Wednesday, January 16, 2008

myHarate:"ನೀವ್ಯಾಕೆ ಪುಣ್ಯಸ್ತಳ ಹೊಗ್ತೀರಿ"

ಜನರು ಪುಣ್ಯಸ್ತಳಕ್ಕೆ ಹೋಗೋದಿಕ್ಕೆ ಕೆಲವು ಕಾರಣಗಳಿವೆ! ಪ್ರಾರ್ತಿಸಲು ಪ್ರತಿಯೊಬ್ಬರಿಗೂ ಒಂದೊಂದು ಬೇರೆ-ಬೇರೆ ಕಾರಣಗಳಿರುತ್ತವೆ. ಸೈಕಲ್ ಬ್ರಾಂಡ್ ಅಗರಬತ್ತಿ ನಿಮಗೆ ಕಾರಣವಾದರೆ ನನಗೆ ಇನ್ನೆನೊ ಕಾರಣವಿರಬಹುದು!

ದೇವಿ ದೆವಸ್ತಾನಕ್ಕಂತೂ ಹೊಗಿಬಿಟ್ಟರೆ ಬರುವ 'ಲಲನೆ'ಯರ ಸಂಕ್ಯೆ ತುಂಬಾನೆ ಜಾಸ್ತಿ. ಊಟವಂತೂ ದೇವಿದೇವಸ್ತಾನದಲ್ಲಿ ಕಡ್ಡಾಯ! ಹೊಟ್ಟೆ ತಂಪು, ಮನಸೂ ತಂಪು. krishna ದೇವಸ್ತಾನ ಬಂದು ತಮ್ಮ ಕನಸಿನ ಕನ್ಯೆ ಬಗ್ಗೆ ತೋಡಿಕೊಳ್ಳುವವರಿಗೆ ಏನು ಕಮ್ಮಿಯಿಲ್ಲ. 16000 ನಾರಿಯರಲ್ಲಿ ಯಾರಾದರೊಬ್ಬರನ್ನ ನಂಗೆ ಕೊಡಯ್ಯ ಅಂತ ಗೋಗರೆದಾಗ ಅದೆನೊ ಸಮಾಧಾನ.

ಗಣಪತಿ ದೇವಸ್ತಾನಕ್ಕೆ ಹೋಗಿ, hai ಗಣಪ, ನಾನು ಹೊಸ ಕೆಲ್ಸ ಶುರು ಹಚ್ಚ್ಕೊಂಡಿದೀನಪ್ಪ, ಒಳ್ಳೆದು ಮಾಡಪ್ಪ ಅನ್ನೊದಿದೆ, ಹೊಸ vehicle ಚೆನಾಗಿರ್ಲಿ ಅಂತ driver ಪಕ್ಕ ಮೂರ್ತಿ ಕೂರ್ಸೊದೂ ಇದೆ!!

ಮಗನ ವಿದ್ಯಾಬ್ಯಾಸ ಚೆನ್ನಗಿರ್ಲಿ ಅಂತ ಶಾರದೆ ಹತ್ರ ಕೆಳ್ಕ್ಂಡ್ರೆ, ಅಜ್ಜಿ ಅರೊಗ್ಯ ಚೆನ್ನಗಿರ್ಲಿ ಅಂತ ವಿಷ್ಣು ಹತ್ರ ಕೆಲ್ಕೊಲ್ತೀವಿ. ಸುಖವಾದ ಮರಣ ಬರಲಿ ಅಂತ ಶಿವನನ್ನು ಕೆಳಿದರೆ, ಚೆಂದದ ಮಗುವಾಗಲಿ ಅಂತ ಸುಬ್ರಮಣ್ಯನ ಕೆಳೊದಿದೆ!!


ಹಲಾವರು ರೊಗಕ್ಕೊ ಕೆಲ ದೆವಸ್ತಾನದಲ್ಲಿ vaaccination ಸಿಗುತ್ತೆ!



ನಾನ್ಯಾಕೆ ಹೊಗುತ್ತೀನಿ ಅಂತ ತಿಳ್ಕೊ ಆಸೆನೆ ನಿಂದು? ಹುಮ್.. ಹೆಳ್ತೀನೆ ಕೆಳು...

ಮದೂರು ಹೊದ್ರೆ ಅಪ್ಪ ಕಜ್ಜಯ ಮಾತ್ರ ನೆನಪಿಟ್ಟು ಮಾಡ್ಸಿ, ಆ ಬಿಸಿ ಬಿಸಿ ಅಪ್ಪ ಎಸ್ಟು ಚೆನ್ನಗಿರಿತ್ತೆ ಅಂದ್ರೆ ಆಹ್ ಬಾಯಲ್ಲಿ ನೀರೂರುತ್ತೆ!!

ತಿರುಪತಿ ಹೊದ್ರೆ ಲಡ್ಡು ತಪ್ಪದೆ ಮಾಡ್ಸಿ, ನಂಗೂ ಒಂದ ತಂದು ಕೊಡಿ..

ಆನೆಗುಡ್ಡೆ ಹೊದ್ರೆ, ಗಣಹೊಮ ತಪ್ಪದೆ ಮಾಡ್ಸಿ, ಅಷ್ಟದ್ರವ್ಯ,, ಆಹ್.. ಬಾಯಲ್ಲಿ ನೀರೂರುತ್ತೆ.

ಇಡಗುಂಜಿ ಹೊದ್ರೆ, ಮೋದಕ ಮಾಡ್ಸಿ, ಎಸ್ಟು ತಿಂದ್ರೂ ಸಮಾದನ ಇಲ್ಲ!

ಅಂದಹಾಗೆ ನೀವ್ಯಾಕೆ ಪುಣ್ಯಸ್ತಳ ಹೊಗ್ತೀರಿ?;-)

No comments: