Friday, June 29, 2007

myHarate:"ಜಗವ ಗೆಲ್ಲೋದು ಹೀಗೆನಾ!"

ಜಗವ ಗೆಲ್ಲೋದು ಹೀಗೆನಾ!

ಒಂದು ಮಗೂನ ತಗೊಳ್ಳಿ.. ತಂದೆ-ತಾಯಿ ಅಷ್ಟೆ ಅದರ ಜಗ.. ತನ್ನ ತುಂಟ ನಗುವಿನಿಂದ ಅದು ಅದರ ಜಗತ್ತನ್ನ ಗೆಲ್ಲುತ್ತೆ!

ಶಾಲೆಗೆ ಸೇರಿ ಅದೆ ಅದರ ಜಗತ್ತದಾಗ ಎಲ್ಲ ಮೇಸ್ಟ್ರಿಗೂ ನೆಚ್ಚಿನದಾಗಿ, ಅದರ ಜಗತ್ತನ್ನ ಗೆದ್ದುಕೊಳ್ಳುತ್ತೆ!

ಹೀಗೆ ಸ್ವಾಮಿ ಜಗವ ಗೆಲ್ಲೊ ಪಯಣ ಹೀಗೆನಾ ಶುರುವಾಗೊದು?

ನಮ್ಮ ಜಗತ್ತನ್ನ define ಮಾಡೋಣ.. ಅದನ್ನ ಗೆಲ್ಲೊ ಕಾರ್ಯ ಮತ್ತೆ ಮಾಡಿದರಾಯಿತು. ನಮ್ಮ ಜಗತ್ತು ಅಂದರೆ ನಮಗೆ ಸಂಬಂಧ ಪಟ್ಟ ವ್ಯಕ್ತಿ ಮತ್ತು ವಿಚಾರಗಳೇ? work ಇರಬಹುದು, responsibility ಇರಬಹುದು, family ಇರಬಹುದು.. ನೆರೆಹೊರೆ ಇರಬಹುದು. ಸಮಾಜ ಇರಬಹುದು.. ಒಂದೊಂದನ್ನೆ ಗೆಲ್ಲುತ್ತ ಹೊಗೊಣವೇ?

myPOD:"ಹನಿ ಹನಿ ಇಬ್ಬನಿ!"

myHarate:"ಹೆಗಿದ್ರೂ ಕಷ್ಟ ಈ ಲೊಕದೊಳಗೆ!"

ನಾನು ಮದುವೆ ಅಥವಾ ಇನ್ನಿತರೇ ಸಮಾರಂಭಕ್ಕೆ ಹೊಗೊದನ್ನು ಅಷ್ಟೆನೂ ಇಷ್ಟ ಪಡೊದಿಲ್ಲ. ಊಟ ಒಂದೆ ನಾನಿಷ್ಟಪಡೊ ಸಂಗತಿ ಅಲ್ಲಿ. ಎಷ್ಟೊ ಜನರನ್ನ ಕಂಡು ಇಷ್ಟ ಇಲ್ಲದ್ರೂ ಮತಾಡಿಸಬೇಕಾದ ಪರಮಸಂಕಟ ಅಲ್ಲಿ..
ಒಹ್ ಭಾವಯ್ಯ.. ಹೆಂಗಿದ್ದೆ.. ಆರೊಗ್ಯವೆ?
ಆರೊಗ್ಯ ಚೆನ್ನಗಿಲ್ಲ ಅಂದ್ರೆ ನಾನ್ಯಾಕೆ ಬರ್ತೇನೆ ಅಯ್ಯಾ ಅಂತ ಇವ್ನಿಗೆ ಇನ್ನೂ ಬಿಡಿಸಿ ಹೆಳಬೇಕೊ ಎನೊ!
ಮತ್ತೊಂದು ಕೆಟ್ಟ ಚಟ ಕಾಗದ ಪೊಸ್ಟ್ ಮಾಡಿದ್ದು ಸಿಕ್ತೊ ಅಂತ ವಿಚಾರಣೆ..
ಹತ್ರದವರೆಲ್ಲ ಕೆಳ್ಸೊವಾಗಾ ನಾ ಕಾಗದ ಸಿಗದೆ ಬಂದಿದ್ದು ಅಂದ್ರೆ ಇರೊ ಮರ್ಯಾದೆನೂ ತೊಳೆದಾಂಗೆ ಅಯ್ತು ಅಲ್ವೇನೆ?..
ಮತ್ತೊಂದು ಕೆಟ್ಟ ಮಾತಿದೆ.. ಭಾವಯ್ಯ.. ಹೆಂಡತ್ತಿ ಕರಕ್ಕೊಂಡು ಬಂದಿಲ್ಲೆಯಾ?
ಹುಹ್.. ಈ ಮಹಾನುಭಾವ function ಮಾಡೋದು ನನ್ನ ಹೆಂಡತಿ ಹತ್ರ ಮಾತಾಡೊದಿಕ್ಕ!
ಊಟಕ್ಕೆ ಹೇಗೊ ಎನೊ ಕುಳಿತುಕೊಂಡಾಗ - ಸಮದಾನದಲ್ಲಿ ಊಟಮಾಡಿ ಅಂತಾನೆ..
ಹುಹ್.. ಹಸಿವಾಗಿದೆ.. ಸ್ವಲ್ಪ ಬೇಗ ಬೇಗ ಊಟ ಮಾಡೊಣಾಂದ್ರೆ, ಇವ ಊಟ ಮಡೊವಾಗಲೂ ಹೀಯಾಳಿಸುತ್ತನಲ್ಲ ಅಂದ್ಕೊಬೇಕಷ್ಟೆ..
ಯಾರೊ ಪರಿಚಯ ಇಲ್ಲದವ ನೀವು ಕೂಸಿನ ಕಡೆಯವ್ರೊ, ಅಲ್ಲ ಮಾಣಿ ಕಡೆಯವರೊ ಎಂಬ ಬೇರೆ ಅಟ್ಟಣೆ..
ಆ ಪುಣ್ಯತ್ಮನಿಗೆ ನಾನು ಹೇಳಿ ಬಂದದ್ದೊ ಅಲ್ಲಾ ಹೇಳದೆ ಬನ್ದದ್ದೊ ಎಂಬ proof ಬೇಕೆನಿಸುತ್ತದೆ!
ಬರೊಬೇಕಿದ್ರೆ ಎಷ್ಟೊ ಜನ ನೆಂಟರು ಹತ್ರ ಆಗಿರ್ತಾರೆ, ಯಾಕೆಂದ್ರೆ...
ಅವರಿಗೆ ನನ್ನ car ನಲ್ಲಿ drop ಬೇಕಿರುತ್ತದೆ..
ಹೀಗೆ ಹತ್ತು ಹಲವು ವಿಷಯಕ್ಕೆ ತಲೆ ಹಾಕದೆ ಸುಮ್ನೆ ದೂರದಲ್ಲಿ ಉಳುಕೊಂಡ್ರೆ ದೊಡ್ಡಮ್ಮನಿಗೆ ಆ ಹುಡುಗನಿಗೆ ಸಲ್ಪ ಮಾತು ಕಡಿಮೆ ಅಂತ ದೂರು ಕೊಡ್ತಾರೆ.
ಹೆಗಿದ್ರೂ ಕಷ್ಟ ಈ ಲೊಕದೊಳಗೆ!

Thursday, June 28, 2007

myKathe:"ನಿರೀಕ್ಷೆ"

ಅದೆಷ್ಟೊ ನಿರೀಕ್ಷೆಗಳ ಮತ್ತೆ ದೂರದಲ್ಲಿ ನನ್ನ ಬಸ್ಸಿನ ಶಬ್ಡ ಕೇಳಿಸಿದೆ. ಇನ್ನು ತಡವೇಕೆ? ಕೊಡೆ, ಬ್ಯಾಗು ಎಲ್ಲ ಕೈಲಿ ready. ಕಂಡಕ್ಟರನ ಸೀಟಿ ಕೆಳಿಸಿದೆ, ಕೆಸರು ಬಸ್ಸು ನಿಂತಿದೆ.. ಅಲೆದೆ ಅಲೆದೆ ಸೀಟಿಗೆ.. ಒಂದು ಸೀಟ್ ಬಾಕಿ ಇದೆ.. ಸುಂದರ ಕಂಗಳ ಯುವತಿ ಅಲ್ಲಿ ಕುಳಿತಿದ್ದಾಳೆ... ಮಲ್ಲಿಗೆ ಘಮ ಘಮ.. ಬಸ್ಸು ಹೊರಟಿತು, ಕೈಯ ಕೊಡೆಯ ಒಂದು ಹನಿ ನೀರು ಅವಳ ಸಲ್ವಾರ್ ಮೆಲೆ ಬಿತ್ತು, sorry ಎಂದೆ, ಪರ್ವಾಗಿಲ್ಲ ಎಂದ್ಲು, ಮುಂಗಾರು ಮಳೆಯ ಸಿಂಚನ ನಮ್ಮಿಬ್ಬರ ಮನಕ್ಕು ಅದಂತಿತ್ತು. ಕ್ಷಣ ಕಳೆದಾಗ ಮತ್ತೆ ಕಂಡಕ್ಟರನ ಸೀಟಿ ಮತ್ತು ಒಂದು ಆಂಟಿಯ ಆಗಮನ. ಕೈಯಲೊಂದು ಪಿಳ್ಳೆ ಬೆರೆ. ಗ್ರಹಚಾರ ಕೆಟ್ಟಿತ್ತೊ ಎನೊ.. ಕೈಗೆ ಬಂದ ತುತ್ತು ಬಾಯಿಗೆಲ್ಲಿ?! ಆ ಮಗುವಿನ ಕಣ್ಣು ನನ್ನ ಕುಕ್ಕುತ್ತಿತ್ತು. ಮಗುವಿನ ಮಾತ್ರ ಕರೆದರೆ ನನ್ನ ಪಕ್ಕದಾಕೆ ಎನೊ ತಿಳಿದರೆ ಎಂಬ ಭಯ. ಮತ್ತೆ ಅದರ ಸೂಸು. ಚಿ ಚೀ.. ಬೇಡಪ್ಪ ನನಗೆ! ಆ ಮಹಾತಾಯಿ ನನ್ನ ಮೈಮೇಲೆ ಬೀಳಲು ಸಿದ್ದತೆ ನಡೆಸುವಾಗ ಸೀಟ್ ಬಿಟ್ಟು ಕೊಡಬೆಕಾಯಿತು. ಕರಾಬ್ ರೋಡ್ ಕಣ್ರೀ.. ಹುಹ್.. ಎದುರಿಂದ ಬಂದ ಬಸ್ಸಿಗೆ ನಮ್ಮ್ ಬಸ್ಸು ಬ್ರೇಕ್ ಹೊಡೆಡಾಗ ಮಗು ನನ್ನ ಕೈಗೆ ರಟ್ಟಿತ್ತು. ಹೆಗೊ ತೂಗಿ ಹಿಡಕೊಂಡೆ. ಯುವತಿ ನಕ್ಕಳು.. ಮಗು ನಕ್ಕಿತು.. ಆಂಟಿಯೂ ನಕ್ಕಳು.. ಎಲ್ಲ ನಗುವಿನ ಅರ್ತ ಬೇರೆ ಬೇರೆ ಇತ್ತು.ಮಗುವು ಯುವತಿಯ ಜಡೆಯಲ್ಲಿ ಆಡುತ್ತಿತು.. ಮಲ್ಲಿಗೆ ಕಂಪೆರುತ್ತಿತ್ತು.. ಹೀಗೆ ಒಮ್ಮೆ ನೋಡಿದಾಗಲೆ ನಮ್ಮವರೆನಿಸುವವರು ಬಲು ಅಪರೂಪ ನೊಡಿ..
ಪೇಟೆ ಬರುತ್ತಿತು.. ಆಕೆಯ ಸೆಲ್ಲ್ ರಿಂಗಾಯಿತು... hi sweet heart.. ಈಗ ಒಂದೆರಡು ನಿಮಿಷದಲ್ಲಿ ಬಂದೆ ಎಂದಾಗ ತಿಳಿಯಿತು ಇದು ನಂದಲ್ಲ ಸೊತ್ತು!.. ಹೌದು ಕನ್ರೀ ನಮ್ಮರೆನಿಸುವವರು ನಮ್ಮವರಾಗರು.. ಆದ್ರೂ ಕೆಲ ಸಮಯ ನಮ್ಮವರಾಗುವ ಆ ಸಂತಸ ಇದೆಯಲ್ಲ, ಅದು ನಿಜಕ್ಕು ಅವಿಸ್ಮರಣೀಯ! ಅದೆಷ್ಟು ಜನ ನಾಮ್ಮವರಾಗುತ್ತಾರೊ.. ಅದೆಷ್ಟು ನಮ್ಮವರಾದವರನ್ನು ಮರೆತುಬಿಡುತ್ತೆವೊ.. ? ಬಸ್ಸು ಸಾಗಲಿ.. ಮುಂದೆ ಹೊಗಲಿ.. ಬಸ್ಸಲಿ ಹೊಗುವ ಭಾಗ್ಯ ನಮ್ಮದಾಗಲಿ!

Wednesday, June 27, 2007

myPOD:"Niece Enjoying in Water"

myKavana:"ಹ್ರುದಯಿ"

ನನ್ನ ಮನವನು ತೆರೆದು
ನನ್ನದೆಂಬುದ ಮರೆತು
ಎಲ್ಲವನು ಹೇಳಿರುವೆ
ಒ ಹ್ರುದಯವೆ

ನನ್ನ ಕನಸನು ಕಳಚಿ
ನಿನ್ನ ಮಡಿಲಲಿ ಇಟ್ಟೆ
ಸ್ವೀಕರಿಸು ಒ ಹ್ರುದಯಿ
ಇನ್ನೂ ಬೇಕೆನ್ನುತಾ..

ನನ್ನ ಸವಿ ನಿದ್ದೆಯನು
ಎಂದೆಂತೊ ನಾ ಬಿಟ್ಟು
ನಿನ್ನ ಕಣ್ಣನು ನೆನೆದೆ
ಕರೆಯೆ ಬಾರೆನ್ನುತ!

Thursday, June 21, 2007

myPOD - "ಅಮ್ರುತವರ್ಷಿಣಿ"

myPoem:"Could you do this?"

When I am in the Dark
No power and Dog may Bark:-(
Dont shut, but light a Candle!

When I am in the Rain
Chill and Tremble in my Vein!
Dont laugh, but open an Umbrella.

I Walk to your house and Sit,
Sunny day and body may Sweat
Dont get Tea but a breeze!

myKavana - "ರಾಖಿ ಹಾಡು"

Original:

Phoolon Ka Taaron Ka Sabka Kehna Hai
Ek Hazaron Mein Meri Behna Hai
Sari Umar Hame Sang Rehna Hai

Jabse Meri Aankhon Se Ho Gayi Tu Door
Tabse Sare Jeevan Ke Sapne Hain Choor
Aankhon Mein Neend Na Dil Mein Chaina Hai
Ek Hazaron Mein ...

Dekho Hum Tum Dono Hain Ek Dali Ke Phool
Maein Na Bhoola Tu Kaise Mujhko Gai Bhool
Aa Mere Paas Aa Keh Jo Kehna Hai
Ek Hazaron Mein ...

Translated:

ಸೂರ್ಯ-ಚಂದ್ರರ ಎಲ್ಲರ ಹೇಳಿಕೆಯು,
ಸಾವಿರಕೊಬ್ಬನೆ ನನ್ನ ಅಕ್ಕನ ಹೊಲಿಕೆಯು,
ಸಾಯೊ..ವರೆಗೂ ನಮಗೆ ಒಟ್ಟಿಗೆ ಬಾಳ್ವಿಕೆಯು!

ಎಂದೂ ನೀನು ನನ್ನನು ಅಗಲಿ ದೂರ ಹೊಗದಿರು
ನನ್ನಯ ಕನಸೆ, ನನ್ನಯ ಬೆಳಕೆ, ಎಂದೂ ಆರದಿರು
ಎದೆಯಲಿ ನೊವು ಮನದಲಿ ಮೌನ ನೀ ತಾರದಿರು!
ಸಾವಿರಕೊಬ್ಬನೆ ನನ್ನ ಅಕ್ಕನ ಹೊಲಿಕೆಯು..
ಸಾಯೊ..ವರೆಗೂ ನಮಗೆ ಒಟ್ಟಿಗೆ ಬಾಳ್ವಿಕೆಯು!

ನೊಡೇ ನಾನು ನೀನು ಇಲ್ಲಿ ಹೂವಿನ ಎಸಳುಗಳು
ನಾ ಮರೆತಿಲ್ಲ ಹಿಂದಿನ ನಮ್ಮಯ ಸುಂದರ ನೆನಪುಗಳು
ಬಾರೆ ಕೇಳೆ ಮನದ ಹೇಳಡ ಮಾತುಗಳು!
ಸಾವಿರಕೊಬ್ಬನೆ ನನ್ನ ಅಕ್ಕನ ಹೊಲಿಕೆಯು..
ಸಾಯೊ..ವರೆಗೂ ನಮಗೆ ಒಟ್ಟಿಗೆ ಬಾಳ್ವಿಕೆಯು!

myHarate:"ಕೊಡೆಯ ಬಿಡಿಸಿದಾಗ!"

ಹೌದು ಕನ್ರೀ.. ಎಲ್ಲೊ ಮೂಲೆಲಿ ಬಿದ್ದಿರುತ್ತೆ.. ನಾಲ್ಕು ಮಳೆ ಹನಿ ಬಿದ್ದಾಗ ಮತ್ತೆ ಎದುರು ಬಂದು ಕೈಯನ್ನ ಅಲಂಕರಿಸುತ್ತೆ..

ಮೂಲೆಲಿದ್ದ ಅದೆಷ್ಟೊ ನೆನಪು ಕೊಡೆಯೊಂದಿಗೆ ಬಿಡಿಸಿಕೊಳ್ಳುತ್ತೆ.. ನಮ್ಮನ್ನು ಜೀವಂತ ಕೊಲ್ಲುತ್ತೆ!

ಆ ದಿನ ಅಚಾನಕ್ ಆಗಿ ಮಳೆ ಬಂದಿದ್ದು, ನನ್ನ ಒಂದೆ ಕೊಡೆ ಆಪ್ತ/ಆಪ್ತೆಯರಿಗೆ ಆಶ್ರಯ ನೀಡಿದ್ದು, ಆಗ ಗುಡುಗಿದ್ದು, ಮತ್ತೆ ಮಿಂಚಿದ್ದು.. ಆ ಮಿಂಚಿಹೋದ ಕ್ಷಣ ಇನ್ನೆಂದೂ ಬರಲಾರದು!

ಅದೇ ಕೊಡೆ, ಅದೇ ಮೊದಲ ಮಳೆ.. ಅದರೆ ವರುಷಗಳು ಉರುಳಿವೆ!

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಒಡ್ಡಿ,
ಮತ್ತೆ ಬರುವವು ಮನದಿ ಕೊಡೆಯ ನೆನಪು!

ಅಂದ ಹಾಗೆ ಹೆಳೋಕೆ ಮರೆತೆ..ಇದು ಬರಿಯ ಕಾಲ್ಪನಿಕ...

Sunday, June 17, 2007

myHarate:"ಶುಂಠಿ ಪುರಾಣ"

ಶುಂಠಿ ಸೂಪರೂ ಆದ್ರೆ ಭಾರೀ ಡೇಂಜರೂ
ಶುಂಠಿಯ ಸೈಡ್-ಇಫೆಕ್ಟ್ ಇನ್ನೂ ಡೇಂಜರೂ..
ಹೀಗೆ ಅನ್ನುತ್ತಲೆ ಶುಂಠಿ ಸಹಿತ ಲಿಂಬೂ ಶರಬತ್, ಶುಂಠಿ ಸಹಿತ ಸಜ್ಜಿಗೆ ರೊಟ್ಟಿ, ಶುಂಠಿ ಸಹಿತ ಮಜ್ಜಿಗೆ ನೀರು ಕುಡಿಯುತ್ತಲೆ ಇರುತ್ತೇವೆ!
......
"ಶ್ರೀ ಮನೊಹರ ಸ್ವಾಮಿ ಪರಾಕೂ...", ಅಮ್ಮಣ್ಣಾಯರ ಯಕ್ಷಗಾನ ಪದ ಮೊಳಗಿದಾಗಲೆ ತಿಳಿದದ್ದು ಜಂಗಮ ಘಂಟೆ ಮೊಳಗುತ್ತಿದೆ ಅಂತ! ಓಡಿ ಹೋಗಿ ತೆಗೆದಾಗ ಎರ್ಟೆಲ್ ಗ್ರಾಹಕ ಸೇವೆಗೆ ಸ್ವಾಗತ ಎನ್ನಬೇಕೆ! ಅತ್ತ ಪದವು ಪೂರ್ತಿಯಾಗಿಲ್ಲ, ಇತ್ತ ಕರೆಯೂ ಪೂರ್ತಿ ಆಗ ಬಿಡಲಿಲ್ಲ!
......
ಶುಂಠಿ ಯಾಕೆ ಇಷ್ಟು ಡೆಂಜರೂ ಅನ್ನೊದು ನೀವೆ ಕೇಳಿ ತಿಳಿದುಕೊಳ್ಳಿ.. ಅಂದ ಹಾಗೆ ಶುಂಠಿಯ ವಿರುದ್ದಾರ್ತಕ ಪದ ಮಾತ್ರ ಈರುಳ್ಳಿ. ಶುಂಠಿ ಬಾಯಿ ವಾಸನೆ ತೊಳೆದರೆ, ಈರುಳ್ಳಿ ಬಾಯಿ ವಾಸನೆ ತರುವುದು:-) ಶುಂಠಿ ಮುದಿತನದ ಸಂಕೇತವಾದರೆ ಈರುಳ್ಳಿ ಯೌವನದ ಸಂಕೇತವಂತೆ.. ಅಂದಹಾಗೆ ಈರುಳ್ಳಿ ಮೈಯೆಲ್ಲ ದುಂಡು-ದುಂಡಗೆ ಇರುತ್ತೆ, ಶಂಠಿಗೆ ಒಣಗಿರೊ ಮುದಿ ತೊದಲು!
ಇವನ್ನ ಜೊತೆಯಾಗಿ ಹಾಕೊದು ವಾಸಿ ಅನ್ಸುತ್ತೆ ಅಲ್ವೆ?

ಶುಂಠಿ ಬಿನಾ ಕ್ಯಾ ಜೀನ ಯಾರೊ,
ಶುಂಠಿ ಬಿನಾ ಕ್ಯಾ ಮರ್ನಾ!

