ಕಳೆದು ಹೋದ ದಿನಗಳೆಂದೂ ಮತ್ತೆ ಮರಳವು
ನಿನ್ನ ಪಯಣ ಬೇರೆ ಕಡೆಗೆ, ನಮಗೆ ದಿಕ್ಕು ಕಾಣವು
ಮಾಡಲಾರೆ ನಿನಗೆಮುಂದೆ ನಾವೇನೂ ಸಹಾಯ
ಹೆತ್ತು ಹೊತ್ತು ಸಾಕಿ ಸಲಹಿದ ಜೀವಕಿದೋ ವಿದಾಯ…
ನೀನು ಮಗಳು, ಮಡದಿ, ಅಮ್ಮ, ಅತ್ತೆಯಾಗಿಯೂ,
ಮೊಮ್ಮಕ್ಕಳ ಜೊತೆಗೆ ಆಡಿ ಅಜ್ಜಿಯಾದೆಯೋ?
ಮರಳಿ ಬಂದ ಅಲೆಯು ನಿನ್ನ ಕೊಂಡುಹೋಯಿತು
ಅಕ್ಷರಗಳು ಬೀಳದೀಗ ತೆರೆಯು ಅಳಿಸಿತು...
ಮಾತೆ ಹೃದಯ ಮಾತನಳಿಸಿ ಕಲ್ಲಾಯಿತೇ
ನಿನ್ನ ನಾಳೆ ನಮ್ಮ ಜೊತೆಗೆ ಸುಳ್ಳಾಯಿತೇ?
ಇರಲಿ ಬಿಡು ಹುಟ್ಟು ಸಾವು ಎಲ್ಲ ನಿಶ್ಚಯ
ನಮಗಿಲ್ಲ ನಿನ್ನ ಮೇಲೆ ಎನೂ ಸಂಶಯ!
ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ!
ನಾವು ಕಳೆದ ಸ್ವರ್ಗವು ನಿನಗೆ ದೊರಕಲಿ!
ನಿನ್ನ ನೆನಪೇ ಶಕ್ತಿಯು, ಅದುವೇ ನಮಗೆ ಸ್ವರ್ಗವು,
ನೆನೆಯಬಲ್ಲೆ ನಿತ್ಯ ಅದನು ಎಂದೂ ಅಮರವು…
Friday, December 4, 2020
Subscribe to:
Post Comments (Atom)
No comments:
Post a Comment