Wednesday, June 15, 2011

myHarate:"ಮುಂದೆಯ ಪೂರ್ವ ಪಶ್ಚಿಮ"

ಬಿದ್ದ ಮಳೆ ನೀರಿಗೆ ಮುಂದೆ ಹರಿಯೋ ತವಕ,
ನದಿ ಸೇರಿ ಸಾಗರದಿ ಒಂದಾಗೋ ತನಕ!
ಗಂಡಿಗೆ ನಿಧಿ ಕೂಡಿ ಆಗುವಾಸೆ ಧನಿಕ!
ಹೆಣ್ಣಿಗೋ ಅದರಿಂದ ತಗೋವಾಸೆ ಕನಕ!

ಹಿಂದಿಕ್ಕುವ ತವಕ ಯಾರಿಗುಂಟು ಯಾರಿಗಿಲ್ಲ? ಮುಂದೆ ಹೋಗುವ ನೆಪದಲ್ಲಿ ಹಿಂದೆ ಹಾಕುವುದು ಅನಿವಾರ್ಯ. ಆದರೆ ಹಿಂದಿನದನ್ನ ಮರೆತರೆ ಮುಂದಿದೆ ದೊಡ್ಡ ಅನಾಹುತ!

ಹೀಗೆ ನೋಡಿದಾಗ, ಮುಂದೆ ಹೋಗುವುದರಲ್ಲಿ ಅದೆಷ್ಟೋ ವಿಷಯಗಳಿವೆ.

ಬಸ್ ಡ್ರೃವರಿಗೆ ಮುಂದೆ ಹೋಗುವ ತವಕ!
ಬಸ್ ಕಂಡಕ್ಟರಿಗೂ ಮುಂದೆ ಹೋಗುವ ತವಕ!

ಡ್ರೃವರಿಗೆ ಮುಂದೆ ಹೋಗುವಾಗ ತಿರುವಿನ ಬಗ್ಗೆ ಎಚ್ಚರಬೇಕು, ಕವಲಿನ ಬಗ್ಗೆ ಮಾಹಿತಿ ಯಾ ಆಯ್ಕೆ ಇರಬೇಕು. ತಪ್ಪಾದರೋ ಬೇರೆಲ್ಲೋ ಹೋದೀತು, ಮರಳಲು ಕಷ್ಟವಾದೀತು. ಜೀವನದಲ್ಲೋ ಮರಳುವ ಪ್ರಶ್ನೇ ಯಾ ಆಯ್ಕೆ ಇಲ್ಲ ಬಿಡಿ. ಮುಂದೆ ಹೋಗುವುದಕ್ಕಿಂತಲೂ ಸುರಕ್ಷತೆ ಮತ್ತು ಸಮಯ ಪಾಲನೆ ಮುಖ್ಯ.

ಕಂಡಕ್ಟರಿಗೋ ಒಟ್ಟು ನೂಕಿ ಮುಂದೆ ಹೋದರಾಯಿತು. ಕೈ ಬಿಟ್ಟರೆ ಬಿದ್ದುಬಿಟ್ಟಾನು. ಮುಂದೆಗೆ ಮಿತಿಯಿದೆ. ಮಿತಿ ಮೀರಿದರೆ ವಿಪರೀತವಾದೀತು. ಡ್ರೃವರಿಗಿಂತ ಮುಂದೆ ಹೋಗಲಾರನು. ಕಡೆಗೆ ಡ್ರೃವರ್ ಹೋದಲ್ಲಿಗೇ ಹೋಗಬೇಕು. ಅವನಿಗೆ ಮುಂದೆ ಹೋಗುವುದಕ್ಕಿಂತಲೂ ಹಣ ಸಂಗ್ರಹ ಮುಖ್ಯ.

ನೀವೂ ಮುಂದೆ ಹೋಗುವಾಗ ಇದೆಲ್ಲಾ ಗಮನಿಸಿದ್ದೀರಾ? ಪ್ರಶ್ನೆ ನನ್ನದು, ಆಯ್ಕೆ/ಉತ್ತರ ನಿಮ್ಮದು!

No comments: