Tuesday, June 28, 2011

ಅನುವಾದಿತ ಸಣ್ಣ ಕತೆ: "ಮುಗ್ಧತೆ"

ಒಂದು ಬಾರಿ ಮಗು ಅಮ್ಮನ ಹತ್ತಿರ ಹೊಟ್ಟೆ ನೋವೆಂದು ಅಳುತ್ತಾ ಬಂದಿತು. ಅಮ್ಮ ಮಗುವನ್ನು ಸಮಾಧಾನಿಸುತ್ತಾ 'ನಿನ್ನ ಹೊಟ್ಟೆ ತುಂಬಾ ಖಾಲಿ ಇದೆ, ಚೆನ್ನಾಗಿ ತಿನ್ನು, ಆಗ ಎಲ್ಲ ಸರಿ ಹೋಗುತ್ತದೆ' ಎಂದು ಕಣ್ಣೀರೊರೆಸುತ್ತಾ ಒಪ್ಪಿಸಿಬಿಟ್ಟಳು.

ಮುಂದಿನ ದಿನ ಅಮ್ಮನಿಗೋ ತುಂಬಾ ತಲೆನೋವು. ಅಮ್ಮ ಸಪ್ಪೆಯಾಗಿ ಕುಳಿತಿರಲು ಮಗು ಸಮಾಧಾನಪಡಿಸಲು 'ಅಮ್ಮಾ, ನಿನ್ನ ತಲೆಯೊಳಗೆ ಖಾಲಿ ಇರಬೇಕು' ಅಂದೇಬಿಟ್ಟಿತು!

ಹೀಗೆ ಇನ್ನೊಂದು ಸಲ ಕುತೂಹಲಗೊಂಡು ಮಗು 'ಯಾಕಮ್ಮಾ ನಿನ್ನ ತಲೆಗೂದಲು ಕೆಲವು ಬಿಳಿಯಾಗಿವೆ?' ಎಂದು ಪ್ರಶ್ನಿಸಿತು. ಮಗುವನ್ನು ತಿದ್ದಲು ಇದುವೇ ಒಳ್ಳೆ ಸಂದರ್ಭ ಎಂದು ಅಮ್ಮ 'ಇದೆಲ್ಲ ನಿನ್ನಿಂದಾಗಿಯೆ ನೋಡು, ನಿನ್ನ ಒಂದು ಕೆಟ್ಟ ಕೆಲಸದಿಂದ ನನ್ನ ಒಂದು ಕೂದಲು ಬಿಳಿಯಾಗತೊಡಗುತ್ತದೆ' ಅನ್ನುವಾಗ ಮಗು 'ಒಹ್, ಈಗ ನಂಗೆ ಗೊತ್ತಾಯ್ತು ನನ್ನ ಅಜ್ಜಿ ಕೂದಲು ಯಾಕೆ ಎಲ್ಲ ಬಿಳಿಯಾಗಿವೆ ಅಂತ' ಎನ್ನಬೇಕೆ?

Wednesday, June 15, 2011

myHarate:"ಮುಂದೆಯ ಪೂರ್ವ ಪಶ್ಚಿಮ"

ಬಿದ್ದ ಮಳೆ ನೀರಿಗೆ ಮುಂದೆ ಹರಿಯೋ ತವಕ,
ನದಿ ಸೇರಿ ಸಾಗರದಿ ಒಂದಾಗೋ ತನಕ!
ಗಂಡಿಗೆ ನಿಧಿ ಕೂಡಿ ಆಗುವಾಸೆ ಧನಿಕ!
ಹೆಣ್ಣಿಗೋ ಅದರಿಂದ ತಗೋವಾಸೆ ಕನಕ!

ಹಿಂದಿಕ್ಕುವ ತವಕ ಯಾರಿಗುಂಟು ಯಾರಿಗಿಲ್ಲ? ಮುಂದೆ ಹೋಗುವ ನೆಪದಲ್ಲಿ ಹಿಂದೆ ಹಾಕುವುದು ಅನಿವಾರ್ಯ. ಆದರೆ ಹಿಂದಿನದನ್ನ ಮರೆತರೆ ಮುಂದಿದೆ ದೊಡ್ಡ ಅನಾಹುತ!

ಹೀಗೆ ನೋಡಿದಾಗ, ಮುಂದೆ ಹೋಗುವುದರಲ್ಲಿ ಅದೆಷ್ಟೋ ವಿಷಯಗಳಿವೆ.

ಬಸ್ ಡ್ರೃವರಿಗೆ ಮುಂದೆ ಹೋಗುವ ತವಕ!
ಬಸ್ ಕಂಡಕ್ಟರಿಗೂ ಮುಂದೆ ಹೋಗುವ ತವಕ!

ಡ್ರೃವರಿಗೆ ಮುಂದೆ ಹೋಗುವಾಗ ತಿರುವಿನ ಬಗ್ಗೆ ಎಚ್ಚರಬೇಕು, ಕವಲಿನ ಬಗ್ಗೆ ಮಾಹಿತಿ ಯಾ ಆಯ್ಕೆ ಇರಬೇಕು. ತಪ್ಪಾದರೋ ಬೇರೆಲ್ಲೋ ಹೋದೀತು, ಮರಳಲು ಕಷ್ಟವಾದೀತು. ಜೀವನದಲ್ಲೋ ಮರಳುವ ಪ್ರಶ್ನೇ ಯಾ ಆಯ್ಕೆ ಇಲ್ಲ ಬಿಡಿ. ಮುಂದೆ ಹೋಗುವುದಕ್ಕಿಂತಲೂ ಸುರಕ್ಷತೆ ಮತ್ತು ಸಮಯ ಪಾಲನೆ ಮುಖ್ಯ.

ಕಂಡಕ್ಟರಿಗೋ ಒಟ್ಟು ನೂಕಿ ಮುಂದೆ ಹೋದರಾಯಿತು. ಕೈ ಬಿಟ್ಟರೆ ಬಿದ್ದುಬಿಟ್ಟಾನು. ಮುಂದೆಗೆ ಮಿತಿಯಿದೆ. ಮಿತಿ ಮೀರಿದರೆ ವಿಪರೀತವಾದೀತು. ಡ್ರೃವರಿಗಿಂತ ಮುಂದೆ ಹೋಗಲಾರನು. ಕಡೆಗೆ ಡ್ರೃವರ್ ಹೋದಲ್ಲಿಗೇ ಹೋಗಬೇಕು. ಅವನಿಗೆ ಮುಂದೆ ಹೋಗುವುದಕ್ಕಿಂತಲೂ ಹಣ ಸಂಗ್ರಹ ಮುಖ್ಯ.

ನೀವೂ ಮುಂದೆ ಹೋಗುವಾಗ ಇದೆಲ್ಲಾ ಗಮನಿಸಿದ್ದೀರಾ? ಪ್ರಶ್ನೆ ನನ್ನದು, ಆಯ್ಕೆ/ಉತ್ತರ ನಿಮ್ಮದು!

Thursday, June 2, 2011

myPOD:"ಮುಂಗಾರಿನ ನಿರೀಕ್ಷೆಗಳು"

ಅಟ್ಟಲ್ಲಿ ಕಟ್ಟಿ ಮಡುಗಿದ ಹಪ್ಪಳ, ಸೊನೆ ಉಪ್ಪಿನಕಾಯಿ, ಸಾಂತಾಣಿ, ತೋಟಕ್ಕೋಪಗ ಕೊಳತ್ತು ನಾರುವ ಹಲಸಿನಹಣ್ಣು, ಕೆರೆ ತುಂಬಿ ಹೆರಹೋಪ ಒರತೆಯ ನೀರು, ಮಾಡಿಂದ ದರ-ದರಾನೆ ಧಾರಕಾರವಾಗಿ ಒಂದೇ ಶಬ್ದಲ್ಲಿ ಬೀಳುವ ನೀರು, ಮನೆ ಎದುರೆಲ್ಲ ಜಾರದ್ದಾಂಗೆ ಹಾಕುವ ಅಡಕ್ಕೆಮರದ ಕಾಲ್ಸಂಕ, ಮಡ್ಲು.... ಜೋರು ಮಳೆ ಅಚಾನಕ್ ಆಗಿ ಬಂದರೆ ತೋಟಲ್ಲಿಪ್ಪ ದೊಡ್ಡ ಬಾಳೆಲೆ ಅಡಿಲಿ ನಿಂಬದು, ನೀರು ಮಾಡಿಂದ ಬೀಳುವಗ ಅಪ್ಪ ಗುಳ್ಳೆ, ಅದಲ್ಲಿ ಬಿಡುವ ಕಾಗದದ ದೋಣಿ, ಭೂಮಿ ತಂಪಾದಪ್ಪಗ ಎಳುವ ಹಾತೆಗೊ, ನಕ್ಕುರು, ಇಸ್ಕು, ಚೇರಟೆ, ನೀರ್ಕಡ್ಡಿ ಗೆಡು... ನಡು ಮದ್ಯಾನ್ನಲ್ಲು ಅಪ್ಪ ಕರ್ಗೂಡು ಕಸ್ತಲೆ... ಬೈಕ್-ಲಿ ಹೊಪಗ ಪಚಕ್ಕನೆ ರಟ್ಟುವ ಕೆಸರು... ಹುಮ್... many things to wait and see!