Saturday, June 16, 2007

myPOD:"ಮುಂಗಾರ ಹನಿ"

ಫೊಟೋ ತೆಗೆಯೋದಕ್ಕೆ ಎಲ್ಲೂ ಹೊಗಕ್ಕೆ ಅಗ್ತಾ ಇಲ್ಲ ಕಣ್ರೀ, 'ಮುಂಗಾರು ಮಳೆ'ಯಂತೆ ನನ್ನ 'ಮುಂಗಾರ ಹನಿ' ನಿಮಗಿಷ್ಟ ಅಗ್ತದೆ ಅಂತ ಅಂದ್ಕೊಳ್ತೀನಿ!
--Shan!

myHarate:"ಹೀಗೊಂದು ಸ್ವಗತ!"

ಹೀಗೊಂದು ಸ್ವಗತ!

ಒಂದೆ ಎರಡೆ, ತುಂಬ ತಿಂಗಳುರುಳಿತು. ಐಶ್ ಮದುವೆ ಕಳೆದು ಹೋಯಿತು.. ಅದೆಷ್ಟೊ ವಿವೇಕ್ ಸಲ್ಮಾನ್ ದೆವದಾಸ್ ಜತೆ ಸೆರಿಹೋದ್ರು. ನಮ್ಮಲ್ಲು ಅನೇಕರು ಅಂತೆಯೆ ಪರಿತ್ಯಕ್ತರಾದರು.. ನೀವ್ ನಂಗೆ ಸಿಗಲ್ಲ ಅಂತ ಗೊತ್ತು ಕಣ್ರೀ, ಅದಕ್ಕೆ ಬಿಟ್ಟು ಬಿಟ್ಟೆ ಅಂತ ಸ್ವಪ್ರೇರಿತರಾಗಿ ತ್ಯಾಗಿಗಳಾದ್ರು.. ಹೌದ್ರೀ, ಮದ್ವೆ ದಿನ ಐಶ್-ಗೆ ಇರೋ ನೋವಿಗಿಂತ ನಮ್ಮೆಲ್ಲ ಈ ಒಬೆರೊಯ್-ಗಳು ಪಡೊ ನೋವು ಭಯಾನಕ ಕಣ್ರೀ, ಅತ್ತ ಸಾಯಿಸೊದು ಇಲ್ಲ, ಇತ್ತ ಬದುಕಿಸೊದು ಇಲ್ಲ.. ಸ್ವಲ್ಪ ಸಮಯದ ಮತ್ತೆ ನೆನಪನ್ನ ಬಿಟ್ಟು ಹೊಗುತ್ತೆ ಅಷ್ಟೆ!

ಎಷ್ಟು ಐಶ್, ಒಬೆರೊಯ್, ಸ್ವಾರ್ಥಿ ಅಭಿಷೇಕ್ ಇಲ್ಲಿರ್ತಾರೊ ಎನೊ, ಅದಕ್ಕಿಂತ ಹೆಚ್ಚಾಗಿ ನಮ್ಮ ವಿಶ್ಲೆಷಣೆ ಇಲ್ಲಿ ಪ್ರೀತಿಯ ಹೊಳೆಯ ಬಗ್ಗೆ.. ಇದು ಎಲ್ಲರ ಹ್ರುದಯದಲ್ಲೂ ಎಂದೂ ಬತ್ತದೆ ಹರಿಯುತ್ತಿರುವುದಿಲ್ಲವೇನು? ಕೆಲವರು ಪ್ರೀತಿ ಹೊಳೆಯಲ್ಲಿ ಕೊಚ್ಚಿ ಹೋಗುತ್ತಾರೆ, ಕೆಲವರು ಮುಳುಗಿ ಹೋಗುತ್ತಾರೆ, ಕೆಲವರು ದಡದಿಂದ ಗಾಳ ಹಾಕಿ, ಮೀನನ್ನಷ್ಟೆ ಹಿಡುಕೊಂಡು ಹೋಗುತ್ತಾರೆ, ಕೆಲವರು ನೀರು ಆರಿದಾಗ ಮರಳ ಹೆಕ್ಕಲಷ್ಟೆ ಬರುವರು, ಕೆಲವರು ಹೊಳೆಯಲ್ಲಿ ಈಜೊದ ನೊಡಕ್ಕಷ್ಟೆ ಬರುವರು, ಕೆಲವರು ಸ್ನಾನ ಮಾಡಿ ಅನುಭವಿಸುವರು! ಹೌದು, ಸ್ನಾನ ಮಾಡಲು ಅಗತ್ಯ ನೀರಿಗಿಳಿಯಬೆಕು, ಮುಳುಗೊ, ಕೊಚ್ಚಿಹೊಗೊ ಭೀತಿ ಇರಬಾರದು!

