Sunday, June 17, 2007

myHarate:"ಶುಂಠಿ ಪುರಾಣ"

ಶುಂಠಿ ಸೂಪರೂ ಆದ್ರೆ ಭಾರೀ ಡೇಂಜರೂ
ಶುಂಠಿಯ ಸೈಡ್-ಇಫೆಕ್ಟ್ ಇನ್ನೂ ಡೇಂಜರೂ..
ಹೀಗೆ ಅನ್ನುತ್ತಲೆ ಶುಂಠಿ ಸಹಿತ ಲಿಂಬೂ ಶರಬತ್, ಶುಂಠಿ ಸಹಿತ ಸಜ್ಜಿಗೆ ರೊಟ್ಟಿ, ಶುಂಠಿ ಸಹಿತ ಮಜ್ಜಿಗೆ ನೀರು ಕುಡಿಯುತ್ತಲೆ ಇರುತ್ತೇವೆ!
......
"ಶ್ರೀ ಮನೊಹರ ಸ್ವಾಮಿ ಪರಾಕೂ...", ಅಮ್ಮಣ್ಣಾಯರ ಯಕ್ಷಗಾನ ಪದ ಮೊಳಗಿದಾಗಲೆ ತಿಳಿದದ್ದು ಜಂಗಮ ಘಂಟೆ ಮೊಳಗುತ್ತಿದೆ ಅಂತ! ಓಡಿ ಹೋಗಿ ತೆಗೆದಾಗ ಎರ್ಟೆಲ್ ಗ್ರಾಹಕ ಸೇವೆಗೆ ಸ್ವಾಗತ ಎನ್ನಬೇಕೆ! ಅತ್ತ ಪದವು ಪೂರ್ತಿಯಾಗಿಲ್ಲ, ಇತ್ತ ಕರೆಯೂ ಪೂರ್ತಿ ಆಗ ಬಿಡಲಿಲ್ಲ!
......
ಶುಂಠಿ ಯಾಕೆ ಇಷ್ಟು ಡೆಂಜರೂ ಅನ್ನೊದು ನೀವೆ ಕೇಳಿ ತಿಳಿದುಕೊಳ್ಳಿ.. ಅಂದ ಹಾಗೆ ಶುಂಠಿಯ ವಿರುದ್ದಾರ್ತಕ ಪದ ಮಾತ್ರ ಈರುಳ್ಳಿ. ಶುಂಠಿ ಬಾಯಿ ವಾಸನೆ ತೊಳೆದರೆ, ಈರುಳ್ಳಿ ಬಾಯಿ ವಾಸನೆ ತರುವುದು:-) ಶುಂಠಿ ಮುದಿತನದ ಸಂಕೇತವಾದರೆ ಈರುಳ್ಳಿ ಯೌವನದ ಸಂಕೇತವಂತೆ.. ಅಂದಹಾಗೆ ಈರುಳ್ಳಿ ಮೈಯೆಲ್ಲ ದುಂಡು-ದುಂಡಗೆ ಇರುತ್ತೆ, ಶಂಠಿಗೆ ಒಣಗಿರೊ ಮುದಿ ತೊದಲು!
ಇವನ್ನ ಜೊತೆಯಾಗಿ ಹಾಕೊದು ವಾಸಿ ಅನ್ಸುತ್ತೆ ಅಲ್ವೆ?

ಶುಂಠಿ ಬಿನಾ ಕ್ಯಾ ಜೀನ ಯಾರೊ,
ಶುಂಠಿ ಬಿನಾ ಕ್ಯಾ ಮರ್ನಾ!

No comments: