Friday, January 16, 2015

Small Green Bee-Eater


Malabar Trogon - Family | Sullia | 19Dec14







Chestnut-headed bee-eater | Sullia | 22Dec14


Drongo-cuckoo | 28Dec14 | Sullia


ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ - ಕುವೆಂಪು



Grey Wagtail

ಬೆಳಗ್ಗೆ ಎದ್ದು ಪ್ರತಿದಿನ ಮೊದಲು ನಾಲ್ಕು ತೆಂಗಿನಮರ ನೋಡಿದರೆ ಆ ದಿನ ಶುಭಕರವಾಗಿರುತ್ತದೆ ಎಂಬುದು ಹಿರಿಯರ ನುಡಿ. ಆದಕ್ಕೋಸ್ಕರವೇ ಏನೋ, ಮನೆಸುತ್ತ ಸ್ವಲ್ಪ ಜಾಗವಿದ್ದರೂ ಮಲೆನಾಡಲ್ಲಿ ತೆಂಗಿನಗಿಡಗಳು ಗರಿಗೆದರಿ ನಿಂತಿರುತ್ತವೆ. ಪಟ್ಟಣದ ನೆಲಬಿಟ್ಟು ನಿಂತ ಮನೆಗಳಿಗೆ ಇದು ಅಪಾರ್ಥವೆನಿಸಿದರೂ, ಹಳ್ಳಿಗರಿಗಂತೂ ಇದು ಬಹುಬೇಗ ಮನದಟ್ಟಾದೀತು. ಮೊದಮೊದಲು ನನಗೂ ತೆಂಗಿನಮರದಲ್ಲಿ ಬರಿಯ ಮಡಲು, ಒಣಗಿದ ತೆಂಗಿನಕಾಯಿ, ಬೊಂಡಗಳಷ್ಟೇ ಕಾಣುತ್ತಿದ್ದವು, ಇತ್ತೀಚೆಗೆ ಮರವ ತುಸು ದಿಟ್ಟಿಸಿ ಸೂಕ್ಷ್ಮವಾಗಿ ನೋಡುವ ಕಾರಣದಿಂದಲೋ ಎನೋ ಒಮ್ಮೊಮ್ಮೆ ಮರಕುಟಿಗ, ಪಿಂಗಾರದ ಮಧುವನ್ನೂ ಬಿಡದೆ ಹೀರುವ ಸೂರಕ್ಕಿಗಳು, ಮಡಲೊಡಲ ಭಕ್ಷಿಸುವ ಕೀಟಗಳನ್ನು ಹಿಡಿದು ತಿನ್ನುವ ಚಿತ್ರಪಕ್ಷಿಗಳು, ನೊಣಹಿಡುಕಗಳು- ಏನು ಒಂದೇ ಎರಡೇ! ಅಳಿಲಂತೂ ಮರದಿಂದ ಮರಕ್ಕೆ ಜಿಗಿಯುತ್ತಾ, ಕೆಳಗೆ ಬೆಕ್ಕು ಕಂಡರೆ ಚುಕ್-ಚುಕ್ ಅಂತ ಅರಚುವುದು, ಇವೆಲ್ಲಾ ಈಗ ದೈನಂದಿನ ಚಟುವಟಿಕೆಯಾಗಿ ಹೋಗಿದೆ. ಮಲೆನಾಡ ಚಳಿಯಲ್ಲಿ ಒಂದು ಮುಂಜಾನೆ ಹೀಗೆ ಮರವ ದಿಟ್ಟಿಸಿ ನೋಡುತ್ತಾ ಚಾ ಹೀರುತ್ತಿರುವಾಗ, ಒಣಗಿಸಲು ಅಂಗಳದಲ್ಲಿ ಹಾಕಿದ ಅಡಿಕೆಗಳ ಮಧ್ಯೆ ಎನೋ ಬಾಲವನ್ನು ಅಲ್ಲಾಡಿಸುತ್ತಾ ಕುಪ್ಪಳಿಸುತ್ತಾ ಅಡಿಕೆಗಳ ಸೆರೆಯಲ್ಲಿರುವ ಜೇಡದಂತಹ ಕೀಟಗಳನ್ನು ಹಿಡಿದು ತಿನ್ನುವ ಈ ಬೂದು ಸಿಪಿಲೆ ಕಾಣಸಿಕ್ಕಿತು. ಮಲೆನಾಡಿಗೆ ಚಳಿಗಾಲದಲ್ಲಿ ಬರುವ ವಲಸೆ ಹಕ್ಕಿಗಳಲ್ಲಿ ಇವೂ ಒಂದು.
Grey Wagtail | Sullia | 30Dec14



