಲಿನ ನಮ್ಮ ಜಳಕ, ಅಲ್ಲಿ ಬೀಸೋ ಗಾಳಿ, ಬೆಳಗಾತ ಕೇಳುತ್ತಿದ್ದ ಕೋಗಿಲೆಯ ಇನಿದನಿ, ಅದಕ್ಕೆ ಬೆಟ್ಟದಲ್ಲಿನ ಪ್ರತಿದ್ವನಿ ಕೇಳುತ್ತಿರೆ ನಾನು ಮತ್ತೆ ಸ್ವತಂತ್ರಳಾಗಿ ಬೆಟ್ಟ ಗುಡ್ಡದಲ್ಲಿ ವಿಹರಿಸಿದ ಸಂಭ್ರಮ. ಇಂತಹ ದಿನಗಳು ನನಗೆ ಸಿಗುವುದು ಬಹಳ ಅಪರೂಪ. ದಿನಾ ರಥದ ಎದುರು ಹೊಗಿ ಕಿವಿ ಹೊಟ್ಟುವ ಸಿಡಿಮದ್ದುಗಳೆದುರು ಕೂರಬೇಕಾದ ವ್ಯಥೆ ನನ್ನದು. ಹೀಗಿರಲು ಈ ಅಸ್ತಾನ ವಿದ್ವಾನ್ ಗೋಡ್ಕಿಂಡಿ ನನ್ನ ಪಾಲಿಗೆ ಮರೆಯಾಗದ ನೆನಪುಗಳನ್ನ ತಂದು ಅಷ್ಟಮಿಯ ಹಬ್ಬದ ವಾತಾವರಣ ನನ್ನಲ್ಲು ಬರುವಂತೆ ಮಾಡಿದ.

ಯಾರು ಬರಲಿ ಬಾರದಿರಲಿ ನಾನಂತು ಕಲಾಪ್ರೊತ್ಸಾಹಕನಾಗಿ ಪ್ರತಿನಿತ್ಯ ಗೋಡೆತರ ನಿಂತು ಕ್ರಾಯಕ್ರಮ ಆಸ್ವಾದಿಸಿ ಎಲ್ಲರ ಬೆನ್ನು ತಟ್ಟುತ್ತೇನೆ. ಹೀಗೆಮಾಡುವುದರಲ್ಲಿ ನಾನು ತುಂಬಾ ಸಂತಸ ಕಾಣುತ್ತೇನೆ. ನನ್ನ ಈ ನಿಂತ ನೀರಿನಂತಹ, ನಿಂತಲ್ಲೆ ಅನುಭವಿಸಬೇಕಾದಂತಹ, ಕೃತಕ ಬದುಕು ಇದರಿಂದ ಸಾರ್ತವಾಗುತ್ತೆ ಅಂತ ತಿಳಿದುಕೊಳ್ಳುತ್ತೇನೆ.

Thursday, August 21, 2008

myPOD:"ಮುಂಗಾರು ಟೈಮ್"

ಮೂಗಿಗಿಂತ ದೊಡ್ಡ ಮೀಸೆ!ಮುಂಗಾರು ಟೈಮ್...ಮುಂಜಾನೆಯ ಮಂಜಹನಿ...ಚೆಲ್ಲಿದರು ಮಲ್ಲಿಗೆಯಾ...ಚೆಗುರಿಗೆ ಬೇರಿನಾ ಬೆಂಬಲಾ...ಮಾಯದಂತ ಮಳೆ ಬಂತಣ್ಣಾ...ಚೆಗುರಿಗೆ ಬೇರಿನಾ ಬೆಂಬಲಾ...

Monday, August 18, 2008

myPOD:"myNephew"


myPOD:"Weekend snaps"myPOD:"Scenic beauties"


myHarate:"ಸ್ನೆಹಾನ ಪ್ರೀತೀನ?"

ಸಂಜೆ ಆಗುತ್ತಲೆ ರೂಮೇಟ್ ಸಿನೆಮಾಕ್ಕೆ ಕರೆಯುತ್ತಾನೆ, ಆಕೆ ಫೋನ್ ರಿಂಗಿಸುತ್ತಾಳೆ. ಸಿನೆಮಾನಾ? ಗಂಟೆಗಟ್ಟಳೆ ಪಿಸುಮಾತಾ? ಸ್ನೆಹಾನ ಅಲ್ಲ ಪ್ರೀತೀನಾ?

