Friday, February 29, 2008

myPOD:"Sunrise Vs Sunset"



Wednesday, February 27, 2008

myPOD:"Build stages"

Alpha Bugs:-)



Beta Bugs:-)



Release Bugs:-)

Sunday, February 24, 2008

myPOD:"ಊಚ್"

myKavana:"ಇಂತಿ ನಿನ್ನ ಪ್ರೀತಿಯ"

ಎಲ್ಲೋ ಎಲ್ಲೋ ಹೋಗುವ
ಕೊನೆಯಾ ಎಂದು ಕಾಣದ
ಎಲೆಯೆ ಇರದ ಮರಗಳ
ನೆರಳೆ ಸಿಗದ ಹಗಲಿನ
ಕಾಲಿ ಕಾಲಿ ದಾರಿಯ...
ಇಂತಿ ನಮ್ಮ ನಿರೀಕ್ಷೆಯ..
ಈ ಊರು ಯಾವುದು?


myPOD:"ಸೂರ್ಯಕಾಂತಿ"

Friday, February 22, 2008

myKavana:"ಜಗವದೆಷ್ಟು ಕ್ರೂರ"



ಅಕಾಶ ಗಂಗೆ ಬೀಳುತಿರಲು
ಕೆಸರೇ ಎಲ್ಲೂ ಪೂರ
ಜೀವ-ಜೀವ ಕೊಯ್ಯುತಿರಲು
ಜಗವದೆಷ್ಟು ಕ್ರೂರ

ನೊಡಲೆಂತು ಕಣ್ಣ ತೆರೆದು
ರಕುತ ಬಿಂದು ಧರೆಯ
ಹೇಳಲೆಂತು ಯಾರ ಕರೆದು
ನನ್ನ ಮನಸ ಕರೆಯ

ದಿನವಿಡೀ ನಿದ್ರಿಸುವೆ
ರಾತ್ರೆ ಹೆದರಿ ಅಳುವೆನು
ಯಾಕೆ ಇಲ್ಲಿ ಜೀವವೇ
ಸಾಯೆ ನಾನು ನಲಿವೆನು!!!

myPOD:"ಐಹೊಳೆ"

ಹೀಗೆ ಬಾ ಯಾತ್ರಿಕನೆ




myPOD:"ಪಟ್ಟದಕಲ್ಲು"





myPOD:"ಬಾದಾಮಿ"

ಬನಶಂಕರಿ ದೇವಸ್ತಾನ



ಬಾದಾಮಿಯ ಗುಹಾಂತರ ದೇವಾಲಯ



ಗುಹೆಯೊಳಗಿನ ಒಂದು ನೋಟ




ಗುಹೆಯೊಳಗಿಂದ ಒಂದು ನೋಟ

myPOD:"ಕೂಡಲ ಸಂಗಮ"



myKavana:"ಗಾ..ಳಿಪಟ...!!!"

ನ ನೈ ನನ ನೈ
ನ ನೈ ನನ ನೈ
ನ ನೈ ನನ ನೈ ನೈ
ನ ನೈ ನನ ನೈ

ಈ ಬಗ್ಸು ಯಾಕೆ ಬಂದಿವೆಯೊ
ನ ನೈ ನನ ನೈ
ಇನ್ನೇನು ಕಷ್ಟ ಕಾದಿದೆಯೊ
ನ ನೈ ನನ ನೈ
ಪ್ರತಿ ದಿನವು ಇದೇನೆ.. ಹಗಲಿರುಳು ಕೆಲಸಾನೆ..
ಇನ್-ಹೇಗೆ ನಾನು ಓಡಿ ಹೋಗ್ಲಿ..
ಗಾ..ಳಿಪಟ... ಗಾ..ಳಿಪಟ... ಗಾ..ಳಿಪಟ...!!!!

Wednesday, February 20, 2008

myKavana:"ಫ್ರೆಂಡೇ ಫ್ರೆಂಡು "

ಪ್ರೀತಿ ಏಕೆ ಭೂಮಿ ಮೇಲಿದೆಯ ವಿವಾದಾತ್ಮಕ ಪದ್ಯ "ಸುಳ್ಳೇ ಸುಳ್ಳು" ನಂತರ ಅದೇ ದಾಟಿಯ ಒಂದು ವಿವಾದರಹಿತ ಪದ್ಯ ಇಲ್ಲಿದೆ;-)

ಫ್ರೆಂಡೇ ಫ್ರೆಂಡು
ಈ ಭೂಮಿಮ್ಯಾಲೆ ಎಲ್ಲ ಫ್ರೆಂಡು!

ಅವನು ಫ್ರೆಂಡು ಇವನೂ ಫ್ರೆಂಡು
ಅವನಕ್ಕ ಫ್ರೆಂಡು ತಂಗಿ ಫ್ರೆಂಡು
ಚಾಯದಂಗಡಿ ದಿನಕರ ಫ್ರೆಂಡು
ಬಸ್ ಡ್ರೈವರು ರಘುಪತಿ ಫ್ರೆಂಡು

ಫ್ರೆಂಡೇ ಫ್ರೆಂಡು
ಈ ಭೂಮಿಮ್ಯಾಲೆ ಎಲ್ಲ ಫ್ರೆಂಡು!

ಅವಳು ಫ್ರೆಂಡು ಇವಳು ಫ್ರೆಂಡು
ಅವಳಣ್ಣ ಫ್ರೆಂಡು ತಮ್ಮ ಫ್ರೆಂಡು
ಪಾಟ ಹೆಳುವ ಮಾಡಮ್ ಫ್ರೆಂಡು
ತೊಟ ಕಾಯುವ ಗುರುವನು ಫ್ರೆಂಡು

ಫ್ರೆಂಡೇ ಫ್ರೆಂಡು
ಈ ಭೂಮಿಮ್ಯಾಲೆ ಎಲ್ಲ ಫ್ರೆಂಡು!

ಅಜ್ಜಿ ಫ್ರೆಂಡು ಅಜ್ಜ ಫ್ರೆಂಡು
ಅಪ್ಪ ಫ್ರೆಂಡು ಅಮ್ಮ ಫ್ರೆಂಡು
ನನ್ನಾಕೆಯು ಫ್ರೆಂಡು ಮಗನೂ ಫ್ರೆಂಡು
ಮಗನಾ ಫ್ರೆಂಡು ನನ್ನ ಫ್ರೆಂಡು

ಫ್ರೆಂಡೇ ಫ್ರೆಂಡು
ಈ ಭೂಮಿಮ್ಯಾಲೆ ಎಲ್ಲ ಫ್ರೆಂಡು!

myKavana:"ನಿನ್ನೆ, ಇಂದು ಮತ್ತು ನಾಳೆ"

ನಿನ್ನೆ...

ನೀನು ನೀನೇ ಯಾರಿಲ್ಲ ತಾನೆ
ನಿನಗಿಂತ ಸಿಹಿ ನಾಎಲ್ಲು ಕಾಣೆ
ನಿನ್ನಂದ ನೊಡಿ ಬೆರಗಾಯ್ತು ಬಾನೆ
ಮರೆಯೆನಾ ಚಿನ್ನಾ ನಿನ್ನ ನನ್ನಾಣೆ!

Vs

ಹಾಲು ಒಡೆದು ಹೊಗಿದೆ
ಕಣ್ಣ ತುಂಬ ನೀರಿದೆ
ಪ್ರೀತಿ ಹಕ್ಕಿ ಹಾರಿದೆ
ನನಗೆ ಕರುಣೆ ತೋರದೆ!

ಇಂದು...

ಬಾನಲಿ ಬೆಳಗು ಮೂಡಿದೆ
ರವಿಯು ಬರೆ ಬೆಳಗಾಗಿದೆ
ಹಲವು ಹೊಸ ಮುಖ ಕಂಡಿದೆ
ಮನ ಅವಳನೇ ಹುಡುಕಿದೆ!

Vs

ಗೆಜ್ಜೆ ನಾದ ಕೇಳಿದೆ
ಪುಟ್ಟ ಮಗುವು ಕೂಗಿದೆ
ಅವಳ ದನಿಯು ಹಾಡಿದೆ
ಮಗುವ ಅವು ಸಂತೈಸಿದೆ!

ನಾಳೆ...

ನೆನಪ ಬುತ್ತಿ ಬಿಚ್ಚಿದೆ
ಹೊಸದೆಲ್ಲ ಹಳೆಯ ಮರೆಸಿದೆ
ನಾನೂ ಹಾಡ ಹಾಡುವೆ
ಅಜ್ಜಿ ಕತೆಯ ಹೇಳುವೆ!!!

Vs

ಮಗಳ ಹೆಸರ ನೋಡಿದೆ
ಮುದ್ದು ಓಲೆ ಕಾದಿದೆ
ಚಷ್ಮ ಇಡದೆ ಓದಿದೆ
ಇಂತಿ ನಿನ್ನ ಪ್ರೀತಿಯ!

Tuesday, February 19, 2008

myPOD:"ಗೆಜ್ಜೆ"

ಪ್ರೀತಿ ಎಂದರೆ ಹೀಗೇನೆ...
ತಿಳಿದೂ ತಿಳಿಯದ ಹಾಗೇನೇ
ಗೆಜ್ಜೆಗಳಾಗಿ ಕುಣಿದು,
ಮುಗಿದಾ ಕೂಡಲೆ
ಮೂಲೆಗೆ ಎಸೆಯೋ
ಕಸದಾ ಹಾಗೇನೆ!!!




Sunday, February 17, 2008

myHarate:"ಅಕ್ಕನ ಅಕ್ಕರೆ ಹಾಲು ಜೇನು ಸಕ್ಕರೆ!"

ಶಾಲೆಗೆ ಕೈಹಿಡಿದು ರಸ್ತೆಯನ್ನು ಅಡ್ಡದಾಟಿಸುತ್ತಿದ್ದ ನನ್ನ ಅಕ್ಕ ಮೊನ್ನೆ ಹೀಗೆ ಅವಳ ಮನೆಯಲ್ಲಿ ನೋಡಬೇಕಿರೆ ಎಷ್ಟು ದೊಡ್ಡವಳಾಗಿ ಬಿಟ್ಟಿದ್ದಾಳೆ! ಅಂದು ಐಶ್ವರ್ಯ ರೈ ತರ ಮುದ್ದು ಮುದ್ದಾಗಿದ್ದ ಅವಳ ಮೊಗ ಒಂದು ಕ್ಷಣ ನನ್ನನ್ನೆ ನೋಡಿ "ನಿನಗೆ ಕುಡಿವಲೆ ಎಂತ ಅಕ್ಕು" ಎಂದು ಪ್ರೀತಿಯಿಂದ ಕೇಳಿತು...

ಎನಿಲ್ಲ ಎಂದರೂ ಕಳೆದು ಹೊದ 20 ವರ್ಷದ ನೆನಪು ಅಚಾನಕ್ ಆಗಿ ಅಕ್ಕನ ಮನೆಯಲ್ಲಿ ತೆರೆದೇ ಬಿಟ್ಟಿತು.

ಈಗಿನ software engineer ಹುಡುಗಿಯರಂತೆ 22 ವರ್ಷದಲ್ಲಿ ಆಕೆಯ ಮದುವೆ ಅಗಲೇ ಇಲ್ಲ. ಭರೊಬ್ಬರಿ 30 ವರ್ಷ ಒಂಟಿ ಜೀವನ ನಡೆಸಿ ಮತ್ತೆ ಸುಖ ಸಂಸಾರ ನಡೆಸಿದಳು! ಆಶ್ಲೆಷಾ ನಕ್ಶತ್ರ ಒಂದು ಕಾರಣವಾದರೆ ಕಡುಬಡತನದ ಮೂಲ, SSLC ಪಾಸ್ ಆದ ಮುಂದೆ ಓದದ ಕರ್ಮ.. ಚೇ!, ನಾನಾಗ ಹುಟ್ಟಬೇಕಿತ್ತು.. ಅವಳ ಒದಿಸಬೇಕಿತ್ತು!

ನನಗೆ B.E ಮುಗಿದು ಕಾಂಪಸ್ ನಲ್ಲೆ ಕೆಲಸ confirm ಆದಾಗ ನನಗಿಂತ ಜಾಸ್ತಿ ಕುಶಿ ಪಟ್ಟಳಾ ಹುಡುಗಿ.. SSLC ಒದಿಲ್ಲಂದ್ರು ಎನು ಸುಮ್ನೆ ಕೂತೊಳಲ್ಲ.. ತನ್ನ ಡ್ರೆಸ್ಸ್ ತಾನೆ ಹೊಲಿಯುತ್ತಾಳೆ.. ನನಗು ಕೆಲ ಅಂಗಿ ಅವಳು ಹೊಲಿದಿದ್ದಾಳೆ.. ಸೊಪ್ಪು, ಹುಲ್ಲು ಸೌದೆ ತರೊ ಕೆಲ್ಸಂದ ಹಿಡಿದು ಬಾವಿಯಿಂದ ನೀರು ಎತ್ತಿ ತರಕಾರಿ ಬೆಳೆಸೊ ವರೆಗೆ ಎನು ಬೇಕಿದ್ದರು ಮಾಡಬಲ್ಲಳು. ಕಾಲ ಬದಲಾಗಿದೆ.. ಈವಾಗ ಅಂತ ಕೆಲಸ ಯಾರು ಮಾಡಬೇಕಾಗಿಲ್ಲ.. ಮಾಡಿ ಅಂದರೆ ಯಾರಿಗೂ ಬರಲ್ಲ!!

ಇಂದು ನಾ ಅಕ್ಕನ ಮನೆಗೆ ಒಂದೆರಡು ದಿನಕ್ಕೆ ಹೊಗುತ್ರ್ತೇನೆ. ಅವಳ ಕೈಯಡುಗೆ ಅಷ್ಟು ರುಚಿಕರ. ಒಂದು ಹೊತ್ತು ಹೋದರೆ ಹೊದಂತೆ ಅನಿಸುವುದೇ ಇಲ್ಲ.

ಅಕ್ಕನಿಗೆ ಇಬ್ಬರು ಚೂಟಿ ಗಂಡು ಮಕ್ಕಳು.. ಚೆನ್ನಾಗಿ ಒದುತ್ತಿದ್ದಾರೆ.. 7th ವರೆಗೆ ಅವಳೆ ಎಲ್ಲ ಹೇಳಿ ಕೊಡುತ್ತಿದ್ದಳು. ಈಗ English ಅವಕ್ಕೆ ಕಷ್ಟ ಆಗುತ್ತಂತೆ.. ನಾನು English ಕಲಿಯಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ..

ಅಕ್ಕಾ...

ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು ಅಕ್ಕ ನೀ ದೇವತೆ ಎಂದರೆ ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು ನಿತ್ಯ ಸುಖಿ ನೀ ಎನಲು ಒಪ್ಪೇನೆ?

ಅಕ್ಕಾಯ ಪಾದೌ ನಮಹ!

ಅಕ್ಕ ಚಾ ತಂದು ಕೈಗಿಡಲು ಅಕ್ಕನ ಮುದ್ದು ಮುಖದಲ್ಲಿ ಮೂಡಿದ ತುಸು ಸುಕ್ಕು ತೊಗಲ ನಗು ನನ್ನ ತುಂಬ ಪೀಡಿಸಿತು.. ಚೆ.. ಅಕ್ಕ ಹಾಗೆ ಇದ್ದಿದ್ದರೆ ಎಷ್ಟು ಚೆನ್ನ... ಯಾಕೆ ಕಾಲ ಉರುಳಿದೆ? ಹೀಗೆ ಚಿಂತಿಸುತ್ತಾ ಡ್ರೆಸ್ಸ್ ಚೇಂಜ್ ಮಾಡಿ ತಲೆ ಬಾಚುತ್ತಿರಲು ನನ್ನ ತಲೆಯಲ್ಲಿ ಒಂದು ಬೆಳ್ಳಿಕೂದಲು ಕುಹಕ ನಗು ಬೀರಿ ನನ್ನ ಸುಮ್ಮನಾಗಿಸಿತು..

myPOD:"Weekend works"

floating beauty!!!



kobbari enne preparation process begins here:-)



menasina sendige under preparation!



ಹನಿ ಹನಿ.. ಹನಿ ಹನಿ.. ಸೇರಿ ತೆನೆಯೊ..



ಯಾರ ಹೂವು ಯಾವ ಮುಡಿಗೊ!



ಹನಿ ಹನಿ.. ಪ್ರೆಮ್ ಕಹಾನಿ!

Thursday, February 14, 2008

myKavana:"ನಾ ಹೇಗೆ ಹೇಳಲಿ"

ಮನದೊಳಗಿನ ಪಿಸು ಮಾತನು
ನಾ ಹೇಗೆ ಹೇಳಲಿ?
ಸ್ವರ ಹೋಗಿದೆ ಭಯವಾಗಿದೆ
ನಾ ಹೇಗೆ ಕೇಳಲಿ?

ಜೊತೆ ಬೇಕಿದೆ ಕತೆ ನೂರಿದೆ
ದಿನ ನಿನಗೆ ತಿಳಿಸಲು
ವ್ಯಥೆ ಉಳಿದಿದೆ ಲತೆ ಬಾಡಿದೆ
ಕಣ್ಣೇರು ಚುಮುಕಲು

ನೀ ನಿಂತರ ಇರೆ ಈ ತರ
ಬೇರೇನು ಬೇಕಿದೆ?
ಬೆಳದಿಂಗಳ ಸವಿಯೂಟಕೆ
ಈ ಹೃದಯ ಕಾದಿದೆ!

Wednesday, February 13, 2008

myPreview:"ಇಂತಿ ನಿನ್ನ ಪ್ರೀತಿಯ..."



"ಇಂತಿ ನಿನ್ನ ಪ್ರೀತಿಯ.." ಹೀಗೊಂದು ವಿಚಿತ್ರ ಹೆಸರನ್ನು ಹೊತ್ತುಕೊಂಡು ಇನ್ನೊಂದು ಸೂರಿ ಸಿನೆಮಾ ಸಿದ್ದವಾಗುತ್ತಿದೆ. ದುನಿಯಾ ಮತ್ತೆ ಅವರು ಏನು ಕೊಡುತ್ತಾರೊ ನೋಡಬೇಕಿದೆ. ಹೊಸಬರನ್ನು ಪರಿಚಯಿಸುವ ದೈರ್ಯ ಇಲ್ಲೂ ಅವರು ಮುಂದುವರಿಸಿದ್ದಾರೆ.

Songs are really tempting to hear.. Title says as if a letter to dear and near one ends with a lovely Quote "ಇಂತಿ ನಿನ್ನ ಪ್ರೀತಿಯ...". When writing this last line in a letter always writer will have lot of expectation on the next incoming letter from his/her dear one! Thanks for remembering all such beautiful memories Soori. I will watch it for sure.

"ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು ಆದರೆ...
ಬಿರುಗಾಳಿಯಲ್ಲಿ ತೇಲೋ
ಹೊಸಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೆ
ಶರಣಾಗು ಆದರೆ..." song ಅದ್ಭುತವಾಗಿ ಮೂಡಿಬಂದಿದೆ..

ಇದಿಷ್ಟು ಸಿನೆಮಾದ ಸ್ತೂಲ ಪರಿಚಯ!!!

Tuesday, February 12, 2008

myKavana:"ಪ್ರೀತಿ"

ಪ್ರೇಮಿಗಳ ದಿನಾಚರಣೆಯ ಮುನ್ನಾದಿನವಾದ ಇಂದು ರಾಷ್ಟ್ರವನ್ನುದ್ದೇಶಿಸಿ!!! ರಚಿಸಿದ ಕವನಗಳ ಒಂದು ತುಣುಕು ನಿಮಗಾಗಿ...

****************************************

ಎಲ್ಲಾ ಹ್ರುದಯಗಳಲ್ಲು ಪ್ರೀತಿಯಿರಲು
ಜಗದಲ್ಲಿ ಹೇಗೆ ಪ್ರೀತಿಗೆ ಕೊರತೆ?
ಬೇಸಿಗೆ ಕಳೆದು ಮಳೆಬರುತಿರಲು
ಮೂಡದೆ ಮತ್ತೆ ಇಳೆಯಲಿ ಒರತೆ!!

****************************************

ಪ್ರೀತಿಯ ಕೊಟ್ಟು ಪ್ರೀತಿಯ ಕೊಳ್ಳಿ
ಪ್ರೀತಿಲಿ ಮನಸೊಳು ಕೊಪವ ತಳ್ಳಿ
ಪ್ರೀತಿಗೆ ಏನು ಹಗಲೂ ಇರುಳೂ
ಪ್ರೀತಿಸಿ ಗುರುತಿಸಿ ಬೆರಳೂ ಕೊರಳೂ;-)

****************************************

myKavana:"ಗುಬ್ಬಚ್ಚಿ ಗೂಡಿನಲ್ಲಿ..."

ಗುಬ್ಬಚ್ಚಿ ಗೂಡಿನಲ್ಲಿ
ಮನೆಯಂಗಳದಾಚೆಯಲ್ಲಿ
ಎಲ್ಲಿದೆ ಈಗ ಚಿಲಿಪಿಲಿ
ಮರವು ಮುರಿದಿದೆ
ರೆಕ್ಕೆ ಹರಿದಿದೆ
ಉಳಿದುದೊಂದೆ ಇಲ್ಲಿ
ಹಗಲಿರುಳು ಸ್ಮಶಾನ ಮೌನ!!

ಮಾಮರದಲಿ ಚಿಗುರೇ ಇಲ್ಲ
ಕೋಗಿಲೆಗೆ ಈ ಜಾಗವೆ ಸಲ್ಲ
ಬೇಸಿಗೆ ಮಳೆ - ತೊಳೆಯಲು ಇಳೆ
ಬರುವುದು ಮುಂದೆ ಹೇಗಪ್ಪಾ ಬೆಳೆ?

ಹೊಳೆಯಲಿ ಕೆಸರು, ನೀರಿಗೆ ಕಸವು
ತುಂಬಿದೆ ದೇಹದಿ ಪೂರಾ ವಿಷವು!
ಮರಗಳು ಮಾಯ, ಮನುಜರ ಯಾನ
ಬದುಕುವುದೆಂತು ಇನ್ನು ಜೋಪಾನ!

Sunday, February 10, 2008

myReview:"Weekend movies"

"Live for nothing and Die for something" - Yes, I had to watch Rambo-4, (my first Rambo movie indeed) this weekend with roommates for time pass, its a kutte movie having hundreds of kills and this movie not entertained me anytime during the movie. Audio is bit interesting however cinematography is worst. Only those who like the kills can go to watch this movie. huh.. god.. no more Rambo movies!!!

Also got an opportunity to watch "Lara Croft Tomb Raider - The Cradle of Life" - An Anjelina Joolie movie.. Movie says "Something not meant to find". Yes, a good movie having lot of adventure and action in it. I liked it!!!

myPicnic:"Saint Maries Island"

Find few interesting snaps of this picnic only here at...

http://picasaweb.google.com/shanmukhark/SaintMariesIslandUdupiMalpe21008602PM

myKavana:"gaaalipata and milana songs"

ಜೀವಾ ಕೊಲುವಾಮ್ರುತಕೆ ವಿಷವೆಂದು ಹೆಸರಿಡಬಹುದೆ?
ಮೈಯಾ ಕೊಳೆಯಾ ತೊಳೆವವಕೆ ಸೋಪೆಂದು ಕರೆದರೆ ಸರಿಯೆ?
ಮನಸಲಿ ಕೊಳೆತುಂಬಿದರೆ ಕರಗುವುದು ಕಣ್ಣೆರಿನಲೆ?
ಕಣ್ಣೀರು ಉಪ್ಪಾಗಿರಲು ಹ್ರುದಯವು ಸಿಹಿಯಾಗಿಹುದೆ?
ಎನೇನೊ ನನಗಿದು ತಿಳಿದಿಲ್ಲ!!

ಅಲೆ ಬಂದು ನಿಂತ ಮೇಲೆ
ಕೆಸರಷ್ಟೆ ಉಳಿದಿದೆ
ನೀರಿಂದ ಎದ್ದಮೇಲೆ
ಚಳಿ ಮಾತ್ರ ಉಳಿದಿದೆ
ಬಿಸಿಯಾದ ಚಾಯ ಬೇಕೆಂದೆನಿಸಿದೆ!!!
ಚಳಿಯಲ್ಲಿ ಮನಸು ಮುದುಡಿ ಹೋಗಿದೆ..!!!

Friday, February 8, 2008

myKavana:"ಮಾಯದ ಕಂಗಳ ಚೆಲುವೆ ಕೇಳು..."

ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೋಡದಿರು!

ನೀ ಎನ್ನಯ ನರ ನಾಡಿಲಿ ಬೆರೆತು
ಎದೆಯಲಿ ಡವಡವ ಕೂಗಿದೆಯ?
ಯಾವುದೋ ಗಾನದಿ ಸ್ವರ ಕಲೆತು
ಸುಮಧುರ ನಾದವ ಹೊಮ್ಮಿದೆಯ?
ನೀನು ಎಲ್ಲೆ ಇರು ನಾ ಗಾಳಿಯಲಿ
ನಿನ್ನ ಎದೆಯಲಿ ತರಲೇ ನೆಮ್ಮದಿಯ?

ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೊಡದಿರು!

ಚಂದಿರ ನಿನ್ನ ನೆನಪಿಸಿದೆ
ಹೂವಲೂ ನಿನ್ನನೆ ಕಾಣಿಸಿದೆ
ನೀ ನನ್ನವಳೆಂಬ ಹಂಬಲದೆ
ಮನ ಒಪ್ಪಿಸಿ ಸಹಿಯನು ಹಾಕಿಸಿದೆ
ಅರೆ! ಮುಳ್ಳನು ಏಕೆ ಶ್ರುಷ್ಟಿಸಿದೆ
ಅದು ನೋವನು ನೀಡಿ ಕೊಲ್ಲುವುದೆ?

ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೊಡದಿರು!

Thursday, February 7, 2008

myKavana:"ಮಿಡಿತ"

ಈ ಹ್ರುದಯಾ ಪ್ರತಿ ಘಳಿಗೆ
ಮಿಡಿಯುವುದು ಅವಳ್-ನಡೆಗೆ
ಈ ಮನಸು ಸ್ವಪ್ನ ಮಳಿಗೆ
ತುಡಿಯುವುದು ಅವಳ್-ಕಡೆಗೆ

ಬಾನ ಚಂದ್ರ ಮರೆಯಾಕಾದ
ಅವಳ್ ಮೈಮಾಟ ನೊಡಿ
ಈ ಹಾಡೊ ಹಕ್ಕಿ ಮೌನವೆಕಾಯ್ತೊ
ಅವಳ್ ಸಿರಿಕಂಠ ಹಾಡಿ

ಈ ಹ್ರುದಯ ಪ್ರತಿ ಘಳಿಗೆ
ಮಿಡಿಯುವುದು ಅವಳ್-ನಡೆಗೆ

Wednesday, February 6, 2008

myKavana:"ಮಲ್ಲಿಗೆ - ಬಳ್ಳಿಗೆ"

ಅವಳು ಮುಡಿದ ಮಲ್ಲಿಗೆ..
ಅದನು ಹಿಡಿದ ಬಳ್ಳಿಗೆ!
ಕಾಣುವ ಆಸೆ ಎಲ್ಲರಿಗೆ;-)
ಕತ್ತ ಹಿಸುಕಿತು ಕೊನೆಗೆ!

ದಿನ ಇರುಳು ಕಳೆಯಿತು..
ಮಲ್ಲಿಗೆ ಕೊನೆಗೆ ಬಾಡಿತು:-(
ಕತ್ತು ಮುರಿದು ಕಳಚಿತು!
ಬಳ್ಳಿ ಮಾತ್ರ ಉಳಿಯಿತು!

ಯಾಕೆ ಬೇಕು ಬಳ್ಳಿ ಮಾತ್ರ?
ಬಿಸುಟಳಾಕೆ ಕಸದ ಹತ್ರ!
ಬದುಕಿ ಏನು ಅದರ ಪಾತ್ರ?
ಇರಬಹುದಿತ್ತು ಬಾಳಾ ಎತ್ರ!

Tuesday, February 5, 2008

myKavana:"ಕುಮಾರ ಪರ್ವತದ ಮ್ಯಾಲೆ ಮೂಡಿದ್ದು"

ಕಾಡ ಮಲ್ಲೆ ಎಕೆ ಇಲ್ಲೆ
ಕಾವರಿಲ್ಲ ಕೊಯಿವರಿಲ್ಲ
ಕಂಪಿದೆ ಚೆಲುವಿದೆ
ಮುಡಿಸಿಗದ ಬೇಸರವಿದೆ
ದುಂಬಿ ಕೂಡ ಬರಬಾರದೆ?

ಇಲ್ಲಿ ನಲಿವಿದೆ, ನೋವಿದೆ
ಕೆರೆ ತುಂಬಾ ನೀರಿದೆ
ಹಕ್ಕಿ ಕಂಠ ಹಾಡಿದೆ
ಬಾನು-ಭುವಿಯು ಬೆರೆತಿದೆ
ಮೊಡ ನಾಚಿ ಕರಗಿದೆ

ಕಾಡ ಸಂಗ ಸುಖವಿದೆ
ಕಾಡು ನಾಡ ಉಳಿಸಿದೆ
ಬಾಡಿ ಹೊಗೋ ಮುನ್ನ ಬಂದು
ನೋಡೆಂದು ಅದು ಕರೆಸಿದೆ
ನನ್ನ ನೋವ ಮರೆಸಿದೆ

myKavana:"ಬೆಟ್ಟದಾ ಮ್ಯಾಲೆ"

ಹಳ್ಳಿಯಾದರೆನು ಶಿವ?
ಕಲ್ಲೆ ಆದರೆನು ಶಿವ?
ಸುಳಿವಾ ತಂಪು, ಕಾಡ ಕಂಪು,
ಬಾನ ಕೆಂಪು, ಕೋಕಿಲ ಇಂಪು
ಕಾಣ ಪ್ರತೀ ಮುಂಜಾವ!!

Monday, February 4, 2008

We are proud!!

You know why? Its our work...

http://www.apple.com/games/articles/2008/01/tombraideranniversary/

Sunday, February 3, 2008

myChaarana:"ಕುಮಾರ ಪರ್ವತ - ಬೆಟ್ಟದಾ ಮ್ಯಾಲೊಂದು ಟೆಂಟು ಹಾಕಿ"

Mission Kumara Parvatha Accomplished!

http://picasaweb.google.com/shanmukhark/KumaraParvatha2508657AM