Thursday, April 3, 2008
myReview:"ಜೊಧಾ-ಅಕ್ಬರ್ "
ಜೊಧಾ ಭಾಯಿ ಮತ್ತು ಶೇನ್ ಶಾ ಅವರ ಕಥೆಯುಳ್ಳ ಜೊಧಾ-ಅಕ್ಬರ್ ಸಿನೇಮ ನಿನ್ನೆಯಸ್ಟೆ ನೋಡಿದೆ. ಭರ್ಜರಿ 3.15 ಗಂಟೆ ನಿಮ್ಮ ಜೀವನದಿಂದ ನುಂಗಿಬಿಡುವ ಈ ಸಿನೇಮ ಅದ್ಬುತವಾಗಿ ರಚಿಸಲ್ಪಟ್ಟಿದೆ. ಎಲ್ಲು ಆಧುನಿಕ ಲೋಕ ತೋರ್ಪಡುವುದಿಲ್ಲ. ಹ್ರಿತಿಕ್ ಸಾಹಸ ಮತ್ತು ಮುಖಚರ್ಯೆ ಅಕ್ಬರನ ಪಾತ್ರಕ್ಕೆ ಅದ್ಬುತ. ಅಮಿತಾಬ್ ವಾಕ್ಚರ್ಯೆ ಹ್ರುತಿಕ್-ಗೆ ಇರಬೇಕಿತ್ತು. ಯುದ್ದಭೂಮಿ ಸನ್ನಿವೇಶ ನಿಜಕ್ಕು ರೋಮಾಂಚಕಾರಿ! ಐಶ್ವರ್ಯ ಅಲ್ಲದೆ ಬೇರೆ ಯಾರು ತಾನೆ ಜೊಧಾ ಆಗಬಲ್ಲರು? ಎ. ಆರ್. ರೆಹ್ಮಾನ್ ಯಾಕೆ ಉಳಿದವರಿಗಿಂತ ಬಿನ್ನ ಎಂದು ಸಿನೇಮ ನೊಡಿದವರಿಗೆ ತಿಳಿಯುತ್ತೆ. ಒಂದೆ ಒಂದು ಕಿಸ್/ಬೆಡ್-ರೂಮ್ ಸೀನ್ ಇಲ್ಲದೆ ಮೂವಿ ಮುಗಿಯುತ್ತದೆ ಮತ್ತು ಆ ಸಿನೇಮ ದಾಖಲೆ ಬರೆಯುತ್ತದೆ. ಯಾಕೆಂದರೆ ಅದು ಲಗಾನ್ ನಿರ್ದೇಶಕ ಆಶುತೊಶ್ ಅವರ ಗರಡಿಯಲ್ಲಿ ಮೂಡಿಬಂದದ್ದು!
ಮನ್-ಮೊಹನಾ... ಮನ್-ಮೋಹನ....
ಖ್ವಾಜ ಮೇರೆ ಖ್ವಾಜಾ.. ದಿಲ್ ಐಸೆ ..
ಆಜೀಮ್ ಓ ಷಾನ್ ಷೇನ್-ಶಾ...
ಇನ್ ಲಮ್-ಹೊ ಕೆ ಧಾಮನ್ ಮೇ...
ಅದ್ಬುತವಾಗಿ ಮೂಡಿಬಂದಿವೆ..
ಹಿಂದು ಮತ್ತು ಮೊಗಲರ ಸಂಸ್ಕ್ರುತಿಯ ಸಮಾಗಮ, ದರ್ಮನಿರಪೇಕ್ಷತೆ ಕತೆಯನ್ನ ಸತ್ಯಕ್ಕೆ ದೂರವಾಗಿಸಿದರು ಮನಕ್ಕೆ ಹಿತವಾಗಿದೆ.
ಶೇನ್ ಶಾ ಗೆ ಅಕ್ಬರ್ ಎಂಬ ನಾಮಕರಣ, ಅಸ್ಥಾನದ ಪಂಡಿತರ ವೇಷಭೂಶಣ, ಯಾಕೊ ಎಲ್ಲೊ ಅಕ್ಬರನ ಕಾಲಕ್ಕೆ ನಾವು ಹೋಗಿ ಬಿಟ್ಟಂತೆ ಅನ್ನಿಸಿಬಿಡುತ್ತದೆ.
ಬೀರಬಲ್ಲನ ತರಿಸಿ ನಾಲ್ಕು ಹಾಸ್ಯ ಕೂಡಿಸಿದ್ದರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು!
ಕ್ಯಾಮರ ವರ್ಕ್ ಮತ್ತು ಯುದ್ದ ಸನ್ನಿವೇಶ ಅದ್ಬುತವಾಗಿ ಮೂಡಿಬಂದಿದೆ.
Long live to ಜೊಧಾ ಅಕ್ಬರ್ ಸಿನೇಮ!
Subscribe to:
Post Comments (Atom)
No comments:
Post a Comment