ನಾನು ಮದುವೆ ಅಥವಾ ಇನ್ನಿತರೇ ಸಮಾರಂಭಕ್ಕೆ ಹೊಗೊದನ್ನು ಅಷ್ಟೆನೂ ಇಷ್ಟ ಪಡೊದಿಲ್ಲ. ಊಟ ಒಂದೆ ನಾನಿಷ್ಟಪಡೊ ಸಂಗತಿ ಅಲ್ಲಿ. ಎಷ್ಟೊ ಜನರನ್ನ ಕಂಡು ಇಷ್ಟ ಇಲ್ಲದ್ರೂ ಮತಾಡಿಸಬೇಕಾದ ಪರಮಸಂಕಟ ಅಲ್ಲಿ..
ಒಹ್ ಭಾವಯ್ಯ.. ಹೆಂಗಿದ್ದೆ.. ಆರೊಗ್ಯವೆ?
ಆರೊಗ್ಯ ಚೆನ್ನಗಿಲ್ಲ ಅಂದ್ರೆ ನಾನ್ಯಾಕೆ ಬರ್ತೇನೆ ಅಯ್ಯಾ ಅಂತ ಇವ್ನಿಗೆ ಇನ್ನೂ ಬಿಡಿಸಿ ಹೆಳಬೇಕೊ ಎನೊ!
ಮತ್ತೊಂದು ಕೆಟ್ಟ ಚಟ ಕಾಗದ ಪೊಸ್ಟ್ ಮಾಡಿದ್ದು ಸಿಕ್ತೊ ಅಂತ ವಿಚಾರಣೆ..
ಹತ್ರದವರೆಲ್ಲ ಕೆಳ್ಸೊವಾಗಾ ನಾ ಕಾಗದ ಸಿಗದೆ ಬಂದಿದ್ದು ಅಂದ್ರೆ ಇರೊ ಮರ್ಯಾದೆನೂ ತೊಳೆದಾಂಗೆ ಅಯ್ತು ಅಲ್ವೇನೆ?..
ಮತ್ತೊಂದು ಕೆಟ್ಟ ಮಾತಿದೆ.. ಭಾವಯ್ಯ.. ಹೆಂಡತ್ತಿ ಕರಕ್ಕೊಂಡು ಬಂದಿಲ್ಲೆಯಾ?
ಹುಹ್.. ಈ ಮಹಾನುಭಾವ function ಮಾಡೋದು ನನ್ನ ಹೆಂಡತಿ ಹತ್ರ ಮಾತಾಡೊದಿಕ್ಕ!
ಊಟಕ್ಕೆ ಹೇಗೊ ಎನೊ ಕುಳಿತುಕೊಂಡಾಗ - ಸಮದಾನದಲ್ಲಿ ಊಟಮಾಡಿ ಅಂತಾನೆ..
ಹುಹ್.. ಹಸಿವಾಗಿದೆ.. ಸ್ವಲ್ಪ ಬೇಗ ಬೇಗ ಊಟ ಮಾಡೊಣಾಂದ್ರೆ, ಇವ ಊಟ ಮಡೊವಾಗಲೂ ಹೀಯಾಳಿಸುತ್ತನಲ್ಲ ಅಂದ್ಕೊಬೇಕಷ್ಟೆ..
ಯಾರೊ ಪರಿಚಯ ಇಲ್ಲದವ ನೀವು ಕೂಸಿನ ಕಡೆಯವ್ರೊ, ಅಲ್ಲ ಮಾಣಿ ಕಡೆಯವರೊ ಎಂಬ ಬೇರೆ ಅಟ್ಟಣೆ..
ಆ ಪುಣ್ಯತ್ಮನಿಗೆ ನಾನು ಹೇಳಿ ಬಂದದ್ದೊ ಅಲ್ಲಾ ಹೇಳದೆ ಬನ್ದದ್ದೊ ಎಂಬ proof ಬೇಕೆನಿಸುತ್ತದೆ!
ಬರೊಬೇಕಿದ್ರೆ ಎಷ್ಟೊ ಜನ ನೆಂಟರು ಹತ್ರ ಆಗಿರ್ತಾರೆ, ಯಾಕೆಂದ್ರೆ...
ಅವರಿಗೆ ನನ್ನ car ನಲ್ಲಿ drop ಬೇಕಿರುತ್ತದೆ..
ಹೀಗೆ ಹತ್ತು ಹಲವು ವಿಷಯಕ್ಕೆ ತಲೆ ಹಾಕದೆ ಸುಮ್ನೆ ದೂರದಲ್ಲಿ ಉಳುಕೊಂಡ್ರೆ ದೊಡ್ಡಮ್ಮನಿಗೆ ಆ ಹುಡುಗನಿಗೆ ಸಲ್ಪ ಮಾತು ಕಡಿಮೆ ಅಂತ ದೂರು ಕೊಡ್ತಾರೆ.
ಹೆಗಿದ್ರೂ ಕಷ್ಟ ಈ ಲೊಕದೊಳಗೆ!
Friday, June 29, 2007
Subscribe to:
Post Comments (Atom)
No comments:
Post a Comment