"mixture"ಲ್ಲಿ ಕಡ್ಲೆ ಇರತ್ತೆ- ಹಾಗಂತ ಬರೀ ಕಡ್ಲೆ ಇದ್ದರೆ mixture ಅಂತ ತಿನ್ನಲಾಗದು, ಮಳೆಗಾಲದಲ್ಲಿ ಮಳೆಬರತ್ತೆ- ಬರೀ ಮಳೆಯೊಂದಿದ್ದರೆ ಬದುಕಲಾಗದು, ದಿನಪೂರ್ತಿ ಕೆಲಸವಿರುತ್ತೆ- ಹಾಗಂತ ದಿನವಿಡೀ ಕೆಲಸ ಮಾಡುತ್ತಿದ್ದರೆ ನಾಳೆಏನು ಅಂತ ತಿಳಿಯದು! ಆ ನಾಳೆ, ನಾಳೆಯ ನಾಳೆ, ಹೀಗೆ ಇಂದೇ ಹುಡುಕುತ್ತಾ ಹೋಗುವುದೇ ಪ್ಲಾನಿಂಗು! ಹೀಗೆ ಹುಡುಕುತ್ತಾ ಹೋಗುವಾಗಲೇ ತಿಳಿಯುತ್ತೆ
ಎನೋ ಇದೆ ಎನೋ ಇದೆ
ಈ ಬದುಕಲಿ ಎನೋ ಇದೆ,
ಏನಿದೆ ಎನೇನಿದೆ
ನಾಳೆಗೆ ಇಲ್ಲೇನಿದೆ?
ಅಂತ! ಆಗ ಗೊತ್ತಾಗುತ್ತೆ ಲೈಫ್ ಬೇರೆ, ನಮ್ಮ ಕೆಲಸವೇ ಬೇರೆ!
ಮತ್ತು
ಲೈಫ್ ಇಸ್ ಲೈಫ್
ಬ್ಯುಸಿನೆಸ್ಸ್ ಇಸ್ ಬ್ಯುಸಿನೆಸ್ಸ್..
ಯಾವತ್ತು ತಪ್ಪಿಯೂ ಮಿಕ್ಸ್-ಅಪ್ ಮಾಡ್ಕೋಳ್ಳೊದು ಬೇಡ ಅಂತ ಗೊತ್ತಾಗುತ್ತೆ. ಅಪ್ಪ, ಅಮ್ಮ, ಸಂಬಂದ, ಭಾಂದವ್ಯ, ಪ್ರೀತಿ, ಪ್ರೇಮ ಎಂಬ ಎಂದೂ ಬತ್ತದ ಒಯಸಿಸ್ ಬದುಕಲ್ಲಿ ಬಂದಾಗಲೋ ಅಲ್ಲೆ ನಿಂತು ಬಿಡೋಣ ಅನ್ನಿಸಲೂಬಹುದು, ಆದರೇನು ಲೈಫ್ ಅಷ್ಟೇ ಅಲ್ಲತಾನೆ, ನಾವು ಹೋಗೋ ದಾರಿಲೆಲ್ಲ ಒಯಸಿಸ್-ಗಳನ್ನ ಜತೆಯಲೊಯ್ಯಬೇಕಷ್ಟೆ! ಕೆಲವೊಮ್ಮೆ ಒಯಸಿಸ್ ಬತ್ತಿ ಅವು ಇಲ್ಲವಾಗಲೂಬಹುದು. ಹೀಗೆ ಹೋಗುತ್ತ ಹೋಗುತ್ತಾ ಮುಂದೋಮ್ದು ದಿನ ದೃಷ್ಟಿ ನಿಲುಕದ ಲೋಕವೊಂದರ ಬಾಗಿಲು ತೆರೆದುಕೊಳ್ಳುತ್ತೆ, ಅದೇ ಲೈಫ್-ನ ಅಂತ್ಯವಿರಬಹುದೇ ಅಲ್ಲ ಇನ್ನೊಂದರ ಆದಿ ಇರಬಹುದೇ? ನಂಗಂತೂ ಗೊತ್ತಾಗಿಲ್ಲ!!!
Tuesday, July 15, 2008
Subscribe to:
Post Comments (Atom)
No comments:
Post a Comment