Sunday, January 20, 2008
myCook:"special ರೈತ"
ಮುಳ್ಳು ಸೊವ್ತೆ ಸಿಪ್ಪೆ ತೆಗೆದು ಸಣ್ಣಕೆ ಕೊಚ್ಚಿಕೊಳ್ಳಿ. ಟೊಮೋಟೊ ಕೂಡ ಸಣ್ಣಕೆ ಕೊಚ್ಚಿಕೊಳ್ಳಿ. Baby corn or seedless ದ್ರಾಕ್ಷಿ ನಾಲ್ಕು ಸಣ್ಣ ತುಂಡು ಹಾಕಿರೆ ರುಚಿ ಜಾಸ್ತಿ!
ಒಂದು ಲಿಂಬೆ ಹಿಂಡಿಕೊಳ್ಳಿ. 3 ಚಮಚ ಉಪ್ಪು (ರುಚಿಗೆ ತಕ್ಕಷ್ಟು!) ಹಾಕಿಬಿಡಿ.
ಸಾಸಿವೆ ಅರ್ದ ಹಿಡಿಯನ್ನ ಎರಡು ಹಿಡಿ ತೆಂಗಿನ ಕಾಯಿ ತುರಿಗೆ ಸೇರಿಸಿ, ಒಂದು ಸಣ್ಣ ತುಂಡು ಶುಂಟಿ ಮತ್ತು ಒಂದು ಹಸಿ ಮೆಣಸು ಜೊತೆ mixi ಯಲ್ಲಿ ರುಬ್ಬಿ. ಸಣ್ಣಗೆ ರುಬ್ಬಿದ ಬಳಿಕ ಅದನ್ನ vegitable mix ಜೊತೆ ಬೆರೆಸಿಕೊಳ್ಳಿ.
300 ml ಗಟ್ಟಿ ಮೊಸರು ಹಾಕಿಬಿಡಿ.
ಸಾಸಿವೆ + ಎರಡು ಚಮಚ ತೆಂಗಿನೆಣ್ಣೆ ಒಂದು ಕೆಂಪು ಮೆಣಸು (ಬೆಳ್ಳುಳ್ಳಿ ಬೇಕಿದ್ದರೆ ಹಾಕಲೂಬಹುದು).. ಸಣ್ಣ ಬೆಂಕಿಯಲ್ಲಿ ಹುರಿಯಿರಿ.. ಸಾಸಿವೆ ಟಪ ಟಪ ಎಂದಾಗ ಒಗ್ಗರಣೆ ರೈತಕ್ಕೆ ಹಾಕಿ!
ಕೊತ್ತಂಬರಿ ಸೊಪ್ಪು ಇದ್ದರೆ ಅದನ್ನು ಸಣ್ಣಗೆ cut ಮಾಡಿ ಬೆರೆಸಿ.
Your special ರೈತ is ready to taste. Good to have it with ಗಂಜಿ or white rice!
Subscribe to:
Post Comments (Atom)
No comments:
Post a Comment