ಹೊಳೆಯಲ್ಲಿ ತುಂಬ ಮಂದಿ ಸ್ನಾನ ಮಾಡೊದು ಸಹಜ, ಅದನ್ನ ಸಹಜ ಅಂದುಕೊಳ್ಳಿ, ಅದ್ರೆ ಅದು ಸೇರೊ ಸಾಗರ ಒಂದೆ ಇರುತ್ತೆ ನೊಡಿ.. ಸಾಗರ ದೊಡ್ಡದು, ನದಿ ಯಾರನ್ನ ಸೇರಬೆಕು ಎಂಬುದು ನದಿಗಷ್ಟೆ ಗೊತ್ತಿರುತ್ತದೆ.. ಆದ್ರೆ ಸಾಗರ ಸೆರೊ ಹೊತ್ತಿಗೆ ಪ್ರೀತಿಯ ನದಿ ಸಿಹಿತನ ಕಳೆದು ಬರೆ ಉಪ್ಪುಪ್ಪಾಗಿರದಂತೆ ನೊಡಿಕೊಳ್ಳಬೇಕಿದೆ!!

myPOD: "ಸ್ಪಟಿಕ"

Tuesday, June 12, 2007

myKavana - "ನೀರ ಮೆಲಣ ಗುಳ್ಳೆ ನಿಜವಲ್ಲ ಹರಿಯೆ!"

ಅಂದು...

ಹರಾಡುತಿತ್ತ ಜೊಕಾಲಿಯಲ್ಲಿ
ತೂಗಾಡುತಿತ್ತ ಜೊಕಾಲಿಯಲ್ಲಿ
ನನ್ನ ಹ್ರುದಯ ಆನಂದದಲ್ಲಿ

ಆಚೆಯೂ ಒಮ್ಮೆ ಈಚೆಯೂ ಒಮ್ಮೆ...
ಮೇಲೆಯೂ ಒಮ್ಮೆ ಕೆಳಗೂ ಒಮ್ಮೆ!

ಇಂದು...

ನೆತಾಡುತ್ತಿದೆಯಾ ಕಿರುಬಳ್ಳಿಯಲ್ಲಿ
ಒಲಾಡುತ್ತಿದೆಯಾ ಕಿರುಬಳ್ಳಿಯಲ್ಲಿ
ನನ್ನ ಹ್ರುದಯ ಬೇಜಾರಿನಲ್ಲಿ:-)

ಆಚೆಯೂ ಅಲ್ಲ ಈಚೆಯೂ ಅಲ್ಲ...
ಮೆಲೆಯೂ ಅಲ್ಲ ಕೆಳಗೂ ಅಲ್ಲ!

ನೀರ ಮೆಲಣ ಗುಳ್ಳೆ ನಿಜವಲ್ಲ ಹರಿಯೆ!

Sunday, June 10, 2007

myHarate - "Ondu Doseya Suththa"

ಒಂದು ದೋಸೆಯ ಸುತ್ತ!

ಕೆಲವೊಮ್ಮೆ ಹೋಟೆಲಿಗೆ ಹೊದಾಗ ದೋಸೆ ತಿನ್ನೋದು ಅನಿವಾರ್ಯ. ಹಸಿವೊ, ಅಲ್ಲ ಬೆರೇನು ಇರದೆಯೊ, ಅಲ್ಲ ಚಪಲವೊ, ದೋಸೆ ಕಾಯಂ. ದೋಸೆ ಎಂದಾಗ ಮಾಣಿಯ ಕೂಗು ನೆನಪಿಗೆ ಬರುತ್ತದೆ. ಸಾದ, ಸೆಟ್, ತುಪ್ಪ, ರವ, ಮಸ್ಸಾಲೆ, plain, ಬೆಣ್ಣೆ, ನೀರು ಹೀಗೆ ಸಾಗುತ್ತದೆ. ಕೊನೆಗೆ ಹೇಳಿದುದು ಮಾತ್ರ ನೆನಪುಳಿದು ಅದನ್ನೆ ಹೇಳುತ್ತೆವೆ. ಅಷ್ಟಕ್ಕೆ ಮುಗಿಯದು. ಕೆಲವರು ಎಣ್ಣೆ ಕಡಿಮೆ ಸಾದ, ಎಣ್ಣೇ ಬೆಡ ಸಾದ ಹೀಗೆ ಮತ್ತೆ customize ಮಾಡ್ತಾರೆ.. ಅಂತು ಇಂತು ಬಿಸಿ ಬಿಸಿ ದೋಸೆ ತಿನ್ನೊ ಮೊಜು really superb!

