Sunday, June 10, 2007

myHarate:"ವಿಪರ್ಯಾಸ"

ಹುಟ್ಟಿದಾಗಿಂದ ತಂದೆ ತಾಯಿನ ಪ್ರೀತಿಸಿದ್ದಾಯ್ತು, ಮತ್ತೆ ಕೆಲವಷ್ಟು ಹುಡುಗೀರ್ನ/ಹುಡುಗರ್ನ ಇಷ್ಟ ಪಟ್ಟು ಪ್ರೀತಿಸಿದ್ದಾಯ್ತು, ಕೊನೆಗೆ ಒಬ್ಲನ್ನ/ಒಬನ್ನ ಮದ್ವೆ ಆಗಿ ಪ್ರೀತಿಸಿದ್ದಾಯ್ತು, ಮಕ್ಕಳಾದ್ರು, ಅವ್ರನ್ನು ಪ್ರೀತಿಸಿದ್ದಾಯ್ತು, ಮಕ್ಕಳಿಗೆ ಮಕ್ಕಳಾದ್ರು, ಅವ್ರನ್ನು ಪ್ರೀತಿಸಿದ್ದಾಯ್ತು, ಕೊನೆಗೆ ತಿಳೀತು, ನನ್ನ ನಾ ಪ್ರೀತಿಸೀನೆ ಇಲ್ಲ, ಜೀವನ್ ಪೂರ್ತಿ ಅದನ್ನ ಮಾಡಕ್ಕೆ ಮರೆತೆ ಹೋಗಿತ್ತು..

ಹೌದು.. ಸಣ್ಣವರಿರುವಾಗ ನಾವು ಎಷ್ಟೊ ವಿಷಯಾನ ಕೆಳೊದ್ರಲ್ಲೆ ಕಲಿಯೊದ್ರಲ್ಲೆ time ಹೋಗುತ್ತೆ.. ಮತಾಡೊಕ್ಕೆ ಬರಲ್ಲ ಆವಗ. ಮತಾಡೊಕ್ಕೆ ಬರುವಾಗ ಮತು ಕಡಿಮೆ ಆಗುತ್ತೆ.. ಕೊನೆಗೊಮ್ಮೆ ಇಹಲೊಕ ತ್ಯಜಿಸುವಾಗ ಮತಾಡಬೇಕೆನುಸುತ್ತೆ, ಆದ್ರೆ ಕೇಳಕ್ಕೆ ಯಾರು ಇರಲ್ಲ..

ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (banglore ಗೆ ;-))
ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (US ಗೆ)
ಮತ್ತೆ ಸ್ವಲ್ಪ ಕಾಲ ಅವ ಹೊದ ಇವ ಹೊದ ಅಂತೀವಿ (ಮದುವೆ ಆಗಿ)
ಮತ್ತೆ ಸ್ವಲ್ಪ ವರ್ಶ ಕಳೆದ್ರೆ ಅವ ಹೊದ ಇವ ಹೊದ ಅಂತೀವೊ ಎನೊ? (ಜಗವ ತ್ಯಜಿಸಿ!)

ಹ ಹಾ ಹಾ..

ಇದು ಎಂತಹ ವಿಪರ್ಯಾಸ ಅಲ್ಲವೆ? ;-)

1 comment:

Muhammad Rafeeq C A said...

Really Good one ... Anda haage ninge madve aaytha? -Rafeeq.