Plum-headed Parakeet

ಆಕಾಶದೆತ್ತರದಲ್ಲೇ ಕಿರಿಚುತ್ತಾ ವೇಗವಾಗಿ ಓಡಾಡುವ ಈ ಕೆಂದೆಲೆ ಗಿಳಿಗಳನ್ನ ಚಿತ್ರಿಸುವುದು ನನ್ನಿಂದ ಬಹಳ ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳುತ್ತಿದ್ದೆ. ಬಹಳಷ್ಟು ಸಲ ಅವುಗಳ ಕೂಗು ಕೇಳಿಸಿದರೂ ಕ್ಯಾಮರ ಹೊರತೆಗೆಯುತ್ತಿರಲಿಲ್ಲ. ಈ ಸಲ ಮಳೆಗೆ ಮುರಿದು ಬಿದ್ದ ಕೆಲವು ಅಡಿಕೆಮರಗಳನ್ನು ಹಾಗೇ ಕಡಿಯದೆ ಬಿಟ್ಟಕಾರಣ ಇವನ್ನೆಲ್ಲ ಹತ್ತಿರದಿಂದ ನೋಡಿ ಚಿತ್ರೀಕರಿಸುವ ಕನಸು ನನಸಾಯಿತು. ಮಕ್ಮಲ್ ನೆತ್ತಿಯ ಮರಗುಬ್ಬಿಗಳು, ಚಿಟ್ಟುಗಿಳಿಗಳು, ಕೆಂದೆಲೆ ಗಿಳಿಗಳು, ಮರಕುಟಿಗಗಳು ಹೀಗೆ ಬಹಳಷ್ಟು ಹಕ್ಕಿಗಳು ಒಣ ಅಡಿಕೆಮರವನ್ನು ಪರೀಕ್ಷಿಸದೆ ಬಿಡವು. ಗೂಡುಕಟ್ಟಲೂ ಇದು ಪ್ರಶಸ್ತ ಕಾಲ ಮತ್ತು ತಾಣವಾದುದರಿಂದ ಇವುಗಳ ಮದ್ಯೆ ತಂಟೆ, ಜಗಳ ಎಲ್ಲ ನೋಡಲು ಸಾಧ್ಯವಾಯಿತು.
Plum-headed Parakeet | Sullia | 21Dec14


Small Green Bee-eater


'ತಾಳಿದವನು ಬಾಳಿಯಾನು' ಎಂಬ ಮಾತು ಅಕ್ಷರಶ: ಸತ್ಯವಾದುದು ಹಕ್ಕಿಗಳ ಛಾಯಾಗ್ರಹಣದಲ್ಲಿ. ತಾಳ್ಮೆಯೊಂದೇ ಇಲ್ಲಿ ನಿಜವಾದ ಮಿತ್ರ ಮತ್ತು ಅದುವೇ ಶೃಂಗಾರ. ಹಕ್ಕಿಗಳೊಂದಿಗೆ ಒಂದಾಗಿ, ಮೌನಿಯಾಗಿ, ಅಂತರ್ಮುಖಿಯಾಗಿ, ಅವರ ಪರಿಸರದಲ್ಲಿ ಬೆರೆತು, ಕಾದು ಕುಳಿತರೆ ಹಕ್ಕಿಗಳನ್ನು ನೈಜರೂಪದಲ್ಲಿ ನೋಡಬಹುದು. ಈ ಪರಿಸರದೊಳು ಒಂದಾಗುವ ಅಂತರ್ಧಾನ ಪ್ರಕ್ರಿಯೆ ಕಡಿಮೆಯೆಂದರೂ 5 ನಿಮಿಷಗಳು ಬೇಕು. ಮತ್ತಿನ ಕ್ಷಣ-ಕ್ಷಣವೂ ಅತ್ಯಧ್ಭುತ! ಈ ಚಿತ್ರ ಅದರ ಫಲ! ಈ ಕಳ್ಳಿಪೀರಗಳು ಯಾವ ದುಂಬಿ, ಚಿಟ್ಟೆಯನ್ನೂ ಬಿಡಲಾರವು. ವಿಶೇಷವೆಂದರೆ, ಇವು ಎಲ್ಲಿಂದ ಹಾರುವುವೋ, ಅಲ್ಲೇ ಬಂದು ಕೂತು ಬೇಟೆಯ ನಿಧಾನವಾಗಿ ತಿನ್ನುವವು. ಯಾವ ವೈರಿಗೂ, ಇವುಗಳ ಕೈಯಲ್ಲಿ ಸಾವು ಬರಬಾರದು. ಕುಕ್ಕಿ ಕುಕ್ಕಿ ನಿಧಾನಕೆ ಕೊಂದು ಗಾಳಿಯಲ್ಲಿ ಒಮ್ಮೆ ತುತ್ತನ್ನು ಹಾರಿಸಿ ನುಂಗುವವು. ಇಲ್ಲಿ ಚಿಟ್ಟೆಯೊಂದನ್ನು ಕೊಲ್ಲುವ ಸನ್ನಿವೇಶದಲ್ಲಿ ಚಿಟ್ಟೆಯ ರೆಕ್ಕೆ ಧೂಳಾಗಿ ಹಾರುವುದನ್ನು ಗಮನಿಸಬಹುದು!
Small 
Green Bee-eater | Santhekatte | 03Jan15


ಕಾಜಾಣ


'ಕಾಜಾಣ'ಗಳು ಪರಾವಲಂಬಿಗಳಲ್ಲ. ಇವು ನಿರುಪದ್ರವಿಯಾಗಿದ್ದು, ಉಳಿದ ನಿರುಪದ್ರವಿ ಹಕ್ಕಿಗಳಿಗೆ ಉಪದ್ರಕೊಡುವ ಇತರೇ ಹಕ್ಕಿಯನ್ನು ಸುಮ್ಮನೆ ನೋಡುತ್ತಾ ಸಹಿಸಲಾರವು. ಹದ್ದಿನಂತಹ ದೊಡ್ಡ ಮತ್ತು ಶಕ್ತಿಯುತವಾದ ಹಕ್ಕಿಗಳನ್ನು ದಿಟ್ಟವಾಗಿ ಓಡಿಸಬಲ್ಲ ಅಸಾಮಾನ್ಯ ಹಕ್ಕಿ ಇದು. ದನ ಹುಲ್ಲುಮೇಯುವಾಗ ಹುಲ್ಲಿನೆಡೆಯಲ್ಲಿ ಸುಲಭವಾಗಿ ಕಂಡುಬರುವ ಮಿಡತೆಯಂತಹ ಕೀಟಗಳನ್ನು ತಿನ್ನುವುದಕ್ಕಾಗಿ ಇಲ್ಲಿ ದನದ ಮೇಲೆ ಕುಳಿತು ಸವಾರಿ ಮಾಡುತ್ತಿದೆ.

Velvet Fronted Nuthatch

ಈ ಬಣ್ಣ-ಬಣ್ಣದ ಪುಟ್ಟ ಹಕ್ಕಿಯನ್ನು ಬಲ್ಲಿರೇನಯ್ಯ? ಗುಬ್ಬಿಗಾತ್ರದ ಈ ಹಕ್ಕಿ ಮರದ ಮೇಲೆಯೇ ಕಂಡುಬರುವುದರಿಂದ ಮರಗುಬ್ಬಿ ಎಂದು ಕರೆಯಲ್ಪಡುವುದೋ ಎನೋ? ಮರಕುಟಿಗಗಳು ಕೇವಲ ಮರ ಏರಬಲ್ಲವಷ್ಟೆ, ಆದರೆ ಈ ಮಕ್ಮಲ್ ನೆತ್ತಿಯ ಮರಗುಬ್ಬಿಗಳು ಮರದ ಮೇಲೂ ಕೆಳಗೂ ಸಾಲೀಸಾಗಿ ಏರಿಳಿದು ಮಾಡಬಲ್ಲವು. ಹುಳ-ಹುಪ್ಪಟೆ, ಜೇಡ ಇದರ ಆಹಾರ, ಹಾಗಾಗಿ ಇವು ಮರಗಳ ಪಾಲಿನ ಡಾಕ್ಟರು ಎಂದರೆ ತಪ್ಪಲ್ಲ!
Velvet Fronted Nuthatch | Sullia | Dec14


ಉಲಿಯಕ್ಕಿ



ಉಲಿಯಕ್ಕಿ ಕೂರಲು ತೆನೆಬಾಗಿತು
ಉಲಿಯುತ್ತಾ ಗಾಳಿಯಲಿ ದ್ವನಿಗೂಡಿತು