Friday, January 4, 2008

myHarate:"ಕೇಕು ಪುರಾಣ"

ಶುಕ್ರವಾರ ಅಂದ್ರೆ ಎನೊ ಒಂತರಾ.. ವಾರಂತ್ಯ ಸಮೀಪಿಸುತ್ತೆ ಎಂಬುದು ಒಂದು ಕಡೆ, ಇನ್ನೊಂದೆಡೆ ವಾರಕ್ಕೊಮ್ಮೆ Cafeteria ಆಗಮಿಸುವ ಕೇಕ್ ವಿಶಯ! ಅತ್ತ ಕೇಕು ಅಲ್ಲದ ಇತ್ತ ಬ್ರೆಡ್ಡು ಅಲ್ಲದ so named ಕೇಕ್ ಇದ್ಯಲ್ಲ, ಇದು ನಮ್ಮಲ್ಲಿ ಮೊದಲಿಂದಲೂ ನಡೆದು ಬಂದ ಸಂಪ್ರದಾಯ. ಶುಕ್ರವಾರ ಅಪರಾಹ್ನ 2:30 ರ ಹೊತ್ತಿಗೆ Cafeteria ಹೋಗುವವರ ಸಂಖ್ಯೆ ಉಳಿದ ದಿನಕ್ಕಿಂತ ಸ್ವಲ್ಪ ಜಾಸ್ತೀನೆ. ಒಂದಲ್ಲ ಎರಡಲ್ಲ, ಮುಗಿವರೆಗೆ ಮೂಗಿನವರೆಗೆ ಅಜ್ಜನಮನೆ ತರ ಬಿಟ್ಟಿಗೆ ತಿನ್ನಬಹುದಾದ ಅಪರೂಪದ ಯೋಗ್ಯತೆಯನ್ನ ಯಾರು ತಾನೆ ಕೈ ಚೆಲ್ಲಬಲ್ಲರು?!! ಇಂತಹ ಕೇಕು-ಬ್ರೆಡ್ಡು ಸಂಮಿಶ್ರಕ್ಕೆ ಕೆ-ಡ್ಡು ಅಂತಲೊ ಬ್ರೆ-ಕು ಅಂತಲೊ ಯೊಗ್ಯ ಹೆಸರು ಎಂದು ಕೆಲವರ ಅಂಬೋಣ. ತಲೆಗೊಂದರ ಲೆಕ್ಕದಲ್ಲಿ ಇವನ್ನ ತರುತ್ತಿದ್ದಾಗ ಕೊನೆಗೆ ಎಳೆದಾಡುವ ಪರಿಸ್ತಿತಿ ಇತ್ತು. ಈಗೀಗ ತುಂಬಾನೆ ತರೋದ್ರಿಂದ ಮಹತ್ವ ಕಳೆದುಕೊಳ್ಳುತ್ತಿದೆ.

ಕೇಕಾಯ ತಸ್ಮೈ ನಮಹ..!!

ಶುಕ್ರವಾರ ಕಳೆಯಿತು, ಕೇಕು ಕಾಲಿಯಾಯಿತು.. ವಾರಾಂತ್ಯ ಸಮೀಪಿಸಿತು..

Have a wonderful weekend..

1 comment:

Anonymous said...

ಈರ್ ಊರ್ ದಾರಾ ಮಾರಾಯ್ರೆ, ಛೇ.
ಎಡ್ಡೆ ಬರೆಪರ್.
-ಜೋಗಿ