ಅಷ್ಟು ದೊಡ್ಡ ಮನೆಯಿಡೀ ಉಡುಗಿ ಉದ್ದಿ ಅಪ್ಪಗ ಎಂತ ಇಲ್ಲೆ ಹೇಳಿರೂ ಗಂಟೆ 11 ಆತು. ಅಮ್ಮ ಬೇರೆ ಅಡುಗೆ ಮನೆಂದ ಹೆರ ಬಯಿಂದಿಲ್ಲೆ. ಯಾವುದೊ ಕಾರು ಬಂದ ಅಜನೆ ಕೇಳಿತ್ತು. ಚೆಂದದ ಮಾಣಿದೆ, ಅವನ ಅಬ್ಬೆ-ಅಪ್ಪನ ಹಾಂಗೆ ಕಾಂಬ ಆರೊ ಇನ್ನೆರಡು ಜನ ಮನೆ ಹತ್ತರೆ ಬಂದವು. ಆನು ಉದ್ದುವ ಹರ್ಕಿನ ಅಲ್ಲೆ ಬಿಟ್ಟಿಕ್ಕಿ ಒಳ ಓಡಿದೆ. ಅಪ್ಪನೊ ಪೊಸ್ಟ್-ಆಪೀಸಿಲ್ಲಿ ಕೆಲಸ. ಹಗಲು ಹೊತ್ತು ಮನೆಲಿ ಸಿಕ್ಕವು. ಆದರು ತನ್ನ ಕಾರ್ಯಲ್ಲಿ ಅವು ಬಹಳ ಚುರುಕು. ಆನು B.Com ಅಕೇರಿಯಾಣ ವರ್ಶಲ್ಲಿ ಇಪ್ಪಗಳೆ ಎಲ್ಲ ದಿಕ್ಕು ಮಾಣಿ ಹುಡುಕ್ಕುತ್ತ ಇದ್ಯೊಂ ಹೇಳಿ ಪ್ರಚಾರ ಮಾಡಿ ಎನಗೆ ಜಾತಕ ಪ್ರತಿ ಬರದು ಬರದು ಬಾಯಿ ಪಾಟ ಬಯಿಂದು. ಪೊಟೊ ಅಂತು ಕಳುಸಿದ್ದು ವಾಪಾಸ್ ಬಾರದ್ದೆ ಮೊನ್ನೆ ಅಪ್ಪ 50 ಪ್ರತಿ ಮಾಡ್ಸಿದ್ದವು. ಈ ಮಾಣ್ಯಂಗಳ ಅವಸ್ತೆಯೆ ಇಷ್ಟು. ಪೈಸೆ ನೋಟಿನ ಹಾಂಗೆ ಎಂತಗೆ ಕೂಸುಗಳ ಫೊಟೊ colect ಮಡ್ತವೊ ದೇವರಿಂಗೆ ಗೊಂತು.
ಅಮ್ಮನ ಕಡವ ಕಲ್ಲಿನ ಬುಡಂದ ಎಳ್ಸಿ ಆರೊ ಬಂದವು ಹೇಳಿ ಆನು ಅಲ್ಲಿ ಕೂದೆ. ಕಡವ ಕಲ್ಲಿನ ಹಾಂಗೆ ಎನ್ನ ತಲೆಯೂ ಹಿಂದೆ ತಿರುಗು ತಿರುಗಿ ನೊಡ್ಯೊಂಡಿತ್ತು.
ಆಮ್ಮ ಬೆಲ್ಲ - ನೀರು ಕೊಟ್ಟು ರಜಾ ಮಾತಡ್ಯೊಂಡು ನಿಂದತ್ತು. ಆನು ಮತ್ತೆ ಬೇಗ ರಪಕ್ಕ ಮೈಗೆ ಮಾಂತ್ರ ಮಿಂದಿಕ್ಕಿ ತಲೆ ಬಾಚಿ ಸೀರೆ ಸುತ್ತಿ ಅಪ್ಪಗ ಅಮ್ಮನ ಸಜ್ಜಿಗೆ ಅವಲಕ್ಕಿ ready ಆಗಿತ್ತು. ಆನು ಹೆರ ಹೋಪಗ ಮಾಣಿ ಆನು ಸಂಗೀತಲ್ಲಿ senior ಪಾಸ್ ಆದ certificate frame ಮಾಡ್ಸಿದ್ದರ ಅವರಷ್ಟಕ್ಕೆ ನೊಡ್ಯೊಂಡು ಇತ್ತಿದ್ದ. ಸಜ್ಜಿಗೆ ಬಳ್ಸಿ, ಅವಲಕ್ಕಿ ಕೇಳಿ ಅರ್ದ-ಚಾಯ ಕೊಟ್ಟು ಸಕ್ಕರೆ ಬಳ್ಸಿ ಕೈ ತೊಳವಲೆ ನೀರುದೆ ಬೈರಾಸು ಕೊಟ್ಟು ಒಳಹೋದೆ. ಅಷ್ಟು ಹೊತ್ತಿಂಗೆ ಅಮ್ಮ ಮಾಣಿಗೆ ಮಾತಾಡೆಕ್ಕಡ ಹೇಳಿ ಎನ್ನ ಹೆರ ಹೋಪಲೆ ಹೇಳಿತ್ತು. ಹೊಟ್ಟೆಲಿ ಚಿಟ್ಟೆ ಬಿದ್ದ ಹಾಂಗೆ ಎನೊ ಸಂಕಟ. ಸುಮಾರು ಅರ್ದ ಗಂಟೆ ಮಾತಾಡಿದ್ಯೊಂ. ಅವ software engineer ಹೆಳಿಯೂ ಅಮೆರಿಕ ದ್ವೀಪೇ ನ್ಯೂಯೊರ್ಕ್ ದೇಶೇ ಅಮೆರಿಕ ಖಂಡೇ work ಮಾಡುದು ಹೆಳಿಯೂ ಗೊಂತಾತು.
ಎನಗೆ ಅಪ್ಪ ಅಮ್ಮನ ಮೋರೆಯ ವರ್ಶಕ್ಕೆ ಒಂದಾರಿಯುದೆ ಕಣ್ಣಾರೆ ನೊಡದ್ದಸ್ಟು ದೂರ ಹೊಯೆಕ್ಕು ಹೇಳಿ ಅನ್ಸುತ್ತೆ ಇಲ್ಲೆ. ತುಂಬ ಸಂಬಳಡ. ಆದರೆ ಎನಗೆಸ್ಟು time ಅವ ಕೊಡುಗು ಹೇಳಿ ರಜಾ ತಲೆಬೆಶಿ ಆತು.
ಮನ್ನೆ ಮನ್ನೆ ಸೀತರಾಮ ಶಾಸ್ತ್ರಿ ಮಗ ಅನಂತನುದೆ ಎನ್ನ ನೊಡ್ಲೆ ಬಂದಿತ್ತಿದ್ದ. ಅವ ಜಾತಕಲ್ಲಿ 100% ಕೂಡಿ ಬತ್ತು ಹೆಳಿ ಮತ್ತೆ ಅವರ ಮನಗೆ ದೆನಿಗೇಳಿತ್ತವು. ಶಸ್ತ್ರಿಗೊಕ್ಕೆ ಕೆಲವು ಎಕ್ರೆ ಜಾಗೆ. ತಿಂದು ಮುಗಿಯದ್ದ ಸಂಪತ್ತು. ಹಳ್ಳಿಲಿ ಇರೆಕ್ಕು ಹೇಳುವ ಒಂದೆ ಸಮಸ್ಯೆ. ಎನಗೆ ಹಳ್ಳಿ ಕೆಲಸ ಮಾಡ್ಲೆ ಉದಾಸನ ಇಲ್ಲೆ. ಅನಂತಂಗೆ PUC ಅಯಿದಸ್ಟೆ. ಅವಕ್ಕೆ ಪೂಜೆ ಎಲ್ಲ ಮಾಡ್ಸಲೆ ಬತ್ತಡ. ಆದರೂ ಈಗಾಣ ಕಾಲಲ್ಲಿ ಕೂಸುಗಳಿಂದ ಜಾಸ್ತಿ ಮಾಣ್ಯಂಗೊ ಕಲ್ತಿರುತ್ತವು.. ಹಂಗಾಗಿ ಎನಗೆ ರಜಾ ಗೊಂದಲ ಇಲ್ಲಿ.
ಎನ್ನ classmate ಪ್ರದೀಪ ತುಂಬಾ ಒಳ್ಳೆವ. PUCಂದಲೆ ಎನಗೆ ಗೊಂತಿದ್ದು. ಆದರೆ ಎನ್ನ ಅಪ್ಪಂಗೆ ಇದು ಗೊಂತಿಲ್ಲನ್ನೆ! ಎಂಗೊ ಸುಮಾರು ವಿಶಯ ಒಟ್ಟಿಂಗೆ ಕಲ್ತದು. ಈಗ ಅವ CA ಮಾಡೆಕ್ಕು ಹೇಳಿ ಎಂತದೊ ಕಲಿತ್ತ ಇದ್ದ. ಅವಂಗೂ ಮದ್ವೆ ಮಾಡ್ಸೆಕ್ಕು ಹೇಳಿ ಅವನಪ್ಪ ಶಂಕ್ರಣ್ಣಾ ಮನ್ನೆ ಮನೇಲಿ ಮತಾಡ್ಯೊಂಡು ಇತ್ತಿದ್ದವು. ಪ್ರದೀಪ ಎನ್ನ ಹೆಸರು ಕೇಳಿರೆ ಕಂಡಿತಾ ಒಪ್ಪದ್ದೆ ಇರ!!
first ಎರಡು ಅವು ಎನ್ನ ಇಷ್ಟ ಪಟ್ಟದಾದರೆ 3ನೆದು ಆನು ಇಷ್ಟ ಪಟ್ಟ ವಿಶಯ.
ಯಾರು ಹಿತವರು ನನಗೆ ಈ ಮೂವರೊಳಗೆ?
Monday, January 21, 2008
Subscribe to:
Post Comments (Atom)
2 comments:
ಆರ ಇಷ್ಟ ಪಟ್ಟಿದೆಯೋ ಅವ್ವೇ ಹಿತವರು.
- sin
"ಅಮ್ಮನ ಕಡವ ಕಲ್ಲಿನ ಬುಡಂದ ಎಳ್ಸಿ ಆರೊ ಬಂದವು ಹೇಳಿ ಆನು ಅಲ್ಲಿ ಕೂದೆ. ಕಡವ ಕಲ್ಲಿನ ಹಾಂಗೆ ಎನ್ನ ತಲೆಯೂ ಹಿಂದೆ ತಿರುಗು ತಿರುಗಿ ನೊಡ್ಯೊಂಡಿತ್ತು."
ಇಲ್ಲಿ ಕಡವ ಕಲ್ಲಿನ ಅಂದರೆ ಏನು? ಇದು ಹವ್ಯಕ ಕನ್ನಡವೆ?
ದಯವಿಟ್ಟು ಇದನ್ನು ವಿವರಿಸಿ ಹೇಳಿದರೆ ಚೆನ್ನ.
- ಬರತ್
http://ybhava.blogspot.com
Post a Comment