Saturday, June 16, 2007

myHarate:"ಹೀಗೊಂದು ಸ್ವಗತ!"

ಹೀಗೊಂದು ಸ್ವಗತ!

ಒಂದೆ ಎರಡೆ, ತುಂಬ ತಿಂಗಳುರುಳಿತು. ಐಶ್ ಮದುವೆ ಕಳೆದು ಹೋಯಿತು.. ಅದೆಷ್ಟೊ ವಿವೇಕ್ ಸಲ್ಮಾನ್ ದೆವದಾಸ್ ಜತೆ ಸೆರಿಹೋದ್ರು. ನಮ್ಮಲ್ಲು ಅನೇಕರು ಅಂತೆಯೆ ಪರಿತ್ಯಕ್ತರಾದರು.. ನೀವ್ ನಂಗೆ ಸಿಗಲ್ಲ ಅಂತ ಗೊತ್ತು ಕಣ್ರೀ, ಅದಕ್ಕೆ ಬಿಟ್ಟು ಬಿಟ್ಟೆ ಅಂತ ಸ್ವಪ್ರೇರಿತರಾಗಿ ತ್ಯಾಗಿಗಳಾದ್ರು.. ಹೌದ್ರೀ, ಮದ್ವೆ ದಿನ ಐಶ್-ಗೆ ಇರೋ ನೋವಿಗಿಂತ ನಮ್ಮೆಲ್ಲ ಈ ಒಬೆರೊಯ್-ಗಳು ಪಡೊ ನೋವು ಭಯಾನಕ ಕಣ್ರೀ, ಅತ್ತ ಸಾಯಿಸೊದು ಇಲ್ಲ, ಇತ್ತ ಬದುಕಿಸೊದು ಇಲ್ಲ.. ಸ್ವಲ್ಪ ಸಮಯದ ಮತ್ತೆ ನೆನಪನ್ನ ಬಿಟ್ಟು ಹೊಗುತ್ತೆ ಅಷ್ಟೆ!

ಎಷ್ಟು ಐಶ್, ಒಬೆರೊಯ್, ಸ್ವಾರ್ಥಿ ಅಭಿಷೇಕ್ ಇಲ್ಲಿರ್ತಾರೊ ಎನೊ, ಅದಕ್ಕಿಂತ ಹೆಚ್ಚಾಗಿ ನಮ್ಮ ವಿಶ್ಲೆಷಣೆ ಇಲ್ಲಿ ಪ್ರೀತಿಯ ಹೊಳೆಯ ಬಗ್ಗೆ.. ಇದು ಎಲ್ಲರ ಹ್ರುದಯದಲ್ಲೂ ಎಂದೂ ಬತ್ತದೆ ಹರಿಯುತ್ತಿರುವುದಿಲ್ಲವೇನು? ಕೆಲವರು ಪ್ರೀತಿ ಹೊಳೆಯಲ್ಲಿ ಕೊಚ್ಚಿ ಹೋಗುತ್ತಾರೆ, ಕೆಲವರು ಮುಳುಗಿ ಹೋಗುತ್ತಾರೆ, ಕೆಲವರು ದಡದಿಂದ ಗಾಳ ಹಾಕಿ, ಮೀನನ್ನಷ್ಟೆ ಹಿಡುಕೊಂಡು ಹೋಗುತ್ತಾರೆ, ಕೆಲವರು ನೀರು ಆರಿದಾಗ ಮರಳ ಹೆಕ್ಕಲಷ್ಟೆ ಬರುವರು, ಕೆಲವರು ಹೊಳೆಯಲ್ಲಿ ಈಜೊದ ನೊಡಕ್ಕಷ್ಟೆ ಬರುವರು, ಕೆಲವರು ಸ್ನಾನ ಮಾಡಿ ಅನುಭವಿಸುವರು! ಹೌದು, ಸ್ನಾನ ಮಾಡಲು ಅಗತ್ಯ ನೀರಿಗಿಳಿಯಬೆಕು, ಮುಳುಗೊ, ಕೊಚ್ಚಿಹೊಗೊ ಭೀತಿ ಇರಬಾರದು!

ಹೊಳೆಯಲ್ಲಿ ತುಂಬ ಮಂದಿ ಸ್ನಾನ ಮಾಡೊದು ಸಹಜ, ಅದನ್ನ ಸಹಜ ಅಂದುಕೊಳ್ಳಿ, ಅದ್ರೆ ಅದು ಸೇರೊ ಸಾಗರ ಒಂದೆ ಇರುತ್ತೆ ನೊಡಿ.. ಸಾಗರ ದೊಡ್ಡದು, ನದಿ ಯಾರನ್ನ ಸೇರಬೆಕು ಎಂಬುದು ನದಿಗಷ್ಟೆ ಗೊತ್ತಿರುತ್ತದೆ.. ಆದ್ರೆ ಸಾಗರ ಸೆರೊ ಹೊತ್ತಿಗೆ ಪ್ರೀತಿಯ ನದಿ ಸಿಹಿತನ ಕಳೆದು ಬರೆ ಉಪ್ಪುಪ್ಪಾಗಿರದಂತೆ ನೊಡಿಕೊಳ್ಳಬೇಕಿದೆ!!

No comments: