Monday, January 7, 2008

myHarate:"ನನ್-ಮೇಸ್ಟ್ರು"

ಹೇ, ನಾನಿದನ್ನ ಬರೀಬಾರ್ದು ಅಂತ ಬರ್ದಮತ್ತೆ ತಿಳೀತು. ಬರೀಲಿಲ್ಲ ಅಂದ್ರೆ ಮತ್ತೆ ಸಂಕಟ.. ನನ್ನ ವಿಧಿ!!!
ಮೊನ್ನೆ ಊರಲ್ಲಿ ಅಡ್ಡಾಡ್ತಾ ಇರ್ಬೇಕಾದ್ರೆ, ನನ್ನ high-ಸ್ಕೂಲ್ ಮೇಸ್ಟ್ರು ಸುಳ್ಯದಲ್ಲಿ ಸಿಕ್ಕೆ ಬಿಟ್ರು. ದೂರಂದಲೇ ನನಗೆ ಪರಿಚಯವಾಯ್ತು. ನನ್ನೊಳಗಿನ 25% ಮನಸು ಹೇ ಸುಮ್ನೆ ನಡೀತಾ ಇರು ಅಂತು. ನಿನ್ನ ಬಾಯಿಗಿಸ್ಟು ಮಣ್ಣು ಹಾಕ ಅಂತ ಹೇಳಿ 75% ಮನಸು ಮಾತಾಡ್ಸು ಅಂತು. ಸರೀ ಅಂತ ಬಸ್ಸಿಗೆ ಕಾಯೋ ಮೇಸ್ಟ್ರನ್ನು ನಮಸ್ಕಾರ ಸಾರ್ ಅಂದೆ. ಹೇ, ನೀನು ಷಣ್ಮುಖ ಅಲ್ವಾ, ಹೇಗಿದ್ದೀಯ, ಉಡುಪಿಯಲ್ಲಿ ಕೆಲ್ಸ ಮಡ್ತಾ ಇದ್ದೀ ಅಂತ ತಿಳೀತು. ಅರಾಮನ?
ನಾನು full bold ಆದೆ ಕಣೊ/ಕಣೆ. high-ಸ್ಕೂಲ್ ಬಿಟ್ಟ ಮತ್ತೆ ಅವರು ಹೆಂಗಿದ್ದಾರೆ ಅಂತ ಕೇಳಕ್ಕು ಕೂಡ ಹೋಗದ ಕೊಳಕಾ ನಾನ್. ನನ್ನ full ಬಯೊ-ಡಾಟ ಅವರತ್ರ ಕೇಳಿ ತಬ್ಬಿಬ್ಬಾದೆ.
ಗಂಧಕ - ರಂಜಕ - ಹೀಗೆ ಅಂದಿದ್ದ ಅವರ ಸ್ಪಷ್ಟ ನುಡಿಗಳು ಇಂದೂ ನೆನಪಿನಾಳಕ್ಕೆ ಅಂಟಿ ಬಿಟ್ಟಿದೆ. ಕೆಲವೊಮ್ಮೆ ತಿಂದ ಬೆತ್ತದ ಪೆಟ್ಟು ನೆನಪಿನಲ್ಲಿ ಉಳಿದಿದೆ.. ಅದ್ಬುತ ಎನ್ನ ಬಹುದಾದ ಮಾತುಗಾರಿಕೆ ಗೌರೀಶಂಕರರದ್ದು.
ನಮ್ಮ ಕಾಲದಲ್ಲೆ ಅವರು ಮುಖ್ಯೊಪಾದ್ಯಾಯರು. ಕೈ ಹಿಡಿದು ಹೊಟೆಲೊಂದಕ್ಕೆ ಕರೆದುಕೊಂಡು ಹೋದೆ. ಹೀಗೆ ಗತ ಕಾಲದ ನೆನಪುಗಳು ಬಿಚ್ಚಿಕೊಂಡವು.
ಇನ್ನು retire ಆಗ್ಲಿಕ್ಕೆ 4 ವರ್ಷ ಬಾಕಿದೆ ನಂಗೆ.. ಮೊನ್ನೆ ಮೊನ್ನೆ ನನ್ನ ಹುದ್ದೆ ಪರ್ಮನೆಂಟ್ ಆಯಿತು ಅಂತ ಬಹಳ ಕುಶಿಯಿಂದಲೆ ಹೇಳಿದರು. 200rs ಂದ ನನ್ನ ಕೆಲ್ಸ ಶುರುಮಾಡಿದೆ, ಪರ್ಮನೆಂಟ್ ಆಗಿ ಈಗ 6K ಗೆ ಬಂದು ನಿಂತಿದೆ ಮಾರಾಯ ಎಂದರು. ಇದೆಲ್ಲ ಅವರೇ ನಾಕೇಳದೆ ನುಡಿದುಬಿಟ್ಟರು.
ನಿಂದೆಲ್ಲ pay ಹೇಗಿದೆ ಎಂದರು.
ನಾನು ಚೆನ್ನಾಗಿದೆ ಅಂದ್ಬಿಟ್ಟು ಸಾರ್, ಈ ವರ್ಶದ SSLC ಮಕ್ಳು ಹೇಗಿದ್ದಾರೆ ಅಂತ ಮಾತ ಮರೆಯಿಸಿದೆ.
ಒಂದೆರಡು ಗಂಟೆ ಹೀಗೆ ಉರುಳಿದ್ವು, ಬಾಯ್ ಹೇಳುವ ಮೊದಲು ಸುಳ್ಯದ ಪೊಪ್ಯುಲರ್ ಬೇಕರಿಯಿಂದ ಸಿಹಿತಿಂಡಿ ತೆಗೆದು ಮೆಸ್ಟ್ರ ಕೈಲಿಟ್ಟು ತಿರುಗಬೇಕಾದರೆ ಕಣ್ಣಂಚಿನಲ್ಲಿ ನೀರು ಒಂದಿಂಚು ಕೆಳ ಜಾರಿತ್ತು.
ಸ್ವಲ್ಪ ದೂರಂದ ಮತ್ತೆ ತಿರುಗಿ ಬಂದ ಮಾಸ್ಟ್ರು ನಿನ್ನಂತ students ಕಂಡಾಗ ಮನತುಂಬಿ ಬರುತ್ತೆ, ನಿನ್ನ 85% ನಮ್ಮ office ಬೋರ್ಡಲ್ಲಿ ಇನ್ನೂ ಬರೆದಿದೆ ಕಣೊ ಅಂದ್ಬಿಟ್ರು.
ನಾನು LIC agent. ನಿಂದೆನಾದ್ರು ಪ್ಲನ್ ಇದ್ರೆ ಹೇಳು ಎಂದಾಗ ಸದ್ಯದಲ್ಲೆ ಅವ್ರನ್ನ ಇನ್ನೊಮ್ಮೆ ಮೀಟ್ ಮಡ್ತೇನೆ ಅನ್ನಿಸಿತು.
ಬಸ್ಸಲಿ ಕುಳಿತವರು ನಿದಾನವಾಗಿ ದ್ರುಷ್ಟಿಯಿಂದ ದೂರವಾದರು..

No comments: