Thursday, July 10, 2008

myHarate:"Be Serious - It is not a joke"

ನಮ್ಮೂರು ಚಿಕೂನ್-ಗುನ್ಯ ಕುಖ್ಯಾತಿಯ ಸುಳ್ಯಾ ಕಣ್ರೀ. ಇಲ್ಲಿ ಪ್ರತಿಯೊಂದು ಸೊಳ್ಳೇಯು ಹಾವಿಗಿಂತ ಜಾಸ್ತಿ ಭಯ ತಂದು ಬಿಡುತ್ತೆ. ಓಂದು ಸೊಳ್ಳೆನ ಅಟ್ಟಿಸಿ ಕೊಂದಾಗ ಎಷ್ಟು ಕುಶಿ ಗೊತ್ತೇನು? ಕೊಂದ ಮತ್ತೆ ಈಡಿಸ್ ಸೊಳ್ಳೆಯೇ ಎಂದು ಪೇಪರ್-ನಲ್ಲಿ ಬಂದ ಪೋಟೊ ಜೊತೆ ಹೊಲಿಸಿದಾಗ ಹೌದೆಂದಾದರೆ ಸಂಭ್ರಮವೋ ಸಂಭ್ರಮ.
ಮೊನ್ನೆ ಮೊನ್ನೆ ಊರಿಗೆ 1 ತಿಂಗಳ ಮತ್ತೆ ಹೋಗಬೇಕಾದ ಅನಿವಾರ್ಯತೆ ಬಂದೇ ಬಂತು. ಪ್ರತೀವಾರ ಹೋಗುತ್ತಿದ್ದವ, ಈ ಜ್ವರ ನೋವಿಗೆ ಹೆದರಿ ಒಂದು ತಿಂಗಳು ಮನೆಕಡೆ ಮುಖವೇ ಮಾಡಲಿಲ್ಲ. ಸಾಕಷ್ಟು ಪೂರ್ವ ತಯಾರಿ ನಡೆಸಿ ಹೋಗಲು ಮನಸು ಮಾಡಿದೆ. ಮೈ ಕೈಗೆ ನುಸಿ ಕಚ್ಚದಂತೆ ಹಚ್ಚಲು ಕಹಿಬೇವಿನ ವಾಸನೆಯುಕ್ತ ಎಣ್ಣೆ ಹಚ್ಚಿದೆ. ಇದು ಇಷ್ಟವಾಗದಿದ್ದರೆ ತೆಂಗಿನೆಣ್ಣೆ ಪರಿಹಾರವಂತೆ. ಎಲ್ಲಾದರು ಜ್ವರ ಬಂದರೆ ತಕ್ಶಣ ಪರಿಹಾರಕ್ಕಾಗಿ, ನನ್ನ ನೆರೆಕರೆಯ ಡಾಕ್ಟರ್, ಶ್ರಿರಾಮ್ ಭಟ್, ಕೊಡಪಾಲ [He is a famous surgoen / Abdominal specialist] ಹತ್ರ Painoxol - C [for your information.. ದೊಡ್ಡೋರಿಗೆ ದಿನಕ್ಕೊಂದು, ಮಕ್ಕಳಿಗೆ ಅರ್ದ, ಊಟದ ನಂತರ, ನೋವು ಮತ್ತು ಜ್ವರಕ್ಕೆ ಭಾರಿ ಪರಿಣಾಮಕಾರಿ] ಕೇಳಿ ಪಡೆದೆ.

ಮಾತ್ರೆ ತಪ್ಪದೆ ಹಿಡಕೊಂಡು ಮಿಶನ್ ಶುರು.

ಮನೆಯಲ್ಲಿ ಕೆಲವರಿಗೆ ಬಂದ ಈ ಜ್ವರ ನನ್ನ ದ್ರುತಿಗೆಡಿಸಿತ್ತು. ಊರೆಲ್ಲ ಕೈ ಕಾಲು ನೋವಿನವರೆ. ಊರಿಂದೂರೆ ಹೀಗೆ ಸಂಕಟ ಪಡುತ್ತಿದ್ದುಡು ಇದೇ ಮೊದಲು. ಆ ದಿನದ ವಿಜಯ ಕರ್ನಾಟಕದ ಮುಖವಾರ್ತೆ "ಚಿಕೂನ್-ಗುನ್ಯಾಕ್ಕೆ 3 ಬಲಿ" ಓದಿ ಗಡ ಗಡ ನಡುಗುತ್ತಿದ್ದರು. ನಾನು ಹೋದವನೆ, ಸ್ವಲ್ಪ ಎಲ್ಲರಲ್ಲು ದೈರ್ಯತುಂಬಿ, Painoxol - C ಜ್ವರ ಬಂದರೆ ತಗೊಳ್ಳಿ ಎಂಬ ಸಣ್ಣ ಸಲಹೆ ಕೊಟ್ಟು ಸುಮ್ಮನಾದೆ. ಅಷ್ಟರಲ್ಲೆ ಸೊಳ್ಳೆ ಒಂದು ನನ್ನ ಮೈಯಲ್ಲಿ ಕುಳಿತಿರುವುದನ್ನು ಕಂಡೆ, ಯಾವುದೋ ಭರತನಾಟ್ಯ ಶೈಲಿಯಲ್ಲಿ ಕುಣಿಯಲಾರಂಬಿಸಿ, ಎಲ್ಲರನ್ನು ಬಿಟ್ಟು ಓಡಿಹೋದೆ. ನನಗೆ ಕೆಲವು ತಿಂಗಳ ಕಷ್ಟ ಅನುಭವಿಸಲು ಮನಸಾಗಲಿಲ್ಲ. ಮನೆಗೆ ಬಂದವನೇ ಬಚ್ಚಲು ಮನೆಗೆ ಕಾಯಿ ಸಿಪ್ಪೆ, ಅಡಿಕೆ ಸಿಪ್ಪೆ ಹಾಕಿ ಫಾಗಿಂಗ್ ಮಾಡಿದೆ.

ನಾ ಕಂಡ ಸತ್ಯ ಏನೆಂದ್ರೆ, ಜನರ ದ್ರುತಿ ಪೂರ ಕೆಟ್ಟು ಹೋಗಿದೆ, ಹೀಗಿರುವಾರ, ಪ್ರಿಯ ಪತ್ರಿಕೆಗಳೇ, ನೀವು ಅವರಲ್ಲಿ ದೈರ್ಯ ತುಂಬಿ, ಸಾವಿನ ವಿಶಯ ಬದಲು ಡಾಕ್ಟರುಗಳ ಸಂದರ್ಶನ ಪ್ರಕಟಿಸಿ, ಹತೋಟಿ ಕ್ರಮದ ಬಗ್ಗೆ ತಿಳಿಹೇಳಿ, ಮಾತ್ರೆಗಳ ವಿವರ ಪ್ರಕಟಿಸಿ, ಹಿಂದೊಮ್ಮೆ ಜ್ವರ ಬಂದು ಪರಿಹಾರ ಕೊಂಡುಕೊಂಡವರ ಅನುಭವ ಬಿತ್ತರಿಸಿ, ಇದು ಬಿಟ್ಟು ಸಾವೆ ಪರಿಹಾರ ಅಂದರೆ, ಊರಿಂದೂರೆ ದಿಕ್ಕು ಕೆಟ್ಟು ಓಡಬೇಕಸ್ಟೆ ತಾನೆ! ನನ್ನ ದನಿ ನಿಮಗೆ ಕೇಳಿಸೀತೆ, ಬ್ಲಾಗ್ ಮಿತ್ರ ಪತ್ರಕರ್ತರೆ, ನಿಮ್ಮ ಕಿವಿ ಈ ವಿಶಯದಲ್ಲಿ ಸೂಕ್ಶ್ಮವಾಗಿಸಿ!!

ಧನ್ಯೊಸ್ಮಿ! ಊರಿಗೆ ಹೋಗಿ ಬಂದಿದ್ದೇನೆ, ಜ್ವರ ಬಾರದಿರೆ ಸಿಗೋಣ!!!!

3 comments:

ಪುಟ್ಟ PUTTA said...

ಹಹ್ಹಹಹ.. ಉಡುಪಿಯಲ್ಲಿ ಚಿಕಾಂಗುಣ್ಯ ಇಲ್ವಾ?

Nempu Guru said...

Useful and thoughtful article Shan...

hechinavrige hedarikeyindle jwara bandirbahudu???

Shanmukharaja M said...

ಪುಟ್ಟ,

ಸದ್ಯ ಬಂದಿಲ್ಲ ಅಂತ ಕುಷಿ ಪಡೋದು ಬಿಟ್ಟು, ಹ ಹ ಹ ಹ! ಅಂತ ಹಲ್ಲು ಕಿಸೀತಿಯಲ್ಲೊ ಮರಾಯ!!

ಗುರು,

ನಿಜ, ನಾನು ನೀವು ಪತ್ರಿಕೆ, ಟಿವಿ ಯಂತಹ ಪ್ರಭಾವೀ ಮಾದ್ಯಮವಿಲ್ಲದೆ ಜನಜಾಗ್ರುತಿ ಮೂಡಿಸೋದು ತುಂಬಾ ಕಷ್ಟ. ಆದರೆ ಅವು ಜನಜಾಗ್ರುತಿ ಬದಲು ಜನರನ್ನು ಹೆದರಿಸಿಟ್ಟಿರೋ ಕಹಿ ಸತ್ಯ ಮಾತ್ರ ತುಂಬಾ ಬೇಸರ ತಂತು.