ಒಮ್ಮೆ ಒಂದು ಹೋಟೆಲಲ್ಲಿ hand wash ಮಾಡಲು ದಾರಿ ತಪ್ಪಿ ಅಡುಗೆ ರೂಮ್ entry ಪಡೆದಿದ್ದೆ. ಆ ವಿಶ್ವರೂಪ ಕಂಡು ಬೆರಗಾಗಿದ್ದೆ. ದೋಸೆ ಕಾವಲಿ ಸುತ್ತ ಹಿಡಿಸೂಡಿ, ಬಿಸಿ ಕಾವಲಿಗೆಗೆ ನೀರ ಸಿಂಪಡಿಸುವುದೆ ಅದರ ಕಾರ್ಯ. ಆ ನೀರು, ಆವಿ, ಹಿಡಿಸೂಡಿ, ಬಿಸಿ ಕಾವಲಿ ಫೊಟೊ ತೆಗೆಯುವ ಕಾರ್ಯ ಇನ್ನೂ ಬಾಕಿಯಿದೆ. ಹೆಚ್ಚು ವಿಶ್ಲೇಷಿಸಿದರೆ ದೋಸೆ ಇನ್ನೆಂದೂ ನಿಮಗೆ ಹಿಡಿಸದು. ದೋಸೆ ಒಳ ನೊಟ ಎಂದೂ ಬೆಡ. Just enjoy the taste in plate!

Have a wonderful day ahead!

--Shan!

myHarate:"ವಿಪರ್ಯಾಸ"

ಹುಟ್ಟಿದಾಗಿಂದ ತಂದೆ ತಾಯಿನ ಪ್ರೀತಿಸಿದ್ದಾಯ್ತು, ಮತ್ತೆ ಕೆಲವಷ್ಟು ಹುಡುಗೀರ್ನ/ಹುಡುಗರ್ನ ಇಷ್ಟ ಪಟ್ಟು ಪ್ರೀತಿಸಿದ್ದಾಯ್ತು, ಕೊನೆಗೆ ಒಬ್ಲನ್ನ/ಒಬನ್ನ ಮದ್ವೆ ಆಗಿ ಪ್ರೀತಿಸಿದ್ದಾಯ್ತು, ಮಕ್ಕಳಾದ್ರು, ಅವ್ರನ್ನು ಪ್ರೀತಿಸಿದ್ದಾಯ್ತು, ಮಕ್ಕಳಿಗೆ ಮಕ್ಕಳಾದ್ರು, ಅವ್ರನ್ನು ಪ್ರೀತಿಸಿದ್ದಾಯ್ತು, ಕೊನೆಗೆ ತಿಳೀತು, ನನ್ನ ನಾ ಪ್ರೀತಿಸೀನೆ ಇಲ್ಲ, ಜೀವನ್ ಪೂರ್ತಿ ಅದನ್ನ ಮಾಡಕ್ಕೆ ಮರೆತೆ ಹೋಗಿತ್ತು..

ಹೌದು.. ಸಣ್ಣವರಿರುವಾಗ ನಾವು ಎಷ್ಟೊ ವಿಷಯಾನ ಕೆಳೊದ್ರಲ್ಲೆ ಕಲಿಯೊದ್ರಲ್ಲೆ time ಹೋಗುತ್ತೆ.. ಮತಾಡೊಕ್ಕೆ ಬರಲ್ಲ ಆವಗ. ಮತಾಡೊಕ್ಕೆ ಬರುವಾಗ ಮತು ಕಡಿಮೆ ಆಗುತ್ತೆ.. ಕೊನೆಗೊಮ್ಮೆ ಇಹಲೊಕ ತ್ಯಜಿಸುವಾಗ ಮತಾಡಬೇಕೆನುಸುತ್ತೆ, ಆದ್ರೆ ಕೇಳಕ್ಕೆ ಯಾರು ಇರಲ್ಲ..

ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (banglore ಗೆ ;-))
ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (US ಗೆ)
ಮತ್ತೆ ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (ಮದುವೆ ಆಗಿ)
ಮತ್ತೆ ಸ್ವಲ್ಪ ವರ್ಶ ಕಳೆದ್ರೆ ಅವ ಹೊದ ಇವ ಹೊದ ಅಂತೀವೊ ಎನೊ? (ಜಗವ ತ್ಯಜಿಸಿ!)

ಹ ಹಾ ಹಾ..

ಇದು ಎಂತಹ ವಿಪರ್ಯಾಸ ಅಲ್ಲವೆ? ;-)

myPOD:"Male Neera Hani"