ವಾರಾಂತ್ಯಕ್ಕೆ ಪಿಕ್.ನಿಕ್ ತಯಾರಿ ನಡೆದಿರುತ್ತದೆ, ಒಂದಿಷ್ಟು ಮೈಲ್ ವ್ಯವಹಾರ ಆ ದಿಶೆಯಲ್ಲಿ ನಡೆದಿರುತ್ತದೆ. ಕೊನೆಗೊಮ್ಮೆ ಆಕೆಯೂ ಅದೇ ಡೇಟ್ ಕೊಡುತ್ತಾಳೆ.. ವಾರಾಂತ್ಯ ಏನ್ ಮಾಡೋದು? ಸ್ನೇಹಾನ ಅಲ್ಲ ಪ್ರೀತೀನ?

ದೂರದಲ್ಲಿರೋ ಗೆಳೆಯ ಅಪರೂಪಕ್ಕೊಮ್ಮೆ ಭಾನುವಾರ ಬರುತ್ತಿದ್ದಾನೆ, ಅದೇ ದಿನ ಆಕೆಯೊಂದಿಗೆ ಡೇಟ್ ಬೇರೆ.. ಹಮ್, ಅವನು ಮುಕ್ಯಾನ ಅಲ್ಲ ಅವಳಾ? ಸ್ನೇಹಾನಾ ಅಲ್ಲ ಪ್ರೀತಿನಾ?

ಫೋನಲ್ಲಿ ಕರೆನ್ಸಿ ನೀರಂತೆ ಮುಗಿಯುತ್ತಿರುತ್ತೆ.. ದೂರದೂರಿಂದ ಬಂದ ಗೆಳೆಯನೋರ್ವನ ಕಾಲ್ ಕಟ್ಟಾಗಿದೆ.. ಅವಳು ನಾಲ್ಕೈದು ಸಲ ಮಿಸ್ಡ್ call ಕೊಟ್ಟಿದ್ದಾಳೆ... ಈವಾಗ ಏನು ಸ್ನೇಹಾನಾ ಅಲ್ಲ ಪ್ರೀತೀನ?

ಇಂತಹ ನೂರಾರು ಸಂದಿಗ್ದ ಪರಿಸ್ತಿತಿ ಇಕ್ಕಟ್ಟಿಗೆ ಸಿಲುಕಿಸುವುದಂತೂ ನೂರಕ್ಕೆ ನೂರು ಸತ್ಯ. ಕೆಲವಕ್ಕೆ ಉತ್ತರವೇ ಇಲ್ಲ. ಪ್ರೀತಿ ನಿಜವಾದರೆ ಅವಳ ಕಡೆಗಣಿಸುವಂತಿಲ್ಲ. ಕಳೆದು ಹೋದ ಸುಂದರ ಕ್ಷಣಗಳ ಹರಿಕಾರ ಗೆಳೆಯನನ್ನೂ ಮರೆಯುವಂತಿಲ್ಲ. ಪ್ರೀತಿ ಬರುವ ಸುಂದರ ಕ್ಷಣಗಳ ಕಾರಣವಾದರೆ ಅದನ್ನು ಸುಮ್ಮನೆ ಹೋಗಲು ಬಿಡಲಾಗದು. ಆಕೆ ನಮಗೋಸ್ಕರ ಎಲ್ಲವನ್ನು ಬಿಟ್ಟುಬರಲು ರೆಡಿ ಇರುವಾಗ ಆಕೆಗೋಸ್ಕರ ಸ್ವಲ್ಪ ತ್ಯಾಗ ಸಹ್ಯ ತಾನೆ?
ಪ್ರೀತೀನು(love) ಬೇಕು. ಸ್ನೇಹಾನು (friends) ಬೇಕು. ಪ್ರೀತೀನ ಸ್ನೇಹಕ್ಕು, ಸ್ನೇಹಾನ ಪ್ರೀತಿಗೂ ತಿಳಿಹೇಳಿದರೆ ಎಲ್ಲಕ್ಕು ಶಾಶ್ವತ ಪರಿಹಾರ. ಎನಂತೀರಿ?

ಪ್ರೀತಿಗೆ ಅಂದಿದ್ದು...

ಈ ವಿರಹ ಕಹಿಯಾಗಿದೆ ನೀನಿರದೆ
ನಿನ್ನ ನೆನಪೆ ನನ್ನ ಕಾಡಿದೆ
ಎದೆಯೊಳಗೆ ಮಾತಿರದ ಪದವೊಂದು ಮೂಡಿದೆ!!!

ಸ್ನೇಹಕ್ಕೆ ಅಂದಿದ್ದು...

ಆ ದಿನವು ನೆನಪಾಗಿದೆ ನಿನ್ನಿಂದ
ಕ್ಷಣ ಕ್ಷಣವು ನೆನಪಾಗಿ
ನೆರಳಂತೆ ಜೊತೆಯಲ್ಲಿ ಬಂದಿದೆ

Thursday, August 7, 2008

myPOD:"ಇದು ಬರಿಯ ಹನಿಯಲ್ಲವೊ ಅಣ್ಣಾ!"

ಮಡಚಿಡುವ ದಿನಪತ್ರಿಕೆಗಳಲಿ ಕಳೆದು ಹೋದ ದಿನಗಳ ಚಿಂತೆ
ಕಂಡಿರುವ ಕನಸುಗಳು ಎಲ್ಲಿ ಮರೆಯಾಗುವವೋ ಎಂಬ ಚಿಂತೆ
ಎಲೆಗಳಲ್ಲಿ ಮೂಡಿರುವ ಹನಿಗಳು ಕಣ್ಣೀರೋ ಎಂಬ ಚಿಂತೆ
ಆನಂದ ಬಾಷ್ಪವಾದೊಡೆ ಬಿದ್ದುಬಿಡುವವೋ ಎಂಬ ಚಿಂತೆ!

Wednesday, August 6, 2008

myKavana:"ನೀ ಬರಲೂ"

ನೀ ಬರಲೂ
ಮನ ಹಾರಲೂ
ಜಗವೆಲ್ಲಾ ಮಂಕಾಗಿದೆ..
ನೀ ಬರಲೂ
ಮನ ಹಾರಲೂ
ಜಗವೆಲ್ಲಾ ಮಂಕಾಗಿದೆ..

ನೀನು ಬಂದು ಇಲ್ಲಿ ಪ್ರೀತಿ ತಂದೆ
ಮತ್ತೆ ಇರಲು ರಾತ್ರಿ ಹಗಲೂ
ಈ ಕಣ್ಣೆರಡು ಬೇರೇನನು ಕಾಣದಷ್ಟು ಪೂರ್ತಿ ಮಂಕೆ..

ಚಂದಿರ ನಿನ್ನ ನೋಡಲೆಂದು ಬಂದೇಬರುತಾನೆ...
ಅವನಲ್ಲಿ ನಾಚಿ ಮೋಡಗಳೆಡೆಯಲಿ ಮರೆಯಾಗಿರುತಾನೆ
ಇಷ್ಟು ನಗು ಬೇರೆಲ್ಲು ಇಲ್ಲ
ಈ ಕಣ್ಣೆರಡು ಬೇರೇನನು ಕಾಣದಷ್ಟು ಪೂರ್ತಿ ಮಂಕೆ..


ನಾ ನೀ ಅಳಿದರು ಪ್ರೀತಿಯು ಇಲ್ಲಿ ಸಾಯುವುದಿಲ್ಲ
ಪ್ರೀತಿಸುವ ಈ ಮನಗಳು ಎರಡೂ ಮರೆಯಾಗುವುದಿಲ್ಲ
ಇಷ್ಟು ಕುಷಿ ಬೇರೆಲ್ಲು ಇಲ್ಲ
ಈ ಕಣ್ಣೆರಡು ಬೇರೇನನು ಕಾಣದಷ್ಟು ಪೂರ್ತಿ ಮಂಕೆ..

Monday, August 4, 2008

myKavana:"ನಿನ್ನ ವಿನಹ ಇದು ಎಂತ ಬದುಕಾ?"

ನನ್ನ ದಿನದಲ್ಲಿ ನೀ ಬಂದು
ಎಂದೆಂದು ಹೋಗದಿರು
ನನ್ನ ಬದುಕಲ್ಲಿ ನೀ ಎಂದು
ಹೂವಾಗಿ ಬಾಡದಿರು..!!!

ನಿನ್ನ ವಿನಹ ಇದು ಎಂತ ಬದುಕಾ?
ನೀನಿಲ್ಲದಿರೆ ಈ ಬದುಕು ಬೇಕಾ?
ನೀನಿರದೆ ಏನೇನು ಇಲ್ಲ
ನೀನಿಲ್ಲದಿರೆ ಹೇಗೆ ಇಲ್ಲಿ!

ಬಾರೆ ಎದ್ದು ಇಂದು
ಈ ಹ್ರುದಯಾ ಕರೆಯುತಿಹುದು
ಬಾರೆ ಎದ್ದು ಇಂದು
ಈ ಹ್ರುದಯ ಕರೆಯುತಿಹುದು..

ಪ್ರತಿ ಸಂಜೆ ರವಿ ಮುಳುಗುತಿರಲು
ನಿನ್ನ ನೆನಪು ನನ್ನ ಕಾಡುತಿರಲು
ಮನದಲ್ಲಿ ಏಕಾಂತ ತರಲು
ಬಾರೆ ಎದ್ದು ಇಂದು
ಈ ಹ್ರುದಯ ಕರೆಯುತಿಹುದು..

ಏನೆಲ್ಲ ನಾನಂದುಕೊಂಡೆ
ಏನ್ನೆಲ್ಲ ಕನಸನ್ನು ಹೆಣೆದೆ
ಏನೆಲ್ಲ ಬೇಕಾಯ್ತು ಎದೆಗೆ
ಎದೆಯಲ್ಲಿ ನದಿಯೊಂದು ಹರಿದು
ನನ್ನನು ಮುಳುಗಿಸಿದೆ ಇಂದು
ಬಾರೆ ಎದ್ದು ಇಂದು
ಈ ಹ್ರುದಯ ಕರೆಯುತಿಹುದು..

ನಿನ್ನ ವಿನಹ ಇದು ಎಂತ ಬದುಕಾ?
ನೀನಿಲ್ಲದಿರೆ ಈ ಬದುಕು ಬೇಕಾ?
ಬಾರೆ ಎದ್ದು ಇಂದು
ಈ ಹ್ರುದಯ ಕರೆಯುತಿಹುದು..
ಬಾರೆ ಎದ್ದು ಇಂದು
ಈ ಹ್ರುದಯ ಕರೆಯುತಿಹುದು..

Saturday, August 2, 2008

myPOD:"Agumbe and Perdur Snaps"

ಕರುಣಾಳು ಬಾ ಬೆಳಕೆ ಮಸುಕಿದೆ ಮಬ್ಬಿನಲಿ ಕೈಹಿಡಿದು ನಡೆಸೆನ್ನನು


ಕರುಣಾಳು ಬಾ ಬೆಳಕೆ ಮಸುಕಿದೆ ಮಬ್ಬಿನಲಿ ಕೈಹಿಡಿದು ನಡೆಸೆನ್ನನು


ಜೀವನವೂ ಒಂತಾರಾ ರಸ್ತೆನೇ.. ಎಷ್ಟೋ ತಿರುವು, ಎಷ್ಟೋ ಏಳು, ಎಷ್ಟೋ ಬೀಳು


ಕಾಡಿನೊಳಗಣ ನಾಡು


ಇಬ್ಬನಿಯಲಿ ಮಿಂದಿದೆ


ಮೈಕೊಡವಿ ನಿಂತಿದೆ


ಹೂ ಬಿರಿದು ಅರಳಿದೆ


ಹಾದಿ ಬಾ ಎಂದು ಕರೆದಿದೆ


ದೇವರಿಗೂ ಮೊಬೈಲ್ ಟವರ್?