Saturday, August 23, 2008

myHarate:"ಪಟ್ಟದ ಆನೆ ಸುಭದ್ರೆ ಅಂದಿದ್ದು"

ಕೃಷ್ಣ ಮಠದ ಪಟ್ಟದ ಆನೆ ಸುಭದ್ರೆ ಅಂದಿದ್ದು:
ರಾಜಾಂಗಣದ ಪಕ್ಕದಲ್ಲಿ ನನ್ನ ಮನೆ. ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಚಾಚೂ ತಪ್ಪದೆ ಆಲಿಸುವ ಭಾಗ್ಯ ನನ್ನ ಪಾಲಿಂದು. ಎಷ್ಟೊ ಜನ ವಿದ್ವಾಂಸರು, ವಿದ್ವಾನುಗಳು, ಕಲಾಮಣಿಗಳು ರಾಜಾಂಗಣದಲ್ಲಿ ಕಾರ್ಯಕ್ರಮಕೊಡುತ್ತಲೇ ಇರುತ್ತಾರೆ. ಇವೆಲ್ಲವನ್ನು ಕಣ್ಣಾರೆ ಕಾಣಲು ನಾನು ತುಂಬಾ ಅದೃಷ್ಟಮಾಡಿರಬೇಕು. ಇಲ್ಲಿ ಸರ್ವ ಕಲಾವಲ್ಲಭರು ಬರುತ್ತಾರೆ, ಹಾಡುತ್ತಾರೆ, ನಾಚುತ್ತಾರೆ, ನುಡಿಸುತ್ತಾರೆ. ಇಲ್ಲಿಗೆ ಬರುವ ಪ್ರೇಕ್ಷಕರು ಬರಿಗೈಯಲ್ಲಿ ಬಂದು ಮನತುಂಬ ಕುಷಿಪಟ್ಟು ಹಾಗೆ ಹೋಗಬಹುದು. ದೊಡ್ಡ ಪ್ರಾಂಗಣ.. ಸಾವಿರಗಟ್ಟಲೆ ಜನ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಸುವ್ಯವಸ್ತೆ.

ಮೊನ್ನೆ ಬಂದ ಗೋಡ್ಕಿಂಡಿಯವರು ಮಿಶ್ರ ಪಹಾಡಿ ರಾಗದಲ್ಲಿ ಬೆಟ್ಟ ಗುಡ್ಡದ ಮೇಲಿನ ವಾತಾವರಣವನ್ನು ಸೃಷ್ಟಿಸಿರೆ ಎಲ್ಲೊ ಗತಕಾಲದ ವೈಭವ ನಂಗೆ ಮತ್ತೆ ಬಂದಂತಾಯಿತು. ನನ್ನ ಹುಟ್ಟೂರಲ್ಲಿ ಇದ್ದ ಸೀತಾನದಿ, ಅದನ್ನು ಸೇರುವ ಕಿರುತೊರೆಗಳಲ್ಲಿನ ನಮ್ಮ ಜಳಕ, ಅಲ್ಲಿ ಬೀಸೋ ಗಾಳಿ, ಬೆಳಗಾತ ಕೇಳುತ್ತಿದ್ದ ಕೋಗಿಲೆಯ ಇನಿದನಿ, ಅದಕ್ಕೆ ಬೆಟ್ಟದಲ್ಲಿನ ಪ್ರತಿದ್ವನಿ ಕೇಳುತ್ತಿರೆ ನಾನು ಮತ್ತೆ ಸ್ವತಂತ್ರಳಾಗಿ ಬೆಟ್ಟ ಗುಡ್ಡದಲ್ಲಿ ವಿಹರಿಸಿದ ಸಂಭ್ರಮ. ಇಂತಹ ದಿನಗಳು ನನಗೆ ಸಿಗುವುದು ಬಹಳ ಅಪರೂಪ. ದಿನಾ ರಥದ ಎದುರು ಹೊಗಿ ಕಿವಿ ಹೊಟ್ಟುವ ಸಿಡಿಮದ್ದುಗಳೆದುರು ಕೂರಬೇಕಾದ ವ್ಯಥೆ ನನ್ನದು. ಹೀಗಿರಲು ಈ ಅಸ್ತಾನ ವಿದ್ವಾನ್ ಗೋಡ್ಕಿಂಡಿ ನನ್ನ ಪಾಲಿಗೆ ಮರೆಯಾಗದ ನೆನಪುಗಳನ್ನ ತಂದು ಅಷ್ಟಮಿಯ ಹಬ್ಬದ ವಾತಾವರಣ ನನ್ನಲ್ಲು ಬರುವಂತೆ ಮಾಡಿದ.

ಯಾರು ಬರಲಿ ಬಾರದಿರಲಿ ನಾನಂತು ಕಲಾಪ್ರೊತ್ಸಾಹಕನಾಗಿ ಪ್ರತಿನಿತ್ಯ ಗೋಡೆತರ ನಿಂತು ಕ್ರಾಯಕ್ರಮ ಆಸ್ವಾದಿಸಿ ಎಲ್ಲರ ಬೆನ್ನು ತಟ್ಟುತ್ತೇನೆ. ಹೀಗೆಮಾಡುವುದರಲ್ಲಿ ನಾನು ತುಂಬಾ ಸಂತಸ ಕಾಣುತ್ತೇನೆ. ನನ್ನ ಈ ನಿಂತ ನೀರಿನಂತಹ, ನಿಂತಲ್ಲೆ ಅನುಭವಿಸಬೇಕಾದಂತಹ, ಕೃತಕ ಬದುಕು ಇದರಿಂದ ಸಾರ್ತವಾಗುತ್ತೆ ಅಂತ ತಿಳಿದುಕೊಳ್ಳುತ್ತೇನೆ.

No comments: