
ಅಕಾಶ ಗಂಗೆ ಬೀಳುತಿರಲು
ಕೆಸರೇ ಎಲ್ಲೂ ಪೂರ
ಜೀವ-ಜೀವ ಕೊಯ್ಯುತಿರಲು
ಜಗವದೆಷ್ಟು ಕ್ರೂರ
ನೊಡಲೆಂತು ಕಣ್ಣ ತೆರೆದು
ರಕುತ ಬಿಂದು ಧರೆಯ
ಹೇಳಲೆಂತು ಯಾರ ಕರೆದು
ನನ್ನ ಮನಸ ಕರೆಯ
ದಿನವಿಡೀ ನಿದ್ರಿಸುವೆ
ರಾತ್ರೆ ಹೆದರಿ ಅಳುವೆನು
ಯಾಕೆ ಇಲ್ಲಿ ಜೀವವೇ
ಸಾಯೆ ನಾನು ನಲಿವೆನು!!!
ಬನ್ನಿ! ಹರಟೆ ಹೊಡೆಯೋಣ! ಓದಿ.. ಓದಿಸಿ.. ಲೈಫ್ ನಿಮ್ಮದಾಗಿಸಿ! ಇದು ಸ್ವರಚಿತನಾ ಅಲ್ಲ ಸ್ವರಚಿತ್ರನಾ? ಸ್ವರಚಿತ ಯಾಕೆಂದ್ರೆ ನೀವಿಲ್ಲಿ ಎಲ್ಲವನ್ನ ಮೊದಲ ಬಾರಿ ಓದುವಿರಿ. ಸ್ವರಚಿತ್ರ ಯಾಕೆಂದ್ರೆ ಇಲ್ಲಿ ಚಿತ್ರಾನೂ ಮತಾಡ್ಯಾವು!
No comments:
Post a Comment