Tuesday, June 28, 2011

ಅನುವಾದಿತ ಸಣ್ಣ ಕತೆ: "ಮುಗ್ಧತೆ"

ಒಂದು ಬಾರಿ ಮಗು ಅಮ್ಮನ ಹತ್ತಿರ ಹೊಟ್ಟೆ ನೋವೆಂದು ಅಳುತ್ತಾ ಬಂದಿತು. ಅಮ್ಮ ಮಗುವನ್ನು ಸಮಾಧಾನಿಸುತ್ತಾ 'ನಿನ್ನ ಹೊಟ್ಟೆ ತುಂಬಾ ಖಾಲಿ ಇದೆ, ಚೆನ್ನಾಗಿ ತಿನ್ನು, ಆಗ ಎಲ್ಲ ಸರಿ ಹೋಗುತ್ತದೆ' ಎಂದು ಕಣ್ಣೀರೊರೆಸುತ್ತಾ ಒಪ್ಪಿಸಿಬಿಟ್ಟಳು.

ಮುಂದಿನ ದಿನ ಅಮ್ಮನಿಗೋ ತುಂಬಾ ತಲೆನೋವು. ಅಮ್ಮ ಸಪ್ಪೆಯಾಗಿ ಕುಳಿತಿರಲು ಮಗು ಸಮಾಧಾನಪಡಿಸಲು 'ಅಮ್ಮಾ, ನಿನ್ನ ತಲೆಯೊಳಗೆ ಖಾಲಿ ಇರಬೇಕು' ಅಂದೇಬಿಟ್ಟಿತು!

ಹೀಗೆ ಇನ್ನೊಂದು ಸಲ ಕುತೂಹಲಗೊಂಡು ಮಗು 'ಯಾಕಮ್ಮಾ ನಿನ್ನ ತಲೆಗೂದಲು ಕೆಲವು ಬಿಳಿಯಾಗಿವೆ?' ಎಂದು ಪ್ರಶ್ನಿಸಿತು. ಮಗುವನ್ನು ತಿದ್ದಲು ಇದುವೇ ಒಳ್ಳೆ ಸಂದರ್ಭ ಎಂದು ಅಮ್ಮ 'ಇದೆಲ್ಲ ನಿನ್ನಿಂದಾಗಿಯೆ ನೋಡು, ನಿನ್ನ ಒಂದು ಕೆಟ್ಟ ಕೆಲಸದಿಂದ ನನ್ನ ಒಂದು ಕೂದಲು ಬಿಳಿಯಾಗತೊಡಗುತ್ತದೆ' ಅನ್ನುವಾಗ ಮಗು 'ಒಹ್, ಈಗ ನಂಗೆ ಗೊತ್ತಾಯ್ತು ನನ್ನ ಅಜ್ಜಿ ಕೂದಲು ಯಾಕೆ ಎಲ್ಲ ಬಿಳಿಯಾಗಿವೆ ಅಂತ' ಎನ್ನಬೇಕೆ?