ಕಾಡ ಮಲ್ಲೆ ಎಕೆ ಇಲ್ಲೆ
ಕಾವರಿಲ್ಲ ಕೊಯಿವರಿಲ್ಲ
ಕಂಪಿದೆ ಚೆಲುವಿದೆ
ಮುಡಿಸಿಗದ ಬೇಸರವಿದೆ
ದುಂಬಿ ಕೂಡ ಬರಬಾರದೆ?
ಇಲ್ಲಿ ನಲಿವಿದೆ, ನೋವಿದೆ
ಕೆರೆ ತುಂಬಾ ನೀರಿದೆ
ಹಕ್ಕಿ ಕಂಠ ಹಾಡಿದೆ
ಬಾನು-ಭುವಿಯು ಬೆರೆತಿದೆ
ಮೊಡ ನಾಚಿ ಕರಗಿದೆ
ಕಾಡ ಸಂಗ ಸುಖವಿದೆ
ಕಾಡು ನಾಡ ಉಳಿಸಿದೆ
ಬಾಡಿ ಹೊಗೋ ಮುನ್ನ ಬಂದು
ನೋಡೆಂದು ಅದು ಕರೆಸಿದೆ
ನನ್ನ ನೋವ ಮರೆಸಿದೆ
Tuesday, February 5, 2008
Subscribe to:
Post Comments (Atom)
No comments:
Post a Comment