Sunday, June 10, 2007

myHarate - "Ondu Doseya Suththa"

ಒಂದು ದೋಸೆಯ ಸುತ್ತ!

ಕೆಲವೊಮ್ಮೆ ಹೋಟೆಲಿಗೆ ಹೊದಾಗ ದೋಸೆ ತಿನ್ನೋದು ಅನಿವಾರ್ಯ. ಹಸಿವೊ, ಅಲ್ಲ ಬೆರೇನು ಇರದೆಯೊ, ಅಲ್ಲ ಚಪಲವೊ, ದೋಸೆ ಕಾಯಂ. ದೋಸೆ ಎಂದಾಗ ಮಾಣಿಯ ಕೂಗು ನೆನಪಿಗೆ ಬರುತ್ತದೆ. ಸಾದ, ಸೆಟ್, ತುಪ್ಪ, ರವ, ಮಸ್ಸಾಲೆ, plain, ಬೆಣ್ಣೆ, ನೀರು ಹೀಗೆ ಸಾಗುತ್ತದೆ. ಕೊನೆಗೆ ಹೇಳಿದುದು ಮಾತ್ರ ನೆನಪುಳಿದು ಅದನ್ನೆ ಹೇಳುತ್ತೆವೆ. ಅಷ್ಟಕ್ಕೆ ಮುಗಿಯದು. ಕೆಲವರು ಎಣ್ಣೆ ಕಡಿಮೆ ಸಾದ, ಎಣ್ಣೇ ಬೆಡ ಸಾದ ಹೀಗೆ ಮತ್ತೆ customize ಮಾಡ್ತಾರೆ.. ಅಂತು ಇಂತು ಬಿಸಿ ಬಿಸಿ ದೋಸೆ ತಿನ್ನೊ ಮೊಜು really superb!

ಒಮ್ಮೆ ಒಂದು ಹೋಟೆಲಲ್ಲಿ hand wash ಮಾಡಲು ದಾರಿ ತಪ್ಪಿ ಅಡುಗೆ ರೂಮ್ entry ಪಡೆದಿದ್ದೆ. ಆ ವಿಶ್ವರೂಪ ಕಂಡು ಬೆರಗಾಗಿದ್ದೆ. ದೋಸೆ ಕಾವಲಿ ಸುತ್ತ ಹಿಡಿಸೂಡಿ, ಬಿಸಿ ಕಾವಲಿಗೆಗೆ ನೀರ ಸಿಂಪಡಿಸುವುದೆ ಅದರ ಕಾರ್ಯ. ಆ ನೀರು, ಆವಿ, ಹಿಡಿಸೂಡಿ, ಬಿಸಿ ಕಾವಲಿ ಫೊಟೊ ತೆಗೆಯುವ ಕಾರ್ಯ ಇನ್ನೂ ಬಾಕಿಯಿದೆ. ಹೆಚ್ಚು ವಿಶ್ಲೇಷಿಸಿದರೆ ದೋಸೆ ಇನ್ನೆಂದೂ ನಿಮಗೆ ಹಿಡಿಸದು. ದೋಸೆ ಒಳ ನೊಟ ಎಂದೂ ಬೆಡ. Just enjoy the taste in plate!

Have a wonderful day ahead!

--Shan!

No comments: