ಗೇಟಿನ ಹತ್ರ ಕಾರ್ ಶಬ್ದ ಕೇಳಿದಾಗ ಅವಳ ಕೆಲಸ ಅಲ್ಲೆ ನಿಂತು ನನ್ನ ಬರುವಿಕೆಯನ್ನೆ ಕಾದಿರುತ್ತದೆ. ಮದ್ಯಾನ್ನ ಗಂಟೆ ಒಂದಾದರೂ ಬೆಳಗ್ಗಿನ ತಿಂಡಿ ತಿನ್ನಿಸಿ ಮತ್ತೆಯೆ ಊಟ! ನಾವು ಇಲ್ಲಿ ತಿನ್ನದ ಸೇಮಿಗೆ, ಉಬ್ಬು ರೊಟ್ಟಿ, ಸೊಳೆ ರೊಟ್ಟಿ, ಓಡುದೋಸೆ, ಹಲಸಿನ ಕಾಯಿ ದೋಸೆ ಮತ್ತು ನೀರು ದೋಸೆ ನನಗೆ ಅಲ್ಲಿ ಸಿಕ್ಕೇ ಸಿಗುತ್ತದೆ. ಊಟ ಮಾಡುವಾಗ "ಎಂತ ಈಗ ಸ್ವಲ್ಪ ತೋರ ಅಗಿದ್ದೀಯ" ಅಂತ ಅನ್ನುತ್ತಲೇ ಅನ್ನದ ತಟ್ಟೆಗೆ ಹೋಮಕುಂಡದಂತೆ ಸರೀ ತುಪ್ಪ ಸುರಿಯುತ್ತಾಳೆ. ಒತ್ತಾಯ ಮಾಡಿ ಮಾಡಿ ತಿನ್ನಿಸಿ ನನ್ನ ಡಯೆಟ್ ಫಾರ್ಮುಲ ಎಲ್ಲ ಹಾಳು ಮಾಡಿ ಬಿಡುತ್ತಾಳೆ. ಎಂದೂ ಮಾಡದ ಹಲಸಿನ ಹಣ್ಣು ಪಾಯಸ ನಾ ಹೋದಾಗ ಅಲ್ಲಿ ರೆಡಿ. ಬರುವಾಗ ಬಾಳೆಗೊನೆ, ಹಪ್ಪಳ ಕಟ್ಟುಗಳು, ಮೆಣಸಿನ ಸೆಂಡಿಗೆ, ಉಪ್ಪಿನಕಾಯಿ, ಬಾಳುಕ್ಕು ಮೆಣಸು, ಬಾಳೆಹಣ್ಣು ಹಲ್ವಾ, ಹಲಸಿನಕಾಯಿ ಸೋಂಟೆ ಹೀಗೆ ಹತ್ತು ನಾನಾ ಪಾಕ್-ಗಳು Bag ಮತ್ತು ಕಾರ್-ನ ಡಿಕ್ಕಿ ತುಂಬುತ್ತವೆ! ಇನ್ನು ಜಾಗ ಇಲ್ಲ ಅಂತ ಎಂದರೂ ಎಲ್ಲಿಂದಲೋ ಕೊಯ್ದು ತಂದ ಬದನೆಕಾಯಿ ಸೀಟಿನ ಅಡಿಯಲ್ಲಿ ಕೂರುತ್ತದೆ. ಆಕೆಯ ಈ ಪ್ರೀತಿ ಮನತುಂಬ ತುಂಬಿ ಇನ್ನಿನ ಶುಕ್ರವಾರದ ವರೆಗೂ ನನ್ನನ್ನ ಕಾಯುತ್ತಿರುತ್ತದೆ ಮತ್ತು ಅದೇದಿನ ನನ್ನ ಅವಳ ಕಡೆಗೆ ಸೆಳೆಯುತ್ತದೆ!!
ಸೋಮವಾರ ಬೆಳಗ್ಗೆ ಬೇಗ ಹೊರಡುವಾಗ ನನ್ನಿಂದ ಮೊದಲೇ ಎದ್ದು ಬಚ್ಚಲಿಗೆ ಬೆಂಕಿ ಹಕಿ ನೀರು ಬಿಸಿ ಮಾಡಿರುತ್ತಾಳೆ. ಹೊರಡುವ ಮೊದಲು ಬೆಚ್ಚನೆಯ ಚಾಯ ಕೊಟ್ಟೇ ಕೊಡುತ್ತಾಳೆ, ಅವಳೆಲ್ಲಾದರು ಅಲ್ಲಿರದಿರೆ ಮನೆ-ಮನ ಎರಡೂ ಕಾಲಿ ಕಾಲಿ!
ನಾನಿರೆ ಅವಳ ಎಲ್ಲ ಪಾರಾಯಣಗಲು ಬೇಗ ಬೇಗ ಮುಗಿಯುತ್ತದೆ. ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ ದಿನನಿತ್ಯ ನಮಗೋಸ್ಕರ ಪಠಿಸುತ್ತಾಳೆ.
ಅದುವೇ ನನ್ನ ಮನೆ ಮತ್ತು ಅವಳು ಇನ್ಯಾರೂ ಅಲ್ಲ! ನನ್ನ ಮುದ್ದು ಅಮ್ಮ!!
This is a Tribute to every South Indian Mom!!!
Subscribe to:
Post Comments (Atom)
1 comment:
I must admit this is very true and how they(mom) do it day after day with so much patience :) We are lucky !
Post a Comment