Wednesday, January 25, 2012

myPod:"ಕಿಸ್ಕಾರ"

Friday, January 13, 2012

myKavana:"ಸಂಕ್ರಾತಿ"

ಕಹಿಯನು ನುಂಗಿ ಸಿಹಿಯನು ಜಗಿದು
ತಿನ್ನಲು ಕಲಿಯಲು ನೋವೆಲ್ಲಿಹುದು!
ಹರುಷದಿ ಹಂಚು ನಿನ್ನಯ ಗಂಟು
ಇದರಲಿ ಬಾಳುವೆ ಸಾರ್ಥಕ ಉಂಟು!

ನನಗೂ ನಿನಗೂ ಒಂದೇ ಮಾತು
ಸಾಧನೆ ಇರದ ಬದುಕದು ಭ್ರಾಂತು
ಸ್ವರ್ಗದಿ ಮನೆಯನು ಮಾಡಿರು ಇಲ್ಲ
ಬಾಳಲಿ ತಪ್ಪದು ಬೇವು-ಬೆಲ್ಲ

ಸಂಕ್ರಾತಿಯ ಶುಭಾಶಯಗಳು.

Sunday, December 25, 2011

myKavana:"ಪ್ರೀತಿ"

ಪ್ರೀತಿಯೆಂದರೇನೇ ಗೆಳತಿ
ನಿನ್ನ ಮೊದಲ ಭೇಟಿಯಾ?
ನಿನ್ನ ನೋಡಿ ನನ್ನದೆಂದು
ಅನಿಸಿಕೊಂಡ ರೀತಿಯಾ!

ಪ್ರೀತಿಯೆಂದರೇನು ಗೆಳತಿ
ಮಿನುಗುತಾರೆ ಚಂದ್ರರಾ?
ಇಲ್ಲವಾಗಿ ಮರೆವಮುನ್ನ
ಬರುವಂತ ಕಾತುರಾ!

ಪ್ರೀತಿಯೆಂದರೇನು ಗೆಳತಿ
ದುಗುಡ ಮಿಂಚು ಮೋಡವಾ?
ಮಳೆಯ ಹನಿಯು ಇಳೆಯ ತಬ್ಬಿ
ತಂಪಾಗುವ ಹಾಗೆಯಾ?

ಪ್ರೀತಿಯೆಂದರೇನು ಗೆಳತಿ
ನನ್ನ ನಿನ್ನ ಮನಗಳೇ?
ಭೋರ್ಗರೆಯುತ ದಿನವೂ ಬಿಡದೆ
ಅಪ್ಪಿಬಿಡುವ ತೆರೆಗಳೇ!

Saturday, December 17, 2011