"ದೇವರ ಭಯವೇ ಜ್ನಾನದ ಆರಂಭ" ಹೀಗೆ ಯಾರೋ ಎಂದೋ ಹೇಳಿದ್ದರು. ದೇವಸ್ತಾನಕ್ಕೆ ಹೊದಾಗ ಆಗುತ್ತಿದ್ದ ಭಯ-ಭಕ್ತಿ-ನಂಬಿಕೆ ಜನರಲ್ಲಿ ಇತ್ತೀಚೆಗೆ ತುಂಬಾ ಕಡಿಮೆ ಆದಂತಿದೆ. ಅದಕ್ಕೆ ಪೂರಕವೆಂಬಂತೆ ಉಡುಪಿಯ ಪುತ್ತೂರು ದುರ್ಗಾ ಪರಮೇಶ್ವರಿ ಜಾತ್ರೋತ್ಸವ ನಿನ್ನೆಯಷ್ಟೆ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೋತ್ಸವ ರಥ, ದರ್ಶನ ಬಲಿ ಮುಂತಾದ ಯತಾವಥ್ ವಿಧಿ-ವಿಧಾನಗಳೊಂದಿಗೆ ಜರಗಿತು. ಉತ್ಸವ ಮೂರ್ತಿ ಹೊತ್ತ ಭಟ್ಟರು ಚೆಂಡೆ ಸುತ್ತು, ಬಾಂಡ್ ಸುತ್ತು, ಭಜನೆ ಸುತ್ತು, ಸಾಕ್ಸೊಫೋನ್ ಸುತ್ತು, ಭೂತ ಸುತ್ತು, ನ್ರುತ್ಯ ಸುತ್ತು ಹೀಗೆ ನಾನಾ ವಿಧಾನಗಳಲ್ಲಿ ತಲೆಯಲ್ಲಿ ಮೂರ್ತಿ ಹೊತ್ತು, ಕೈಯಲ್ಲಿ ಮುಟ್ಟದೆ ಕಸರತ್ತನ್ನು ತೊರಿಸಿದರು. ನಾಲ್ಕಾರು ಗರ್ನಲ್ ಸದ್ದು ಮೂಡಿಸಿತ್ತು. ಐಸ್-ಕ್ರೀಮ್, ಎಣ್ಣೇ-ತಿಂಡಿ ಅಂಗಡಿ, ಬಲೂನ್ ಶಾಪ್, ಬಳೆ ಅಂಗಡಿ ಹೀಗೆ ನನಾ ಸಂತೆ ತುಂಬಿ ಹೋಗಿತ್ತು.
ಒಂದೇ ಒಂದು ಮಹದಾಶ್ಚರ್ಯ ಏನೆಂದರೆ ಅಲ್ಲಿ ನೆರೆದ ಜನರ ಸಂಕ್ಯೆ 50 - 75 ಮಾತ್ರ! ಬಹಳ ಬೇಸರ ವಾಯ್ತು. ದೇವರೊಂದಿಗೆ ಸುತ್ತು ಬರಲು ನಾವು ಸೇರಿ 10 ಜನ ಇದ್ದಿರಬಹುದು. ನಮ್ಮಿಂದ ಜಾಸ್ತಿ ಅರ್ಚಕರು, ತಂತ್ರಿಗಳು, ಚೆಂಡೆ ವಾದ್ಯ ವಾದಕರು ನೆರೆದಿದ್ದರು.
ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಇತ್ತಂತೆ, ತುಂಬಾ ಜನ ನೆರವೇರಿದ್ದರಂತೆ!
ಚಿಕ್ಕಮಕ್ಕಳು ಭಯವಿಲ್ಲದೆ ನವರಾತ್ರಿ ವೇಶದ ಸುತ್ತ ಸುತ್ತುವಂತೆ ಹತ್ತಿರ ಬರುತ್ತಿದ್ದರು.. ದೇವರೆಂದರೇನು ಅಂತ ಅವರು ಅಂದುಕೊಂಡಿದ್ದಾರೋ ಎನೋ? ನಾವು ಹಿರಿಯರು ದೇವರ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ರೀತಿ ಕಂಡು ಬೇಸರವಾಯಿತು.
"ದೇವರ ಭಯವೇ ಜ್ನಾನದ ಆರಂಭ" ಅಂದಿದ್ದೆ. ದೇವರ ಬಗ್ಗೆ ನಮ್ಮಲ್ಲೆ ಅದೆಷ್ಟೋ ಅಜ್ನಾನ ತುಂಬಿರೆ ಇನ್ನು ಭಯವೆಲ್ಲಿ?
ಮನೆಯ ಮನರಂಜನಾ ಸಾಧನಗಳು ಎಲ್ಲರನ್ನು ಬದಲಾಯಿಸಿದೆ. ಜಾತ್ರೆ-ಹಬ್ಬ ಎಲ್ಲ ಕೆಲವರ್ಗಕ್ಕೆ ಮಾತ್ರ ಸೀಮಿತವಾಗಿದೆ. 'ಬುದ್ಧಿಜೀವಿ'ಗಳ ಗಮನ ಇತ್ತ ಬರದೇ ಹೊಗಿದೆ!
ನಾವೆಲ್ಲ ಸಣ್ಣವರಿದ್ದಾಗ ಜಾತ್ರೆ ಎಂದರೆ ಏನ್ ಜನಾ ಗುರೂ, ಊರಿಂದೂರೆ ನೆರೆಯುತ್ತಿತ್ತು. ಅದು ಊರಿಗಿಡೀ ಸಿಗುವ ಏಕೈಕ ಹಬ್ಬ. ಕಾಲ ಎತ್ತಲೋ ಸಾಗಿದೆ. ಸಿಟಿ ಜೀವನ ನಮ್ಮ ಸಂಸ್ಕ್ರುತಿಯ ಎತ್ತಲೋ ಸಾಗಿಸಿದೆ. ಸಣ್ಣ ಸಣ್ಣ ಕುಟುಂಬಗಳು ತಾವು ನಡೆದದ್ದೆ ದಾರಿ ಅಂತ ತಿಳಿದುಕೊಂಡಿವೆ. ಅಜ್ಜನ ಮಾತು ಮತ್ತು ಸಂಸ್ಕಾರಕ್ಕೆ ನಮ್ಮ ಸಮ್ಮತಿಯಿಲ್ಲ. ಒಬ್ಬೊಬ್ಬ ಒಂದೊಂದು ಸಂಸ್ಕಾರ, ವಿಚಾರ ಆಚರಿಸಿದರೆ ಕೊನೆಗೊಮ್ಮೆ ಯಾರು ಯಾರನ್ನೂ ತಿಳಿಯದ ವಿಚಿತ್ರ ಪರಿಸ್ತಿತಿ ದೂರವಿಲ್ಲ.
ನಿಜ ಹೇಳಲೇನು? ಮೊದಲಿಂದೆ ನನಗೆ ಸ್ವೀಕಾರರ್ಹವಾಗಿತ್ತು.
Tuesday, April 8, 2008
Subscribe to:
Post Comments (Atom)
No comments:
Post a Comment