Thursday, June 28, 2007

myKathe:"ನಿರೀಕ್ಷೆ"

ಅದೆಷ್ಟೊ ನಿರೀಕ್ಷೆಗಳ ಮತ್ತೆ ದೂರದಲ್ಲಿ ನನ್ನ ಬಸ್ಸಿನ ಶಬ್ಡ ಕೇಳಿಸಿದೆ. ಇನ್ನು ತಡವೇಕೆ? ಕೊಡೆ, ಬ್ಯಾಗು ಎಲ್ಲ ಕೈಲಿ ready. ಕಂಡಕ್ಟರನ ಸೀಟಿ ಕೆಳಿಸಿದೆ, ಕೆಸರು ಬಸ್ಸು ನಿಂತಿದೆ.. ಅಲೆದೆ ಅಲೆದೆ ಸೀಟಿಗೆ.. ಒಂದು ಸೀಟ್ ಬಾಕಿ ಇದೆ.. ಸುಂದರ ಕಂಗಳ ಯುವತಿ ಅಲ್ಲಿ ಕುಳಿತಿದ್ದಾಳೆ... ಮಲ್ಲಿಗೆ ಘಮ ಘಮ.. ಬಸ್ಸು ಹೊರಟಿತು, ಕೈಯ ಕೊಡೆಯ ಒಂದು ಹನಿ ನೀರು ಅವಳ ಸಲ್ವಾರ್ ಮೆಲೆ ಬಿತ್ತು, sorry ಎಂದೆ, ಪರ್ವಾಗಿಲ್ಲ ಎಂದ್ಲು, ಮುಂಗಾರು ಮಳೆಯ ಸಿಂಚನ ನಮ್ಮಿಬ್ಬರ ಮನಕ್ಕು ಅದಂತಿತ್ತು. ಕ್ಷಣ ಕಳೆದಾಗ ಮತ್ತೆ ಕಂಡಕ್ಟರನ ಸೀಟಿ ಮತ್ತು ಒಂದು ಆಂಟಿಯ ಆಗಮನ. ಕೈಯಲೊಂದು ಪಿಳ್ಳೆ ಬೆರೆ. ಗ್ರಹಚಾರ ಕೆಟ್ಟಿತ್ತೊ ಎನೊ.. ಕೈಗೆ ಬಂದ ತುತ್ತು ಬಾಯಿಗೆಲ್ಲಿ?! ಆ ಮಗುವಿನ ಕಣ್ಣು ನನ್ನ ಕುಕ್ಕುತ್ತಿತ್ತು. ಮಗುವಿನ ಮಾತ್ರ ಕರೆದರೆ ನನ್ನ ಪಕ್ಕದಾಕೆ ಎನೊ ತಿಳಿದರೆ ಎಂಬ ಭಯ. ಮತ್ತೆ ಅದರ ಸೂಸು. ಚಿ ಚೀ.. ಬೇಡಪ್ಪ ನನಗೆ! ಆ ಮಹಾತಾಯಿ ನನ್ನ ಮೈಮೇಲೆ ಬೀಳಲು ಸಿದ್ದತೆ ನಡೆಸುವಾಗ ಸೀಟ್ ಬಿಟ್ಟು ಕೊಡಬೆಕಾಯಿತು. ಕರಾಬ್ ರೋಡ್ ಕಣ್ರೀ.. ಹುಹ್.. ಎದುರಿಂದ ಬಂದ ಬಸ್ಸಿಗೆ ನಮ್ಮ್ ಬಸ್ಸು ಬ್ರೇಕ್ ಹೊಡೆಡಾಗ ಮಗು ನನ್ನ ಕೈಗೆ ರಟ್ಟಿತ್ತು. ಹೆಗೊ ತೂಗಿ ಹಿಡಕೊಂಡೆ. ಯುವತಿ ನಕ್ಕಳು.. ಮಗು ನಕ್ಕಿತು.. ಆಂಟಿಯೂ ನಕ್ಕಳು.. ಎಲ್ಲ ನಗುವಿನ ಅರ್ತ ಬೇರೆ ಬೇರೆ ಇತ್ತು.ಮಗುವು ಯುವತಿಯ ಜಡೆಯಲ್ಲಿ ಆಡುತ್ತಿತು.. ಮಲ್ಲಿಗೆ ಕಂಪೆರುತ್ತಿತ್ತು.. ಹೀಗೆ ಒಮ್ಮೆ ನೋಡಿದಾಗಲೆ ನಮ್ಮವರೆನಿಸುವವರು ಬಲು ಅಪರೂಪ ನೊಡಿ..
ಪೇಟೆ ಬರುತ್ತಿತು.. ಆಕೆಯ ಸೆಲ್ಲ್ ರಿಂಗಾಯಿತು... hi sweet heart.. ಈಗ ಒಂದೆರಡು ನಿಮಿಷದಲ್ಲಿ ಬಂದೆ ಎಂದಾಗ ತಿಳಿಯಿತು ಇದು ನಂದಲ್ಲ ಸೊತ್ತು!.. ಹೌದು ಕನ್ರೀ ನಮ್ಮರೆನಿಸುವವರು ನಮ್ಮವರಾಗರು.. ಆದ್ರೂ ಕೆಲ ಸಮಯ ನಮ್ಮವರಾಗುವ ಆ ಸಂತಸ ಇದೆಯಲ್ಲ, ಅದು ನಿಜಕ್ಕು ಅವಿಸ್ಮರಣೀಯ! ಅದೆಷ್ಟು ಜನ ನಾಮ್ಮವರಾಗುತ್ತಾರೊ.. ಅದೆಷ್ಟು ನಮ್ಮವರಾದವರನ್ನು ಮರೆತುಬಿಡುತ್ತೆವೊ.. ? ಬಸ್ಸು ಸಾಗಲಿ.. ಮುಂದೆ ಹೊಗಲಿ.. ಬಸ್ಸಲಿ ಹೊಗುವ ಭಾಗ್ಯ ನಮ್ಮದಾಗಲಿ!

No comments: