ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೋಡದಿರು!
ನೀ ಎನ್ನಯ ನರ ನಾಡಿಲಿ ಬೆರೆತು
ಎದೆಯಲಿ ಡವಡವ ಕೂಗಿದೆಯ?
ಯಾವುದೋ ಗಾನದಿ ಸ್ವರ ಕಲೆತು
ಸುಮಧುರ ನಾದವ ಹೊಮ್ಮಿದೆಯ?
ನೀನು ಎಲ್ಲೆ ಇರು ನಾ ಗಾಳಿಯಲಿ
ನಿನ್ನ ಎದೆಯಲಿ ತರಲೇ ನೆಮ್ಮದಿಯ?
ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೊಡದಿರು!
ಚಂದಿರ ನಿನ್ನ ನೆನಪಿಸಿದೆ
ಹೂವಲೂ ನಿನ್ನನೆ ಕಾಣಿಸಿದೆ
ನೀ ನನ್ನವಳೆಂಬ ಹಂಬಲದೆ
ಮನ ಒಪ್ಪಿಸಿ ಸಹಿಯನು ಹಾಕಿಸಿದೆ
ಅರೆ! ಮುಳ್ಳನು ಏಕೆ ಶ್ರುಷ್ಟಿಸಿದೆ
ಅದು ನೋವನು ನೀಡಿ ಕೊಲ್ಲುವುದೆ?
ಮಾಯದ ಕಂಗಳ ಚೆಲುವೆ ಕೇಳು
ನೀ ಈತರ ನನ್ನ ನೊಡದಿರು!
Friday, February 8, 2008
Subscribe to:
Post Comments (Atom)
No comments:
Post a Comment