Thursday, June 19, 2008

myHarate:"ಹೀಗೊಂದು ನೆನಪು"

ನನಗೆ 'ಸಲೂನ'ಲ್ಲಿ ಕುಳಿತುಕೊಳ್ಳುವ ಸಮಯ ಬಂದಾಗ ತುಂಬ ಭಯವಾಗುತ್ತೆ! ಸಣ್ಣದಿರಿಂದಲೂ ಅದೆ, ಅಪ್ಪ ಕಷ್ಟಪಟ್ಟು ನನ್ನ ಕರಕೊಂಡು ಹೋಗಿ ಎತ್ತರದ ಸಲೂನ್ ಕುರ್ಚಿಯಲ್ಲಿ ಕುಳ್ಳಿರಿಸುತ್ತಿದ್ದರು. ಸುತ್ತಮುತ್ತ ಸಹಸ್ರಾರು ನನ್ನ ಪ್ರತಿಬಿಂಬ ಕಾಣುವಾಗ ಏನೋ ಗೋಜಲು ಗೋಜಲು, ಮುಜುಗರ. 3-4 ತರಗತಿಯವರೆಗೆ ಕಣ್ಣೀರಿಡುತ್ತಿದ್ದೆ.ಮತ್ತೆ ಅಭ್ಯಾಸವಾಯಿತು. ಕಡಿಮೆ ವೆಚ್ಚದಲ್ಲಿ ತಲೆ ಕತ್ತರಿಸೋ (ಕ್ಷಮಿಸಿ, ತಲೆಗೂದಲು ಕತ್ತರಿಸೋ) 'ಒತ್ತೆಕಣ್ಣ' ಕ್ಷೌರಿಕನಲ್ಲಿ ನಾನು ಹೋಗುತ್ತಿದ್ದೆ. ಅವನಿಗೆ ಒಂದೇ ಕಣ್ಣು ಕಾಣುತ್ತಿದ್ದ ಕಾರಣವೋ ಏನೊ, ಸ್ವಲ್ಪ ದುಡ್ಡು ಕಡಿಮೆ ಅಲ್ಲಿ. ಅಮ್ಮ 'ಇಲಿ' ತಿಂದಂತೆ ತಲೆಗೂದಲು ತೆಗೆಯುವ ಬದಲು ಒಂದೇ ಕಣ್ಣಲ್ಲಿ ತೆಗೆಯುವ ಒತ್ತೆಕಣ್ಣ ಕ್ಷೌರಿಕನ ಕ್ಷೌರ ಎಷ್ಟೊ ವಾಸಿ.

ಕತ್ತರಿ ಕುತ್ತಿಗೆ ಹತ್ತಿರ ತರುವಾಗ ಕಿಟಾರನೆ ಕಿರಿಚಬೇಕೆನಿಸುತ್ತೆ! ನಮ್ಮ ಕೈಯನ್ನ ಬಟ್ಟೆಯೊಳಗೆ ಸುತ್ತಿ ಏನೂ ಮಾಡದಂತೆ ಮಾಡಿ ಕೆಲಸ ಆರಂಬಿಸುತ್ತಾನೆ. 'ಬಾಳ'ಲ್ಲಿ ಬ್ಲೇಡ್ ಸಿಕ್ಕಿಸಿದಾಗ ರಾಮ ರಾಮ ಅಂತ ಜಪ ಪ್ರಾರಂಭವಾಗುತ್ತೆ. ಕೊನೆಗೊಮ್ಮೆ ಬಟ್ಟೆ ಕುತ್ತಿಗೆಯಿಂದ ಬಿಡಿಸುವಾಗ ಹೋದಜೀವ ಮರಳಿಬಂದಂತೆಯೋ, ಅಲ್ಲ ಪುನರ್ಜನ್ಮ ಬಂದಂತೆಯೋ ನಗುತ್ತ ಬರುತ್ತೇನೆ.

ಇಂದು ಸಂಜೆ posh AC ಇರುವ ಕ್ಷೌರದಂಗಡಿಯಲ್ಲಿ 30 ರೂಪಾಯಿ ಪೋಕಳೆದು, ಕ್ಷೌರ ಕುರ್ಚಿಯಲ್ಲಿ ಕುಳಿತಿರಲು ಒತ್ತೆಕಣ್ಣ ಕ್ಷೌರಿಕ ನೆನಪಾದ. FM- Radio ಮಿರ್ಚಿಯಲ್ಲಿ ಗುರುಕಿರಣರ "ಕೊಲ್ಲೇ ನನ್ನನ್ನು, ನೀ ಕೊಲ್ಲೇ ನನ್ನನ್ನು..." ಎಂಬ ಅರಮನೆ ಪದ್ಯ ಬರುವುದಕ್ಕೂ, ಕತ್ತರಿ ಕುತ್ತಿಗೆ ತಲಪುವುದು ಸರಿ ಹೋಯಿತು. ರಾಮ ರಾಮ ಎಂದು ಮನನ ಮಾಡಿ "ಕೊಲ್ಲೇ..." ಪದ್ಯ enjoy ಮಾಡಿದೆ!

How sweet the day is with the past memories!

Sunday, June 15, 2008

myHarate:"ಏನಂತೀರಿ?"

ಗಾಂಧೀಜಿ ಎನೋ ಹೀಗಂದರಂತೆ - ಪ್ರತೀ ಹಳ್ಳಿಯೂ ಒಂದು ಸಣ್ಣ ಭಾರತ, ಪ್ರತೀ ಗ್ರಾಮವನ್ನು ಉದ್ಧಾರ ಮಾಡೋಣ. ಆಗ ದೇಶ ಉದ್ಧಾರ ಆಗುತ್ತೆ ಅಂತ. ನಿಜ ಅರಿವು ಏನು ಎಂದರೆ, ಪ್ರತೀ ಮನೆಯು ಒಂದು ಸಣ್ಣ ಭಾರತ, ಮನೆ ಮನೆಯೂ ಉದ್ಧಾರ ಆದರೆ ದೇಶ ಉದ್ಧಾರ ಆದಂತೆಯೆ!

ಮನೆ ಮನೆಯಲು ನಿಮ್ಮದೇ ಸರ್ಕಾರ! ಕೆಲವೊಮ್ಮೆ ಬಹು ಸಚಿವ ಸ್ಥಾನವನ್ನು ಒಬ್ಬರೆ ತುಂಬ ಬೇಕಾಗಬಹುದು. ಪಂಚವಾರ್ಷಿಕ ಯೋಜನೆ, ವಾರ್ಷಿಕ ಬಜೆಟ್ ಮಂಡನೆ ಎಲ್ಲ ಇದ್ದೆ ಇರುತ್ತದೆ. ಬ್ಯಾಂಕ್ ವಹಿವಾಟು, ಸಾಲ ವಿಲೇವಾರಿ ಇದ್ದೆ ಇರುತ್ತದೆ! ಮನೆ ತುಂಬ ಪಕ್ಷಗಳಿದ್ದರೆ ಮನೆಯಲ್ಲು ಕುರ್ಚಿಗೆ ಗುದ್ದಾಟ ಇರುತ್ತದೆ! ಅಂದಹಾಗೆ, ಪ್ರತೀ ಮನೆ ಮುಂದುವರಿದರೆ ಭಾರತ ಮುಂದುವರಿದಂತೆ ಅಲ್ಲವೆ!

ಉಡುಪಿಯ ಸಮಸ್ಯೆ ಪರಿಹರಿಸಲು ಶಾಸಕರಾದ ರಘುಪತಿ ಭಟ್ ಅವರ ಮನೆಯಲ್ಲೆ ಸಮಸ್ಯೆ ಇತ್ತು ಎಂದು ತಿಳಿದು ಇದೆಲ್ಲ ನೆನಪಾಯ್ತು!

ನಮ್ಮ ಮನೆಯಲ್ಲಿ ನಿಮ್ಮೆಲ್ಲರಂತೆಯೆ ನಾನು ಒಂದು ಪ್ರಮುಖ ಸಚಿವ ಸ್ಥಾನ ತುಂಬಿದ್ದೇನೆ, ಸದ್ಯಕ್ಕೆ ಅದನ್ನ ಸರಿಯಾಗಿ ಕೆಲಸದ ಜತೆ ನಿರ್ವಹಿಸುತ್ತೇನೆ, ಮನೆ-ಮನೆಯಲ್ಲಿ ಮನ ಬೆಳಗಿದರೆ ಮುಂದೊಂದು ದಿನ ಭಾರತ ಬೆಳಗದಿರದು. ಏನಂತೀರಿ?

myKavana:"ಅಲ್ಲವೇ?"

ನಾಳೆ ಯಾರು ಬಲ್ಲರು?
ನಿನ್ನೆಯೆಂದೂ ಮರಳದು
ಇಂದು ಹೀಗೆ ಮುಗಿವುದು
ನೆನೆದು ನಿನ್ನೆ ನಾಳೆಯ!

'ನಿನ್ನೆ' ಕೊಟ್ಟಿಹ ಅರಿವು
'ಇಂದ' 'ತಿಳಿ'ಯುವ ಛಲವು
'ನಾಳೆ' ಎಂಬುದ ಮರೆತು
ಬದುಕುವುದು ಒಳಿತು!

Wednesday, June 11, 2008

ಹೀಗೇ ಸುಮ್ಮನೆ..

ನಾನು ಮತ್ತು ಪ್ರೀತಿ...

ಹನಿ ಹನಿ ಪ್ರೇಮ ಕಥನ...
ದೇಹವೆರಡು ಒಂದೇ ಚೇತನ...
ಎರಡು ಹ್ರುದಯಗಳ ಸುಮಧುರ ಪಯಣ...
ರೆಕ್ಕೆ ಬಿಚ್ಚಿ ಹಾರೋ ಪ್ರೀತಿ.. ಹಕ್ಕೀನಾ?
ಹಮ್.. ಇದೆಲ್ಲ ಅಲ್ಲವೆ ಪ್ರಕೃತಿ ನಿಯಮ!
ಅಂದಹಾಗೆ ... ನನ್ನ ಪ್ರೀತಿಗೆ, ಅದರ ರೀತಿಗೆ, ಈ ಬ್ಲಾಗ್ ಪದಗಳೆ ಸಾಕ್ಷಿಯೆ?!!!

Thursday, June 5, 2008

For Your Info!

My 1 Year M.S. exam's are going on. MS is part time study work and main work of Software Development also on my head. So do not expect many new posts till July 3rd!!!!

Blogging hobby departing till July 3rd:-(

Keep visiting, and have a pleasant stay here!!!