Sunday, April 26, 2009

myHarate:"ರಾಜಾಂಗಣ ಮತ್ತು ನುಸಿ"

+++++++++++++++++++++++++

ತಾ ತೈ ದಿ ತೈ, ತಾ ತೈ ದಿ ತೈ, ತಾ ತೈ ದಿ ತೈ, ತರಿಕಿಟತೋಂ...
ಗಜವದನಾ ಬೇಡುವೆ, ಗೌರಿ ತನಯಾ...

+++++++++++++++++++++++++

ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮ ಶುರುವಾಗಿತ್ತು. ರಾಜಾಂಗಣ ತುಂಬಾ ದೊಡ್ಡ ಸಭಾಂಗಣ, ಅದಕ್ಕೆ ಅನ್ನೋದು ಉಡುಪಿಗೊಂದೇ ರಾಜಾಂಗಣ!

ಮುಸ್ಸಂಜೆ ವೇಳೆ, ಏನಾದೊರೊಂದು ಸಾಂಸ್ಕೃತಿಕ ಕಾರ್ಯಕ್ರಮ ಇರೋದು ಇಲ್ಲಿಯ ಕ್ರಮ. ಆದರೆ ಈದಿನ ನನಗೊಂದು ವಿಷೇಶ ಕಾದಿತ್ತು. ಅದುವೇ ಪ್ರೇಕ್ಷಕರಿಂದ ನಡೆಸಲ್ಪಟ್ಟ ಪುಕ್ಕಟೆ ನ್ರುತ್ಯ ಮನೋರಂಜನೆ.

ಈದಿನ ಭರತನಾಟ್ಯ ಅಷ್ಟೇನು ಚೆನ್ನಾಗಿಲ್ಲದಿದ್ದರೂ, ಪ್ರೇಕ್ಷಕರು ತಾವೂ ಎನೂ ಕಡಿಮೆ ಇಲ್ಲ ಎಂಬಂತೆ ಕೈ-ಕಾಲು ಅಲ್ಲಡಿಸುತ್ತಾ ಹೆಜ್ಜೆ ಹಾಕುತ್ತಿರುವುದು ಸುತ್ತ ನೆರೆದವರಿಗೆ ಮನೋರಂಜನೆ ನೀಡಿತ್ತು. ಪ್ರತಿಯೊಬ್ಬ ಕುಳಿತ ಪ್ರೇಕ್ಷಕನ ಸುತ್ತ ಹಾರಾಡುತ್ತಿದ್ದ ಹತ್ತಾರು ನುಸಿಗಳ ಪೀಡೆಯನ್ನು ನಿಗ್ರಹಿಸಲು ಈ ಕಾಲು ಮತ್ತು ಕೈ ಕಾರ್ಯ (ಕೈಂಕರ್ಯ!) ಅಂತ ನಾನು ಬೇರೆ ತಿಳಿಸಬೇಕಿಲ್ಲ ತಾನೆ?

ರಾಜಾಂಗಣದ ಪಕ್ಕ ಇರುವ ಊಟದೆಲೆ ಕೊಳೆಯಿಸುವ ಘಟಕ ಇದಕ್ಕೆಲ್ಲ ಮೂಲಕಾರಣ ಎಂಬುದನ್ನು ನೆರೆದ ಪ್ರೆಕ್ಷಕರ ಮೂಗೇ ತಿಳಿ ಹೇಳುತ್ತದೆ.
ಏನೇ ಪ್ರವಚನವಿದ್ದರೂ, ಭಗವದ್-ಗೀತೆಯ ಅರ್ಥವಿವರಣೆ ಇದ್ದರೂ, ನುಸಿಯ ಸುಂಯ್ ಎನ್ನುವ ಸಂಗೀತ, ಅದು ಕಚ್ಚಿದ ನೋವು ಹಾಗೂ ಮೂಗಿಗೆ ಊಟದೆಲೆಯ ವಾಸನೆ ಎಲ್ಲವನ್ನ ತಿಪ್ಪೆ ಮಾಡಿಬಿಡುತ್ತದೆ!

