ಗಂಟೆ ಮತ್ತೆ ನಿಂತಿದೆ. ನನ್ನ ಬಿಟ್ಟು ಬೇರೆ ಯಾರೂ ನಮ್ಮ ಮನೆಲಿ ಅದನ್ನ ನಡೆಸರು. ವಾರಕ್ಕೊಮ್ಮೆ ಎರಡೂ ಕಿವಿ ಹಿಂಡದಿರೆ ಈ ದೊಡ್ಡ ಗೋಡೆಗಡಿಯಾರ full flat. ಅತ್ತ ಎಷ್ಟೆಷ್ಟೊ ಸಲ ಹುಚ್ಚುಚ್ಚಾಗಿ ಹೊಡಕೊಳುತ್ತೆ, ಇತ್ತ ಪೆಂಡುಲಮ್ ಗರ ಬಡಿದವರ ತರಹ ನಿಂತು ಬಿಡುತ್ತೆ. ಈ antiquity ಈಗಲೂ ನನ್ನ ಮನೆಯಲ್ಲಿ ಎಲ್ಲ ಅತಿಥಿಗಳನ್ನ ಸ್ವಾಗತಿಸುತ್ತದೆ. ಎಷ್ಟು adjust ಮಾಡಿದರೂ ಸ್ವಲ್ಪ ಹೆಚ್ಚು ಕಮ್ಮಿ ಆಗಿಯೆ ನಡೆಯುವ ಇದು ನಮ್ಮ ಜೀವನಕ್ಕೊಂದು challenge ಆಗಿಯೆ ಬಿಟ್ಟಿದೆ! ಹಾಗೆ ರಾತ್ರೆ ಕಣ್ಣಿಗೆ ನಿದ್ದೆ ಹತ್ತಿಕೊಂಡಾಗ ಹನ್ನೆರಡು ಹೊಡೆದು ಎಚ್ಚರ ಮಾಡುತ್ತೆ.. ಈಗಿನ ಗಡಿಯಾರಗಳಂತೆ ಬೆಳಕಿಗೆ sensitive ಅಲ್ಲ ಇವು. ನನ್ನ ಕಲಿಕೆಯ ದಿನಗಲಲ್ಲಿ ಪ್ರಾತಃಕಾಲ 5ಕ್ಕೆ ಸರಿಯಾಗಿ ಎಳಿಸುತ್ತಾ ಇತ್ತು. ಇನ್ನೂ ನನ್ನ ಇಷ್ಟ ಪಟ್ಟ ವಸ್ತುಗಳ ದ್ರುಷ್ಟಿಯಿಂದ ದೂರ ಹೋಗಲಿಲ್ಲ.
ಸಾವಿರಾರು ಗಡಿಯಾರಗಳು ಅತ್ತ ಇತ್ತ ಬಿದ್ದಿದ್ದರು ಗೋಡೆಗಡಿಯಾರಕ್ಕೆ ಅದರದೆ ಆದ ಸ್ತಾನ ಇದೆ ಕನ್ರೀ.. ಅಜ್ಜನ ಕಾಲಂದಲೂ ಅದೆಷ್ಟೊ ವಸಂತಗಳನ್ನ ಕಾಣುತ್ತಾ ಬಂದಿದೆ. ಅದು ಹೊಡೆದ ಗಂಟೆಗೆ ಎಣಿಕೆಯಿಲ್ಲ, ತಿರುಗಿದ ಸುತ್ತಿನ ಲೆಕ್ಕ ಇಲ್ಲ. ನನ್ನೊಂದಿಗೆ ನಡೆಯುತ್ತಿರಲಿ ಎನ್ನುವ ಅಶೆಯೊಂದಿಗೆ...
Wednesday, July 11, 2007
Subscribe to:
Post Comments (Atom)
No comments:
Post a Comment