ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..
ಜೀವನ ಎಂದರೆ ಎಷ್ಟು ಸುಂದರ , ಅಂದುಕೊಂಡದ್ದೆಲ್ಲ ಸರಿಯಾಗೆ ನಡೆದು ಹೋದರೆ!
ಜೀವನ ಎಷ್ತು ದೊಡ್ಡ ಹಂದರ, ಅಂದುಕೊಂಡದ್ದು ಒಂದೂ ನಡೆಯದಿದ್ದರೆ?
ಓ ತಾರೆ, ನೀನೆಂದು ಬೆಳಗುತಿರು.. ನನಗೆಟಕದಿದ್ದರೂ, ನಿನ್ನ ಬೆಳಕು ಕಣ್ಣ ಕುಕ್ಕಿದೆ. ಎಲ್ಲ ಮರೆತಾಗ ಮನ ಬೆಳಗಿದೆ..
ಓ ತಾರೆ ನೀ ಮರೆಯಾದರಿಂದು, ಮನಕೆ ಮೂಡಿಬರೆಯ ಮತ್ತೆ?
ಓ ತಾರೆ ಎಂತು ಕಾಂಬೆನು ನಂದ ನಂದನ ಮನದ ಬಯಲಲಿ ಎಂದಿಗೂ?
ಚಂದ್ರ ಇಲ್ಲದ ರಾತ್ರಿ ಎಲ್ಲವು ನನ್ನ ಪಾಲಿಗೆ ನೀನೇನ?
ಹಗಲ ವೇಷದಿ ಕನಸ ಹುಟ್ಟಿಸಿ ಮರೆವ ಲೋಕದಿ ಮೆರೆಯಲೆ?
ನಿನ್ನ ಸಿಹಿ ನೆನಪಲ್ಲಿ ಮರೆತಿದೆ ಬಾಳ ಬೇವಿನ ಕರಿಹೊಗೆ..
ಕಣ್ಣೆದುರು ಕುಣಿದಾಡಿ ಮಾತಾಡಿ,
ಆಟವಾಡಿ ಕೊನೆಗೊಮ್ಮೆ ಕಾಲು ಜಾರಿ
ಕೆರೆಯಲ್ಲಿ ಲೀನವಾಗಿಹೆಯಲ್ಲಾ ಗೆಳತಿ...
ಗೆಳತೀ... ನಾನೆಂದೂ ಕ್ಷಣಿಕ, ನೀಯೆಂದೂ ಅಮರ, ನಾವೆಂದೂ ಮಧುರ...
ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..
ಇಂತೀ ನಿನ್ನವ,
ಅನಾಮಿಕ!
Sunday, July 22, 2007
Subscribe to:
Post Comments (Atom)
No comments:
Post a Comment