Tuesday, July 10, 2007

myHarate:"ಇರದವರೆಡೆಗೆ ತುಡಿವುದೂ ಜೀವನ..."

ಅನುಕೂಲ.. ಅನುಕೂಲ.. ಅನುಕೂಲ.. ಎಲ್ಲರಿಗೂ ಬೇಕಾಗಿರೋದು ಅನುಕೂಲ.. ಅದಕ್ಕಾಗಿ ಏನು ಮಾಡಲಿಕ್ಕೂ ತಯಾರಿರುತ್ತಾರೆ. ಎಲ್ಲರೂ ದುಡಿಯೋದು ಬರೀ ಹೊಟ್ಟೆಗಾಗಿ ಮತ್ತು ಬಟ್ಟೆಗಾಗಿ ಅಲ್ಲರೀ.. ಅನುಕೂಲಕ್ಕಾಗಿ!

ಅನುಕೂಲ.. ಅನುಕೂಲ... ಅಂತ ಅಸ್ಪತ್ರೆ ಪಕ್ಕ ಮನೆಕಟ್ಟಬೇಕೆ ಹೊರತು ಅಸ್ಪತ್ರೆಯನ್ನೆ ಮನೆ ಮಾಡುವಂತಾಗಬಾರದು ತಾನೆ?
ನಮ್ಮೆಲ್ಲ ಅನುಕೂಲಕ್ಕೆ ಹಗಲಿರುಳು ಯೋಚಿಸುವಾಗ ಒಂದ್ನಿಮಿಷಾ ಬೇರೆವರ ಹಿತಕ್ಕೆ ಯೋಚನೆ ಮಡ್ತೆವಾ ನಾವು?

ಜೀವನ ಅಂದ್ರೆ ನಾವ್ ಹೇಗೆ ಜೀವಿಸ್ತೀವಿ ಅನ್ನೊವಷ್ಟೆ ಉಳಿದವರ ಜೀವಕೆ ನಾವೆಂತು ಹಿತವರು ಎಂಬುದೂ ಮುಖ್ಯವಲ್ಲವೆ?

ಮಳೆ ಬಂದಾಗ ಎಲ್ಲರ ಮರದಡಿ ನಿಲ್ಲಿಸಿ ನಾವ್ ಮಾತ್ರ ಬಸ್ಸನೇರಿ ಹೊಗುವಂತಿರಬಾರದು ಅಲ್ವೇನೆ?

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಇರುವುದೆಲ್ಲವ ಇರಿಸಿ ಇರದವರೆಡೆಗೆ ತುಡಿವುದೂ ಜೀವನ!

No comments: