ನನಗೆ 'ಸಲೂನ'ಲ್ಲಿ ಕುಳಿತುಕೊಳ್ಳುವ ಸಮಯ ಬಂದಾಗ ತುಂಬ ಭಯವಾಗುತ್ತೆ! ಸಣ್ಣದಿರಿಂದಲೂ ಅದೆ, ಅಪ್ಪ ಕಷ್ಟಪಟ್ಟು ನನ್ನ ಕರಕೊಂಡು ಹೋಗಿ ಎತ್ತರದ ಸಲೂನ್ ಕುರ್ಚಿಯಲ್ಲಿ ಕುಳ್ಳಿರಿಸುತ್ತಿದ್ದರು. ಸುತ್ತಮುತ್ತ ಸಹಸ್ರಾರು ನನ್ನ ಪ್ರತಿಬಿಂಬ ಕಾಣುವಾಗ ಏನೋ ಗೋಜಲು ಗೋಜಲು, ಮುಜುಗರ. 3-4 ತರಗತಿಯವರೆಗೆ ಕಣ್ಣೀರಿಡುತ್ತಿದ್ದೆ.ಮತ್ತೆ ಅಭ್ಯಾಸವಾಯಿತು. ಕಡಿಮೆ ವೆಚ್ಚದಲ್ಲಿ ತಲೆ ಕತ್ತರಿಸೋ (ಕ್ಷಮಿಸಿ, ತಲೆಗೂದಲು ಕತ್ತರಿಸೋ) 'ಒತ್ತೆಕಣ್ಣ' ಕ್ಷೌರಿಕನಲ್ಲಿ ನಾನು ಹೋಗುತ್ತಿದ್ದೆ. ಅವನಿಗೆ ಒಂದೇ ಕಣ್ಣು ಕಾಣುತ್ತಿದ್ದ ಕಾರಣವೋ ಏನೊ, ಸ್ವಲ್ಪ ದುಡ್ಡು ಕಡಿಮೆ ಅಲ್ಲಿ. ಅಮ್ಮ 'ಇಲಿ' ತಿಂದಂತೆ ತಲೆಗೂದಲು ತೆಗೆಯುವ ಬದಲು ಒಂದೇ ಕಣ್ಣಲ್ಲಿ ತೆಗೆಯುವ ಒತ್ತೆಕಣ್ಣ ಕ್ಷೌರಿಕನ ಕ್ಷೌರ ಎಷ್ಟೊ ವಾಸಿ.
ಕತ್ತರಿ ಕುತ್ತಿಗೆ ಹತ್ತಿರ ತರುವಾಗ ಕಿಟಾರನೆ ಕಿರಿಚಬೇಕೆನಿಸುತ್ತೆ! ನಮ್ಮ ಕೈಯನ್ನ ಬಟ್ಟೆಯೊಳಗೆ ಸುತ್ತಿ ಏನೂ ಮಾಡದಂತೆ ಮಾಡಿ ಕೆಲಸ ಆರಂಬಿಸುತ್ತಾನೆ. 'ಬಾಳ'ಲ್ಲಿ ಬ್ಲೇಡ್ ಸಿಕ್ಕಿಸಿದಾಗ ರಾಮ ರಾಮ ಅಂತ ಜಪ ಪ್ರಾರಂಭವಾಗುತ್ತೆ. ಕೊನೆಗೊಮ್ಮೆ ಬಟ್ಟೆ ಕುತ್ತಿಗೆಯಿಂದ ಬಿಡಿಸುವಾಗ ಹೋದಜೀವ ಮರಳಿಬಂದಂತೆಯೋ, ಅಲ್ಲ ಪುನರ್ಜನ್ಮ ಬಂದಂತೆಯೋ ನಗುತ್ತ ಬರುತ್ತೇನೆ.
ಇಂದು ಸಂಜೆ posh AC ಇರುವ ಕ್ಷೌರದಂಗಡಿಯಲ್ಲಿ 30 ರೂಪಾಯಿ ಪೋಕಳೆದು, ಕ್ಷೌರ ಕುರ್ಚಿಯಲ್ಲಿ ಕುಳಿತಿರಲು ಒತ್ತೆಕಣ್ಣ ಕ್ಷೌರಿಕ ನೆನಪಾದ. FM- Radio ಮಿರ್ಚಿಯಲ್ಲಿ ಗುರುಕಿರಣರ "ಕೊಲ್ಲೇ ನನ್ನನ್ನು, ನೀ ಕೊಲ್ಲೇ ನನ್ನನ್ನು..." ಎಂಬ ಅರಮನೆ ಪದ್ಯ ಬರುವುದಕ್ಕೂ, ಕತ್ತರಿ ಕುತ್ತಿಗೆ ತಲಪುವುದು ಸರಿ ಹೋಯಿತು. ರಾಮ ರಾಮ ಎಂದು ಮನನ ಮಾಡಿ "ಕೊಲ್ಲೇ..." ಪದ್ಯ enjoy ಮಾಡಿದೆ!
How sweet the day is with the past memories!
Thursday, June 19, 2008
Subscribe to:
Post Comments (Atom)
1 comment:
ಹ್ಹ ಹ್ಹ ಹ್ಹಾ.... ಚೆನ್ನಾಗಿದೆಯಪ್ಪಾ.
ವರ್ಷ ಎಷ್ಟೋ ಅದರೂ ಕೆಲವು ಭಯಗಳು ಬಿಡಲೊಲ್ಲವೆನೋ!
-Sin
Post a Comment