Saturday, August 23, 2008

myHarate:"ಗುಂಡ"

'ಗುಂಡ' ಎಂಬ ಪದಕ್ಕೆ ತುಂಬಾನೆ ಅರ್ತ ಇದೆ ಕಣ್ರೀ. ಹೋಟೆಲಲ್ಲಿ ಗುಂಡಾ ಅಂತ ಕಿರಿಚಿದರೆ ಮಾಣಿಯ ಕೂಗಿದ್ದು ಎಂದು ತಿಳಿದರೆ ನಿಮ್ಮಷ್ಟು ಪೆದ್ದ ಬೇರ್ಯಾರು ಇಲ್ಲ.

ಗುಂಡಾ ಎಂದರೆ ಹಸಿವೆಯು ಪರಿಹಾರ
ಗುಂಡಾ ಎನಬಾರದೆ, ನೀವು ಗುಂಡಾ ಎನಬಾರದೆ!!!

ಹೌದು, ಹಲಸಿನ ಎಲೆಯನ್ನು ಸುತ್ತಲು ಸೇರಿಸಿ ಮಾಡಿದ ಗ್ಲಾಸ್ ನಂತಿರೋ ಇಡ್ಲಿಗೆ ಗುಂಡಾ ಎಂದೂ ಕರೆಯುವರು. 'ಪೆಲಕ್ಕಯಿತ ಇರೆತ್ತ ಅಡ್ಯೆ' ಅಂತ ತುಳುವಲ್ಲಿ ಎನ್ನಬಹುದೋ ಎನೋ!

ಅಜ್ಜಿ ಹೇಳುತ್ತಿದ್ದ ಸುಟ್ಟವು ಮರದ ಕಲ್ಪನೆಯ ಕತೆಯನ್ನು ನೆನಪಿಸುತ್ತಾ ಈ ಗುಂಡನ ಬಗ್ಗೆ ತಿಳಿಯದ ನನ್ನ ಸ್ನೇಹಿತನಿಗೆ ನಾನು ಹೇಳಿದ್ದು ಇಷ್ಟು!

ಉಡುಪಿಯ ಕೃಷ್ಣಮಟದ ಸುತ್ತ ಇರುವ ರಥಬೀದಿಯಲ್ಲಿ ಸಾಕಷ್ಟು 'ಗುಂಡ' ಮರಗಳು ಇರುವುದಾಗಿಯೂ, ಹೋದ ಭಕ್ತರು ಮರದಸುತ್ತ ಸುತ್ತುಬಂದು ಮರವ ಕುಲುಕಿಸಲು ಗುಂಡ ಬೀಳುವುದಾಗಿಯೂ, ಭಕ್ತಾದಿಗಳು ಗುಂಡ ಸಂಗ್ರಹಣೆಗೆ ಮುಗಿಬೀಳುವುದಾಯೂ, ಪಕ್ಕದಲ್ಲೆ ಗೋಚರಿಸುವ ಚಕ್ಕುಲಿಮರದಲ್ಲಿ ಚಕ್ಕುಲಿ ಜಗಮಗಿಸುವುದಾಗಿಯೂ, ಚಕ್ಕುಲಿ ಮರದಲ್ಲಿ ಬಿಲ್ವಪತ್ರೆ ಮರದಂತೆ ದೊಡ್ಡ ದೊಡ್ಡ ಮುಳ್ಳುಗಳಿರುವುದಾಗಿಯೂ, ಚಕ್ಕುಲಿ ಕಾಯಿಯಾಗಿರಲು ತುಂಬಾ krispy ಇರುವುದಾಗಿಯೂ, ಹಣ್ಣಗುತ್ತಲೇ ಮೆತ್ತಗಾಗುವುದಾಗಿಯಿಯೂ 'ರೈಲು' ಬಿಡುತ್ತಿರೆ ಆತನಿಗೆ ನಿಜದ ಅರಿವಾಗಿ good narration dude ಎಂದಷ್ಟೆ ಹೇಳಿದಾಗ ನಾವಿಬ್ಬರು ಗಟ್ಟಿ ನಕ್ಕೆವು!!! ಅಜ್ಜಿಯ ಸುಟ್ಟವಿನ ಕತೆಗೆ ನಿದ್ದೆಬರುತ್ತಿದ್ದರೆ, ನನ್ನ ಗುಂಡಾ ಕತೆಗೆ ನಗುವಾದರು ಬಂತಲ್ಲಾ ಅಂದು ನನ್ನ ಕಲ್ಪನೆಗೆ ದನ್ಯವಾದ ತಿಳಿಸಿದೆ!

No comments: