Wednesday, January 9, 2008

myKavana:"ತಂಪು-ಇಂಪು"

ತಂಗಾಳಿಯು ತಂಪು
ಮುಂಜಾನೆ ತಂಪು
ಕೆಲಸವೆ ಇರದಿರೆ
ದಿನವಿಡೀ ತಂಪು

ಕುಂಕುಮ ಕೆಂಪು
ರುಧಿರವು ಕೆಂಪು
ತುಸು ನಶೆ ಏರಿರೆ
ನಯನವು ಕೆಂಪು

ಮಲ್ಲಿಗೆ ಕಂಪು
ಸಂಪಿಗೆ ಕಂಪು
Perfume ಹಾಕಿರೆ
ಅಂಗಿಯೂ ಕಂಪು

ಬೈಗುಳ ನೆಂಪು
ಹೊಗಳಿಕೆ ನೆಂಪು
ಅದು ಎನಿಲ್ಲದಿರೆ
ನಿನ್ನದೆ ನೆಂಪು

ಕೊಗಿಲೆ ಸ್ವರ ಇಂಪು
ಅಣ್ಣಾವ್ರ ಸ್ವರ ಇಂಪು
ತುಸು ಮೌನವಾಗಿರೆ
ನಿಮ್ಮ ಸ್ವರವೂ ಇಂಪು

1 comment:

Anonymous said...

ಈ ನಿಮ್ಮ ಕವನ ಓದಲು ತುಂಬಾ ಇಂಪು
ಅದನ್ನು ಓದಿದ ಮೇಲೆ ನನ್ನ ಮನಸ್ಸು ಆಯಿತು ತುಂಬಾ ತಂಪು
ಈಗೆ ದಿನಕ್ಕೆ ಒಂದು ತಂಪು-ಇಂಪು ಬರೆದರೆ
ನಮಗೆಲ್ಲಾ ದಿನವು ಇಂಪು-ತಂಪು