ದೇಶ ವಿದೇಶದ ಪ್ರವಾಸಿಗರ ತಾಣ, ಕಲಾರಸಿಕರ ಮನೆಯಾಗಿರುವ ಉಡುಪಿಯ ರಾಜಾಂಗಣಕ್ಕೆ ಯಾಕಪ್ಪಾ ಈ ಸ್ತಿತಿ?
ಮುಂದೊಂದು ದಿನ ಬರುವ ಪ್ರತಿಯೊಬ್ಬ ಕಲಾರಸಿಕರು ತಮ್ಮ ತಮ್ಮ ಕಾಲಬಳಿ ಸೊಳ್ಳೆ ನಿಗ್ರಹ ಬತ್ತಿಯನ್ನು ಹೊತ್ತಿಸಿ ಕುಳಿತುಕೊಳ್ಳುವ ಸ್ತಿತಿ ಬಾರದಿರಲಿ ಎಂಬುದಷ್ಟೆ ನನ್ನ ಕಾಳಜಿ!

myHarate: "I am back... ನಾ ಮರೆಯೆ ನಿಮ್ಮ, ನೀವು?"

ಏನಿಲ್ಲವೆಂದರೂ 2 ತಿಂಗಳ ಮತ್ತೆ ಸತ್ತು ಬದುಕಿ ಬ್ಲಾಗಿಗೆ ಮರಳಿ ನಿಮ್ಮ ಮುಂದಿದ್ದೇನೆ. ಎದುರಿಂದ ಮಿತಿಮೀರಿದ ವೇಗದಲ್ಲಿ ಬರುತ್ತಿದ್ದ Swift ಕಾರೇ ಇದಕ್ಕೆ ಕಾರಣ ಅಂತ ನನಗೆ ಮತ್ತು ಸತ್ತುಹೋದ ನನ್ನ ಮಾರುತಿ 800 ಕಾರಿಗೆ ಹೊರತುಪಡಿಸಿ ಬೆರ್ಯಾರಿಗೂ ತಿಳಿದಿದೆಯೋ ಇಲ್ಲವೋ! ಅದೇ ಕ್ಷಣದಿಂದ ಎಂದೂ ಉಪಯೋಗವಾಗದ ಸ್ತಿತಿಯಲ್ಲಿ ಕಾರು ಅವಶೇಷವಾಗಿಬಿಟ್ಟಿದೆ!

ನನ್ನ ಬಲ ಮೊಣಕಾಲ ಮುರಿತ ಜೀವನಕ್ಕೆ 6 ವಾರಗಳ ತನಕ ಸಂಪೂರ್ಣ ಬ್ರೇಕ್ ಹಾಕಿದೆ! ಆದರೂ ಯಾರದೋ ತಪ್ಪಿಗೆ ನನಗ್ಯಾಕೆ ಶಿಕ್ಷೆ ಅನ್ನೋ ಗೋಳು ಪ್ರತೀಕ್ಷಣ ನೆನಪಿಗೆ ಬರುತ್ತಿದೆ.

ಕಳೆದ 6 ವಾರಗಳಲ್ಲಿ ಇಡುವ ಪ್ರತೀ ಹೆಜ್ಜೆಯಲ್ಲು ನೋವ ನುಂಗಿದ್ದೇನೆ. ನೋವ ಮುಂದೆ ನಲಿವಿದೆ ಎಂಬ ಸ್ಥೆರ್ಯ ಇಲ್ಲಿವರೆಗೆ ಮುನ್ನಡೆಸಿದೆ. ಮುಂದೆ ಏನು ಅಂತ ಕಾಲು ಹೇಳಬೇಕಿದೆ!

ಒಂದೆರಡು ವಾರದ ಬಳಿಕ ಕಾಲು ಸುಸ್ತಿತಿಗೆ ಮರಳಲಿದೆ ಅಂತ ವೈದ್ಯರು ಭವಿಷ್ಯ ನುಡಿದಿದ್ದಾರೆ.ಕಾಲು ಕೆಟ್ಟರೂ ಬ್ಲಾಗು ಕುಳಿತುಕೊಳ್ಳಬಾರದೆಂದು ಕೈ ಮುಂದೆ ಗೀಚಲಿದೆ.

Friday, April 10, 2009

myMarriage Album



More Snaps @: http://picasaweb.google.com/akshathakr.bhat/MarriagePhotoAlbum3112081132AM#