ಹೌದು ಕನ್ರೀ.. ಎಲ್ಲೊ ಮೂಲೆಲಿ ಬಿದ್ದಿರುತ್ತೆ.. ನಾಲ್ಕು ಮಳೆ ಹನಿ ಬಿದ್ದಾಗ ಮತ್ತೆ ಎದುರು ಬಂದು ಕೈಯನ್ನ ಅಲಂಕರಿಸುತ್ತೆ..
ಮೂಲೆಲಿದ್ದ ಅದೆಷ್ಟೊ ನೆನಪು ಕೊಡೆಯೊಂದಿಗೆ ಬಿಡಿಸಿಕೊಳ್ಳುತ್ತೆ.. ನಮ್ಮನ್ನು ಜೀವಂತ ಕೊಲ್ಲುತ್ತೆ!
ಆ ದಿನ ಅಚಾನಕ್ ಆಗಿ ಮಳೆ ಬಂದಿದ್ದು, ನನ್ನ ಒಂದೆ ಕೊಡೆ ಆಪ್ತ/ಆಪ್ತೆಯರಿಗೆ ಆಶ್ರಯ ನೀಡಿದ್ದು, ಆಗ ಗುಡುಗಿದ್ದು, ಮತ್ತೆ ಮಿಂಚಿದ್ದು.. ಆ ಮಿಂಚಿಹೋದ ಕ್ಷಣ ಇನ್ನೆಂದೂ ಬರಲಾರದು!
ಅದೇ ಕೊಡೆ, ಅದೇ ಮೊದಲ ಮಳೆ.. ಅದರೆ ವರುಷಗಳು ಉರುಳಿವೆ!
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಒಡ್ಡಿ,
ಮತ್ತೆ ಬರುವವು ಮನದಿ ಕೊಡೆಯ ನೆನಪು!
ಅಂದ ಹಾಗೆ ಹೆಳೋಕೆ ಮರೆತೆ..ಇದು ಬರಿಯ ಕಾಲ್ಪನಿಕ...
Thursday, June 21, 2007
Subscribe to:
Post Comments (Atom)
No comments:
Post a Comment