ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ ಸಾವಿರ ಕಾಲಕು ಸಾಯದ ನೆನಪು!
ಏಲ್ಲಿ ಹೋಯ್ತು ಆ ದಿನಗಳು? ಹೌದು ಕಣೊ/ಕಣೆ.. ನಂಗು ಗೊತ್ತು, ನಿಂಗು ಗೊತ್ತು.. ಅವು ಬರಲ್ಲ.. ಬಂದರೂ ನಮಗೆ ಅವನ್ನ ಅದೇತರ enjoy ಮಾಡಕ್ಕೆ ಅಗಲ್ಲ ಅಂತ. ಆಶಾಢ.. ಆಟಿ ತಿಂಗಳು ಅಂತ ಕರೀತಾರೆ.. ಮದ್ವೆಯಾಗಿ ಹೋದ ಅಕ್ಕ...
ಆಶಾಢ ಮಾಸ ಬಂದೀತವ್ವ.. ಕಾಸ ಅಣ್ಣ ಬರಲಿಲ್ಲವ್ವ..
ಅಂತ ಪರಿತಪಿಸಿಕೊಳ್ಳುವಾಗ.. ಆಕೆಗಿದ್ದ ಒಬ್ಬನೆ ತಮ್ಮ ಹೋಗಿ ಭಾವನನ್ನು ಸಮಾದಾನಪಡಿಸಿ ಕರೆತರುವ ಯುಕ್ತಿ ಇದೆಯಲ್ಲ.. ಎಲ್ಲರಿಂದಾಗದು.. ಭಾವನ ಪೆಚ್ಚುಮೋರೆಗೆ ಟಾಟಾ ಹೆಳಿ ಅಕ್ಕನನ್ನು ಮತ್ತೆ ಮನೆಗೆ ಕರೆತಂದು ಮನೆತುಂಬ ಮಾಡಿದ ಗಲಗಲ ಸದ್ದು:-) ಯಾರುತಾನೆ ಮರೆವರು? ಪಕ್ಕದ್ಮನೆ ಬಚ್ಚಲಿನಿಂದ ಬಿರುಸುಮಳೆಗು ಎದ್ದು ಬರುವ ಅಗಾಧ ಹೊಗೆ! ಹಲಸಿನ ಸೋಂಟೆ ತಿನ್ನುತ್ತ ಅಡಿದ ಚೆನ್ನಮೆಣೆ ಆಟ!
ಈ ನೆನಪು ಎಂಬುದು ಏನ್ ಮಹಾಶಕ್ತಿ ಅಂತೀಯ?
ಏಲ್ಲಮರೆತಿರುವಾಗ ಇಲ್ಲಸಲ್ಲದ ನೆವವ
ಹೇಳಿ ಬರುವವು ಮನಕೆ ಮಧುರ ನೆನಪು.. ಈ ಮಧುರ ನೆನಪು!
ಅದು ಬೇಕೆಂದರೆ ಬರುವಂತದ್ದಲ್ಲ.. ಹಾಗೆ ಹೋಗೆಂದರೆ ಹೊಗ್ವಂತದ್ದೂ ಅಲ್ಲ..ಈನ್ನೂ ಸುಲಭವಾಗಿ ಹೆಳುವುದಿದ್ದರೆ ನೆನಪನ್ನು ಯಾವಗ ಬರುತ್ತೆ ಅಂತ ನೆನಪಿಟ್ಟುಕೊಳ್ಳಲು ಸಾದ್ಯವಿಲ್ಲ!
Saturday, July 14, 2007
Subscribe to:
Post Comments (Atom)
No comments:
Post a Comment